ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-12-2019
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ.
184/2019, ಕಲಂ. 302 ಐಪಿಸಿ
:-
ದಿನಾಂಕ 25-12-2019 ರಂದು 0800 ಗಂಟೆಯ ಸುಮಾರಿಗೆ ಫಿರ್ಯಾದಿ ಇಬ್ರಾಹಿಂ ಶೇಖ ತಂದೆ ಅಲಿಮೋದ್ದಿನ ಶೇಖ, ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಆಶ್ರಯ ಕಾಲೋನಿ ಹುಮನಾಬಾದ, ರವರ ಮಗನಾದ ಜಾಸೀಮ ಇತನು ಆಡು ಕಟ್ಟಲು ಹೋದಾಗ ಯಾರೋ ಯಾವುದೋ ಉದ್ದೇಶದಿಂದ ಓಣಿಯ ಹಾಳು ಬಿದ್ದ ಸರಕಾರಿ ಮನೆಯಲ್ಲಿ ಸಿಮೆಂಟ ಶೀಟಗಳ ಕೆಳಗೆ ಹಾಕಿದ ಒಂದು ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಬಿಗಿದು 0800 ಗಂಟೆಯಿಂದ 2000 ಗಂಟೆಯ ಮದ್ಯಾವಧಿಯಲ್ಲಿ ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಅಪರಾಧ ಸಂ. 193/2019, ಕಲಂ. 3 & 7 ಇ.ಸಿ ಕಾಯ್ದೆ ಮತ್ತು ಕಲಂ. 18(ಎ) ದಿ
ಕರ್ನಾಟಕಾ ಎಷೆನ್ಸಿಯಲ್ ಕಮಾಡಿಟಿಸ್ (ಪಿ.ಡಿ.ಎಸ್ ಸಿಸ್ಟ್) ಕಂಟ್ರೋಲ್ ಆರ್ಡರ್ 1992 :-
ದಿನಾಂಕ 25-12-2019
ರಂದು ಫಿರ್ಯಾದಿ ಪರಮೇಶ್ವರ ಬಚ್ಚಣ್ಣಾ ಆಹಾರ ನಿರೀಕ್ಷಕರು ತಹಸೀಲ ಕಚೇರಿ ಭಾಲ್ಕಿ ರವರಿಗೆ ಮಾನ್ಯ
ಜಿಲ್ಲಾಧಿಕಾರಿಗಳು (ಆಹಾರ ಇಲಾಖೆ) ಬೀದರ ರವರ ಕಛೇರಿಯಿಂದ ಮಾಹಿತಿ ಬಂದಿದ್ದೆನೆಂದರೆ ಸರಕಾರದಿಂದ
ಸಾರ್ವಜನಿಕರಿಗೆ ಹಾಗು ವಿವಿಧ ಇಲಾಖೆಗೆ ಸರಬರಾಜು ಆಗಿರುವ ಅಕ್ಕಿಯನ್ನು ಅಕ್ರಮವಾಗಿ ಬೇರೆ ಕಡೆಗೆ
ದಾಸ್ತಾನು ಮಾಡಿ ನಂತರ ಆ ಅಕ್ಕಿಯನ್ನು ಬೇರೆ ಚೀಲಗಳಲ್ಲಿ ಹಾಕಿ ಕಾಳಸಂತೆಯಲ್ಲಿ ಮಾರಾಟ ಮಾಡುವ
ಕುರಿತು ಲಾರಿ ನಂ. ಎಮಹೆಚ-26/ಬಿಇ-7551 ನೇದರಲ್ಲಿ ತುಂಬಿಕೊಂಡು ಬೀದರ ಕಡೆಯಿಂದ ಉದಗೀರ ಕಡೆಗೆ
ಹೊಗುತ್ತಿದ್ದಾರೆ ಅಂತ ಖಚಿತ ಬಾತ್ಮಿ ತಿಳಿಸಿದರ ಮೇರೆಗೆ ಫಿರ್ಯಾದಿಯು ತನ್ನ ಜೊತೆಯಲ್ಲಿ ಮೀಲನ
ಕುಮಾರ ಆಹಾರ ಶಿರಸ್ತೇದಾರರು ಭಾಲ್ಕಿ ರವರಿಗೆ ಕರೆದುಕೊಂಡು ಹಲಬರ್ಗಾ ಗ್ರಾಮದ ಸಿದ್ದೇಶ್ವರ
ಪೇಟ್ರೊಲ ಬಂಕ ಹತ್ತಿರ ಹೊಗಿ ನಿಂತು ಧನ್ನೂರ ಪೊಲೀಸ ಠಾಣೆಯ ಪಿ.ಎಸ.ಐ ರವರಿಗೆ ಕರೆ ಮುಖಾಂತರ
ಸಿಬ್ಬಂದಿಯವರಿಗೆ ಕಳುಹಿಸಲು ಕೊರಿಕೊಂಡ ಮೇರೆಗೆ ಧನ್ನೂರ ಪೊಲೀಸ ಠಾಣೆಯ ಸಿಬ್ಬಂದಿಯವರು ಬಂದ
ನಂತರ ಎಲ್ಲರೂ ಬೀದರ ಕಡೆಯಿಂದ ಬರುವ ಲಾರಿಯನ್ನು ಪರಿಶೀಲಿಸುತ್ತಿರುವಾಗ ಸೇವಾನಗರ ತಾಂಡಾ ಕಡೆಯಿಂದ
ಬಂದ ಲಾರಿಗೆ ನಿಲ್ಲಿಸಿ ಲಾರಿ ನಂಬರ ನೊಡಲು ಎಮಹೆಚ 26 ಬಿಇ 7551 ಇದ್ದು ನಂತರ ಲಾರಿ ಚಾಲಕನಿಗೆ
ಹೆಸರು ವಿಳಾಸವನ್ನು ವಿಚಾರಣೆ ಮಾಡಲು ಆತನು ತನ್ನ ಹೆಸರು ಕಾಳಿದಾಸ ತಂದೆ ನಾರಾಯಣ ಜಾಮುದಕರ ವಯ: 30
ವರ್ಷ, ಜಾತಿ: ಮಾಳಿ, ಸಾ: ಶಿರಢ, ತಾ: ಹದಗಾಂವ, ಜಿಲ್ಲಾ: ನಾಂದೇಡ ಅಂತ ತಿಳಿಸಿದ್ದು, ನಂತರ
ಅವನಿಗೆ ಲಾರಿಯಲ್ಲಿ ಯಾವ ಲೋಡ ಇದೆ ಅಂತ ವಿಚಾರಣೆ ಮಾಡಲು ಆತನು ಲಾರಿಯಲ್ಲಿ ಅಕ್ಕಿ ಚೀಲಗಳು
ಇರುತ್ತವೆ ಅಂತ ತಿಳಿಸಿದಾಗ ಅವನಿಗೆ ಅಕ್ಕಿ ಚೀಲಗಳ ಬಗ್ಗೆ ಕಾಗದ ಪತ್ರಗಳು ವಿಚಾರಣೆ ಮಾಡಲು ಆತನು
ಯಾವುದೆ ರೀತಿಯ ಕಾಗದ ಪತ್ರಗಳು ಇರುವುದಿಲ್ಲಾ, ತನ್ನ ಮಾಲೀಕನಾದ ಗೊವಿಂದ ತಂದೆ ರಾಮ ಸೆಟೆವಾಡಾ
ಇವರು ಬೀದರ ಕೊಳಾರ ಇಂಡಸ್ಟ್ರೀಯಲ್ ಎರಿಯಾದಿಂದ ಸರಕಾರದಿಂದ ಸಾರ್ವಜನಿಕರಿಗೆ ಹಾಗು ವಿವಿದ
ಇಲಾಖೆಗೆ ಸರಬರಾಜು ಮಾಡಿರುವ (ಪಿ.ಡಿ.ಎಸ) ಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ಕೊಳಾರ
ಇಂಡಸ್ಟ್ರೀಯಲದಲ್ಲಿ ದಾಸ್ತಾನು ಮಾಡಿದ್ದು ಅವುಗಳು ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ
ಮಾಡಲು ತೆಗೆದುಕೊಂಡು ಬರಲು ತಿಳಿಸಿರುವಂತೆ ನಾನು ನನ್ನ ಲಾರಿಯನ್ನು ಕೊಳಾರ ಇಂಡಸ್ಟ್ರೀಯಲದಲ್ಲಿ
ಹೊಗಿ ಮಾಲೀಕರು ತಿಳಿಸಿದ ಹಾಗೆ ಲೊಡ ಮಾಡಿಕೊಂಡು ಬಂದಿರುತ್ತೇನೆ ಅಂತ ತಿಳಿಸಿದರ ಮೇರೆಗೆ ಇಬ್ಬರು
ಪಂಚರನ್ನು ಬರಮಾಡಿಕೊಂಡು ಒಟ್ಟು 250 ಕ್ವಿಂಟಲ್ ಅಕ್ಕಿ ಅ.ಕಿ 7,06,250/- ರೂಪಾಯಿ ಬೇಲೆವುಳ್ಳದ್ದು
ಮತ್ತು ಲಾರಿ ನಂ. ಎಂ.ಹೆಚ್-26/ಬಿ.ಇ-7551 ನೇದವುಗಳನ್ನು ಜಪ್ತಿ ಪಂಚನಾಮೆಯ ಪ್ರಕಾರ ಜಪ್ತಿ ಮಾಡಿಕೊಂಡು,
ಆರೋಪಿತರಾದ 1) ಗೊವಿಂದ ತಂದೆ ರಾಮ ಸೆಟೆವಾಡಾ ಇವರು ಬೀದರ 2) ಕಾಳಿದಾಸ ತಂದೆ ನಾರಾಯಣ ಜಾಮುದಕರ
ವಯ: 30 ವರ್ಷ, ಜಾತಿ: ಮಾಳಿ, ಸಾ: ಶಿರಢ, ತಾ: ಹದಗಾಂವ, ಜಿಲ್ಲಾ: ನಾಂದೇಡ ಇವರಿಬ್ಬರ ವಿರುದ್ಧ
ದಿನಾಂಕ 26-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ.
48/2019, ಕಲಂ. 379
ಐಪಿಸಿ :-
25-12-2019 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ತಿಪ್ಪಣ್ಣಾ ತಂದೆ ಶಾಂತಕುಮಾರ ಕೆಳಗಿನದೊಡ್ಡಿ ವಯ: 26 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಯಾಕತಪುರ ರವರ 20 ಆಡುಗಳನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಸದರಿ ಆಡುಗಲ ಅ.ಕಿ ಒಟ್ಟು 90,000/- ರೂ. ಗಳು ಆಗುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-12-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಭಾಲ್ಕಿ
ನಗರ ಪೊಲೀಸ್ ಠಾಣೆ ಅಪರಾಧ ಸಂ. 223/2019, ಕಲಂ. 379 ಐಪಿಸಿ :-
ದಿನಾಂಕ
24-12-2019 ರಂದು 2200 ಗಂಟೆಯಿಂದ ದಿನಾಂಕ 25-12-2019 ರಂದು 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಶ್ರೀಪತಿ ಗೌರೆ ವಯ: 26 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬೀರದೇವ ಗಲ್ಲಿ, ಭಾಲ್ಕಿ ರವರು ತನ್ನ ಮನೆಯ ಮುಂದೆ ಕಟ್ಟಿದ ಆಕಳು ಅ.ಕಿ 30,000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment