Police Bhavan Kalaburagi

Police Bhavan Kalaburagi

Wednesday, December 25, 2019

BIDAR DISTRICT DAILY CRIME UPDATE 25-12-2019

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-12-2019

ಬೀದರ ಗರ ಪೊಲೀಸ್ ಠಾಣೆ ಅಪರಾಧ ಸಂ. 89/2019, ಕಲಂ. 302, 109 ಜೊತೆ 34 ಐಪಿಸಿ :-
ಫಿರ್ಯಾದಿ ಮೊಹ್ಮದ ಮೊಯಿಸ್ ತಂದೆ ಮೊಹ್ಮದ ಖುರ್ಶಿದ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಗರೀಬ ಕಾಲೂನಿ ಫೈಜಪೂರಾ, ಬೀದರ ರವರ ತಮ್ಮನಾದ ಮೊಹ್ಮದ ಅಕ್ಬರ್ ಇವನು ಬಸವೇಶ್ವರ ಚೌಕ ಹತ್ತಿರ ಭಂಡಿ ಇಟ್ಟುಕೊಂಡು ಗೊಲಿ ಬಿಸ್ಕಿಟ ವ್ಯಾಪಾರ ಮಾಡಿಕೊಂಡಿದ್ದು, ಈಗ ಸ್ವಲ್ಪ ದಿವಸಗಳಿಂದ ಭಂಡಿ ಹಚ್ಚದೆ ಗೆಳೆಯರೊಂದಿಗೆ ತಿರುಗಾಡುತ್ತಿದ್ದನು, ಹೀಗಿರುವಾಗ ದಿನಾಂಕ 24-12-2019 ರಂದು 2200 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಫಿರ್ಯಾದಿಯವರ ಮೊಬೈಲ ನಂ. ಗೆ ಯಾರೋ ಕರೆ ಮಾಡಿ ನಿಮ್ಮ ತಮ್ಮ ಮೊಹ್ಮದ ಅಕ್ಬರನಿಗೆ ಉಸ್ಮಾನ ಗಂಜದಲ್ಲಿದ್ದ ವೈನ ಶಾಪ್ ಬಳಿ ಯಾರೋ ಜಗಳ ಮಾಡಿ ಹೊಡೆದಿರುತ್ತಾರೆ ಅಂತ ತಿಳಿಸಿದಾಗ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ತಮ್ಮ ಆಜಮ, ಅಕ್ಕ ತಹಮಿನಾ ರವರು ಕೂಡಿ ಉಸ್ಮಾನ ಗಂಜದಲ್ಲಿದ್ದ ಜೈ ಭವಾನಿ ವೈನ್ಸ ಹತ್ತಿರ ಹೋಗಿ ನೋಡಲು ಅಲ್ಲಿ ಜನರು ಸೇರಿದ್ದು, ಹತ್ತಿರ ಹೋಗಿ ನೋಡಲು ಅಲ್ಲಿ ವೈನ್ಸ ಶಾಪ್ ಶೇಟರ ಹತ್ತಿರ ತಮ್ಮ ಮೊಹ್ಮದ ಅಕ್ಬರನ ಶವ ಬಿದ್ದಿದ್ದು, ಮೈಯಲ್ಲಾ ರಕ್ತ ಆಗಿತ್ತು, ಅವನ ಬಲ ಭಕಾಳಿಯಲ್ಲಿ ಚಾಕು ತಿವಿದು ಕೊಲೆ ಮಾಡಿದ್ದು, ನಂತರ ಗೊತ್ತಾಗಿದೆನೆಂದರೆ ನಿನ್ನೆ 2000 ಗಂಟೆ ಸುಮಾರಿಗೆ ಹಳೆ ಬಸ್ಸ ನಿಲ್ದಾಣದ ಹತ್ತಿರ ಯಾವುದೊ ಹಳೆ ದ್ವೇಷದಿಂದ ತಮ್ಮ ಮೊಹ್ಮದ ಅಕ್ಬರ್ ಮತ್ತು ಎಂ.ಡಿ ಫಿರೋಜ, ಸೈಯದ ಸಿಕಂದರ, ಅಶು, ಜಿಶಾನ ರವರ ಮದ್ಯ ಜಗಳ ಆಗಿ ಆಸ್ಪತ್ರೆಗೆ ಹೊಗಿ ಚಿಕಿತ್ಸೆ ಮಾಡಿಸಿಕೊಂಡು ತಮ್ಮ ಉಸ್ಮಾನ ಗಂಜ್ದಲ್ಲಿದ್ದ ಜೈ ಭವಾನಿ ವೈನ್ಸ್ ಶಾಪಗೆ ಬಂದಾಗ ಅಲ್ಲಿ ಅದೇ ದ್ವೇಷದಿಂದ ಆರೋಪಿತರಾದ 1) ಎಂ.ಡಿ ಫಿರೋಜ, 2) ಸೈಯದ ಸಿಕಂದರ, 3) ಅಶು ಮೂವರು ಸಾ: ಮೈಲೂರ ಬೀದರ, 4) ಜಿಶಾನ ಸಾ: ಗೊಲೆ ಖಾನಾ ಬೀದರ ಹಾಗೂ 5) ರೈಸ್ ಸಾ: ಪನ್ಸಲ್ ತಾಲೀಮ ಬೀದರ ಇವರೆಲ್ಲರೂ ಕೂಡಿ ಫಿರ್ಯಾದಿಯವರ ತಮ್ಮನ ಕೊಲೆ ಮಾಡುವ ಉದ್ದೇಶದಿಂದ ಬಂದು ಚಾಕುವಿನಿಂದ ತಮ್ಮನ ಬಲಗಡೆ ಭಕಾಳಿಯಲ್ಲಿ ಹೊಡೆದು ಕೊಲೆ ಮಾಡಿರುತ್ತಾರೆ, ರೈಸ ಇವನು ತಮ್ಮನಿಗೆ ನಿನಗೆ ನೋಡಿಕೊಳ್ಳುತ್ತೇನೆ ಅಂತ ಹೇಳುತ್ತಿದ್ದನು ಅವನ ಕುಮಕ್ಕಿನಿಂದ ಕೃತ್ಯ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 323, 324, 504, 506, 498() ಜೊತೆ 149 ಐಪಿಸಿ :-
ದಿನಾಂಕ 24-12-2019 ರಂದು ಫಿರ್ಯಾದಿ ಅರ್ಚನಾ ಗಂಡ ಖಂಡು ಸಾತಭಾಯಿ ವಯ: 23 ವರ್ಷ, ಜಾತಿ: ಮರಾಠಾ, ಸಾ: ಕೊಂಗಳಿ ರವರ ಮದುವೆ ದಿನಾಂಕ 17-05-2019 ರಂದು ಕೊಂಗಳಿ ಗ್ರಾಮದಲ್ಲಿ ಆಗಿರುತ್ತದೆ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಒಂದು ತಿಂಗಳು  ಚೆನ್ನಾಗಿ ಇಟ್ಟುಕೊಂಡು ಆದಾದ ಮೇಲೆ ಆರೋಪಿತರಾದ ಗಂಡ ಖಂಡು, ಭಾವ ಶಿವಾಜಿ, ಅತ್ತೆ ಕುಶಲಬಾಯಿ, ನಾದಣಿ ಉಮಾ ಹಾಗೂ ನೆಗೆಣಿ ವರ್ಷಾ ಇವರೆಲ್ಲರೂ ಸೇರಿಕೊಂಡು ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾರೆ ಹಾಗೂ ಮನೆಯಲ್ಲಿ ಸರಿಯಾಗಿ ಊಟ ಕೊಡದೇ, ಒಂದು ಸೀರೆ ಮತ್ತು ಒಂದು ಬ್ಲೌಜ್ ಮಾತ್ರ ಧರಿಸಲು ನೀಡಿರುತ್ತಾರೆ ಮತ್ತು ಬಿಟ್ಟು ಕೊಡುತ್ತೇವೆ ಅಂತ ಹೇಳುತ್ತಾ ಬಂದಿರುತ್ತಾರೆ, ಗಲ್ಲಿಯಲ್ಲಿ ಯಾರಿಗೂ ಮಾತನಾಡಲು ಬಿಡುತ್ತಿರಲಿಲ್ಲ, ಫಿರ್ಯಾದಿ ಕೆಲಸ ಮಾಡಿದರೂ ನೀನು ಸರಿಯಾಗಿ ಮಾಡಿರುವುದಿಲ್ಲ ಅಂತ ಬೈದಿರುತ್ತಾರೆ, ಗಂಡ ಖಂಡು ಇತನು ನಿನಗೆ ಮಕ್ಕಳು ಆಗಲು ಬಿಡುವುದಿಲ್ಲ ಒಂದು ವರ್ಷವಾದ ಮೇಲೆ ನಿನಗೆ ಮಕ್ಕಳಾಗುತ್ತಿಲ್ಲ ಅಂತ ಬಿಟ್ಟು ಕೊಡುತ್ತೇನೆಂದು ಹೇಳುತ್ತಿರುತ್ತಾನೆ, ಭಾವ ಶಿವಾಜಿ ಇವನು ನೀನು ಯಾರ ಬಳಿ ಹೋದರು ನಮಗೆ ಏನು ಮಾಡಿಕೊಳ್ಳಲು ಆಗುವುದಿಲ್ಲ ಅಂತ ಹೇಳುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 23-12-2019 ರಂದು ಫಿರ್ಯಾದಿಯು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಅತ್ತೆ ಬೈದಿದ್ದು, ಆಗ ಭಾವ ಬಂದವನೇ ಕಟ್ಟಿಗೆ ತೆಗೆದುಕೊಂಡು ತೊಡೆಯ ಮೇಲೆ ಹೊಡೆದಿರುತ್ತಾನೆ, ನಂತರ ಬಡಿಗೆ ಮುರಿದ ಮೇಲೆ ಕಬ್ಬಿಣದ ಪೈಪ ತೆಗೆದುಕೊಂಡು ಸೊಂಟದಲ್ಲಿ ಹೊಡೆದಿರುತ್ತಾನೆ, ನಂತರ ಗಂಡನಿಗೆ ಕರೆ ಮಾಡಿದ್ದರಿಂದ ಗಂಡ ಬಂದವನೇ ಬಡಿಗೆಯಿಂದ ಎಡಗಾಲಿನ ಮೇಲೆ ಹೊಡೆದಿರುತ್ತಾನೆ, ನಂತರ ಉಮಾ ಇವಳು ಬಂದು ಕೂದಲು ಹಿಡಿದು ಹೊಡೆದಿರುತ್ತಾಳೆ, ನಂತರ ನೆಗೆಣಿ ಬಂದು ಇವಳನ್ನು ಹೊಡೆದುಹಾಕಿ ನಾನು ನಿಮಗೆ ನೋಡಿಕೊಳ್ಳುತ್ತೇನೆ ಅಂತ ಹೇಳಿರುತ್ತಾಳೆ, ಆ ಸಮಯದಲ್ಲಿ ಫಿರ್ಯಾದಿಯ ಚಿಕ್ಕಮ್ಮ ಬಂದು ಬಿಡಿಸಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 219/2019, ಕಲಂ. ಮಹಿಳೆ ಕಾಣೆ :-
ದಿನಾಂಕ 22-12-2019 ರಂದು ಫಿರ್ಯಾದಿ ಅಶೋಕ ತಂದೆ ಪಾಪಯ್ಯಾ ಕಾಸಲೆ ಸಾ: ಜನತಾ ಕಾಲೋನಿ, ಭಾಲ್ಕಿ ರವರ ಮಗಳಾದ ಆರತಿ ತಂದೆ ಅಶೋಕ ಕಾಸಲೆ ವ: 19 ರ್ಷ, ಸಾ: ಜನತಾ ಕಾಲೋನಿ ಭಾಲ್ಕಿ ಇವಳು ಪುಣ್ಯಾಶ್ರಮ ಮಠಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-12-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: