ಪೊಲೀಸ್ ಅಧೀಕ್ಷಕರವರ ಕಛೇರಿ, ಕಲಬುರಗಿ
ದಿನಾಂಕ:09/07/2019
ಪತ್ರಿಕಾ ಪ್ರಕಟಣೆ
ಈ ಮೂಲಕ ಎಲ್ಲಾ ಫೇಸಬುಕ್, ವಾಟ್ಸಪ್, ಟ್ವೀಟರ್ ಮತ್ತು ಸೋಶಿಯಲ್ ಮಿಡಿಯಾ
ನ್ಯೂಜ್ ಚಾನೆಲ್ ಗಳ ನಿರ್ವಾಹಣುದಾರರಿಗೆ ಹಾಗೂ ಇವುಗಳನ್ನು ನಿಯಂತ್ರಿಸುವ ಗ್ರೂಪಿನ ಅಡ್ಮೀನ್ ಗಳಿಗೆ
ಮತ್ತು ಸೋಶಿಯಲ್ ಮಿಡಿಯಾದಲ್ಲಿ ಗ್ರೂಪಗಳನ್ನು ರಚಿಸಿದ ಅಡ್ಮಿನ್ ರವರಿಗೆ ಸೂಚಿಸುವದೆನೆಂದರೆ ಸದರಿ
ಫೇಸಬುಕ್ ಪೇಜ್ ಗಳಲ್ಲಿ ಮತ್ತು ಅವುಗಳ ಗ್ರೂಪ್ ಗಳಲ್ಲಿ ಕೆಲವು ಜನರು ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಬರುವಂತೆ ಕಮೇಂಟ್ ಮಾಡುವದು, ಅವಹೇಳನಕಾರಿ, ಅಶ್ಲೀಲಕರವಾಗಿ ಕಮೇಂಟ್ ಮಾಡುವದು ಮತ್ತು ಬೇರೊಬ್ಬರ ಗೌರವಕ್ಕೆ ಕುಂದು
ತರುವ ರೀತಿಯಲ್ಲಿ ಕಮೇಂಟ್ ಮಾಡುತ್ತಿರುವದು ಕಂಡು ಬಂದಿರುತ್ತದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ
ಸೋಶಿಯಲ್ ಮಿಡಿಯಾ ಬಳಸಿಕೊಂಡು ಯಾವದೇ ಧರ್ಮಕ್ಕೆ, ಸಮುದಾಯಕ್ಕೆ ಮತ್ತು ವ್ಯಕ್ತಿಗೆ
ಸಂಬಂದಿಸಿದಂತೆ ಅಶ್ಲೀಲವಾಗಿ ಅಥವಾ ಅವಹೇಳನಕಾರಿಯಾಗಿ ಕಮೇಂಟ್ ಮಾಡಿದಲ್ಲಿ ಸಂಬಂದಿಸಿದ ವ್ಯಕ್ತಿಗಳ
ಮೇಲೆ ಕಾನೂನು ಕ್ರಮ ಜರುಗಿಸಲಾಗುವದು. ಸದರಿ ಸೋಶಿಯಲ್ ಮಿಡಿಯಾವನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ
ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳಲು ವಿನಂತಿಸಲಾಗಿದೆ.
ಸಹಿ/-
ಪೊಲೀಸ್ ಅಧೀಕ್ಷಕರು,
ಕಲಬುರಗಿ ಜಿಲ್ಲೆ
No comments:
Post a Comment