ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-12-2019
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ.
64/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 06-12-2019 ರಂದು ರಾಜಕುಮಾರ ತಂದೆ ಮಾರುತಿ
ಸುಲ್ತೆ ಸಾ: ಚಾಂಬೋಳ ಗ್ರಾಮ, ತಾ: & ಜಿ: ಬೀದರ ರವರು ತಮ್ಮ ಪಕ್ಕದ ಮನೆಯ ಸಂದೀಪ್ ತಂದೆ ಬಾಬು ಬಸಂತಪೂರೆ
ರವರ ಜೊತೆಯಲ್ಲಿ ತನ್ನ ಮೋಟಾರ ಸೈಕಲ ಮೇಲೆ ಹಾಗೂ ಫಿರ್ಯಾದಿಯ ತಮ್ಮ ಕುಪೇಂದ್ರ ತಂದೆ ಮಾರುತಿ ಮೇತ್ರೆ
ಈತನು ತನ್ನ ಹೀರೋ ಫ್ಯಾಶನ್ ಪ್ರೋ ಮೋಟಾರ ಸೈಕಲ ನಂ. ಕೆಎ-38/ಆರ್-4710 ನೇದರ ಮೇಲೆ ಚಾಂಬೋಳದಿಂದ ಬೀದರಗೆ ತಮ್ಮ ತಂಗಿಯ ಹತ್ತಿರ ಆಸ್ಪತ್ರೆಗೆ ಹೋಗುತ್ತಿರುವಾಗ ಫಿರ್ಯಾದಿಯು
ಚಾಂಬೋಳ ಬೀದರ ರೋಡಿನ ತಮ್ಮೂರ ಶಾಮಣ್ಣಾ ಕಲ್ಲಗೊಂಡೆ ರವರ ಹೊಲದ ಹತ್ತಿರ ಬಂದಾಗ ಎದುರುಗಡೆಯಿಂದ ಮ್ಯಾಕ್ಸಿಕ್ಯಾಬ್
ವಾಹನ ನಂ. ಕೆಎ-38/1275 ನೇದರ ಚಾಲಕನಾದ
ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಮ್ಮ
ಕುಪೇಂದ್ರ ಈತನ ಮೋಟಾರ ಸೈಕಲಕ್ಕೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ್ದು, ಸದರಿ ಡಿಕ್ಕಿಯಿಂದ
ಕುಪೇಂದ್ರ ಇತನ ಹಣೆಯ ಮೇಲೆ ಭಾರಿ ರಕ್ತಗಾಯ, ಗುಪ್ತಗಾಯ ಹಾಗೂ ಎಡಗಾಲಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ
ಮಾತನಾಡಲಾರದ ಸ್ಥಿತಿಯಲ್ಲಿ ಬಿದ್ದಿದ್ದು, ಅಷ್ಟರಲ್ಲಿ ಡಿಕ್ಕಿ ಪಡಿಸಿದ ಆರೋಪಿಯು ತನ್ನ ವಾಹನವನ್ನು
ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು 108 ಅಂಬುಲೇನ್ಸ್ ವಾಹನಕ್ಕೆ ಕರೆಯಿಸಿ ಅದರಲ್ಲಿ ಗಾಯಗೊಂಡ ಕುಪೇಂದ್ರ
ಈತನಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ, ಆಸ್ಪತ್ರೆಯ
ವೈದ್ಯರು ಕುಪೇಂದ್ರನಿಗೆ ನೋಡಿ ಇತನಿಗೆ ತಕ್ಷಣ ಹೈದರಾಬಾದಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ
ಕೂಡಲೇ ಕುಪೇಂದ್ರ ಇತನಿಗೆ ಒಂದು ಖಾಸಗಿ ಅಂಬುಲೇನ್ಸನಲ್ಲಿ ಹೈದರಾಬಾದಗೆ ತೆಗೆದುಕೊಂಡು ಹೋಗಿದ್ದು
ಇರುತ್ತದೆ, ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 113/2019, ಕಲಂ. ಹುಡುಗ ಕಾಣೆ :-
ದಿನಾಂಕ 06-12-2019 ರಂದು ಫಿರ್ಯಾದಿ ಮಾಣೇಮ್ಮಾ ಗಂಡ ಶರಣಪ್ಪಾ ನಿಮಾನೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮಾಣಿಕ ನಗರ, ಸದ್ಯ ಹಳ್ಳಿಖೇಡ (ಬಿ) ರವರು ಮಗನಾದ ವಿನೋದ ವಯ: 25 ವರ್ಷ ಇವನು ಬಿ.ಇ ವಿದ್ಯಾಭ್ಯಾಸ ಮಾಡಿ ಯಾವುದೆ ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದನು, ಹೀಗಿರುವಾಗ ದಿನಾಂಕ 23-11-2019 ರಂದು ಮಗನಾದ ವಿನೋದ ಇತನು ಪುಣೆಕ್ಕೆ ಹೋಗಿ ಕೆಲಸ ಹುಡುಕಿಕೊಂಡು ಬರುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾನೆ, ಅವನ ಚಹರೆ ಪಟ್ಟಿ ತೆಳ್ಳನೆಯ ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ನೇರವಾದ ಮೂಗು, ಎರಡು ಹುಬ್ಬುಗಳ ಮದ್ಯ ಹಳೆಯ ಗಾಯ ಇರುತ್ತದೆ, ಮೈಮೇಲೆ ಒಂದು ಡಾರ್ಕ ಬೂದಿ ಬಣ್ಣದ ಪಾಯಿಂಟ್ ಮತ್ತು ಒಂದು ಚಾಕಲೇಟ್ ಬಣ್ಣದ ಶರ್ಟ ಇದ್ದು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಪಿüರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 151/2019, ಕಲಂ. 498(ಎ), 504 ಜೊತೆ 34 ಐಪಿಸಿ :-
ಫಿರ್ಯಾದಿ
ಸುನೀತಾ ಗಂಡ ಸಚಿನ ಸುವರ್ಣಕಾರ ಸಾ: ಭಾತಂಬ್ರಾ ರವರ ಮದುವೆ ಸಚಿನ ತಂದೆ ಉಧವ ಇವರ ಜೋತೆ ದಿನಾಂಕ 09-05-2018 ರಂದು
ಆಗಿರುತ್ತದೆ, ಮದುವೆಯಾದ ನಂತರ ಫಿರ್ಯಾದಿಯು ತನ್ನ ಗಂಡನ ಜೋತೆಯಲ್ಲಿ 6 ತಿಂಗಳು
ಚೆನ್ನಾಗಿ ಸಂಸಾರ ಮಾಡಿದ್ದು, ಮದುವೆಯಾಗಿನಿಂದ ಆರೋಪಿತರಾದ ಗಂಡ 1) ಸಚಿನ ಗಂಡ ಉಧವ ಸುವರ್ಣಕಾರ, ಮಾವ 2) ಉಧವ
ತಂದೆ ದಿಗಂಬರ ಸುವರ್ಣಕಾರ, ಅತ್ತೆ 3) ಸುನೀತಾ
ಗಂಡ ಉದೌ ಸುವರ್ಣಕಾರ, 4)
ದುರ್ಗಾ
ತಂದೆ ತುಕಾರಾಮ ಪಂಚಾಳ ಸಾ: ನಳೆಗಾವ, ತಾ: ಚಾಕೂರ
ಇವರೆಲ್ಲರು ಫಿರ್ಯಾದಿಗೆ ದಿನಾಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತಿದ್ದರು, ವಿನಃ
ಕಾರಣ ತವೂರು ಮನೆಗೆ ಹೊಗು ನಿನು ಚೆನ್ನಾಗಿಲ್ಲವೆಂದು ಹಿಂಸೆಯನ್ನು ಕೊಡುತ್ತಿದ್ದರು ಅಂತ ನೀಡಿದ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-12-2019 ರಂದು
ಅರ್ಜಿ ನೀಡಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಳ್ಳಲಾಗಿದೆ.
No comments:
Post a Comment