ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-12-2019
ಚಿಟಗುಪ್ಪಾ ಪೊಲೀಸ ಠಾಣೆ
ಅಪರಾಧ ಸಂ. 150/2019, ಕಲಂ. 366(ಎ) ಐಪಿಸಿ ಮತ್ತು ಕಲಂ. 12 ಪೊಕ್ಸೋ ಕಾಯ್ದೆ :-
ದಿನಾಂಕ 20-12-2019 ರಂದು ರಾತ್ರಿ ಸಮಯದಲ್ಲಿ ಫಿರ್ಯಾದಿ ನರಹರಿ ತಂದೆ ರಾಮಶೇಟ್ಟಿ ಚಿನ್ನಾ ರಾಠೋಡ ವಯ: 41 ವರ್ಷ, ಜಾತಿ: ಲಂಬಾಣಿ, ಸಾ: ಮದರ್ಗಿ ಗುಡಿ ತಾಂಡಾ, ತಾ: ಚಿಟಗುಪ್ಪಾ ರವರ ಮಗಳು ಗೀತಾ ತಂದೆ ನರಹರಿ ವಯ: 17 ವರ್ಷ ಈಕೆಯನ್ನು ಆರೋಪಿ ರಾಮು ತಂದೆ ದಶರಥ ರಾಠೋಡ ವಯ: 22 ವರ್ಷ, ಸಾ: ಮದರ್ಗಿ ಗುಡಿ ತಾಂಡಾ
ಇತನು ಗೀತಾ ಇಕೆಯನ್ನು ಕೆಡಿಸಲು ಹಾಗೂ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಓಡಿಸಿಕೊಂಡು ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ
ಮೇರೆಗೆ ದಿನಾಂಕ 23-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಅಪರಧ ಸಂ. 125/2019, ಕಲಂ. 279, 337, 338
ಐಪಿಸಿ :-
ದಿನಾಂಕ
23-12-2019 ರಂದು ನಾರಾಯಣಪೂರ
ನರಸರೆಡ್ಡಿ ಉಡಬಾಳ ರವರ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದುದ್ದರಿಂದ ನರಸರೆಡ್ಡಿ ರವರು ಫಿರ್ಯಾದಿ
ಪ್ರಭು ತಂದೆ ರೇವಣಪ್ಪಾ ಹಲಿದೊಡ್ಡಿ ಸಾ: ಬೇಮಳಖೇಡಾ ರವರಿಗೆ ನಾರಾಯಣಪೂರಕ್ಕೆ ಹೋಗಿ ಬರೊಣ ಅಂತ ತಿಳಿಸಿದ
ಮೇರೆಗೆ ಫಿರ್ಯಾದಿ ಮತ್ತು ನರಸರೆಡ್ಡಿ ತಂದೆ ನಾಗರೆಡ್ಡಿ ಉಡಬಾಳ ಇಬ್ಬರು ಬೇಮಳಖೇಡದಿಂದ ನಾರಾಯಣಪೂರಕ್ಕೆ
ಹೋಗುವಾಗ ಹುಡುಗಿ ಮತ್ತು ಕಪ್ಪರಗಾಂವ ಮದ್ಯೆ ಕಪ್ಪರಗಾಂವ ಶಿವಾರ ಕಾಂತರೆಡ್ಡಿ ಅಕ್ಕರೆಡ್ಡಿ ರವರ ಹೊಲದ
ಹತ್ತಿರ ರೋಡಿನ ಮೇಲೆ ಫಿರ್ಯಾದಿ ಕುಳಿತುಕೊಂಡು ಹೋಗುತ್ತಿದ್ದ ಟಿ.ವಿ.ಎಸ್ ಸೂಪರ ಎಕ್ಸ.ಎಲ್
ಮೋಟಾರ ಸೈಕಲ ನಂ. ಎಪಿ-11/ಎಯು-2368 ನೇದ್ದನ್ನು ನರಸರೆಡ್ಡಿ ಉಡಬಾಳ
ರವರು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಾಂಗ ರೂಟಿಗೆ ಹೋಗಿ ಎದುರಿನಿಂದ ಬರುತ್ತಿದ್ದ ಹಿರೋ
ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ ನಂ. ಕೆಎ-36/ಆರ್-5844 ನೇದಕ್ಕೆ ಡಿಕ್ಕಿ
ಮಾಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲಿನ ಮೇಲೆ ಹಾಗೂ ಬಾಯಿಗೆ ರಕ್ತ
ಹಾಗೂ ಗುಪ್ತಗಾಯಗಳು ಆಗಿರುತ್ತವೆ, ನರಸರೆಡ್ಡಿ ಉಡಬಾಳ ರವರಿಗೆ ಬಲಗಾಲ ಮೊಳಕಾಲ ಕೆಳಗೆ, ಎಡಗಾಲ ಮೊಳಕಾಲ
ಕೆಳಗೆ,
ಬಲ
ಭುಜದ ಮೇಲೆ ಹಾಗೂ ಮೂಗಿನ ಮೇಲೆ ರಕ್ತ ಹಾಗೂ ಗುಪ್ತಗಾಯಗಳು ಆಗಿರುತ್ತವೆ, ಎದರುಗಡೆಯಿಂದ ಮೋಟಾರ ಸೈಕಲ
ಚಲಾಯಿಸಿಕೊಂಡು ಬಂದ ಪ್ರಕಾಶ ತಂದೆ ವಿಠ್ಠಲ ಉಡಬಾಳಕರ ಸಾ: ಹಿಪ್ಪರ್ಗಾ ರವರ
ಹಣೆಗೆ,
ಎಡ
ಭುಜಕ್ಕೆ,
ಎರಡು
ಕಾಲುಗಳ ಮೊಳಕಾಲಿಗೆ ರಕ್ತಗಾಯ ಹಾಗೂ ಎಡಗೈಗೆ ಭಾರಿ ಗುಪ್ತಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ಎಲ್ಲರಿಗೂ
ಯಾರೋ 108
ಅಂಬುಲೇನ್ಸದಲ್ಲಿ
ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment