Police Bhavan Kalaburagi

Police Bhavan Kalaburagi

Monday, December 9, 2019

KALABURAGI DISTRICT REPORTED CRIMES

ಆಕ್ರಮವಾಗಿ ನಾಡಪಿಸ್ತೂಲ ಹೊಂದಿದವನ ಬಂಧನ :
ನರೋಣಾ ಠಾಣೆ : ದಿನಾಂಕ:07/12/2019 ರಂದು ಸಂಗೋಳಗಿ (ಸಿ) ಗ್ರಾಮದಲ್ಲಿ ಸಂಗೊಳಗಿ(ಸಿ) ಕ್ರಾಸ್ ಹತ್ತಿರ ವೆಂಕಟರಾವ ತಂದೆ ರಾಮರಾವ ಬಿರಾದಾರ ಎಂಬುವವನು ತನ್ನ ಹತ್ತಿರ ನಾಡಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಶ್ರೀ. ಮಲ್ಲಿಕಾರ್ಜುನ.ಸಾಲಿ ಡಿ.ವೈ.ಎಸ್.ಪಿ ಆಳಂದ ಉಪ-ವಿಭಾಗ ಹಾಗು ಪಿ.ಎಸ್.ಐ. ನರೋನಾ ಠಾಣೆ , ಸಿಬ್ಬಂದಿ ಮತ್ತು ಪಂಚರೊಂದಿಗೆ ನಮ್ಮ ಇಲಾಖಾ ಜೀಪಿನಲ್ಲಿ ಸಂಗೋಳಗಿ (ಸಿ) ಗ್ರಾಮಕ್ಕೆ ಹೋದಾಗ ಸಂಗೋಳಗಿ(ಸಿ) ಕ್ರಾಸ್ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ನಮ್ಮ ಜೀಪನ್ನು ನೋಡಿ ಓಡಲು ಪ್ರಾರಂಭಿಸಿದಾಗ ನಾವೆಲ್ಲರೂ ಒಮ್ಮೆಲೆ ಜೀಪನಿಂದ ಇಳಿದು ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ಆತನು ತನ್ನ ಹೆಸರು ವೆಂಕಟರಾವ ತಂದೆ ರಾಮರಾವ ಬಿರಾದಾರ, ಸಾ:ಸಂಗೋಳಗಿ(ಸಿ) ಗ್ರಾಮ ಅಂತಾ ತಿಳಿಸಿದನು. ಆತನಿಗೆ ಪಂಚರ ಸಮಕ್ಷಮದಲ್ಲಿ ಚೆಕ್ ಮಾಡಿದಾಗ ಆತನ ಪ್ಯಾಂಟಿನ ಬಲಭಾಗದ ಕೀಸೆಯಲ್ಲಿ ಒಂದು ನಾಡಪಿಸ್ತೂಲ್ ದೊರೆತಿದ್ದು. ಇದರ ಬಗ್ಗೆ ಆತನಿಗೆ ವಿಚಾರಿಸಿದಾಗ ಅವನು ಈ ಹಿಂದೆ ಮನೆಯ ಜಾಗದ ಸಂಬಂಧವಾಗಿ ತನಗು ಮತ್ತು ತಮ್ಮ ಅಣ್ಣತಮ್ಮಕಿಯವರಿಗೂ ಗಲಾಟೆಗಳಾಗಿ ಕೇಸುಗಳು ಆಗಿರುತ್ತವೆ. ಮತ್ತೆ ಜಗಳ ನಡೆಯುವ ಕಾಲಕ್ಕೆ ಇದನ್ನು ಉಪಯೋಗಿಸುವ ಉದ್ದೇಶದಿಂದ ಸದರಿ ಪಿಸ್ತೂಲನ್ನು ಮದ್ಯ ಪ್ರದೇಶದ ಒಬ್ಬ ವ್ಯಕ್ತಿಯಿಂದ 20,000/- ರೂ ಹಣ ಕೊಟ್ಟು ಖರೀದಿ ಮಾಡಿರುತ್ತೇನೆ ಅಂತಾ ತಿಳಿಸಿದನು. ಅದನ್ನು ಪರಿಶೀಲಿಸಲಾಗಿ ಅದರ ಮೇಲೆ Made In England ಅಂತಾ ಇಂಗ್ಲೀಷ ಅಕ್ಷರದಲ್ಲಿ ನಮೂದಿಸಿದ್ದು. ಸದರಿ ನಾಡಪಿಸ್ತೂಲನ್ನು ಪಂಚರ ಸಮಕ್ಷಮದಲ್ಲಿ ಆಪಾದೀತನಿಂದ ಜಪ್ತಿ ಪಡಿಸಿಕೊಂಡು, ಸದರಿಯವನನ್ನು ವಶಕ್ಕೆ ತಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: