ಆಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದು ಮಾರುತ್ತಿದ್ದವನ ಬಂಧನ :
ಅಫಜಲಪೂರ
ಠಾಣೆ : ದಿನಾಂಕ 23-07-2019 ರಂದು ಬೆಳಿಗ್ಗೆ ಗೌರ(ಕೆ) ಸೀಮಾಂತರದ ಪ್ರಭು
ತಂದೆ ಚಂದಪ್ಪ ಜಮಾದಾರ
ಸಾ|| ಗೌರ (ಕೆ) ಇವರ ಹೊಲದಲ್ಲಿ ಅನದಿಕೃತವಾಗಿ ಗಾಂಜಾ
ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ
ಮಾಡುತ್ತಾನೆ ಅಂತಾ ಖಚಿತ
ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು ಪತ್ರಾಂಕಿತ ಅಧಿಕಾರಿಯವರಾದ ಡಾ|| ಸಂಗಮೇಶ
ಟಕ್ಕಳಕಿ ವೈದ್ಯಾಧಿಕಾರಿಗಳು ತಾಲೂಕು ಸರ್ಕಾರಿ
ಆಸ್ಪತ್ರೆ ಅಫಜಲಪೂರ ಮತ್ತು ವಿಡಿಯೋಗ್ರಾಫರ, ತೂಕ ಮಾಡುವ ಅನುಭವದವರನ್ನು
ಕರೆದುಕೊಂಡು ನಮ್ಮ ಇಲಾಖಾ
ಜೀಪ ನಂ ಕೆಎ-03 ಜಿ-1110 ನೇದ್ದರಲ್ಲಿ ನಾನು
ಹಾಗೂ ಪತ್ರಾಂಕಿತ ಅಧಿಕಾರಿಗಳು ಮತ್ತು
ಸರ್ಕಾರಿ ಪಂಚರು ಕೂಡಿ
ಹಾಗೂ ಒಂದು ಖಾಸಗಿ
ಕ್ರೂಜರ ವಾಹನದಲ್ಲಿ ನಮ್ಮ
ಪೊಲೀಸ್ ಸಿಬ್ಬಂದಿ ಜನರು
ಮತ್ತು ಉಳಿದವರು ಕೂಡಿ ಹೊರಟು
ಗೌರ (ಕೆ) ಗ್ರಾಮದ ಹತ್ತಿರ ಹೋಗಿ
ಗ್ರಾಮದ ಬಾತ್ಮಿದಾರರಿಗೆ ಸದರಿ ಪ್ರಭು
ಜಮಾದಾರ ಈತನ ಹೊಲದ
ಬಗ್ಗೆ ಹಾಗೂ ಸದರಿಯವನ
ಬಗ್ಗೆ ವಿಚಾರಿಸಿದಾಗ ಬಾತ್ಮಿದಾರನು ನಮ್ಮ ಜೊತೆಗೆ
ಬಂದು ದೂರದಿಂದ ಪ್ರಭು
ಜಮಾದಾರ ಈತನ ಹೊಲವನ್ನು
ತೊರಿಸಿದ ಮೇರೆಗೆ, ಸದರಿ ಪ್ರಭು
ಜಮಾದಾರ ಈತನ ಹೊಲದಲ್ಲಿ
ಹೊಗುತ್ತಿದ್ದಾಗ, ಸದರಿ ಹೊಲದಿಂದ ಒಬ್ಬ
ವ್ಯೆಕ್ತಿ ನಮ್ಮನ್ನು ನೋಡಿ
ಓಡತೊಡಗಿದನು. ಆಗ ನಾವು ಬೆನ್ನಟ್ಟಿ ಹಿಡಿದು
ಸದರಿಯವನ ಹೆಸರು ವಿಳಾಸ
ವಿಚಾರಿಸಲು ತನ್ನ ಹೆಸರು
ಪ್ರಭು ತಂದೆ ಚಂದಪ್ಪ
ಜಮಾದಾರ ಸಾ|| ಗೌರ (ಕೆ) ಅಂತ ತಿಳಿಸಿದ್ದು, ಸದರಿಯವನಿಗೆ ಗಾಂಜಾ
ಬೆಳೆದ ಬಗ್ಗೆ ಪುನ
ಪುನ ವಿಚಾರಿಸಲು ಸದರಿಯವನು
ಕಬ್ಬಿನ ಬೆಳೆ ಹತ್ತಿರ
ಕರೆದುಕೊಂಡು ಹೋಗಿ ಕಬ್ಬಿನ
ಬೆಳೆ ಪಕ್ಕದಲ್ಲಿ ಬೆಳೆದ
ಗಾಂಜಾಗಿಡಗಳನ್ನು ತೊರಿಸಿದನು. ಸದರಿಯವನಿಗೆ ವಿಚಾರಿಸಿದಾಗ ಸದರಿ ಗಾಂಜ
ಬೆಳೆದ ಹೊಲದ ಸರ್ವೆ
ನಂಬರ 54 ಇದ್ದು ಗೌರ (ಕೆ) ಸೀಮಾಂತರದಲ್ಲಿ ಇರುತ್ತದೆ. ಸದರಿ ಹೊಲ
ನಮ್ಮ ಅಜ್ಜನಾದ ನಿಂಗಪ್ಪ
ತಂದೆ ಹಣಮಂತ ಜಮದಾರ
ಸಾ|| ಗೌರ (ಕೆ) ಈತನ ಹೆಸರಿನಲ್ಲಿದ್ದು, ಇನ್ನು ನನ್ನ ಹೆಸರಿಗೆ
ವಾಟ್ನಿ ಆಗಿರುವುದಿಲ್ಲ ಎಂದು ತಿಳಿಸಿದನು. ನಂತರ
ಸದರಿಯವನಿಗೆ ಗಾಂಜಾ ಬೆಳೆದ
ಬಗ್ಗೆ ವಿಚಾರಿಸಲು ನಾನು
ಸದರಿ ನನ್ನ ಹೊಲದಲ್ಲಿ
ಸುಮಾರು ದಿನಗಳಿಂದ ಗಾಂಜಾ
ಗಿಡಗಳನ್ನು ಬೆಳೆದು ಅದನ್ನು
ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ
ಬೇರೆ ಕಡೆಗೆ ತಗೆದುಕೊಂಡು ಹೋಗಿ
ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ
ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ನಂತರ
ಸದರಿ ಗಾಂಜಾ ಗಿಡಗಳನ್ನು ನಮ್ಮ
ಜೊತೆಗೆ ಕರೆದುಕೊಂಡು ಬಂದಿದ್ದ ಸಂಜೀವಕುಮಾರ ತಂದೆ
ಜಗದೇವಪ್ಪ ಹೊಸಮನಿ, ಖಾಜಪ್ಪ ತಂದೆ
ಗಿರಿಮಲ್ಲಪ್ಪ ಕಡ್ಲೇವಬಾಡ ಇಬ್ಬರು
ಸಾ|| ಅಫಜಲಪೂರ ಇವರಿಂದ ಗಾಂಜಾ
ಗಿಡಗಳನ್ನು ಕಾಂಡ ಸಮೇತ
ಕಿತ್ತಿಸಲು ಒಟ್ಟು 09 ಗಾಂಜಾ ಗಿಡಗಳಿದ್ದು ಅವುಗಳನ್ನು ಪ್ರತ್ಯಕವಾಗಿ ತೂಕ
ಮಾಡಲು ಒಟ್ಟು 10.547 ಕೆಜಿ ತೂಕವಿದ್ದು, ಸದರಿ ಗಾಂಜಾ
ಗಿಡಗಳು ಹೂವು ಮತ್ತು
ಪಸಲು ಬರಿತವಾಗಿದ್ದವು. ನಂತರ ಸದರಿ ಗಾಂಜಾಗಿಡಗಳನ್ನು ಕಾಂಡ
ಮತ್ತು ಎಲೆಗಳನ್ನು ಪ್ರತ್ಯಕವಾಗಿ ಮಾಡಿ
ಹಾಜರಿದ್ದ ಪಂಚರ ಸಮಕ್ಷಮ
ಮತ್ತು ಪತ್ರಾಂಕಿತ ಅಧಿಕಾರಿಗಳ ಸಮ್ಮುಖದ್ಲಲಿ ಆರೋಪಿತನಿಂದ ವಶಪಡಿಸಿಕೊಂಡಿದ್ದು, ಸದರಿ ಕಾಂಡ
ಸಮೇತವಾದ ಹಸಿ ಗಾಂಜಾ
ಗಿಡಗಳು ಅಂದಾಜು 10,000/- ರೂ ಕಿಮ್ಮತ್ತಿನವು ಇರಬಹುದು. ನಂತರ
ಸದರಿ ಜಪ್ತ ಮಾಡಿಕೊಂಡ
ಗಾಂಜ ಗಿಡಗಳಲ್ಲಿ ಎಲ್ಲಾ
ಗಾಂಜಾಗಿಡಗಳಿಂದ ಸ್ವಲ್ಪ ಸ್ವಲ್ಪ
ಎಲೆಗಳನ್ನು ಕಿತ್ತು ಅಂದಾಜು 100 ಗ್ರಾಮ
ನಷ್ಟು ಹಸಿ ಗಾಂಜಾವನ್ನು ಒಂದು
ಬಿಳಿ ಬಟ್ಟೆಯ ಚೀಲದಲ್ಲಿ
ಹಾಕಿ, ದಾರದಿಂದ ಹೊಲೆದು ಪಂಚರ
ಚೀಟಿ ಅಂಟಿಸಿ ಎ.ಎಪ್.ಜೆಡ್
ಎಂಬ ಇಂಗ್ಲೀಷ ಅಕ್ಷರ
ಅರಗಿನಿಂದ ಶಿಲ್ ಮಾಡಿ
ಜಪ್ತ ಮಾಡಿಕೊಳ್ಳಲಾಯಿತು, ಸದರಿ ಈ ಎಲ್ಲಾ
ಜಪ್ತಿ ಪಂಚನಾಮೆಯನ್ನು ಜಪ್ತಿ ಪಂಚನಾಮೆ
ಮೂಲಕ ಜಪ್ತ ಮಾಡಿಕೊಂಡೆನು. ನಂತರ ಸದರಿ
ಜಪ್ತ ಮಾಡಿಕೊಂಡ ಗಾಂಜಾವನ್ನು ಗಾಂಜಾ
ಗಿಡಗಳನ್ನು ಬೆಳೆದ ಪ್ರಭು
ತಂದೆ ಚಂದಪ್ಪ ಜಮಾದಾರ
ಸಾ|| ಗೌರ (ಕೆ) ಈತನೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 131/2019 ಕಲಂ 20 (ಬಿ) ಎನ್.ಡಿ.ಪಿ.ಎಸ್ ಆಕ್ಟ
ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸೇಡಂ
ಠಾಣೆ : ದಿನಾಂಕ 23-07-19 ರಂದು ಶ್ರೀ ತಿಪ್ಪಣ್ಣ ತಂದೆ ಫಕೀರಪ್ಪ ಸೋಮಪೂರ ಸಾ|| ಮುರುಗೋಡ ತಾ|| ಸವದತ್ತಿ, ರವರು ಮತ್ತು ರಾಜಾಸಾಬ ನದಾಫ ಇಬ್ಬರು
ಕೂಡಿ ರಾಜಾಸಾಬ ಈತನ ಲಾರಿ ನಂ ಕೆಎ22 ಸಿ9775 ನೇದ್ದರಲ್ಲಿ ಬೈಲಹೊಂಗಲ್ ದಿಂದ ಹೈದ್ರಾಬಾದಕ್ಕೆ ಮೆಣಸಿನಕಾಯಿ
ಮತ್ತು ಕ್ಯಾಬೇಜಗಳ ಲೋಡ ಮಾಡಿದ್ದು, ಸದರಿ ಲಾರಿಯನ್ನು ರಾಜಾಸಾಬ ಇತನು ಚಲಾಯಿಸುತ್ತಿದ್ದು, ದಿನಾಂಕ: 24-07-19 ರಂದು 02-15 ಎ.ಎಮ್ ಸುಮಾರಿಗೆ ಸೇಡಂ ಪಟ್ಟಣದ
ಚಿಂಚೋಳಿ ಕ್ರಾಸನ ತಿರುವಿನಲ್ಲಿ ರಾಜಾಸಾಬನು ತನ್ನ ಲಾರಿಯನ್ನು ಅತಿವೇಗದಿಂದ ಮತ್ತು ಅಲಕ್ಷತನ
ದಿಂದ ನಡೆಯಿಸುತ್ತಾ ಬಂದು ಒಮ್ಮೇಲೆ ತಿರುವಿನಲ್ಲಿ ನಿಯಂತ್ರಣತಪ್ಪಿ ತನ್ನ ಲಾರಿಯನ್ನು ರೋಡಿನ
ಎಡಗಡೆ ತೆಗ್ಗಿನಲ್ಲಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಲ್ಲಿ ರಾಜಸಾಬ ಇತನು ಭಾರಿಗಾಯಹೊಂದಿ
ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಹಾಗು ನನಗೆ ಕಿವಿಗೆ ಹಾಗು ಇತರೆ ಕಡೆಗಳಲ್ಲಿ ಸಣ್ಣ ಪುಟ್ಟ
ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯ ಗುನ್ನೆ ನಂ.124/2019 ಕಲಂ 279, 337, 304(ಎ) ಐ.ಪಿ.ಸಿ
ನೆದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ
ಠಾಣೆ : ಶ್ರೀ ಸುಭಾಷ ತಂದೆ ಹಣಮಂತ್ರಾಯ ನಾಯ್ಕೊಡಿ ಸಾ: ಕಾಖಂಡಕಿ ಗ್ರಾಮ ರವರು ದಿನಾಂಕ 21-07-19
ರಂದು ಬೆಳಿಗ್ಗೆ ಶಾಹಬಾದದಿಂದ ದನಗಳನ್ನು ಖರೀದಿ ಮಾಡಿಕೊಳ್ಳಲು ಚೌದರಿ ಬಂದಿದ್ದು ಅವನನ್ನು
ಚೌದರಿ ಅನ್ನುತ್ತಾ ಮಾತನಾಡುತ್ತಿದ್ದಾಗ ಅಲ್ಲೆ ಇದ್ದ ನಮ್ಮೂರ ಪ್ರವೀಣ ತಂದೆ ಬಸಪ್ಪ
ಪೂಜಾರಿ ಇವನು ವಿನಾಕಾರಣ ನೀವು ನನಗೆ ಚೌದರಿ ಅನ್ನುತ್ತಿದ್ದಿರಿ ಸೂಳಿ ಮಕ್ಕಳೆ ಅಂತಾ ಅಂದನು. ಆಗ
ನಮ್ಮ ಅಣ್ಣನ ಮಗ ಮಲ್ಲಪ್ಪ ಇವನು ಅವನೊಂದಿಗೆ ತಕರಾರು ಮಾಡಿಕೊಂಡಿದ್ದನು. ಆಗ ನಾವೆಲ್ಲರೂ ಬಿಡಿಸಿ
ಕಳುಯಿಸಿಕೊಟ್ಟಿರುತ್ತೆವೆ. ನಂತರ 8-30 ಪಿ ಎಂ ಸುಮಾರಿಗೆ ನಾನು ನನ್ನ ಹೆಂಡತಿ ಯಂಕಮ್ಮ ನನ್ನ
ಮಕ್ಕಳಾದ ಸುರೇಶ, ಅಶೋಕ, ಗಂಗಮ್ಮ ರವರು ಕೂಡಿ ಮನೆಯ ಮುಂದೆ ಕುಳಿತಾಗ ನಮ್ಮೂರ 1) ಮಲ್ಲಿನಾಥ
ತಂದೆ ಲಕ್ಷ್ಮಣ ಪಾಸೋಡಿ, 2) ಕೋತಲಪ್ಪ ತಂದೆ ಲಕ್ಷ್ಮಣ ಪಾಸೋಡಿ 3) ಶರಣಪ್ಪ ತಂದೆ ಲಕ್ಷ್ಮಣ
ಪಾಸೋಡಿ 4) ಹಣಮಂತ್ರಾಯ ತಂದೆ ಲಕ್ಷ್ಮಣ ಪಾಸೋಡಿ 5) ಮಂಜುನಾಥ ತಂದೆ ಶರಣಪ್ಪ ಪಾಸೋಡಿ, 6)
ಲಕ್ಷ್ಮಣ ತಂದೆ ಶರಣಪ್ಪ ಪಾಸೋಡಿ, 7) ಮಾಳಪ್ಪ ತಂದೆ ಕೋತಲಪ್ಪ ಪಾಸೋಡಿ 8) ರಾಜಪ್ಪ ತಂದೆ
ಕೋತಲಪ್ಪ ಪಾಸೋಡಿ 9) ಜಗದೀಶ ತಂದೆ ಹಣಮಂತ್ರಾಯ ಪಾಸೋಡಿ, 10) ಸಿದ್ದಪ್ಪ ತಂದೆ ಈರಪ್ಪ ಹೊಸಮನಿ,
11) ಶರಣಪ್ಪ ತಂಧೆ ಶಿವಮಲ್ಲಪ್ಪ ಪೂಜಾರಿ 12) ಪ್ರವೀಣ ತಂದೆ ಬಸಪ್ಪ ಪೂಜಾರಿ 13) ಬಸಪ್ಪ ತಂದೆ
ಚಂದ್ರಾಮಪ್ಪ ಪೂಜಾರಿ 14) ಮಲ್ಲಮ್ಮ ಗಂಡ ಕೋತಲಪ್ಪ ಪಾಸೋಡಿ, 15) ರೇಖಾ ತಂದೆ ಕೋತಲಪ್ಪ ಪಾಸೋಡಿ
16) ಮಲಕಮ್ಮ ಗಂಡ ವಿಶ್ವನಾಥ ಪಾಸೋಡಿ 17) ಗುರುಬಾಯಿ ಗಂಡ ಶರಣಪ್ಪ ಪಾಸೋಡಿ 18) ಈರಮ್ಮ ಗಂಡ
ಮಲ್ಲಿನಾಥ ಪಾಸೋಡಿ 19) ಮಲ್ಲು ತಂದೆ ಜೇಟ್ಟೆಪ್ಪ ಬಿಳವಾರ 20) ಸಿದ್ದು ತಂದೆ ಜೆಟ್ಟೆಪ್ಪ
ಬಿಳವಾರ 21) ಈರಪ್ಪ ತಂದೆ ಭೀಮರಾಯ ಹೊಸಮನಿ ಹಿಗೇಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು
“ ಏ ಬ್ಯಾಡ್ ಸೂಳಿ ಮಕ್ಕಳ್ಯಾ ವಿನಾಕಾರಣ ನಮ್ಮ ಜಾತಿಯವರ ಜೋತೆಯಲ್ಲಿ ಜಗಳವಾಡುತ್ತಿದ್ದಿರಿ,
ಇವತ್ತು ನಿಮಗ ಬಿಡುದಿಲ್ಲ ಬೋಸಡಿ ಮಕ್ಕಳ್ಯಾ” ಅಂತಾ ಅಂದು ಅವರಲ್ಲಿ ಮಲ್ಲಿನಾಥ ಮತ್ತು ಕೋತಲಪ್ಪ
ಇವರು ಕೈಯಿಂದ ನನ್ನ ಮೈಕೈಗೆ ಹೋಡೆದರು. ಶರಣಪ್ಪ ಮತ್ತು ಹಣಮಂತ್ರಾಯ ಇವರು ನನ್ನ ಮಗ ಸುರೇಶನಿಗೆ
ಕೈಯಿಂದ ಹೊಡೆ ಬಡೆ ಮಾಡಿ ಎಡ ಕೀವಿಯ ಹಿಂದೆ ಚುರಿರುತ್ತಾರೆ. ಮಂಜೂನಾಥ ತಂದೆ ಶರಣಪ್ಪ ಇವನು ನನ್ನ
ಮಗ ಸುರೇಶನ ಎಡಗೈ ರಟ್ಟೆಗೆ ಹಲ್ಲಿನಿಂದ ಕಚ್ಚಿದ್ದರಿಂದ ಕಂದು ಗಟ್ಟಿದ ಗಾಯವಾಗಿರುತ್ತದೆ. ಆಗ ಅಲ್ಲಿಯೇ
ಇದ್ದ ತಾಯಪ್ಪ ತಂದೆ ಬಾಲಪ್ಪ ಇವನು ಬಿಡಿಸಲು ಬಂದಿದ್ದು ಅವನಿಗೆ ಲಕ್ಷ್ಮಣ ತಂದೆ ಶರಣಪ್ಪ ಇವನು
ಕಲ್ಲಿನಿಂದ ಹಣೆಯ ಮೇಲೆ ಹೋಡೆದು ರಕ್ತಗಾಯ ಪಡಿಸಿರುತ್ತಾನೆ. ಮಾಳಪ್ಪ ಮತ್ತು ರಾಜಪ್ಪ ಇವರು
ತಾಯಪ್ಪನಿಗೆ ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಗೆ ಹೋಡೆದಿರುತ್ತಾರೆ. ಆಗ ಜಗಳ ಬಿಡಿಸಲು ಬಂದ
ಮಲ್ಲಪ್ಪ ತಂದೆ ಬಾಲಪ್ಪ ಇವನಿಗೆ ಜಗದೀಶ ಇವನು ಎಡಗೈ ನಡುವಿನ ಬೇರಲು ಕಚ್ಚಿರುತ್ತಾನೆ. ಸಿದ್ದಪ್ಪ
ಮತ್ತು ಶರಣಪ್ಪ ಇವರು ಮಲ್ಲಪ್ಪನಿಗೆ ಕೈಯಿಂದ ಬೆನ್ನಿನ ಮೇಲೆ ಹೋಡೆ ಬಡೆ ಮಾಡಿರುತ್ತಾರೆ. ಪ್ರವೀಣ
ಇವನು ನನ್ನ ಮಗಳು ಗಂಗಮ್ಮಳಿಗೆ ಕೈಯಿಂದ ಎಡಗಣ್ಣಿನ ಹತ್ತಿರ ಹೋಡೆದಿರುತ್ತಾನೆ. ನಂತರ
ಇನ್ನುಳಿದವರು “ ಈ ಬ್ಯಾಡ ಸೂಳಿ ಮಕ್ಕಳಿಗೆ ಬಿಡಬ್ಯಾಡ್ರಿ ಹೊಡೆದು ಖಲಾಸ ಮಾಡಿರಿ” ಅಂತಾ ಅಂದು
ಕೈಯಿಂದ ನಮಗೆ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮೂರ ಶಿವಪ್ಪಗೌಡ ತಂದೆ ಮಲ್ಲಪ್ಪಗೌಡ ಪೊಲೀಸ್
ಪಾಟೀಲ್ ಗುರುಬಾಯಿ ಗಂಡ ಶಿವಪ್ಪಗೌಡ ಪೊಲೀಸ್ ಪಾಟೀಲ್, ರೇಣುಕಾ ತಂದೆ ಶರಣಗೌಡ ಪೊಲೀಸ್ ಪಾಟೀಲ್
ಹಾಗು ನನ್ನ ಹೆಂಡತಿ ಯಂಕಮ್ಮ ಇವರುಗಳು ಬಂದು ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು
ಹೊಡೆ ಬಡೆ ಮಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಗುನ್ನೆ ನಂ 78/19 ಕಲಂ 143 147 148 323 324 354
504 506 ಸಂ 149 ಐಪಿಸಿ ಮತ್ತು 3 (1) (ಆರ್) (ಡಬ್ಲೂ) ಎಸ್ ಸಿ/ ಎಸ್ ಟಿ ಪಿ ಎ ಕಾಯ್ದೆ
ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
No comments:
Post a Comment