Police Bhavan Kalaburagi

Police Bhavan Kalaburagi

Wednesday, October 2, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀ ಬಲಾಯಿಚಂದ್ರಮಾಲ ತಂದೆ ರಣಜೀತಮಾಲ, ಸಾ:ಶುನ್ರಿಚಿತ್ರಾ, ಛಾಟ್ನಾ ಪೊಲೀಸ್ ಠಾಣೆ, ಜಿಲ್ಲೆ:ಬಂಕುರಾ, ಪಶ್ಚಿಮ ಬಂಗಾಳ ರಾಜ್ಯ ಹಾ.: “ಶ್ರೀಸಿಮೆಂಟ್ ಶೆಡ್ ಕೊಡ್ಲಾ ಗ್ರಾಮ, ತಾ:ಸೇಡಂ. ರವರಿಗೆ ಬಲಾಯಿಚಂದ್ರಮಾಲ ಇತನು ತನ್ನ ಪರಿಚಯದವನಾದ ಶಕ್ತಿನಗರದ ಸೃಷ್ಟಿ ಕನಸ್ಟ್ರಕ್ಷನ್ ಮಾಲಿಕರಾದ ಗುರುನಾಥ ಇವರ ಹತ್ತಿರಶ್ರೀಸಿಮೆಂಟ್ ಕಂಪನಿಯ ಕಂಪೌಂಡ ಗೊಡೆ ಕಟ್ಟುವ ಸಲುವಾಗಿ ತಮ್ಮ ಊರಿನ ಕೂಲಿ ಕಾರ್ಮಿಕರಾದ, ಮೃತ್ಯೂಂಜಯ ತಂದೆ ಗೊವರ್ಧನ್, ತನ್ನ ತಮ್ಮನಾದ ಫನಿಮಾಲ ಮತ್ತು ತಮ್ಮೂರಿನ ಅಜೀತಮಾಲ ಹಾಗೂ ಬಬಲುಮಾಲ ಇವರೊಂದಿಗೆ ಐದು-ಆರು ದಿವಸಗಳ ಹಿಂದೆ ಬಂದು ಕೆಲಸ ಮಾಡುತ್ತಿದ್ದು ನಿನ್ನ ದಿನಾಂಕ:28-09-2019 ರಂದು ತನ್ನ ಗುತ್ತಿಗೆದಾರನಾದ ಗುರುನಾಥ ಇವರ ಹತ್ತಿರ ಇದ್ದಟಾಟಾ ಜನಾನ್ಕಂಪನಿಯ ಗೂಡ್ಸ ಕಾರ ನಂ-KA36P0220 ನೇದ್ದರಲ್ಲಿ ಕುಳಿತು ಸೃಷ್ಟಿ ಕನಸ್ಟ್ರಕ್ಷನ್ ಸೂಪರವೈಸರಾದ, ಶ್ರೀನಿವಾಸ ತಂದೆ ರಾಮಚಂದ್ರ ಪಾಟೀಲ್ ಇವರ ಹತ್ತಿರ ಮಳಖೇಡಕ್ಕೆ ಬರುತ್ತಿದ್ದು ಸದರಿ ವಾಹನ ಚಾಲಕನಾದ, ಮಹಾಲಿಂಗದೇವ ತಂದೆ ರಾಮನಗೌಡ ಇತನು ಚಲಾಯಿಸುತ್ತಿದ್ದು 08-30 ಪಿ.ಎಮ್ ಸುಮಾರಿಗೆ ಸೇಡಂ ಮಾರ್ಗದಿಂದ ಮಳಖೇಡ ಸೀಮಾಂತರದ ಹತ್ತಿರ ಇದ್ದ ಬ್ರಿಡ್ಜ್ ತಿರುವಿನ ಹತ್ತಿರ ಬಂದಾಗ ವಾಹನ ಚಾಲಕನು ತನ್ನ ವಶದಲ್ಲಿದ್ದ ವಾಹನವನ್ನು ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ತಿರುವಿನಲ್ಲಿ ವೇಗವಾಗಿ ತಿರುಗಿಸಿದ್ದರಿಂದ ವಾಹನದ ಎಡಗಡೆ ಸೀಟಿನ ಹಿಂದಿನ ಬಾಗಲಿ ಹತ್ತಿರ ಕುಳಿತಿದ್ದ ಮೃತ್ಯೂಂಜಯ್ ಇತನು ಕುಳಿತ ಸ್ಥಳದಿಂದ ಡಾಂಬರ ರೋಡಿನ ಕೆಳಗೆ ವಾಹನದ ಹೊರಗೆ ಬಿದ್ದನು ಆಗ ವಾಹನದಲ್ಲಿದ್ದ ಬಲಾಯಿಚಂದ್ರಮಾಲ, ಫನಿಮಾಲ ಅಜೀತ್ ಮಾಲ ಹಾಗೂ ಬಬಲುಮಾಲ ಇವರು ವಾಹನದಿಂದ ಇಳಿದು ನೋಡಲಾಗಿ ಆತನ ಹಣೆಗೆ ಬಲಗಡೆ ಕಣ್ಣಿನ ಮೇಲಭಾಗದಲ್ಲಿ ಭಾರಿ ರಕ್ತ ಮತ್ತು ಗುಪ್ತಗಾಯ, ಬಲಗಣ್ಣಿನ ಹತ್ತಿರ, ಎಡಗೈ ಬೆರಳುಗಳ ಹತ್ತಿರ ತುಟಿಗಳಿಗೆ ತರಚಿದ ರಕ್ತಗಾಯಗಳಾಗಿದ್ದು ಆತನ ಒಂದೆರಡು ಹಲ್ಲುಗಳು ಸಹಾ ಬಿದ್ದು ಹೋಗಿದ್ದು ಕಂಡುಬಂದಿದ್ದು ಆತ ತಕ್ಷಣದಿಂದ ಪ್ರಜ್ಞಾಹೀನ ಅವಸ್ಥೆಗೆ ಜಾರಿದ್ದು. ನಂತರ ಎಲ್ಲರೂ ಕೂಡಿ ಆತನಿಗೆ ಅದೇ ವಾಹನದಲ್ಲಿ ಹಾಕಿಕೊಂಡು ಮಳಖೇಡ ಸರಕಾರಿ ಆಸ್ಪತ್ರೆ ನಂತರ ಚಿತ್ತಾಪೂರ ಸರಕಾರಿ ಆಸ್ಪತ್ರೆ ನಂತರ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಮಾಡಿ ನಂತರ ಇಂದು ದಿನಾಂಕ:29-09-2019 ರಂದು ಬೆಳಗ್ಗೆ 07-30 .ಎಮ್.ಕ್ಕೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಅವನು ಇನ್ನೂ ಮತನಾಡುವ ಸ್ಥಿತಿಯಲ್ಲಿ ಇರುವದಿಲ್ಲ ಉಪಚಾರ ಪಡೆಯುತ್ತಿದ್ದಾನು ಕಾರಣ, ನಿನ್ನೆ ದಿನಾಂಕ:28-09-2019 ರಂದು 08-30 ಪಿ.ಎಮ್. ಸುಮಾರಿಗೆ ಮಳಖೇಡ ಗ್ರಾಮದ ತಿರುವಿನಲ್ಲಿ ಬ್ರಿಡ್ಜ್ ಹತ್ತಿರ ಮಹಾಲಿಂಗ್ ದೇವ ಇತನು ತನ್ನ ವಶದಲ್ಲಿದ್ದ ವಾಹನ ನಂಬರ್ KA36P0220 ನೇದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬಲಕ್ಕೆ ತಿರುಗಿದ್ದರಿಂದ ಹಿಂಬದಿ ಸೀಟಿನ ಎಡಗಡೆ ಬಾಗಿಲಿನ ಹತ್ತಿರ ಕುಳಿತಿದ್ದ ಮೃತ್ಯುಂಜಯ ಇತನು ವಾಹನದಿಂದ ಕೆಳಗೆ ಬಿದ್ದಿದ್ದರಿಂದ ಆತನ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯ ವಾಗಿರುತ್ತದೆ. ಕಾರಣ ವಾಹನ ಚಾಲಕ ಮಹಾಲಿಂಗದೇವ ಇತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳುದಾರನಾದ ಶ್ರೀ ಮೃತ್ಯುಂಜಯ್  ತಂದೆ ಗೋವರ್ಧನ : 28 ವರ್ಷ, : ಕೂಲಿ. ಶುನ್ರಿ ಚಿತ್ರಾ, ಛಾಟ್ನಾ ಪಿ,ಎಸ್, ಜಿ:ಬಂಕೂರಾ. ಪಶ್ಚಿಮ ಬಂಗಾಳ ರಾಜ್ಯ.ಈತನು ಯುನೈಟೆಡ್  ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿ ಉಪಚಾರ ಹೊಂದುತ್ತಾ ಗುಣಮುಖ ಹೊಂದದೆ ದು ದಿನಾಂಕ: 01-10-2019 ರಂದು ಸಾಯಂಕಾಲ 04-58 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ತಂದೆ ದುಂಡಪ್ಪ ಹಾದಿಮನಿ ಸಾ: ಅಫಜಲಪೂರ ರವರ ಅಣ್ಣನಾದ ಸಾಯಬಣ್ಣ ಮತ್ತು ಅತ್ತಿಗೆಯಾದ ಅನಸುಬಾಯಿ ಇಬ್ಬರು ಇತ್ತಿಚಗೆ ಪ್ರತಿ ದಿನ ಕೂಲಿ ಕೆಲಸಕ್ಕೆಂದು ಮಲ್ಲಬಾದ ಗ್ರಾಮಕ್ಕ ಹೋಗುತ್ತಿದ್ದರು ಅದರಂತೆ ದಿನಾಂಕ:26/09/2019 ರಂದು ಬೆಳಿಗ್ಗೆ ನಮ್ಮ ಮನೆಯಿಂದ ಮಲ್ಲಬಾದ ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಇಬ್ಬರು ಕೂಡಿಕೊಂಡು ಹೋಗಿರುತ್ತಾರೆ ನಂತರ 12-20 ಪಿ,ಎಮ್,ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ವಿಷಯ ಗೊತ್ತಾಗಿದ್ದೆನಂದರೆ ನನ್ನ ಅಣ್ಣ ಮತ್ತು ಅತ್ತಿಗೆ ಇಬ್ಬರು ಮಲ್ಲಬಾದ ಗ್ರಾಮದಿಂದ ಅಫಜಲಪೂರಕ್ಕೆ ಮರಳಿ ಅಟೋದಲ್ಲಿ ಬರುತ್ತಿದ್ದಾಗ 12-05 ಪಿ,ಎಮ್,ಸುಮಾರಿಗೆ ಅಫಜಲಪೂರ-ಕಲಬುರ್ಗಿ ರೋಡಿಗೆ ಇರುವ ಶಿವಶರಣಪ್ಪ ಹಳ್ಳೆರವರ ಹೊಲದ ಹತ್ತೀರ ಅಟೋ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುತ್ತಾರೆ ಅಂತ ಗೊತ್ತಾದಾಗ ನಾನು ಮತ್ತು ನನ್ನ ಮಾವನಾದ ಸುರೇಶ ತಂದೆ ಯಮನಪ್ಪ ಕಲ್ಲೂರ ಇಬ್ಬರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಅಟೋ ಪಲ್ಟಿಯಾಗಿತ್ತು ಅದರ ನಂಬರ ನೊಡಲಾಗಿ ಕೆ,-32 8180 ನೇದ್ದು ಇತ್ತು ನಂತರ ನನ್ನ ಅಣ್ಣನಿಗೆ ನೊಡಲಾಗಿ ಎರಡು ಮೋಣಕಾಲಿಗೆ ರಕ್ತಗಾಯ ಮತ್ತು ಬಲಗಾಲಿಗೆ ಮೊಣಕಾಲ ಕೇಳಗೆ ಭಾರಿ ಗಾಯವಾಗಿ ಎಲುಬು ಹೊರಗಡೆ ಬಂದಿರುತ್ತದೆ ಮತ್ತು ಎಡಗಾಲಿಗೆ ಹೆಬ್ಬೆಟ್ಟಿಗೆ ರಕ್ತಗಾಯ ಎದೆಗೆ ಒಳಪೆಟ್ಟಾಗಿರುವರದು ಕಂಡು ಬಂತು ನಂತರ ನನ್ನ ಅತ್ತಿಗೆಗೆ ನೋಡಲಾಗಿ ಬಲಗಾಲಿಗೆ ಭಾರಿ ರಕ್ತಗಾಯ ಮತ್ತು ತರಚಿದಗಾಯ ಮತ್ತು ಬಲಗಡೆ ಮುಂಗೈಗೆ ತರಚಿದ ರಕ್ತಗಾಯವಾಗಿರುವದು ಕಂಡುಬಂತು ನನ್ನ ಅಣ್ಣನಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನಂದರೆ ನಾನು ಮತ್ತು ನಿನ್ನ ಅತ್ತಿಗೆ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದಾಗ ಅವಳು ನನಗೆ ಸ್ವಲ್ಪ ತಲೆ ನೊಯಿತ್ತಿದೆ ಅಂತ ಅಂದಳು ಅದಕ್ಕೆ ನಾವಿಬ್ಬರು ಕೆಲಸ ಅರ್ದಕ್ಕೆ ಬಿಟ್ಟು ಮನೆಗೆ ಬರಬೇಕೆಂದು ಮಲ್ಲಾಬಾದ ಗ್ರಾಮದಿಂದ ನನಗೆ ಪರಿಚಯದವನಾದ ಸಂತೋಷ ತಂದೆ ಶಂಕರ ಜಮದಾರ ಈತನ ಅಟೋದಲ್ಲಿ ಬರುತ್ತಿರುವಾಗ ಸದರಿ ಸಂತೋಷನು ಶಿವಶರಣಪ್ಪ ರವರ ಹೊಲದ ಹತ್ತೀರ ಬರುತ್ತಿದಂತೆ ಅಟೋ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಪಲ್ಟಿ ಮಾಡಿರುತ್ತಾನೆ ಅಂತ ತಿಳಿಸಿದನು ಮತ್ತು ಅಟೋ ಚಾಲಕನಿಗೆ ನೋಡಲಾಗಿ ಸಣ್ಣ ಪುಟ್ಟ ಗಾಯಗಳಾಗಿರುವದು ಕಂಡು ಬಂತು ಆಗ ನಂತರ ಒಂದು ಖಾಸಗಿ ವಾಹನದಲ್ಲಿ ನನ್ನ ತ್ತಿಗೆಗೆ ಮತ್ತು ಅಣ್ಣನಿಗೆ ಅದರಲ್ಲಿ ನಾನು ಮತ್ತು ನನ್ನ ಮಾವ ಇಬ್ಬರು ಕೂಡಿಕೊಂಡು ಹಾಕಿಕೊಂಡು ಬಂದು ಅಫಜಲಪೂರದ ಸರಕಾರಿ ಆಸ್ಪತ್ರೇಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ ಅಂಬುಲೆನ್ಸದಲ್ಲಿ ಹಾಕಿಕೊಂಡು ಕಲಬುರ್ಗಿಯ ಗಂಗಾ ಆಸ್ಪತ್ರೇಯಲ್ಲಿ ಸೆರಿಕೆ ಮಾಡಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಳಖೇಡ ಠಾಣೆ : ದಿನಾಂಕ 01-10-2019 ರಂದು ಸಂಗಾವಿ(ಎಮ್) ಗ್ರಾಮದ ಮೈಹಿಬೂಬಸುಭಾನಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ ಬಹಾರ ದೈವಲೀಲೆಯ ಇಸ್ಪೀಟು ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.. ಮಳಖೇಡ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು 6 ಜನ ದುಂಡಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಚೆನ್ನಪ್ಪ ತಂದೆ ಶಿವನಾಗಪ್ಪ ಮದ್ದೂರ, ಸಂಗಡ 05 ಜನರು ಸಾ:ಹಂಗನಳ್ಳಿ ಹಾಗು ಗುಂಡಗುರ್ತಿ.ಮಲಕೂಡ, ಗ್ರಾಮದವರನ್ನು ಹಿಡಿದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 21,270 /- ರೂಪಾಯಿ ನಗದು ಹಣ,52 ಇಸ್ಪೀಟು ಎಲೆಗಳು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಮಳಖೇಡ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ರಜೀಯಾಬೇಗಂ ಗಂಡ ಖಾಜಾಭಾಯಿ ನಧಾಫ ಸಾ||ಅತನೂರ ರವರು ದಿನಾಂಕ 29/09/2019 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಇಬ್ಬರು ನಮ್ಮ ಮನೆ ಬಾಗಿಲು ಕಿಲಿ ಹಾಕಿಕೊಂಡು ಕಲಬುರಗಿಗೆ ನಮ್ಮ ಮಕ್ಕಳ ಮನೆಗೆ ಹೋಗಿರುತ್ತೇವೆ. ಇಂದು ಬೆಳಿಗ್ಗೆ 6. ಗಂಟೆ ಸುಮಾರಿಗೆ  ನಮ್ಮ ಮನೆಯ ಬಾಜು ಮನೆಯವರಾದ ಜಾಹೀದಾ ಬೇಗಂ ಗಂಡ ಬಂದಗಿಸಾಬ ಟಕ್ಕಳಕಿ ರವರು ನಮಗೆ ಮೋಬೈಲ ಮೂಲಕ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ನಮ್ಮ ಮನೆಯ ಮುಂದೆ ಕಸ ಗುಡಿಸುವಾಗ ನಿಮ್ಮ ಮನೆಯ ಬಾಗಿಲು ಕೀಲಿ ಮುರಿದಂತೆ ಕಾಣುತಿದೆ ಅಂತ ತಿಳಿಸಿದ ಬಳಿಕ ನಾನು ನನ್ನ ಗಂಡ ನನ್ನ ಮಗನಾದ ಮೌಲಾಲಿ ಮೂರು ಜನರು ಕೂಡಿಕೊಂಡು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲಿನ ಕೀಲಿ ಮರಿದಿದ್ದು ಇತ್ತು ಆಗ ನಾವು ಹಾಗು ನಮ್ಮ ಬಾಜು ಮನೆಯವರಾದ ಜಾಹೀದಾ ಬೇಗಂ, ಇಮಸಾಬ ನಧಾಫ, ರಜಾಕ ಖುರೇಷಿ ಎಲ್ಲರು ಕೂಡಿ ನಮ್ಮ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಟಿಜೋರಿಯ ಕೀಲಿ ತಗೆದಿದ್ದು  ನಾವು ಲಾಕರದಲ್ಲಿ ಇಟ್ಟಿದ್ದ ನನ್ನ ಕಿರಿ ಸೊಸೆಯಾದ ತನ್ವಿರ ಬಂಗಾರದ ನಕಲೇಸ 25 ಗ್ರಾಂ .ಕೀ 75,000 ರೂಪಾಯಿ  ಹಾಗು 70,000 ರೂಪಾಯಿ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ : ಶ್ರೀ ಗೋಪಿನಾಥ ತಂದೆ ಹಾಮು ರಾಠೋಡ ಅತನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮುಖ್ಯ ಶೀಕ್ಷಕರು ರವರು ದಿನಾಂಕ:30/09/2019 ರಂದು ಎಂದಿನಂತೆ ನಾನು ಕರ್ತವ್ಯ ನಿರ್ವಹಿಸುವ ಅತನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಬಂದಿರುತ್ತೇನೆ. ನಂತರ ಸಾಯಂಕಾಲ 04.30 ಪಿ,ಎಮ್ ಕ್ಕೆ ಶಾಲೆ ಬಿಟ್ಟ ನಂತರ ನಾನು ಮತ್ತು ಸಹ ಶಿಕ್ಷಕರಾದ 01) ಮಲ್ಲು ಚವ್ಹಾಣ ಟಿ.ಜಿ.ಟಿ ಶಿಕ್ಷಕರು 2) ಸತೀಶ ಬೋನಾಳ 3) ಸಿಲಿಸಿದ್ದ ಹೂಗಾರ 4) ಜಗನ್ನಾಥ ಮೋರೆ ಹಾಗೂ ಎಲ್ಲ ಸಿಬ್ಬಂದಿಯವರು 05.00 ಪಿ,ಎಮ್ ಕ್ಕೆ ಶಾಲೆಯ ಎಲ್ಲ ಕೋಣೆಗಳ ಬಾಗಿಲು ಕಿಲಿ ಹಾಕಿಕೊಂಡು ಹೋಗಿರುತ್ತೇವೆ. ದಿನಾಂಕ:01/10/2019 ರಂದು 09.45 ,ಎಮ್ ಕ್ಕೆ ನಾನು ಹಾಗು ಮೇಲೆ ನಮೂದಿಸಿದ ನಮ್ಮ ಸಹ ಶೀಕ್ಷಕರು ಶಾಲೆಗೆ ಬಂದಾಗ ಶಾಲೆಯ ಕಂಪ್ಯೂಟರ ಕೋಣೆಯ ಗೇಟಿನ ಬಾಗಿಲು ಅರ್ಧ ತೆರೆದಿತ್ತು. ನಾವು ಕೋಣೆಯ ಹತ್ತೀರ ಹೋಗಿ ನೋಡಲಾಗಿ ಅದರ ಬಾಗಿಲಿಗೆ ಹಾಕಿದ 02 ಕೀಲಿಗಳನ್ನು ಕಲ್ಲಿನಿಂದ ಜಜ್ಜಿ ಮುರಿದಿದ್ದು ಇತ್ತು. ಒಳಗೆ ಹೋಗಿ ನೋಡಲಾಗಿ ಸರಕಾರದಿಂದ ವಿದ್ಯಾರ್ಥಿಗಳ ಕಂಪ್ಯೂಟರ ಕಲಿಕೆಗಾಗಿ ಮಂಜೂರು ಆದ  01 HP ಕಂಪನಿಯ ಕಂಪ್ಯೂಟರ  ಮಾನಿಟರ್  ಹಾಗು ಅದರ ಸಿಪಿಯು ನಂಬರ CNC-712 PQ VS Marcbo 7 38900010, 438197001  ಮತ್ತು  ಒಂದು ಕೀ ಬೊರ್ಡ್ ಒಟ್ಟು ಅಂ||ಕಿ|| 9,000 ರೂಪಾಯಿ, ಬೆಲೆಬಾಳುವ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: