Police Bhavan Kalaburagi

Police Bhavan Kalaburagi

Thursday, October 3, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ರೇವೂರ ಠಾಣೆ : ದಿನಾಂಕ 02/10/2019 ರಂದು ಬೆಳಿಗ್ಗೆ  11.00 ಗಂಟೆ ಸುಮಾರಿಗೆ ನನ್ನ ಮಗ ಮಹಾಂತಯ್ಯ ಮತ್ತು ಅವನ ಗೆಳೆಯ ಭಗವಂತ  ಹೊಟಗರ  ಇಬ್ಬರು ಸದರಿ ಭಗವಂತನು ನಡೆಸುವ ಕಾರ ನಂ ಕೆಎ-32 ಪಿ-3497 ನೇದ್ದರಲ್ಲಿ ದಸರಾ ಹಬ್ಬಕ್ಕೆ ಹೊಸ ಬಟ್ಟೆ ತಗೆದುಕೊಂಡು ಬರುತ್ತೇವೆ ಅಂತ ಹೋಗಿರುತ್ತಾರೆ. ಮದ್ಯಾಹ್ನ 1.00 ಗಂಟೆಯ ಸುಮಾರಿಗೆ  ನನ್ನ ಮಗ ಮಹಾಂತಯ್ಯನ ಮೊಬೈಲ್ ಪೊನದಿಂದ ನನಗೆ ಪೋನ ಮಾಡಿದ್ದು ಸದರಿಯವರು ತಮ್ಮ ಹೆಸರು ಸಂತೋಷ ಹುಲಿ ಸಾ||ಅತನೂರ ಅಂತ ಹೇಳಿ ಈ ಮೋಬೈಲ ಪೊನ ಇದ್ದ ವ್ಯಕ್ತಿ ಮತ್ತು ಕಾರ ಚಾಲಕ ಹಾಗು ಇನ್ನೂ ಮೂರು ಜನರು ಕುಳಿತು ಕಲಬುರಗಿ ಕಡೆಗೆ ಹೊರಟಿದ್ದ ಕಾರ ನಂ ಕೆಎ-32 ಪಿ-3497 ನೇದ್ದು ಅಫಜಲಪೂರ ಕಲಬುರಗಿ ರೋಡಿಗೆ ನಮ್ಮೂರ ಸಿಮಾಂತರದಲ್ಲಿ ಅವರಾದ ರವರ ಹೊಲದ ಹತ್ತಿರ ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಸದರಿ ಕಾರು ರೋಡಿನ ಪಕ್ಕದಲ್ಲಿರುವ ಒಂದು ಗಿಡಕ್ಕೆ ಡಿಕ್ಕಿ ಹೊಡೆದು ರೋಡಿನ ಪಕ್ಕದ ಹೊಲದಲ್ಲಿ ಹೋಗಿ  ನಿಂತಿರುತ್ತದೆ.  ಈ ಪೋನ ಇದ್ದ ವ್ಯಕ್ತಿಗೆ ವಿಚಾರಿಸಲು ಅವನು ನಿಮ್ಮ ಮಗ ಮಹಾಂತಯ್ಯ ಇರುವುದಾಗಿ ತಿಳಿಸಿರುತ್ತಾನೆ ಇನ್ನುಳಿದವರ ಹೆಸರು ವಿಚಾರಿಸಲು ಕಾರ ನಡೆಸುತಿದ್ದವನ ಹೆಸರು ಭಗವಂತ ಹೊಟಗಾರ ಮತ್ತು  ಇನ್ನುಳಿದವರ ಹೆಸರು ಸೋಮು ಹಿರೇಮಠ, ಅವಿನಾಶ ಮಲ್ಲಾಬಾದ ಹಾಗು ಆಕಾಶ ಅಂಬೂರೆ ಅಂತ ತಿಳಿಸಿರುತ್ತಾರೆ. ಸದರಿ ಘಟನೆಯಲ್ಲಿ ನಿಮ್ಮ ಮಗ ಮಹಾಂತಯ್ಯನಿಗೆ ಬಲಗಾಲಿಗೆ ಭಾರಿ ರಕ್ತಗಾಯವಾಗಿ ಮೈಕೈಗಳಿಗೂ ಗಾಯ, ಹೊಟ್ಟೆಗೆ ಮತ್ತು  ಎದೆಗೆ ಭಾರಿ ಒಳ ಪೆಟ್ಟಾಗಿರುತ್ತದೆ ಸೋಮು ಹಿರೇಮಠ ಎಂಬಾತನಿಗೆ ಹಣೆಗೆ ಭಾರಿ ರಕ್ತಗಾಯವಾಗಿ ಮೈಕೈಗಳಿಗೆ ಅಲ್ಲಲ್ಲಿ ರಕ್ತಗಾಯ ಮತ್ತು ಒಳ ಪೆಟ್ಟುಗಳಾಗಿರುತ್ತವೆ ಅವಿನಾಶ ಮಲ್ಲಾಬಾದ, ಆಕಾಶ ಅಂಬೂರೆ  ರವರಿಗೂ ರಕ್ತಗಾಯಗಳು ಮತ್ತು ಒಳ ಪೆಟ್ಟುಗಳಾಗಿದ್ದು ಹಾಗು ಕಾರ ಚಾಲಕ ಭಗವಂತನ ಎರಡೂ ಕಾಲುಗಳ ಎಲಬುಗಳು ಮುರಿದಂತೆ ಆಗಿರುತ್ತದೆ  ನಾನು 108 ವಾಹನಕ್ಕೆ ಪೋನ ಮಾಡಿದ್ದು ಸ್ಥಳಕ್ಕೆ 108 ವಾಹನ ಬಂದಿದ್ದರಿಂದ ಗಾಯಾಳುದಾರರೆಲ್ಲರಿಗೂ 108 ವಾಹನದಲ್ಲಿ ಹಾಕಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡುತಿದ್ದೇನೆ ಅಂತ ತಿಳಿಸಿದರು. ಸದರಿ ವಿಷಯ ಗೊತ್ತಾದ ಕೂಡಲೆ ನಾನು ಇದನ್ನು ನನ್ನ ಗಂಡ ಶಿವಯ್ಯ ಮಠಪತಿ, ನನ್ನ ಮೈದುನ ಬಂಡಯ್ಯ ಪಠಪತಿ ರವರಿಗೆ ತಿಳಿಸಿದ್ದು ನಂತರ ನನ್ನ ಗಂಡ ಹಾಗು ಮೈದುನ ಮತ್ತಿತರರು ಒಂದು ಖಾಸಗಿ ವಾಹನದಲ್ಲಿ ಅಫಜಲಪೂರಕ್ಕೆ ಬಂದಿರುತ್ತೇವೆ ನಾವು ಆಸ್ಪತ್ರೆಗೆ ಬರುವಷ್ಟೆರಲ್ಲಿ ನನ್ನ ಮಗನಿಗೆ ಪ್ರಜ್ಞೆ ತಪ್ಪಿದ್ದು ಅವನು ಮದ್ಯಾಹ್ನ 2.00 ಗಂಟೆ ಸುಮಾರಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ.ಇನ್ನುಳಿದ ಗಾಯಾಳುದಾರರಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ 108 ವಾಹನದಲ್ಲಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತಾರೆ. ಸದರಿ ಘಟನೆಯು ಕಾರ ನಂ ಕೆಎ-32 ಪಿ-3497  ನೇದ್ದರ ಚಾಲಕ ಭಗವಂತ ಹೊಟಗಾರನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ರೋಡಿನ ಪಕ್ಕದಲ್ಲಿರುವ  ಒಂದು ಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿದ್ದರಿಂದ ಸಂಭವಿಸಿರುತ್ತದೆ ನನ್ನ ಮಗನ ಸಾವಿಗೆ ಕಾರಣನಾದ ಭಗವಗಂತ ಹೊಟಗಾರನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಿ ಅಂತಾ ಶ್ರೀಮತಿ ಭೌರಮ್ಮ ಮಠಪತಿ ಸಾ||ಚಿಂಚೋಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ:30/09/2019 ರಂದು ಮಹೇಶ ಈತನು ನಮ್ಮ ಗ್ರಾಮದಿಂದ ಉಡಚಾಣ ಗ್ರಾಮಕ್ಕೆ ಹೋಗಿ ನಮ್ಮ ಸಂಬಂಧಿಕರಿಗೆ ಮಾತನಾಡಿಸಿ ಬರುತ್ತೇನೆ ಅಂತಾ ಮೋಟಾರ ಸೈಕಲ್ ನಂ ಕೆಎ-28-.ಎಸ್-0711 ನೇದ್ದನ್ನು ತಗೆದುಕೊಂಡು ಬೆಳಿಗ್ಗೆ ನಮ್ಮ ಮನೆಯಿಂದ ಹೋಗಿರುತ್ತಾನೆ. ನಂತರ ರಾತ್ರಿ 8:40 ಪಿ.ಎಮ್ ಸುಮಾರಿಗೆ ಶರಣು ತಳವಾರ ಎಂಬ ವ್ಯಕ್ತಿ ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಮಗನಾದ ಮಹೇಶ ಇತನು ನಮ್ಮ ಹೊಲದ ಸಮೀಪ ಅಂದರೆ ಉಡಚಾಣ ಹಟ್ಟಿ ಸಮೀಪ ಹಳ್ಳದ ಹತ್ತಿರ ಈಗ 8:30 ಪಿ.ಎಮ್ ಸುಮಾರಿಗೆ ಮೋಟಾರ ಸೈಕಲ್ ನಂ ಕೆಎ-28-.ಎಸ್-0711 ನೇದ್ದರ ಮೇಲಿಂದ ಬಿದ್ದಿರುತ್ತಾನೆ. ಸದರಿಯವನಿಗೆ ನಾನು ಮತ್ತು ನನ್ನ ಜೋತೆ ಇದ್ದ ಉಲ್ಲಾಸ ಲಪಟಿಕ ಇಬ್ಬರು ನೋಡಿ ಎಬ್ಬಿಸಿ ಕೂಡಿಸಿರುತ್ತೇವೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಎರಡನೆ ಮಗನಾದ ರಮೇಶ ಇಬ್ಬರು ಕೂಡಿ ಬರುತ್ತಿದ್ದೇವೆ ಅಂತಾ ಹೇಳಿದಾಗ ನೀವು ಕಲಬುರಗಿಗೆ ಬನ್ನಿ ನಾವು 108 ಗೆ ಫೋನ್ ಮಾಡಿದ್ದಿವಿ ಅಂತಾ ಹೇಳಿ ಉಲ್ಲಾಸ್ ಮತ್ತು ಶರಣು ರವರು ನನ್ನ ಮಗನಿಗೆ 108 ವಾಹನದಲ್ಲಿ ಹಾಕಿಕೊಂಡು ಬಂದು ಕಲಬುರಗಿಯ ದನವಂತ್ರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ನಾನು ಮತ್ತು ರಮೇಶ ಇಬ್ಬರು ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಮಹೇಶ ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲ ನೋಡಲಾಗಿ ತಲೆಗೆ ಭಾರಿ ಗಾಯ ಮತ್ತು ಒಳ ಪೆಟ್ಟು ಆಗಿರುತ್ತದೆ. ಹಣೆಯ ಮೇಲೆ ಕಪಾಳಕ್ಕೆ, ಕಣ್ಣಿನ ಮೇಲೆ ರಕ್ತಗಾಯ, ಬಲಗಡೆ ಕೈಗೆ ತರಚಿದ ಗಾಯವಾಗಿದ್ದು ಕಂಡು ಬಂದಿರುತ್ತದೆ. ಅಂತಾ ಸದರಿ ಘಟನೆ ಬಗ್ಗೆ ನಾನು ನನ್ನ ಮನೆಯವರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿಸುತ್ತಿದ್ದು ಕಾರಣ ಮೋಟಾರ ಸೈಕಲ್ ಅನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಸ್ಕಿಡ್ ಆಗಿ ಬಿದ್ದ ನನ್ನ ಮಗನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಶ್ರೀ ಲಕ್ಕಪ್ಪ ತಂದೆ ಬಿರಪ್ಪ ತಾವರಖೇಡ ಸಾ||ಅರ್ಜುಣಗಿ ತಾ||ಇಂಡಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: