Police Bhavan Kalaburagi

Police Bhavan Kalaburagi

Thursday, November 21, 2019

BIDAR DISTRICT DAILY CRIME UPDATE 21-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-11-2019

ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 20-11-2019 ರಂದು ಫಿರ್ಯಾದಿ ರಾಜಮತಿ ಗಂಡ ಬಂಡೆಪ್ಪಾ ಬಾವಗೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಇಂದಿರಾನಗರ ಕಾಲೂನಿ ಕಮಲನಗರ ರವರ ಮಗನಾದ ಮಹೇಶನು ರೈಲ್ವೇ ಸ್ಟೇಷನ್ ಮತ್ತು ರೈಲಿನಲ್ಲಿ ಫಲ್ಲಿ ಮತ್ತು ಬಟಾಣ ಮಾರಾಟ ಮಾಡಿಕೊಂಡಿದ್ದು, ಮಾರಾಟ ಮಾಡಲು ಹೋದಾಗ 8-9 ದಿವಸಗಳವರೆಗೆ ಮನೆಗೆ ಬರುತ್ತಿರಲಿಲ್ಲಾ, ಹೀಗಿರುವಲ್ಲಿ ದಿನಾಂಕ 18-11-2019 ರಂದು 1600 ಗಂಟೆಗೆ ಬಟಾಣ ಮತ್ತು ಫಲ್ಲಿ ಮಾರಲು ಹೋಗಿದ್ದು ಇರುತ್ತದೆ, ದಿನಾಂಕ 19-11-2019 ರಂದು ಫಿರ್ಯಾದಿಯು ತನ್ನ ಮಗ ಮಹೇಶ ಇತನು ರೈಲ್ವೆ ಸ್ಟೇಷನ್ ನಲ್ಲಿ ಇರಬಹುದು ಅಂತ ರೈಲ್ವೆ ನಿಲ್ದಾಣಕ್ಕೆ ಬಂದು ನೋಡಲು ಕಾಣಲಿಲ್ಲಾ, ನಂತರ ದಿನಾಂಕ 20-11-2019 ರಂದು ಫಿರ್ಯಾದಿಯವರ ಪಕ್ಕದ ಮನೆಯವರಾದ ಬಾಲಿಕಾ ಮಂಗಡೆ ಇವರಿಂದ ಗೊತ್ತಾಗಿರುವುದೇನೆಂದರೆ ಮಹೇಶ 23 ವರ್ಷ ವಯ ಇತನು ಕಮಲನಗರ ಕೆರೆಯಲ್ಲಿ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ, ಆತನ ಪ್ಯಾಂಟ್, ಶರ್ಟ, ಅಂಡರ್ ವಿಯರ, ಬನಿಯಾನ ಮತ್ತು ಚಪ್ಪಲಿ ಕೆರೆಯ ದಂಡೆಗೆ ಬಿಚ್ಚಿಟ್ಟಿದ್ದು ಇದೆ ಅಂತಾ ಗೊತ್ತಾದ ಮೇರೆಗೆ ಫಿರ್ಯಾದಿ ಹಾಗು ತಮ್ಮ ಓಣಿಯ ಜನ ಬಂದು ನೋಡಲು ಮಹೇಶ ಇದ್ದು ಅವನದೇ ಬಟ್ಟೆ ಚಪ್ಪಲಿಗಳು ಇರುತ್ತವೆ, ಮಗ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 126/2019, ಕಲಂ. 379 ಐಪಿಸಿ :-
ದಿನಾಂಕ 02-11-2019 ರಂದು ಫಿರ್ಯಾದಿ ಶಿವಕುಮಾರ ತಂದೆ ಬಸವಣಪ್ಪಾ ಸಂಗನಭಟ್ಟೆ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರ ಹೆಂಡತಿಯ ತಮ್ಮನಾದ ಮಹೇಶ ತಂದೆ ಮಲ್ಲಿಕಾರ್ಜುನ ಹರಕೂಡೆ ವಯ: 28 ವರ್ಷ, ಸಾ: ಮಂಠಾಳ ಇವರು ಪುನಾದಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ, ದೀಪಾವಳಿಯ ಹಬ್ಬದ ಪ್ರಯುಕ್ತ ಮಂಠಾಳಕ್ಕೆ ಬಂದು ಹಬ್ಬ ಆದ ನಂತರ ಪುನಾಕ್ಕೆ ಹೋಗುವ ಸಲುವಾಗಿ ಫಿರ್ಯಾದಿಯ ಹೆಂಡತಿಯ ಚಿಕ್ಕಪ್ಪನ ಮಗನಾದ ಅಶೋಕ ತಂದೆ ಮಾಣಿಕ ಹರಕೂಡೆ ಇವರು ಮಹೇಶ ರವರಿಗೆ ಪುನಾಕ್ಕೆ ಹೋಗುವಾಗ ಫಿರ್ಯಾದಿಯವರ ಮೋಟಾರ ಸೈಕಲ್ ನಂ. ಕೆಎ-39/ಹೆಚ್-5392 ನೇದರ ಮೇಲೆ ಬಿಡಲು ಹೋಗಿ ಮೋಟಾರ ಸೈಕಲನ್ನು ಸಸ್ತಾಪುರ ಬಂಗ್ಲಾದ ಬ್ರಿಡ್ಜ್ದಾಟಿ ಹುಮನಾಬಾದ ಹೋಗುವ ರೋಡಿನ ಬದಿಯಲ್ಲಿ ಹೋಟಲ್ ಹತ್ತಿರ ನಿಲ್ಲಿಸಿ ಪುನಾಕ್ಕೆ ಹೋಗುವ ಸಲುವಾಗಿ ಪುನಾ ರೋಡಿನ ಕಡೆಗೆ ಹೋಗಿ ಮಹೇಶ ಈತನಿಗೆ ಪುನಾಕ್ಕೆ ಹೋಗುವ ಬಸ್ಸಿನಲ್ಲಿ ಕೂಡಿಸಿ ಅವನು ನಿಲ್ಲಿಸಿದ ಸ್ಥಳದ ಹತ್ತಿರ ಬಂದು ನೋಡಲು ಸದರಿ ಮೋಟಾರ ಸೈಕಲ ಇರಲಿಲ್ಲ, ಯಾರೋ ಅಪರಿಚಿತ ಕಳ್ಳರು ಸದರಿ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ್ ಸೈಕಲನ್ನು ಫಿರ್ಯಾದಿಯು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಕಳುವಾದ ಮೋಟಾರ್ ಸೈಕಲ್ ವಿವರ 1) ಹಿರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-39/ಹೆಚ್-5392, 2) ಚಾಸಿಸ್ ನಂ. 07.ಡಿ..16.ಎಫ್.37056, 3) ಇಂಜಿನ್ ನಂ. 07.ಡಿ.15..39901, 4) ಮಾಡಲ್ 2007, 5) .ಕಿ. 18,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 126/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 20-11-2019 ರಂದು ಗೋರ ಚಿಂಚೋಳಿ ಗ್ರಾಮದಲ್ಲಿ ಭವಾನಿ ಟೆಂಟ ಹೌಸ ಎದರುಗಡೆ ಸಾರ್ವಜನೀಕ ರಸ್ತೆಯ ಮೇಲೆ ಕೆಲವು ವ್ಯಕ್ತಿಗಳು ಪರೇಲ್ ಎಂಬ ನಸೀಬಿನ ಮೂರು ಎಲೆಯ ಇಸ್ಪೀಟ್ ಜೂಜಾಟ್ ಆಡುತ್ತಿದ್ದಾರೆ ಹುಲೇಪ್ಪಾ ಪಿ.ಎಸ್.ಐ ಖಟಕಚಿಂಚೋಳಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೋರ ಚಿಂಚೋಳಿ ಗ್ರಾಮಕ್ಕೆ ಹೋಗಿ ಅಲ್ಲಿ ಶಿವಾಜಿ ವೃತ್ತದಲ್ಲಿ ಮರೆಯಾಗಿ ನಿಂತು ನೋಡಲು ಗೋರ ಚಿಂಚೋಳಿ ಗ್ರಾಮದ  ಭವಾನಿ ಟೆಂಟ ಹೌಸ ಎದರುಗಡೆ ಸಾರ್ವಜನೀಕ ರಸ್ತೆಯ ಮೇಲೆ ಆರೋಪಿತರಾದ ರಾಮ ತಂದೆ ಗೊವಿಂದ ಕಸಲೆ ಸಾ: ಗೋರಚಿಂಚೊಳಿ, ತಾ: ಭಾಲ್ಕಿ ಹಾಗೂ ಇನ್ನೂ 7 ಜನರು ಇವರೆಲ್ಲರೂ ದುಂಡಾಗಿ ಕುಳಿತು ಪರೇಲ್ ಎಂಬ ನಸೀಬಿನ ಮೂರು ಎಲೆಯ ಇಸ್ಪೀಟ್ ಜೂಜಾಟ್ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯ ಸಾಹಯದೊಂದಿಗೆ ಅವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 25,770/-ರೂ ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 171/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 20-11-2019 ರಂದು ಬ್ಯಾಲಹಳ್ಳಿ ಶಿವಾರದಲ್ಲಿರುವ ಗುರು ವೈನ ಶಾಪ ಹತ್ತಿರ ಇಬ್ಬರು ವ್ಯಕ್ತಿಗಳು ಆಕ್ರಮವಾಗಿ ಸರಾಯಿ ತೆಗೆದುಕೊಂಡು ಹೊಗುತ್ತಿದ್ದಾರೆ ಅಂತ ತಾನಾಜಿ ಪಿಎಸ್ಐ ಧನ್ನೂರಾ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾಲಹಳ್ಳಿ ಬಸ್ಸ ನಿಲ್ದಾಣದಿಂದ ಬೀದರ ಹುಮನಾಬಾದ ರೋಡಿಗೆ ಶ್ರೀಮಂತ ಧಾಬಾದ ಸಮೀಪ ಹೊಗಿ ಮರೆಯಾಗಿ ನೊಡಲು ಗುರು ವೈನ ಶಾಪ ಸಮೀಪ ಆರೋಪಿತರಾದ ಅಂಕುಶ ತಂದೆ ಶಂಕರ ಪಿರಗೊಂಡ ವಯ: 32 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ಬ್ಯಾಲಹಳ್ಳಿ ಹಾಗೂ ಮಲ್ಲಿಕಾರ್ಜುನ ತಂದೆ ದತ್ತಾತ್ರಿ ಕಲಾಲ ವಯ: 22 ವರ್ಷ, ಜಾತಿ: ಇಡಗಾರ ಸಾ: ಹಾಲಹಳ್ಳಿ ಇವರಿಬ್ಬರು ಒಂದು ಕಾಟನ ಹಿಡಿದುಕೊಂಡು ಹೊಗುತ್ತಿದ್ದು ಪಿ.ಎಸ.ಐ ರವರು ಸಿಬ್ಬಂದಿಯವರ ಜೊತೆಯಲ್ಲಿ ಪಂಚರ ಸಮಕ್ಷಮದಲ್ಲಿ ಸದರಿಯವರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದು ಅವರ ಹತ್ತಿರ ಇದ್ದ ಕಾಟನದಲ್ಲಿ ಏನಿವೆ ಅಂತ ವಿಚಾರಣೆ ಮಾಡಿದ್ದು ಇದರಲ್ಲಿ ಸರಾಯಿ ಬಾಟಲಗಳು ಇದ್ದ ಬಗ್ಗೆ ತಿಳಿಸಿದ್ದು ನಂತರ ಅವರಿಗೆ ಸರಾಯಿ ಬಾಟಲಗಳನ್ನು ತೆಗೆದುಕೊಂಡು ಹೊಗುತ್ತಿದ್ದ ಬಗ್ಗೆ ಲೈಸನ್ಸ ಪರವಾನಿಗೆ ವಿಚಾರಣೆ ಮಾಡಿದ್ದು ಅವರು ತಾವು ಇಬ್ಬರು ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿದ್ದು ತಮ್ಮ ಹತ್ತಿರ ಯಾವುದೆ ಲೈಸನ್ಸ ಪರವಾನಿಗೆ ಇರುವುದಿಲ್ಲಾ ಅಂತ ತಿಳಿಸಿದರ ಮೇರೆಗೆ  ಪಂಚರ ಸಮಕ್ಷಮದಲ್ಲಿ ಕಾಟನ ಪರಿಶೀಲಿಸಿ ನೊಡಲು ಕಾಟನದಲ್ಲಿ ಮ್ಯಾಕಡಾಲ್ಸ್ ನಂ. 1 ವಿಸ್ಕಿ 180 ಎಮ.ಎಲ ನ 8 ಸರಾಯಿ ಬಾಟಲಗಳು ಅ.ಕಿ 1297.76 ರೂ. ಇದ್ದು, ನಂತರ ಸದರಿ ಸರಾಯಿಯನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: