ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-12-2019
ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 29/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಾಹಿನ ಬಾನು ಗಂಡ ಹುಸೇನಮಿಯ್ಯಾ ಬೋರಲವಾಲೆ, ವಯ: 32 ವರ್ಷ, ಸಾ: ಶಿವಪುರ ಗಲ್ಲಿ ಹುಮನಾಬಾದ ರವರ ಗಂಡನಾದ ಹುಸೇನಮಿಯ್ಯಾ ತಂದೆ ಯಾಕುಬಸಾಬ ಬೋರಲವಾಲೆ ವಯ: 40 ವರ್ಷ ರವರು ಸೆಂಟ್ರಿಂಗ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 09-12-2019 ರಂದು ಫಿರ್ಯಾದಿಯವರ ಗಂಡ ಹುಮನಾಬಾದ ಪಟ್ಟಣದ ಕೋಳಿವಾಡದ ಪ್ರಕಾಶ ತಂದೆ ಲೋಕಮಣಿ ಇವರ ಮನೆಯ ಕಟ್ಟಡದ ಸೆಂಟ್ರಿಂಗ ಕೆಲಸ ಕುರಿತು ಹೋಗಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗಲಿದ್ದರಿಂದ ಅವರಿಗೆ ಹುಮನಾಬಾದ ಆಸ್ಪತ್ರೆಗ ಚಿಕಿತ್ಸೆ ಕುರಿತು ತೆಗೆದುಕೊಂಡು ಹೋದಾಗ ವೈದ್ಯರು ನೋಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಕ್ಕೆ ತೆಗೆದುಕೊಂಡು ಹೋಗಲು ಹೇಳಿದ್ದು, ಅಲ್ಲಿಂದ ಹೈದ್ರಬಾದಕ್ಕೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ.
113/2019, ಕಲಂ. 279, 304(ಎ)
ಐಪಿಸಿ ಜೊತೆ
187 ಐಎಂವಿ ಕಾಯ್ದೆ
:-
ದಿನಾಂಕ 10-12-2019 ರಂದು ಫಿರ್ಯಾದಿ
ಪವನ ತಂದೆ ವಾಚು
ಪವಾರ ಸಾ: ದೇವಗೀರಿ
ತಾಂಡಾ ರವರ ಅಣ್ಣ
ವಾಲು ಪವಾರ ವಯ: 28 ವರ್ಷ ಇತನು ಕೆಲಸ
ಕುರಿತು ಹೊಗಿ ಮರಳಿ
ಮನೆಗೆ ತನ್ನ ಮೋಟಾರ್
ಸೈಕಲ್ ನಂ. ಕೆಎ-38/ಜೆ-2357 ನೇದರ ಮೇಲೆ ದೇವಗಿರಿ
ಥಾಂಡಾದ ಕಡೆಗೆ ಬರುವಾಗ
ಯಾವುದೋ ಒಂದು ವಾಹನ
ಚಾಲಕನು ತನ್ನ ವಾಹನವನ್ನು
ಅತಿವೇಗ ಮತ್ತು ನಿಷ್ಕಾಳಜಿತನದಿಂದ
ಚಾಲಾಯಿಸಿಕೊಂಡು ಬಂದು
ಫಿರ್ಯಾದಿಯ ಅಣ್ಣನಿಗೆ ರಸ್ತೆ
ಅಪಘಾತ ಪಡಿಸಿ ಓಡಿ
ಹೋಗಿರುತ್ತಾನೆ, ಸದರಿ
ಡಿಕ್ಕಿಯಿಂದ ಅಣ್ಣನ ತಲೆ
ಹಿಂದೆ ಭಾರಿ ರಕ್ತಗಾಯ, ಮುಗಿನಿಂದ ಮತ್ತು ಕಿವಿಯಿಂದ ರಕ್ತ
ಸೋರುವ್ಯದು ಮತ್ತು ಬಲಗೈ
ಮುಂಗೈ ಹಿಂದೆ ಕೈ
ಮುರಿದಿದ್ದು ಮತ್ತು ಬಲಗಾಲು
ಹಿಮ್ಮಡಿ ಮೇಲೆ
ಕಾಲು ಮುರಿದಿರುತ್ತದೆ ಅವರಿಗೆ
ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ
ಸರಕಾರಿ ಆಸ್ಪತ್ರೆಗೆ ತಂದು
ದಾಖಲು ಮಾಡಿದಾಗ ವೈದ್ಯಾಧಿಕಾರಿರವರು
ಪರಿಶೀಲಿಸಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ
ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ.
85/2019, ಕಲಂ. 78(3) ಕೆ.ಪಿ ಕಾಯ್ದೆ
:-
ದಿನಾಂಕ 10-12-2019
ರಂದು
ಬೀದರ ನಗರದ ಝೂಮ ಪ್ರೇಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು
ನಿಂತು ಹೊಗಿ ಬರುವ ಜನರಿಗೆ ಕರೆದು ತಮ್ಮ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂ ಗೆ 80/- ರೂ ಕೊಡುತ್ತೇನೆ
ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ರಾಜಪ್ಪಾ
ಎ.ಎಸ್.ಐ ಪ್ರಭಾರಿ ಪಿ.ಎಸ್.ಐ ಬೀದರ ನಗರ ಪೊಲೀಸ
ಠಾಣೆ ರವರಿಗೆ ಖಚಿತ ಮಾಹಿತಿ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ
ಸಿಬ್ಬಂದಿಯವರೊಡನೆ ಶಹಾಗಂಜ ಕಮಾನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಿ ಅಲ್ಲಿ ಆರೋಪಿತರಾದ 1) ತಹಸೀನ ತಂದೆ ಖಾಜಾ
ಮೈನೊದ್ದೀನ ವಯ:
51 ವರ್ಷ,
ಜಾತಿ:
ಮುಸ್ಲಿಂ,
ಸಾ:
ಬಾಗವಾನ
ಗಲ್ಲಿ ಬೀದರ, 2)
ಮಾರುತಿ
ತಂದೆ ಬಸಪ್ಪಾ ತಮಗೊಂಡ ವಯ: 60 ವರ್ಷ, ಸಾ: ಕುತ್ತಾಬಾದ ಇವರಿಬ್ಬರು
ಝೂಮ ಪ್ರೆಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ
ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ
ಆರೋಪಿತರಿಗೆ ಹಿಡಿದು ಅವರಿಂದ 1) ನಗದು ಹಣ 2370/- ರೂ., 2) 2 ಬಾಲ ಪೆನ್ನುಗಳು
ಹಾಗೂ 3) 2 ಮಟಕಾ ಚೀಟಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 36/2019, ಕಲಂ. 419, 420 ಐಪಿಸಿ ಮತ್ತು
66 (ಡಿ) ಐ.ಟಿ ಕಾಯ್ದೆ
:-
ದಿನಾಂಕ 10-12-2019 ರಂದು ಶಿವರಾಮ ತಂದೆ ಹರಿಶ್ಚಿಂದ್ರ ರಾಠೊಡ ಸಾ: ವಡ್ಡರ್ ಕಾಲೊನಿ ಮೈಲೂರ ರಸ್ತೆ ಬೀದರ ರವರ ಮಗ ದೀಪಕ ರಾಠೋಡ ಪಿಯುಸಿ ದ್ವಿತೀಯ ವರ್ಷ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿದ್ದು ಅವನು ದಿನಾಂಕ 18-11-2019 ರಂದು ಸಾಮಾಜಿಕ ಜಾಲತಾಣವಾದ ಫೇಸ್ಬುಕನಲ್ಲಿ ನೌಕರಿ ಜಾಹಿರಾತು ನೋಡಿ ಅದರಲ್ಲಿ ಲೈಕ ಮತ್ತು ಕಮೆಂಟ ಮಾಡಿದಾಗ ಏರಪೋರ್ಟ ಅಥಾರಿಟಿ ಆಫ್ ಇಂಡಿಯಾ ಹೆಸರಿನ ಜಾಹಿರಾತು ವಿಜ್ಞಾಪನನೆಯಲ್ಲಿ ಚೆಕಿಂಗ ಮಾಸ್ಟರ ಹುದ್ದೆಗಳು ಖಾಲಿಯಿದ್ದು ಮಾಸಿಕ ವೇತನ 28,500/- ರೂ., ಊಟ ವಸತಿ ಹೊರತು ಪಡಿಸಿ ನೀಡಲಾಗುವುದು ಅರ್ಹ ಆಸಕ್ತರು ಬೆಂಗಳೂರಿನ ಕೆಂಪೆಗೌಡಾ ಇಂಟರನ್ಯಾಶನಲ ಏರಪೋರ್ಟ ಸಖಿ ಹೆಚ್.ಆರ್. ವಿಭಾಗ ಕೋಣೆ ಸಂಖ್ಯೆ 5 ನೊಂದಣಿ ಕೋಡ್ ಎ-56, 7835ರ ವಿಳಾಸಕ್ಕೆ ಕಳುಹಿಸಲು ಕೋರಲಾಗಿರುವುದನ್ನು ಓದಿ ದೀಪಕ ರಾಠೋಡ ಫಿರ್ಯಾದಿಗೆ ತಿಳಿಸಿದ್ದು, ಇಂಟರನೇಟ ಮೂಲಕ ಅವರು ತಿಳಿಸಿದ ವಿಳಾಸಕ್ಕೆ ಆನ್ ಲೈನ್ ಅರ್ಜಿ ಭರ್ತಿ ಮಾಡಿ ಸೂಚನೆಯಂತೆ 28,500/- ರೂ. ನೋಂದಣಿ ಶುಲ್ಕ 2500/- ಮತ್ತು ಭದ್ರತೆ ಠೇವಣಿಗಾಗಿ 25,500/- ಹೀಗೆ ಒಟ್ಟು 28,500/- ರೂ. ಗಳನ್ನು ಬೀದರ ಅಲಹಾಬಾದ ಬ್ಯಾಕ್ ಶಾಖೆಯಿಂದ ಏರಪೋರ್ಟ ಅಥಾರಿಟಿ ಆಫ್ ಇಂಡಿಯಾದ ಸಂಬಂಧಿತ ಅಧಿಕಾರಿಗಳೆಂದು ತಿಳಿಸಿದ ಆಸ್ಸಾಮ ರಾಜ್ಯದ ಪ್ರದೀಪ ಸರಕಾರ ಹೆಸರಿನಲ್ಲಿರುವ ಜೋರಹಟ್ ಕಮಲ ಬ್ಯಾರಿ ಯುನೈmೆಡ್ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ 0646010380843 ಐ.ಎಫ್.ಎಸ್.ಸಿ ಕೋಡ್ ಯು.ಟಿ.ಬಿ.ಐ.ಓ.ಕೆ.ಆರ್.ಜಿ.02 ಗೆ
ದಿನಾಂಕ 25-11-2019 ರಂದು
2500/- ರೂ ಮತ್ತು ದಿನಾಂಕ
28-11-2019
ರಂದು 25,500/- ರೂ. ಹಣವನ್ನು ಫಿರ್ಯಾದಿಯು ತನ್ನ ಮಗನ ಜೊತೆ ಸೇರಿ ಪಾವತಿಸಿದ್ದು, ಇಲ್ಲಿಯವರೆಗೂ ಫಿರ್ಯಾದಿಗೆ ನಾವು ಮೋಸ ಹೋಗುತ್ತಿದ್ದೇವೆ ನಮಗೆ ಮೋಸ ಮಾಡಲಾಗುತ್ತಿದೆ ಎಂಬ ವಿಚಾರ ಗಮನಕ್ಕೆ ಬಂದಿರುವುದಿಲ್ಲ, ನಿಜವಾಗಿಯೂ ನೌಕರಿ ಸಿಗುತ್ತದೆ ಎಂಬ ನಂಬಿದ್ದು, ನಂತರದಲ್ಲಿ ಈ ಹಿಂದೆನಿಂದಲೂ ಫಿರ್ಯಾದಿಯ ಮೋಬೈಲ್ ನಂ. 9480757731 ನೇದಕ್ಕೆ ಮೋಬೈಲ್ ನಂ. 8860240619, ರಾಹುಲ ಹೆಸರಿನ 9990513983, ಶಿವಾನಿ ಹೆಸರಿನ 9911962456, ನಿತೀಶ ಭರದ್ವಾಜ ಹೆಸರಿನ 9990513679, ಅಮಿತಕುಮಾರ ಮಿಶ್ರಾ ಡೆ¯ೆವರಿ ಬಾಯ್ ಹೆಸರಿನ 8588901643, ಅಜೀತಕುಮಾರ (ವಾಟ್ಸಪ್) ಹೆಸರಿನ 9773767681 ಮತ್ತು ಪ್ರದೀಪ ಹೆಸರಿನ 9718396127 ಮೊಬೈಲ ಸಂಖ್ಯೆಗಳ ಮೂಲಕ ಪದೇ ಪದೇ ಕರೆ ಮಾಡಿ
ನಿಮ್ಮ ನೇಮಕಾತಿ ಪತ್ರ ಸಿದ್ದವಾಗಿದೆ ನೀವು ಕಟ್ಟಿರುವ 28,500/- ರೂ ಮತ್ತು ಹುದ್ದೆಯ ಡ್ರೆಸ್ ಕೋಟ್ ಐಟಿ ಕಾರ್ಡ ಲ್ಯಾಪಟಾಪ್, ವಾಕಿಟಾಕಿ ಗಳನ್ನು ಕೋರಿಯರ ಮೂಲಕ ಕಳುಹಿಸುತ್ತಿದ್ದು, ಇನ್ನು 30,500/- ರೂ ನೀಡಿದರೆ ನೀವು ಈ ಮೊದಲು ನೀಡಿದ 28,500/- ರೂ ವಾಪಸ್ ನೀಡಾಲಾಗುವುದು ಎಂದು ಸೂಚಿಸಿದ್ದು, ಫಿರ್ಯಾದಿಗೆ ಡಿಸೆಂಬರ 2 ರಂದು ಅನುಮಾನ ಬಂದುದ್ದರಿಂದ ದಿನಾಂಕ 05-12-2019 ರಂದು ಬೀದರ ಯಶವಂತಪುರ ರೈಲ್ವೆ ಮೂಲಕ ಬೆಂಗಳೂರಿನ ಕಚೇರಿಗೆ ತೆರಳಿದಾಗ ಅಲ್ಲಿಯ ಅಧಿಕಾರಿಗಳು ನೀವು ಮೋಸ ಹೋಗಿದ್ದಿರಿ ಯಾವುದೇ ರೀತಿಯ ನೇಮಕಾತಿ ಮಾಡಿರುವುದಿಲ್ಲ ಎಂದು ಅಲ್ಲಿಯ ನಿಜವಾದ ಅಧಿಕಾರಿಗಳು ಸ್ಪಷ್ಟನೆ ನೀಡಿರುತ್ತಾರೆ, ಪುನ: ಬೆಂಗಳೂರಿನಿಂದ ಹೊರಟು ಡಿಸೆಂಬರ 6 ರಂದು ಬೀದರಿಗೆ ತಲುಪಿ ಫಿರ್ಯಾದಿಯಂತೆ ಬೀದರ ನಗರದ ಮಹೇಶಕುಮಾರ ವಿದ್ಯಾನಗರ ಕಾಲೋನಿ, ನಿರ್ಹಾಂಕಾರ, ಆಶಿಸ್ ಬ್ಯಾಂಕ ಕಲೋನಿ ನಿವಾಸಿಗಳು ಸಹ ಹಣ ಪಾವತಿಸಿ ನಕಲಿ ನೌಕರಿಗಾಗಿ ಮೋಸ ಹೋಗಿರುತ್ತಾರೆಂದು ತಿಳಿದು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ.
73/2019, ಕಲಂ. ಮಹಿಳೆ ಕಾಣೆ
:-
ದಿನಾಂಕ 06-12-2019 ರಂದು ಬೆಳಿಗ್ಗೆ 0900 ಗಂಟೆಯ ಸುಮಾರಿಗೆ ಫಿರ್ಯಾದಿ ಸೀಮಾಬಾಯಿ ಗಂಡ ಪ್ರಭು ಪವಾರ ವಯ: 45 ವರ್ಷ, ಜಾತಿ: ಲಂಬಾಣಿ, ಸಾ: ಝರಾಳ ತಾಂಡಾ, ತಾ: ಹುಮನಾಬಾದ ರವರ ಮಗಳಾದ ಮಹಾನಂದಾ ತಂದೆ ಪ್ರಭು ಪವಾರ ವಯ: 20 ವರ್ಷ ಇವಳು ಹೊಲಿಗೆ ಕಲಿಯಲು ಹೋಗಿ ಬರುತ್ತೆನೆಂದು ಹೇಳಿ ಬಸ್ಸಿಗೆ ಹುಲಸೂರಕ್ಕೆ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಅವಳ ಚಹರೆ ಪಟ್ಟಿ ಎತ್ತರ 165 ಸೇ.ಮಿ, ಸಾಧಾರಣ ಮೈಕಟ್ಟು, ಸಾದಾ ಕಪ್ಪು ಬಣ್ಣ, ದುಂಡು ಮುಖ, ನೇರ ಮೂಗು ಇದ್ದು, ಮುಖದ ಎಡಕ್ಕೆ ಮೂಗಿನ ಹತ್ತಿರ ಚಿಕ್ಕದಾದ ಕಪ್ಪು ಮಚ್ಚೆ ಇರುತ್ತದೆ, ಅವಳು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಪ್ಯಾಂಟ, ಕಪ್ಪು ಬಣ್ಣದ ಟಾಪ್ ಧರಿಸಿದ್ದು, ಅವಳು ಕನ್ನಡ, ಹಿಂದಿ, ಲಂಬಾಣಿ ಮತ್ತು ಮರಾಠಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment