ಅಪಘಾತ ಪ್ರಕರಣ :
ಯಡ್ರಾಮಿ
ಠಾಣೆ : ದಿನಾಂಕ 08-07-2019 ರಂದು ಬೆಳಿಗ್ಗೆ ನಮ್ಮೂರ ರಮೇಶ ತಂದೆ ಕಾಶಿರಾಯ ಮುಡಬೋಳ ರವರು ನನಗೆ ಫೋನ ಮಾಡಿ
ಹೇಳಿದ್ದೇನೆಂದೆರೆ, ಇದೀಗ 10;50 ಎ.ಎಂ ಸುಮಾರಿಗೆ ನಾನು ನಮ್ಮ ಹೊಲದಿಂದ ನಡೆದುಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ
ನಿಮ್ಮ ಅಳಿಯ ಹಣಮಂತ್ರಾಯ ಮತ್ತು ನಮ್ಮೂರ ಬಸವರಾಜ ತಂದೆ ಭೀಮರಾಯ ಬಿರಾದಾರ ರವರ ಮೋಟರ ಸೈಕಲ್ ಮೇಲ
ಬಳಬಟ್ಟಿ ಕಡೆ ಹೋಗುತ್ತಿದ್ದಾಗ ಮೋಟರ ಸೈಕಲನ್ನು ಬಸವರಾಜ ನಡೆಸುತ್ತಿದ್ದನು, ಅವನು ಮೋಟರ ಸೈಕಲನ್ನು ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ
ಬರುತ್ತಿದ್ದನು, ವಾಸೂದೇವ ಕುಲಕರ್ಣಿ ರವರ ಹೊಲದ ಹತ್ತಿರ ಕೆಲವು
ಕುರಿಗಳು ರೋಡಿನಗೊಂಟು ಹೋಗುತ್ತಿದ್ದಾಗ ಒಂದು ಕುರಿ ಒಮ್ಮೇಲೆ ರೋಡಿನ ಕಡೆ ಬಂದಾಗ ಬಸವರಾಜ ಇವನು
ಮೋಟರ ಸೈಕಲನ್ನು ಒಮ್ಮೇಲೆ ಕಟ್ ಮಾಡಲು ಹೋಗಿ ಮೋಟರ ಸೈಕಲ್ ಸ್ಕಿಡ್ ಮಾಡಿದನು, ಆಗ ಮೋಟರ ಸೈಕಲ್ ಹಿಂದೆ ಕುಳಿತ ನಿಮ್ಮ ಅಳಿಯ ಹಣಮಂತ್ರಾಯ ಇವನು ಮೋಟರ ಸೈಕಲನಿಂದ ಹಾರಿ
ರೋಡಿನ ಮೇಲೆ ಬಿದ್ದನು, ಆಗ ನಾನು ಅವನ ಹತ್ತಿರ ಹೋಗಿ ನೋಡಿದಾಗ ಅವನ
ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಸೋರುತ್ತಿತ್ತು, ಎಡ
ಮೆಲಕಿನ ಹತ್ತಿರ ಭಾರಿ ಒಳಪೆಟ್ಟಾಗಿ ಕಂದು ಗಟ್ಟಿದ ಗಾಯವಾಗಿರುತ್ತದೆ ಬೇಗ ಬರ್ರಿ ಅಂತಾ ಹೇಳಿದ
ಕೂಡಲೆ ನಾನು ಮತ್ತು ನಮ್ಮ ಮನೆ ಹತ್ತಿರ ಇದ್ದ ಶೇಖರ ತಂದೆ ಶಾಮರಾಯ ಮುಡಬೋಳ ರವರು ಕೂಡಿ
ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಅಳಿಯ ರಸ್ತೆಯ ಮೇಲೆ ಬಿದ್ದಿದ್ದು, ಮೇಲ್ಕಂಡಂತೆ
ಗಾಯಗಳಾಗಿದ್ದವು, ಮೋಟರ ಸೈಕಲ್ ಸವಾರ ಬಸವರಾಜನು ಅಲ್ಲೆ ಕುಳತಿದ್ದು,
ಅವನ ಎಡಮೊಳಕಾಲಿಗೆ ತರಚಿದಗಾಯವಾಗಿತ್ತು, ಅಲ್ಲೆ
ಬಿದ್ದ ಹೊಂಡಾ ಶೈನ ಮೋಟರ ಸೈಕಲ್ ನಂ ನೋಡಲಾಗಿ ಕೆ,ಎ- 32/ಇ.ಯು-9989 ನೇದ್ದು ಇತ್ತು,
ಆಗ ನಮ್ಮ ಅಳಿಯ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ನಮ್ಮ
ಅಳಿಯನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಯಡ್ರಾಮಿ ಕಡೆ ಹೊಗುತ್ತಿದ್ದಾಗ
ಸುಂಬಡ ಗ್ರಾಮ ಸಮೀಪ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಸಿದ್ದಪ್ಪ ತಂದೆ ನರಸಪ್ಪ ಯಮನೂರ ಸಾ||
ವಡಗೇರಾ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆ
ಗುನ್ನೆ ನಂ 72/2019 ಕಲಂ 279, 304 (ಎ)
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
No comments:
Post a Comment