¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-07-2019
ಬೀದರ ನಗರ
ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಎಂ.ಡಿ ಜಹೂರ
ತಂದೆ ಎಂ.ಡಿ ಉಸ್ಮಾನ ವಯ: 36 ವರ್ಷ, ಸಾ: ಪನಸಾಲ ತಾಲೀಮ ಬೀದರ ರವರು ಸಮಾಜ ಸೇವೆ ಮಾಡಿಕೊಂಡಿರುತ್ತಾರೆ,
ಹೀಗಿರುವಾಗ ದಿನಾಂಕ 19-07-2019 ರಂದು ಫಿರ್ಯಾದಿಯವರು ತಮ್ಮ ಮನೆಯಿಂದ ಗವಾನ ಚೌಕ ಕಡೆಗೆ
ಹೋಗುವಾಗ ಚೌಬಾರಾ ಹತ್ತಿರ ಇದ್ದ ತನ್ವೀರ ಜಿಮ್ ಎದುರುಗಡೆ ಒಬ್ಬ ಅಂದಾಜು 45-50 ವರ್ಷ ವಯಸ್ಸಿನ
ವ್ಯಕ್ತಿ ಒಮ್ಮೆಲೆ ಚಕ್ಕರ ಬಂದು ನೆಲಕ್ಕೆ ಬಿದ್ದಾಗ ಹತ್ತಿರ ಹೋಗಿ ನೋಡಲು ಸದರಿಯವನು
ಹುಚ್ಚನಿದ್ದು ಸ್ವಲ್ಪ ದಿವಸಗಳಿಂದ ಬೀದರನಲ್ಲಿಯೇ ತಿರುಗಾಡುತ್ತಿದ್ದನು ಸದರಿಯವನ ಬಾಯಿಂದ ನೊರೆ
ಬಂದಿದ್ದು ಸದರಿಯವನಿಗೆ ಫಿಡ್ಸ ಕಾಯಿಲೆ ಇದ್ದಂತೆ ಕಂಡು ಬಂದಿದ್ದರಿಂದ ಕೂಡಲೆ 108 ಅಂಬುಲೆನ್ಸಗೆ
ಕರೆ ಮಾಡಿ ಅದರಲ್ಲಿ ಹಾಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ, ನಂತರ ದಿನಾಂಕ
22-07-2019 ರಂದು ಫಿರ್ಯಾದಿಗೆ ಗೊತ್ತಾಗಿದೆನೆಂದರೆ ದಿನಾಂಕ 19-07-2019 ರಂದು ಚೌಬಾರಾ
ಹತ್ತಿರ ಚಕ್ಕರ ಬಂದು ಬಿದ್ದ ವ್ಯಕ್ತಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತ
ಗೊತ್ತಾಗಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಸದರಿ ಘಟನೆ ನಿಜ ಇದ್ದು, ಸದರಿಯವನು ಯಾವುದೊ
ಕಾಯಿಲೆಯಿಂದ ಬಳಲಿ ಅದೇ ಕಾಯಿಲೆಯಿಂದ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶ್ರೀದೇವಿ ಗಂಡ
ರಾಜೇಪ್ಪ @
ರಾಜಕುಮಾರ
ವಯ: 35
ವರ್ಷ, ಸಾ: ಗೋಧಿಹಿಪ್ಪರ್ಗಾ ರವರ ಗಂಡ ರಾಜೇಪ್ಪ ಹಾಗೂ ಭಾವ ಜಗನ್ನಾಥ ರವರ ಮಧ್ಯ ಗೋಧಿಹಿಪ್ಪರ್ಗಾ
ಗ್ರಾಮದ ಹೊಲ ಸರ್ವೇ ನಂ. 51/1 ಇದರಲ್ಲಿ 2
ಎಕರೆ 15
ಗುಂಟೆ ಹೊಲ ಇದ್ದು ಅದರಲ್ಲಿ ತಮ್ಮ ಪಾಲಿಗೆ ಬಂದ ಹೊಲದಲ್ಲಿ ಒಕ್ಕಲುತನ ಮಾಡಿಕೊಂಡಿರುತ್ತಾರೆ,
ಸದರಿ ಹೊಲದಲ್ಲಿ ಒಕ್ಕಲುತನ ಕೆಲಸ ಸಲುವಾಗಿ ಕೆನರಾ ಬ್ಯಾಂಕ್ ಭಾಲ್ಕಿಯಲ್ಲಿ 1,25,000/- ರೂ., ಪಿಕೆಪಿಎಸ್
ಜಾಂತಿಯಲ್ಲಿ 15,000/-
ರೂ., ಗ್ರಾಮೀಣ
ಕೂಟ ಸಂಘ ಭಾಲ್ಕಿಯಲ್ಲಿ 35,000/- ರೂ. ಹೀಗೆ ಒಟ್ಟು 1,75,000/- ರೂಪಾಯಿ
ಸಾಲ ಮಾಡಿರುತ್ತಾರೆ, ಈಗ ಸುಮಾರು ಮೂರು-ನಾಲ್ಕು ವರ್ಷಗಳಿಂದ ಮಳೆ ಬೀಳದೆ ಹೋಲದಲ್ಲಿ ಏನು ಬೇಳೆ ಬೇಳೆಯದೇ
ಸಾಲ ತೀರಿಸಲು ಆಗಿರುವದಿಲ್ಲ, ಈ ವಿಚಾರವಾಗಿ ಗಂಡ ಸಾಲ ಹೇಗೆ ತೀರಿಸಲೇಂದು ವಿಚಾರ
ಮಾಡುತ್ತಿದ್ದರು, ದಿನಾಂಕ 21-07-2019 ರಂದು
ಫಿರ್ಯಾದಿಗೆ ಆರಾಮ ಇಲ್ಲದ ಕಾರಣ ತನ್ನ ತಾಯಿ ಹಾಗೂ ಮಕ್ಕಳೊಂದಿಗೆ ಆಸ್ಪತ್ರೆಗೆ ತೋರಿಸುವ ಕುರಿತು
ಹೋದಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ಫಿರ್ಯಾದಿಯವರ ಗಂಡ ರಾಜಪ್ಪಾ ಇರವರು ಸೀಮೆ ಎಣ್ಣೆಯನ್ನು ಮೈ
ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಅವರಿಗೆ ತಲೆಯಿಂದ ಹಿಂಬದಿಯ ಪಾದದವರೆಗೆ ಬೆಂಕಿ
ಸುಟ್ಟಿದ ಭಾರಿ ಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ
ದಾಖಲಿಸಿ ನಂತರ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ತೆಗೆದುಕೊಂಡು
ಹೋಗುವಾಗ ದಾರಿಯ ಮದ್ಯ ಜಹೀರಾಬಾದ ಹತ್ತಿರ ತನಗಾದ ಭಾರಿ ಗಾಯದಿಂದ ಮೃತಪಟ್ಟಿರುತ್ತಾರೆ, ಅವರ
ಸಾವಿನ ಬಗ್ಗೆ ಯಾರ ಮೇಲೂ ಯಾವದೇ ರೀತಿಯ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ
ಸಾರಾಂಶದ ಮೇರೆಗೆ ದಿನಾಂಕ 22-07-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ
ಪೊಲೀಸ್ ಠಾಣೆ ಯು.ಡಿ.ಆರ್ ನಂ. 12/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಾಂತಾಬಾಯಿ ಗಂಡ
ಬಸವರಾಜ ಬಿರಾದಾರ ಸಾ: ಹಿರನಾಗಾಂವ ರವರಿಗೆ ಹೊಲ ಸರ್ವೆ ನಂ. 132 ನೆದರಲ್ಲಿ 2 ಎಕರೆ 5 ಗುಂಟೆ
ಜಮೀನು ಇರುತ್ತದೆ, ಫಿರ್ಯಾದಿಯವರ ಗಂಡ ಬಸವರಾಜ ತಂದೆ ಶರಣಪ್ಪ ಬಿರಾದಾರ ವಯ: 65 ವರ್ಷ ಇವರು
ಮುಡಬಿ ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ ಕೃಷಿ ಸಾಲ ಹಾಗೂ ಇತರೆ ಕಡೆ ಕೈಸಾಲ ಮಾಡಿದ್ದು, ಹೀಗಿರುವಾಗ
ದಿನಾಂಕ 20-07-2019 ರಂದು ಗಂಡ ಬಸವರಾಜ ಇವರು ಹೊಲಕ್ಕೆ ಹೋಗಿ ಬೇಳೆಗೆ ಔಷಧ ಹೊಡೆದು ಬರುತ್ತೇನೆ
ಅಂತಾ ಹೇಳಿ ಹೊಲಕ್ಕೆ ಹೋಗಿದ್ದು, ಫಿರ್ಯಾದಿಯು ಮನೆಯಲ್ಲಿ ಅಡುಗೆ ಮಾಡಿಕೊಂಡು ತನ್ನ ಗಂಡನಿಗೆ
ಹೊಲಕ್ಕೆ ಊಟ ತೆಗೆದುಕೊಂಡು ಹೋದಾಗ ಗಂಡ ಹೊಲದಲ್ಲಿ ಮಲಗಿರುವದನ್ನು ನೋಡಿ ತನ್ನ ಗಂಡನಿಗೆ ಹೀಗೆಕೆ
ಮಲಗಿದಿರಿ ಅಂತಾ ಕೇಳಿದಕ್ಕೆ ನಾನು ಸಾಲ ತಿರಿಸಲಾಗದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು
ಬೆಳೆಗೆ ಹೊಡೆಯುವ ಔಷಧ ಕುಡಿದಿರುತ್ತೇನೆ ಅಂತಾ ಅಂದಾಗ ತನ್ನ ಗಂಡನಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ
ಮುಡಬಿ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿ ಅಲ್ಲಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ದಾಖಲು
ಮಾಡಿ ಅಲ್ಲಿಂದ ವೈಧ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ
ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ, ಆಸ್ಪತ್ರೆಯಲ್ಲಿ ಗಂಡ ಚಿಕಿತ್ಸೆ ಫಲಕಾರಿಯಾಗದೆ
ದಿನಾಂಕ 22-07-2019 ರಂದು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೂ ಯಾವುದೆ
ರೀತಿಯ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ
ಪೊಲೀಸ್ ಠಾಣೆ ಅಪರಾಧ ಸಂ. 92/2019, ಕಲಂ. 380, 457 ಐಪಿಸಿ :-
ಫಿರ್ಯಾದಿ ಗುರುನಾಥ ತಂದೆ ಮೋಹನ ಪವಾರ ಮುಖ್ಯೆ ಗುರುಗಳು ವಸಂತ ಪ್ರೌಡ ಶಾಲೆ ಡಾವರಗಾಂವ ರವರು
ದಿನಾಂಕ 20-07-2019 ರಂದು ಶನಿವಾರ 1400 ಗಂಟೆಗೆ ಶಾಲೆ ಕೆಲಸ ಮುಗಿಸಿಕೊಂಡು
ಮನೆಗೆ ಹೊದಾಗ ದಿನಾಂಕ 20-07-2019 ರಂದು
ರಾತ್ರಿಯಿಂದ 21-07-2019 ರಂದು ರಾತ್ರಿಯಲ್ಲಿ ಯಾರೋ ಅಪರಿಚಿತ ಕಳ್ಳರು ಶಾಲೆಯ ಅಡುಗೆ
ಕೋಣೆಯ ಬೀಗವನ್ನು ಮುರಿದು 50 ಕೆ.ಜಿ ಮೂರು ಭಗೋಣಿ, 25 ಕೆ.ಜಿ 2 ಭಗೋಣಿ, 2 ಸ್ಟೀಲ್ ಬಕೀಟ್, 2 ಸ್ಟೀಲ್ ಜಗ್ ಹಾಗೂ 3 ಗ್ಯಾಸ್ ಸಿಲಿಂಡರ್ ಅದರಲ್ಲಿ 2 ತುಂಬಿದ್ದು 1 ಬಳಸಲಾಗುತ್ತಿದ್ದು ಒಟ್ಟು ಮೂರು ಸಿಲಿಂಡರ್ ಗಳು (ಭಾರತ ಗ್ಯಾಸ್ ಕಂಪನಿ) ಹಾಗೂ 1 ಕ್ವಿಂಟಲ್ 26 ಕೆ.ಜಿ ಅಕ್ಕಿ, 50 ಕೆಜಿ ತೊಗರಿ ಬೆಳೆ ಕಳುವಾಗಿರುತ್ತವೆ, 1) ಭಗೋಣಿ 3
+ 2 = 5 ಅ.ಕಿ 10,000/- ರೂ., 2) ಬಕೀಟ್ – 2 ಅ.ಕಿ 400/-
ರೂ., 3) ಜಗ್ – 2 ಅ.ಕಿ 300/- ರೂ., 4) ಗ್ಯಾಸ್ ಸಿಲಿಂಡರ್ – 3 ಅ.ಕಿ 9000/- ರೂ., 5) ಅಕ್ಕಿ - 1 ಕ್ವಿಂಟಲ್ 26 ಕೆ.ಜಿ ಅ.ಕಿ 1500/- ರೂ., 6) 50 ಕೆ.ಜಿ ತೊಗರಿ ಬೆಳೆ ಅ.ಕಿ 2500/- ರೂ. ಒಟ್ಟು 24,700/-
ರೂ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
©ÃzÀgÀ £ÀÆvÀ£À £ÀUÀgÀ ¥Éưøï oÁuÉ
C¥ÀgÁzsÀ ¸ÀA. 107/2019, PÀ®A. 392 L¦¹ :-
ದಿನಾಂಕ 21-07-2019 ರಂದು ಫಿರ್ಯಾದಿ ಸಂಗಮ್ಮ ಗಂಡ ವೀರಪ್ಪ ಪಾರಾ ವಯ: 54 ವರ್ಷ, ಜಾತಿ: ಲಿಂಗಾಯತ, ಸಾ: ಪ್ಲಾಟ ನಂ. 61 ಬ್ಯಾಂಕರ್ಸ ಕಾಲೋನಿ ಶಿವನಗರ ದಕ್ಷಿಣ ಬೀದರ ರವರು ಕ್ವಾಲಿಟಿ ಜ್ಯೂಸ ಸೆಂಟರ ಹಣ್ಣಿನ
ಅಂಗಡಿಯಲ್ಲಿ ಹಣ್ಣನ್ನು ಖರೀದಿಸಿ ವಿಜಯನಗರ ಕಾಲೋನಿಯಲ್ಲಿರುವ ತನ್ನ ತಮ್ಮನಾದ ಸಂಗಮನಾಥ ಸಾವಳೆ ಇತನ
ಮನೆಗೆ ನಡೆದುಕೊಂಡು ಹೋಗುವಾಗ ಬೀದರ ಬಸ್ ನಿಲ್ದಾಣದ ಎದುರಿಗೆ ಇರುವ ಪ್ರಿನ್ಸ್ ಫರ್ನಿಚರ ಶೋರೂಮ
ಹತ್ತಿರ ಎದುರಿನಿಂದ ಇಬ್ಬರು ಅಪರಿಚಿತ ಕಳ್ಳರು ದ್ವಿಚಕ್ರ ವಾಹಾನದ ಮೇಲೆ ಬಂದು ಫಿರ್ಯಾದಿಯವರ ಕೊರಳಲ್ಲಿದ್ದ
ಬಂಗಾರದ ಆಭರಣಗಳನ್ನು ದೊಚಿಕೊಂಡು ಹೋಗಿರುತ್ತಾರೆ, ಆಭರಣಗಳ ವಿವರ 1) 20 ಗ್ರಾಂ. ಬಂಗಾರದ ಲಾಕೇಟ ಅ.ಕಿ 60,000/- ರೂ., 2) 5 ಗ್ರಾಂ. ಬಂಗಾರದ ಬಸವೇಶ್ವರ ಫೋಟೊವುಳ್ಳ ಪದಕ ಅ.ಕಿ 15,000/-
ರೂ., 3) 5 ಗ್ರಾಂ. ಬಂಗಾರದ ಗುಂಡ ಅ.ಕಿ 15,000/- ರೂ. ಹೀಗೆ ಒಟ್ಟು 30 ಗ್ರಾಂ. ಬಂಗಾರದ ಆಭರಣಗಳು ಅ.ಕಿ 90,000/- ರೂ. ವುಳ್ಳವು ಇರುತ್ತವೆ, ಸದರಿ ಅಪರಿಚಿತ ಕಳ್ಳರಿಗೆ ನೋಡಿದರೆ ಗುರುತಿಸುತ್ತೇನೆ ಅಂತ ಕೊಟ್ಟ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment