Police Bhavan Kalaburagi

Police Bhavan Kalaburagi

Monday, July 22, 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ವಾಡಿ ಠಾಣೆ : ದಿನಾಂಕ:20/07/2019 ರಂದು  ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಲಾಡ್ಲಾಪೂರ ಗ್ರಾಮದ ದೇವರಾಜ ತಂದೆ ಅಯ್ಯಪ್ಪ ಆನೆಮಿ ರವರ ಹೊಲದ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ನನಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ರವರಿಗೆ ಮತ್ತು ಸಿ.ಪಿ.ಐ ಚಿತ್ತಾಪೂರ ರವರ ಮಾರ್ಗದರ್ಶನದಲ್ಲಿ  ಪಿ.ಎಸ್.ಐ ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಡ್ಲಾಪೂರ ಗ್ರಾಮದಿಂದ ಅಣ್ಣಿಕೇರಾ ಗ್ರಾಮದ ಕಡೆಗೆ ಹೋಗುವ ರೊಡಿಗೆ ಹೋಗಿ ಸದರಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಕೆಳಗಿಳಿದು ಮರೆಯಲ್ಲಿ ನಿಂತು ನೀರಿಕ್ಷಣೆ ಮಾಡಲಾಗಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಸ್ಟೇಟ ಜೂಜಾಟ ಆಡುತ್ತಿದ್ದ 10 ಜನರನ್ನು ಹಿಡಿದುಕೊಂಡಿದ್ದು ಅವರ ಹೆಸರು ವಿಚಾರಿಸಲಾಗಿ 1] ದೇವರಾಜ ತಂದೆ ಅಯ್ಯಪ್ಪ ಆನೆಮಿ ಸಾ:ಲಾಡ್ಲಾಪೂರ 2] ಮೈನೊದ್ದಿನ ತಂದೆ ಮಹ್ಮದ ಯಸೂಫ ಶೇಖ  ಸಾ:ಶಿವರಾಯ ಚೌಕಿ ವಾಡಿ 3] ಶಿವಕುಮಾರ ತಂದೆ ಭೀಮರಾಯ ಗುತ್ತೆದಾರ ಸಾ:ಪಿಲಕಮ್ ಏರಿಯಾ ವಾಡಿ 4] ಮಲ್ಲಿಕಾರ್ಜುನ ತಂದೆ ಸಿದ್ದಪ್ಪ ಬಿರಾದಾರ ಸಾ:ಅಜೀಜ ಕಾಲೋನಿ ಯಾದಗೀರ 5] ನೀಲಕಂಠ ತಂದೆ ಭೀಮರಾಯ ಮಾದವರಡ್ಡಿ ಸಾ:ಟೆಂಗಳಿ 6] ನಿರಂಜನ ತಂದೆ ದೇವಿಂದ್ರಪ್ಪ ನೀಲಗಾರ ಸಾ:ಲಾಡ್ಲಾಪೂರ 7] ನಾಗಯ್ಯ ತಂದೆ ಶರಣಯ್ಯಾ ಬೈರಾಮಡಗಿ ಸಾ:ಟೆಂಗಳಿ 08] ಮಲ್ಲಿಕಾರ್ಜುನ ತಂದೆ ಭೀಮರಾಯ ನಾಯಕೊಡಿ ಸಾ:ಟೆಂಗಳಿ 09] ಕೃಷ್ಣಾ ತಂದೆ ಭೀಮರಾಯ ಚಪಾಟಲೆರ ಸಾ:ಲಾಡ್ಲಾಪೂರ 10] ಶರಣಪ್ಪ ತಂದೆ ಬಸವರಾಜ ಅಳಬನೂರ ಸಾ:ದಂಡಗುಂಡ ಇರುತ್ತದೆ.ಮತ್ತು ಓಡಿ ಹೋದವರ ಹೆಸರು ದೇವರಾಜ ಇತನಿಗೆ ವಿಚಾರಿಸಲಾಗಿ 11] ಮಾರುತಿ ತಂದೆ ಸಿದ್ದಣ್ಣಾ ಸುಗ್ಗಾ ಸಾ:ನಾಲವಾರ 12] ಸಾಬಣ್ಣಾ ತಂದೆ ಬಸಣ್ಣಾ ಗನಿಮನಿ ಸಾ:ಲಾಡ್ಲಾಪೂರ ಅಂತಾ ತಿಳಿಸಿದ್ದು. ಸದರಿಯವರ ಅಂಗಶೋಧನೆಯಿಂದ ಒಟ್ಟು 77,750/- ನಗದು ಹಣ ಹಾಗೂ ಪಣಕ್ಕೆ ಹಚ್ಚಿದ ಒಟ್ಟು 3790/- ರೂಪಾಯಿ ಹೀಗೆ ಒಟ್ಟು 81,540/- ರೂಪಾಯಿ ನಗದು ಹಣ ಹಾಗೂ 52 ಇಸ್ಪೇಟ ಎಲೆಗಳು ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ವಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 81/2019 ಕಲಂ 87 ಕೆ ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:21/07/2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ನಂದರ್ಗಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಮೇಲೆ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮರ್ರು ಪಂಚರೊಂದಿಗೆ ನಂದರ್ಗಿ ಗ್ರಾಮ ತಲೂಪಿ ಹನುಮಾನ ದೆವರ ಗುಡಿಯಿಂದ ಸ್ವಲ್ಪ ದೂರು ಜಿಪ ನಿಲ್ಲಿಸಿ ಕಾಲ ನಡಿಗೆಯ ಮೂಲಕ ಹೋಗಿ ಮರೆಯಾಗಿ ನಿಂತು ನೋಡಲು ಗುಡಿಯ ಮುಂದೆ 07 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ 07 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1)ಕಲ್ಯಾಣಿ ತಂದೆ ಯಲ್ಲಾಲಿಂಗ ಬಾಲ್ದಿ 2)ಮಹಾಂತೇಶ ತಂದೆ ಶಂಕರ ಬೊಳಮಂದಿ 3)ಆನಂದ ತಂದೆ ಶಿವಪುತ್ರಪ್ಪ ರೇವೂರ 4)ವಜೀರ ತಂದೆ ಯಾಕುಬ ಇನಾಮದಾರ  5) ರೇವಣಸಿದ್ದ ತಂದೆ ಹಣಮಂತ ಬಾಲ್ದಿ 6) ಚಂದ್ರಕಾಂತ ತಂದೆ ಅಣ್ಣಪ್ಪ ರೇವೂರ 7) ಅಜೀಜ ತಂದೆ ಜೈನೋದ್ದಿನ ಜಾಗಿರದಾರ ಸಾ|| ಎಲ್ಲರು ನಂದರ್ಗಿ ಅಂತಾ ತಿಳಿಸಿದ್ದು, ಸದರಿಯವರ ವಶದಿಂದ ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟ  ಒಟ್ಟು 2430/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 128/2019 ಕಲಂ 87 ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ : 21/07/2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಶಿರವಾಳ ಗ್ರಾಮದ ಚೌಡಯ್ಯ ದೇವರ ಕಟ್ಟೆಯಮೇಲೆ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿರವಾಳ ಗ್ರಾಮ ತಲೂಪಿ ಚೌಡಯ್ಯನ ಕಟ್ಟೆಯಿಂದ ಸ್ವಲ್ಪ ದೂರು ಜಿಪ ನಿಲ್ಲಿಸಿ ಕಾಲ ನಡಿಗೆಯ ಮೂಲಕ ಹೋಗಿ ಮರೆಯಾಗಿ ನಿಂತು ನೋಡಲು ಗುಡಿಯ ಮುಂದೆ 08 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ 08 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ದೌಲಸಾಬ ತಂದೆ ಕಾಶೀಮಸಾಬ ಚೌದರಿ 2) ಹಣಮಂತ ತಂದೆ ಪ್ರಭು ಬಂಡಾರಿ 3) ಭೋಜಪ್ಪ ತಂದೆ ಗುರಪ್ಪ ಲಸ್ಕರ 4) ಕಾಶಿರಾಯ ತಂದೆ ಶಂಕರ ಅಂಜುಟಗಿ ಸಾ|| 4 ಜನರು ಶಿರವಾಳ ಅಂತಾ ತಿಳಿಸಿದ್ದು, 5) ರೇವಣಸಿದ್ದಪ್ಪ ತಂದೆ ಅಣ್ಣಾರಾವ ಪಾಟೀಲ 6) ರಫೀಕ್ ತಂಧೆ ಮೈಹಿಬೂಬಸಾಬ ಖಾನಾಪೂರ 7) ಮಹ್ಮದಹನೀಫ್ ತಂದೆ ನಬಿಸಾಬ ಚೌದರಿ 8) ನರಸಪ್ಪ ತಂದೆ ನಿಂಗಪ್ಪ ಬಡದಾಳ ಸಾ|| 4 ಜನರು ದಿಕ್ಸಂಗಾ (ಕೆ) ಅಂತಾ ತಿಳಿಸಿದ್ದು. ಸದರಿಯವರ ವಶದಿಂದ ಇಸ್ಪೇಟ ಜೂಜಾಟಕ್ಕೆ ಒಟ್ಟು 2550/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 129/2019 ಕಲಂ 87 ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ: 21/07/2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಮಾದಾಬಾಳ ತಾಂಡಾ ಕಡೆಗೆ ಹೋಗುವ ಕ್ಯಾನಾಲ ರಸ್ತೆಗೆ ಇರುವ ಗುರಣ್ಣ ಹೆಗ್ಗಿ ರವರ ಹೋಲದ ಹತ್ತಿರ ಕ್ಯಾನಾಲ ರೋಡಿನ ಪಕ್ಕದಲ್ಲಿ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ,ಎಸ್.ಪಿ.ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ  ಸ್ಥಳಕ್ಕೆ ಹೋಗಿ  ಕ್ಯಾನಾಲ ರೋಡಿಗೆ ವಾಹನ ನಿಲ್ಲಿಸಿ ಎಲ್ಲರೂ ಮುಂದೆ ಕಾಲ ನಡಿಗೆಯ ಮೂಲಕ ಹೋಗಿ ಮರೆಯಲ್ಲಿ ನಿಂತು ನೋಡಲು ಕ್ಯಾನಾಲ ಪಕ್ಕದಲ್ಲಿ 06 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ 06 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಮಹಾಂತಪ್ಪ ತಂದೆ ರೇವಣಸಿದ್ದಪ್ಪ ಪಾಸೋಡಿ ಸಾ|| ಜೇವರ್ಗಿ (ಬಿ) ಹಾ|| || ಅಫಜಲಪೂರ 2) ರಾಮಚಂದ್ರ ತಂದೆ ಧರ್ಮಣ್ಣ ಘಂಟೆ ಸಾ|| ಲಿಂಬಿತೋಟ ಅಫಜಲಪೂರ 3) ಶ್ರೀಶೈಲ ತಂದೆ ನೀಲಕಂಠಪ್ಪ ಪಾಟೀಲ ಸಾ|| ಗೌರ (ಬಿ) 4) ಮಾಹಾಂತೇಶ ತಂದೆ ಚಂದ್ರಕಾಂತ ಕುದರಿ ಸಾ|| ರಾಜುಗಾಂದಿ ನಗರ ಅಫಜಲಪೂರ  5) ಚಿದಾನಂದ ತಂದೆ ಈರಣ್ಣ ಸುತಾರ ಸಾ|| ಬಜಾರ ಏರಿಯಾ ಅಫಜಲಪೂರ 6) ಗುರುರಾಜ ತಂದೆ ಭೀಮಾಶಂಕರ ನಂದಗೇರಿ ಸಾ|| ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಗೆ  ಚೆಕ್ ಮಾಡಲಾಗಿ ಅವನ ಹತ್ತೀರ ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟ ಒಟ್ಟು 5610/- ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು  ವಶಕ್ಕೆ ಪಡೆದು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 130/2019 ಕಲಂ 87 ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ:20/07/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ವಾಡಿ ಪಟ್ಟಣದ ರೇಲ್ವೇ ಆಟೋ ಸ್ಟ್ಯಾಂಡ ಹತ್ತಿರ ಮುಂದಿನ ರೊಡಿಗೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಿದ್ದಾನೆ ಅಂತಾ ಬಂದ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ  ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರೇಲ್ವೇ ಆಟೋಸ್ಟ್ಯಾಂಡ  ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಚೀಟಿ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ವಿಚಾರಿಸಲು ಶೇಖದಿನು ತಂದೆ ಶೇಖಮೌಲಾ ಶೇಖ ಸಾ:ಭೀಮನಗರ ವಾಡಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 1430 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಅವುಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಠಾಣೆಯ  ಗುನ್ನೆ ನಂ; 80/2019 ಕಲಂ;78 (III) ಕೆ.ಪಿ.ಆಕ್ಟ್  ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 21-07-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಸೊನ್ನ ಗ್ರಾಮದ ಭೀಮಾನದಿಯಿಂದ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣದ ಕಡೆ ಬರುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮರ್ರು ಪಂಚರೊಂದಿಗೆ ಸೊನ್ನ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಅಫಜಲಪೂರ-ವಿಜಯಪೂರ ರೋಡಿಗಿರುವ ಕೋರ್ಟ ಹತ್ತೀರ ಹೋಗುತ್ತಿರುವಾಗ ಎದುರುಗಡೆ ಒಂದು ಟ್ರ್ಯಾಕ್ಟರ ಬರುತ್ತಿರುವದನ್ನು ಕಂಡು ನಾವು ನಿಲ್ಲಿಸುವಂತೆ ಅದರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ ಚಾಲಕನು ಟ್ರ್ಯಾಕ್ಟರನ್ನು ನಿಲ್ಲಿಸಿದ್ದು ನಾವು ಪಂಚರೊಂದಿಗೆ ಸಮೀಪ ಹೋಗುತ್ತಿದ್ದಂತೆ ಅದರ ಚಾಲಕನು -1 ದಾಬಾದ ಕಡೆ ಹೋಗುವ ರಸ್ತೆ ಕಡೆ ಓಡಿ ಹೋದನು ನಾವು ಬೆನ್ನು ಹತ್ತೀದರು ನಮಗೆ ಸಿಗಲಿಲ್ಲ ನಂತರ  ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಅರ್ಜುನ ಮಹಿಂದ್ರಾ ಕಂಪನಿಯದಿದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ನೋಡಲಾಗಿ ಕೆಎ-32 ಟಿಎ-6672 ಇರುತ್ತದೆ. ಸದರಿ ಟ್ರ್ಯಾಕ್ಟರನ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರದಲ್ಲಿದ್ದ ಮರಳಿನ .ಕಿ 3.000/- ರೂ ಇರಬಹುದು.ಟ್ರೈಲಿಗೆ ನಂಬರ ಹಾಕಿರುವದಿಲ್ಲ ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಟ್ರ್ಯಾಕ್ಟರ ಚಾಲಕ &  ಮಾಲಿಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 127/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: