Police Bhavan Kalaburagi

Police Bhavan Kalaburagi

Friday, November 22, 2019

BIDAR DISTRICT DAILY CRIME UDPATE 22-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-11-2019

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 196/2019, ಕಲಂ. ಮಹಿಳೆ ಕಾಣೆ :-
ದಿನಾಂಕ 13-11-2019 ರಂದು 1030 ಗಂಟೆಗೆ ಫಿರ್ಯಾದಿ ಹರಬಜನಸಿಂಗ ತಂದೆ ದಿಲಬಾಗಸಿಂಗ ಚಾವುಲಾ ವಯ: 34 ವರ್ಷ, ಜಾತಿ: ಸಿಖ, ಸಾ: ಆದರ್ಶ ಕಾಲೋನಿ ಬೀದರ ರವರ ತಾಯಿಯಾದ ಬಿಮಲಾ ಇವರು ತಮ್ಮ ಮನೆಯಿಂದ ಹೋರಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು ಸಾಯಂಕಾಲವಾದರು ಮನೆಗೆ ಬಂದಿರುವದಿಲ್ಲಾ, ನಂತರ ಫಿರ್ಯಾದಿಯು ತನ್ನ ಅಣ್ಣನಾದ ಮಹೇಂದ್ರಸಿಂಗ ಇತನಿಗೆ ತಾಯಿ ನಿಮ್ಮ ಮನೆಗೆ ಬಂದಿರುತ್ತಾಳೆಂದು ಕೇಳಿದಾಗ ನಮ್ಮ ಮನೆಗೆ ಬಂದಿಲ್ಲಾ ಅಂತ ತಿಳಿಸಿರುತ್ತಾನೆ, ನಂತರ ಫಿರ್ಯಾದಿ ಹಾಗೂ ಅಣ್ಣ  ಇಬ್ಬರು ಕೂಡಿ ತಮ್ಮ ಸಂಭಂದಿಕರ ಮನೆಗಳಿಗೆ ಕರೆ ಮಾಡಿ ತಾಯಿ ಬಂದ ಬಗ್ಗೆ ವಿಚಾರಿಸಿದಾಗ ಯಾರು ಬಂದಿರುವದಿಲ್ಲಾ ಅಂತ ತಿಳಿಸಿದ್ದು, ಕಾರಣ ತಾಯಿಯಾದ ಬಿಮಲಾಬಾಯಿ ಇವರು ದಿನಾಂಕ 13-11-2019 ರಂದು ಮನೆಯಿಂದ ಹೋದವರು ಇಲ್ಲಿಯವರೆಗೆ ಮನೆಗೆ ಬರದೇ ಕಾಣೆಯಾಗಿರುತ್ತಾರೆ, ತಾಯಿಯ ಚಹರೆ ಪಟ್ಟಿ 1) ಹೆಸರು ಮತ್ತು ವಿಳಾಸ:- ವಿಮಲಾ ಗಂಡ ದಿಲ್ಬಾಗದಿಂಗ ಚಾವುಲಾ ವಯ: 65 ವರ್ಷ, ಜಾತಿ: ಸಿಖ, ಸಾ: ಆದರ್ಶ ಕಾಲೊನಿ ಬೀದರ, 2) ಮೈಬಣ್ಣ:- ಗೋಧಿ ಬಣ್ಣ, 3) ಮೈಕಟ್ಟು:- ಸಾಧಾರಣ ಮೈಕಟ್ಟು, 4) ಬಟ್ಟೆ:- ಬಿಳಿ ಬಣ್ಣದ ದುಪಟ್ಟಾ, ಕ್ರಿಮ್ ಬಣ್ಣಧ ಸಲವಾರ, 5) ಭಾಷೆ:- ಪಂಚಾಬಿ ಮತ್ತು ಹಿಂದಿ ಮಾತನಾಡುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 165/2019, ಕಲಂ. 379 ಐಪಿಸಿ :-
ದಿನಾಂಕ 15-11-2019 ರಂದು 2330 ಗಂಟೆಗೆ ಫಿರ್ಯಾದಿ ವೆಂಕಟೇಶ ತಂದೆ ಅಶೋಕ ಕುಮಾರ ಪಾಟೀಲ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಕೆ.ಎಚ್.ಬಿ ಕಾಲೋನಿ ಬೀದರ ರವರು ತಮ್ಮ ಯಮಹಾ ಮೊಟರ ಸೈಕಲ ನಂ. ಕೆಎ-38/ಕ್ಯೂ-1437 ನೇದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು, ಮರುದಿವಸ ದಿನಾಂಕ 16-11-2019 ರಂದು 0900 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಬಂದು ನೋಡಲು ಸದರಿ ಮೊಟರ ಸೈಕಲ ಇರಲಿಲ್ಲ, ನಂತರ ಫಿರ್ಯಾದಿಯು ತನ್ನ ಅಣ್ಣನ ಜೊತೆಯಲ್ಲಿ ಸದರಿ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ವಿವರ 1) ಯಾಮಹಾ ವಾಯ್.ಝಡ್.ಎಫ್ ಆರ-15  ಮೋಟಾರ್ ಸೈಕಲ ನಂ. ಕೆಎ-38/ಕ್ಯೂ-1437, 2) ಚಾಸಿಸ್ ನಂ. ಎಮ್..11.ಸಿ.ಕೆ.029.ಸಿ.2009907, 3) ಇಂಜಿನ್ ನಂ. 1.ಸಿ.ಕೆ.2009959, 4) ಮಾಡಲ್: 2012,  5) ಬಣ್ಣ: ಬಿಳಿ ಬಣ್ಣ ಹಾಗೂ .ಕಿ 45,000/- ರೂ. ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 164/2019, ಕಲಂ. 379 ಐಪಿಸಿ :-
ಫಿರ್ಯಾದಿ ಮಾರುತಿರಾವ ತಂದೆ ಶ್ರೀಮಂತರಾವ ಚವ್ಹಾಣ ವಯ: 30 ವರ್ಷ, ಜಾತಿ: ಮರಾಠಾ, ಸಾ: ಎನ.ಜಿ. ಕಾಲೋನಿ ಚಿಟಗುಪ್ಪಾ ರವರು 2018 ನೇ ಸಾಲಿನಲ್ಲಿ ಕ್ರೂಜರ ವಾಹನ ನಂ. ಕೆಎ-32/ಸಿ-2730 ನೇದನ್ನು ಖರಿದಿಸಿದ್ದು ಇರುತ್ತದೆ, ಸದರಿ ವಾಹನದ ಮೇಲೆ ಹುಮನಾಬಾದ ಪಟ್ಟಣ ಜನತಾ ಕಾಲೋನಿಯ ಸಾಗರ ತಂದೆ ಪ್ರಕಾಶ ಅಗಸರು ರವರಿಗೆ ಚಾಲಕ ಅಂತಾ ಕೆಲಸದ ಮೇಲೆ ಇಟ್ಟುಕೊಂಡಿದ್ದು, ಕ್ರೂಜರ ವಾಹನ ಧರ್ಮಸ್ಥಳ ಖಾಸಗಿ ಬ್ಯಾಂಕ ಹುಮನಾಬಾದ ರವರಿಗೆ ಪ್ರತಿ ದಿವಸಕ್ಕೆ 1800/- ರೂಪಾಯಿಯಂತೆ ಮಾತಾಡಿ ಎಂಗೆಂಜದಲ್ಲಿ ಕೊಟ್ಟಿದ್ದು, ವಾರದ ಎಲ್ಲ ದಿವಸ ಕೆಲಸ ಇದ್ದು ಪ್ರತಿ ಶನಿವಾರ ಮತ್ತು ರವಿವಾರ ರಜೆ ಇರುತ್ತದೆ, ರಜೆ ಇದ್ದ ದಿವಸ ಚಾಲಕ ಕ್ರೂಜರ ವಾಹನ ತಮ್ಮ ಮನೆಯ ಮುಂದೆ ನಿಲ್ಲಿಸಿಕೊಂಡಿರುತ್ತಿದ್ದನು, ಹೀಗಿರುವಾಗ ದಿನಾಂಕ 03-11-2019 ರಂದು 0830 ಗಂಟೆಯ ಸುಮಾರಿಗೆ ಚಾಲಕನು ಫಿರ್ಯಾದಿಗೆ ಕರೆ ಮಾಡಿ ತನ್ನ ಮನೆಯ ಹತ್ತಿರ ನಿಲ್ಲಿಸಿದ ಸದರಿ ಜೀಪನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ಫಿರ್ಯಾದಿಯು ತಕ್ಷಣ ಹುಮನಾಬಾದಕ್ಕೆ ಬಂದು ಸದರಿ ಚಾಲಕನ ಮನೆಗೆ ಹೋಗಿ ವಿಚಾರಿಸಿದಾಗ ಜೀಪ ಕಳವು ಆದ ಬಗ್ಗೆ ತಿಳಿಸಿದನು ಹಾಗೂ ಜೀಪಿನ ಕೀ ಯನ್ನು ಫಿರ್ಯಾದಿಗೆ ತೋರಿಸಿ ಕೊಟ್ಟನು, ದಿನಾಂಕ 02-11-2019 ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತರು ಸದರಿ ಜೀಪನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ, ಕಳುವಾದ ಜೀಪಿನ ವಿವರ 1) ಕ್ರೂಜರ್ ಜೀಪ ನಂ. ಕೆ.-32/ಸಿ-2730, 2) .ಕಿ 2,65,000/- ರೂ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: