Police Bhavan Kalaburagi

Police Bhavan Kalaburagi

Thursday, May 9, 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 08-05-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನ ಡಿಯರ್ ಕಂಪನಿಯ ಟ್ರ್ಯಾಕ್ಟರ ಇದ್ದು ಪಾಸಿಂಗ್ ನಂಬರ ಎಮ್.ಹೆಚ್-13 .ಜೆ-9900 ಅಂತ ಇದ್ದು ಅದರ ಎಂಜಿನ ನಂಬರ:PY3029D208835 ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ 08/05/2019 ರಂದು ಬೆಳ್ಳಿಗೆ ನನ್ನ ಗಂಡನು ನನ್ನ ಹಿರಿಯ ಮಗಳಾದ ಕಾದಂಬರಿಯ ವಿವಾಹದವನ್ನು ಮುಂದಿನ ದಿನಗಳಲ್ಲಿ ಮಾಡುವುದು ಫೀಕ್ಸ ಆಗಿದ್ದರಿಂದ ಅದಕ್ಕೆ ಲಗ್ನ ಸಲುವಾಗಿ ಬೆಳಗುಂಪಾ ಗ್ರಾಮದಲ್ಲಿ ವಾಸವಾಗಿರುವ ತನ್ನ ಸಂಬಂದಿಕರಾದ ಶರಣಪ್ಪ ತಂದೆ ಬಸಲಿಂಗಪ್ಪ ಹಡಪದ ಇವರ ಹತ್ತಿರ ದುಡ್ಡು ಕೇಳಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ ದಿನಾಂಕ 08/05/19 ರಂದು 11-00 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಕಾದಂಬರಿ, ಕಾವೇರಿ ಎಲ್ಲರು ಮನೆಯಲ್ಲಿದ್ದಾಗ ಬೆಳಗುಂಪಾ ಗ್ರಾಮದ ನಮ್ಮ ಸಂಬಂಧಿಕರಾದ ಶರಣಪ್ಪ ತಂದೆ ಬಸಲಿಂಗಪ್ಪ ಹಡಪದ ಇವರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನಿನ್ನ ಗಂಡ ಸುಭಾಷ ಇವನು ಗುಂಡಗುರ್ತಿ  ಕ್ರಾಸ ದಿಂದ ಬೆಳಗುಂಪಾ ಗ್ರಾಮದ ಕಡೆಗೆ ಬರುವ ಸಂಬಂಧ ಗುಂಡಗುರ್ತಿ ಕ್ರಾಸದಿಂದ ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ಟ್ರ್ಯಾಕ್ಟರ ಇಂಜನ ಹಾಗೂ ಅದಕ್ಕೆ ಜೋಡಣೆ ಮಾಡಿದ ಕೆಂಪು ಬಣ್ಣದ ಟ್ರ್ಯಾಲಿ ಇಂಜನ ಹಾಗೂ ಟ್ರ್ಯಾಲಿಗೆ ನಂಬರ ಇರದ ಟ್ರ್ಯಾಲಿಗೆ ಕೆಂಪು ಬಣ್ಣ ದಿಂದ ಭಾಗ್ಯವಂತಿ ಟ್ರ್ಯಾಲರ ಬರೆದಿದ್ದು ಟ್ರ್ಯಾಲಿಯಲ್ಲಿ ಕುಳಿತು ಹೋಗುವಾಗ ಟ್ರ್ಯಾಕ್ಟರ ಚಾಲಕನು ತನ್ನ  ಟ್ರ್ಯಾಕ್ಟರ ಅನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗುಂಡಗುರ್ತಿ ಕ್ರಾಸ ಇನ್ನು 01 ಕಿ.ಮೀ ಅಂತರದಿಂದ ರೋಡಿನ ಎಡ ಭಾಗಕ್ಕೆ ಟ್ರ್ಯಾಕ್ಟರ ಚಾಲಕನು ಸ್ಪಿಡ ಚಲಾಯಿಸಿಕೊಂಡು ಹೋಗಿದ್ದರಿಂದ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ  ಮೇಲಿಂದ ಕೆಳಗೆ ಬಿದ್ದು ತಲೆ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಬಲಗಾಲಿನ ಮುಂಡಿಗೆ ಭಾರಿ ಗುಪ್ತ ಗಾಯವಾಗಿ, ಕಾಲು ಮುರಿದಿರುತ್ತದೆ ಮತ್ತು ಮುಖಕ್ಕೆ ತರಚಿದ ಗಾಯಗಳಾಗಿ, ಮುಗಿನಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಸದರಿ ರಸ್ತೆ ಅಪಘಾತ ಪಡಿಸಿದ ಒಂದು ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ನಂಬರ ಇರದ ಟ್ರ್ಯಾಕ್ಟರ ಇಂಜನ ಹಾಗೂ ಅದಕ್ಕೆ ಜೋಡಣೆ ಮಾಡಿದ ಕೆಂಪು ಬಣ್ಣದ ಟ್ರ್ಯಾಲಿ ಅದರ ಮೇಲೆ ಕೆಂಪು ಬಣ್ಣ ದಿಂದ ಭಾಗ್ಯವಂತಿ ಟ್ರ್ಯಾಲರ ಅಂತಾ ಬರೆದಿದ್ದು ಟ್ರ್ಯಾಲಿಯಲ್ಲಿ ಕುಡಿಸಿಕೊಂಡು ಚಾಲಕನು ಟ್ರ್ಯಾಲಿಯನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗುಂಡಗುರ್ತಿ ಕ್ರಾಸದಿಂದ 1 ಕಿಮೀ ಅಂತರದ ರೋಡಿನ ಎಡ ಭಾಗಕ್ಕೆ ಟ್ರ್ಯಾಕ್ಟರ ಮೇಲಿಂದ ಕೆಳಗೆ ಬಿದ್ದು ಮೃತ ಪಟ್ಟಿರುತ್ತಾನೆ ಅಂತಾ ಕಾರಣ ಸದರಿ ಚಾಲಕ ಹಾಗೂ ಟ್ರ್ಯಾಕ್ಟರ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಭೀಮಬಾಯಿ ಗಂಡ ಸುಭಾಷ ಸಾ : ನೆಲೋಗಿ ತಾ : ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: