ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-12-2019
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ.
51/2019, ಕಲಂ.
498(ಎ),
323, 504 ಜೊತೆ 34 ಐಪಿಸಿ :-
ಫಿರ್ಯಾದಿ ಮೇರಿ ಗಂಡ ಜಾಕೊಬ ವಯ: 35 ವರ್ಷ, ಜಾತಿ: ಕ್ರಿಶ್ಚನ್, ಸಾ: ಸಿಕೆನಪುರ ಗ್ರಾಮ, ಸದ್ಯ: ಎಡನ ಕಾಲೋನಿ ಬೀದರ ರವರ ಮದುವೆಯು ಸುಮಾರು 10 ವರ್ಷಗಳ ಹಿಂದೆ ಸಿಕೆನಪುರ ಗ್ರಾಮದ ಜಾಕೊಬ್ ಇತನ ಜೊತೆಯಲ್ಲಿ ಕ್ರಿಶ್ಚನ್ ಧರ್ಮದ ಪ್ರಕಾರ ಆಗಿರುತ್ತದೆ, ಫಿರ್ಯಾದಿಗೆ ಈಗಾಗಲೆ ಮೆರ್ಲಿನ್ ವಯ 8 ವರ್ಷ ಮತ್ತು ಜಾಕ್ಲಿನ್ ವಯ 4 ವರ್ಷ ಹೀಗೆ ಎರಡು ಜನ ಹೆಣ್ಣು ಮಕ್ಕಳು ಇರುತ್ತಾರೆ, ಫಿರ್ಯಾದಿಯು ತನ್ನ ಗಂಡನ ಜೊತೆಯಲ್ಲಿ ಪ್ರತಾಪ ನಗರದಲ್ಲಿ ತಂದೆಯವರು ಕೊಟ್ಟ ಮನೆಯಲ್ಲಿ ವಾಸವಾಗಿರುತ್ತಾರೆ, ಹೀಗಿರುವಾಗ ಆರೋಪಿತರಾದ ಗಂಡ ಜಾಕೊಬ್ ಮತ್ತು ಮಾವ ದೇವೆಂದ್ರ, ಅತ್ತೆ ಚಂದ್ರಮ್ಮಾ ಇವರೆಲ್ಲರೂ ಕೂಡಿ ನಿಮ್ಮ ತಂದೆ ಮನೆ ಕೊಟ್ಟಿರುತ್ತಾನೆ ಆದರೆ ಹೆಸರಿಗೆ ಮಾಡಿ ಕೊಟ್ಟಿಲ್ಲ ಅಂತ ಅವಾಚ್ಯವಾಗಿ ಬೈದಿರುತ್ತಾರೆ ಮತ್ತು ನೀನು ಯಾವನ ಜೊತೆಯಾದರೂ ಓಡಿ ಹೋಗು ನಿಮ್ಮ ತಂದೆ ತಾಯಿಯವರು ನಮ್ಮ ಹೆಸರಿನ ಮೇಲೆ ಮನೆ ಮಾಡಿದರೆ ಮಾತ್ರ ನಿನಗೆ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಅಂತ ಜಗಳ ಮಾಡುತ್ತಾ ನೀನು ಮನೆಯಿಂದ ಹೊರಗೆ ಹೋಗು ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 07-11-2019 ರಂದು ಸದರಿ ಆರೊಪಿತರೆಲ್ಲರೂ ಕೂಡಿ ಫಿರ್ಯಾದಿಯ ಜೊತೆಯಲ್ಲಿ ಜಗಳ ಮಾಡಿ ಮನೆ ನಮ್ಮ ಹೆಸರಿನ ಮೇಲೆ ಮಾಡು ಇಲ್ಲವಾದರೆ ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳೆದು ಜಗಳ ಮಾಡುವಾಗ ಜಗಳದ ಶಬ್ದವನ್ನು ಕೇಳಿ ದಾರಿಯಿಂದ ಹೋಗುತ್ತಿದ್ದ ಪರಿಚಯ ಇರುವ ಗಿರಿಶ ತಂದೆ ವೀರಸಿಂಗ್ ಮತ್ತು ಅಶೋಕ ತಂದೆ ಮಾಣಿಕಪ್ಪಾ ಮತ್ತು ಬಾಡಿಗೆಯಿಂದ ಇದ್ದ ನರಸಮ್ಮಾ ಗಂಡ ಸಿದ್ರಾಮ ರವರು ಬಂದು ಗಂಡ ಹಾಗು ಗಂಡನ ಮನೆಯವರಿಗೆ ಸಮಜಾಯಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 111/2019, ಕಲಂ. 379 ಐಪಿಸಿ :-
ಫಿರ್ಯಾದಿ ರೋಹಿದಾಸ ತಂದೆ ಶಿವಪ್ಪಾ ಕನೇರಿ ವಯ: 46 ವರ್ಷ, ಜಾತಿ: ಸಮಗಾರ, ಸಾ: ಪೊಲೀಸ್ ವಸತಿ ಗೃಹ ಮಂಗಲಪೇಟ ಬೀದರ ರವರು ತನ್ನ ಹಿರೊ ಹೊಂಡಾ ಸ್ಪಲೆಂಡರ ಪ್ಲಸ್ ದ್ವಿಚಕ್ರ ವಾಹನ ನಂ. ಕೆಎ-28/ಯು-8027, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.10.ಇ.ಜೆ.9.ಹೆಚ್.ಜೆ.28526, ಇಂಜಿನ್ ನಂ. ಹೆಚ್.ಎ.10.ಇ.ಎ.9.ಹೆಚ್.ಜೆ.79986, ಅ.ಕಿ 20,000/- ರೂ. ನೇದರ
ಮೇಲೆ ದಿನಾಂಕ 28-11-2019 ರಂದು 0700 ಗಂಟೆಯ ಸುಮಾರಿಗೆ ಬೀದರ ನಗರದ ರೈಲ್ವೆ ಸ್ಟೇಷನಕ್ಕೆ ಹೋಗಿ ರೈಲ್ವೆ ಸ್ಟೇಷನ್ ಮುಂದೆ ಇರುವ ವಾಹನಗಳ ಪಾರ್ಕಿಂಗ ಸ್ಥಳದಲ್ಲಿ ಸದರಿ ವಾಹನ ನಿಲ್ಲಿಸಿ ಹೈದ್ರಾಬಾದಕ್ಕೆ ಹೋಗಿ ಮರಳಿ ಹೈದ್ರಾಬಾದದಿಂದ ದಿನಾಂಕ 02-12-2019 ರಂದು 0800 ಗಂಟೆಯ ಸುಮಾರಿಗೆ ಬೀದರಕ್ಕೆ ಬಂದು ತಾನು ನಿಲ್ಲಿಸಿದ ಸ್ಥಳದಲ್ಲಿ ಹೋಗಿ ನೋಡಲು ಸದರಿ ವಾಹನ ಇರಲಿಲ್ಲ, ಸದರಿ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲಾ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 122/2019, ಕಲಂ. 457, 380 ಐಪಿಸಿ :-
ದಿನಾಂಕ 26-12-2019 ರಂದು 2200 ಗಂಟೆಯಿಂದ 2230 ಗಂಟೆಯ ಮದ್ಯಾವಧಿಯಲ್ಲಿ ಫಿರ್ಯಾದಿ ವಿವೇಕಾನಂದ ತಂದೆ ಶಂಕ್ರೆಪ್ಫಾ ರಾಯಗೊಂಡ ವಯ:
31 ವರ್ಷ, ಜಾತಿ: ಎಸ್ಟಿ ಗೊಂಡ, ಸಾ: ಮನ್ನಾಎಖೇಳ್ಳಿ, ತಾ: ಹುಮನಾಬಾದ ರವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಅಪರಿಚತ ಕಳ್ಳರು ಫಿರ್ಯಾದಿಯವರ ಮನೆಗೆ ಬಂದು ಮನೆಯ ಬಾಗಿಲು ಮುರಿದು ದೇವರ ಮನೆಯಲ್ಲಿನ ಅಲಾಮರಿಯ ಕೀಲಿ ಮುರಿದ್ದು ಅದರಲ್ಲಿನ 1) 3 ತೊಲೆ 5 ಗ್ರಾಂ ನ ಒಂದು ಚೈನ್ ಸರ,
2) 4 ತೊಲೆಯ ಪಾಟ್ಲಿ,
3) 3 ತೊಲೆ 5 ಗ್ರಾಂ ನ ನಾನ್, 4) 2 ತೊಲೆಯ ಉಂಗುರ ಹೋಗೆ ಹೀಗೆ ಒಟ್ಟು 13 ತೊಲೆ ಬಂಗಾರ (ಅವುಗಳ ಅ.ಕಿ 3,90,000/-) ರೂಪಾಯಿ ಹಾಗೂ ನಗದು ಹಣ
5000/- ರೂಪಾಯಿಗಳು ಹೀಗೆ ಒಟ್ಟು 3,95,000/- ರೂ ಮತ್ತು ಬಂಗಾರ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ
ನಗರ ಪೊಲೀಸ್ ಠಾಣೆ ಅಪರಾಧ ಸಂ. 137/2019, ಕಲಂ. 392 ಐಪಿಸಿ :-
ದಿನಾಂಕ 25-12-2019 ರಂದು ಫಿರ್ಯಾದಿ ಮಹೇಶ ತಂದೆ ಮೋಹನರಾವ ಬಿರಾದಾರ ವಯ: 38 ವರ್ಷ, ಜಾತಿ: ಮರಾಠಾ, ಸಾ: ಹಂಚನಾಳ, ತಾ: ದೇವಣಿ, ಜಿಲ್ಲಾ: ಲಾತೂರ (ಎಮ್.ಎಸ್) ರವರು ತನ್ನ ವ್ಯಾಪಾರ ಕುರಿತು ಉದಗೀರದಿಂದ ಹೈದ್ರಾಬಾದಕ್ಕೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ಅಲ್ಲಿಂದ ಬಸವಕಲ್ಯಾಣದಲ್ಲಿ ಖಾಸಗಿ ಕೆಲಸ ಕುರಿತು ದಿನಾಂಕ 26-12-2019 ರಂದು 2330 ಗಂಟೆಗೆ ಬಸವಕಲ್ಯಾಣಕ್ಕೆ ಬಂದು ಬಸ್ ನಿಲ್ದಾಣದ ಹತ್ತಿರ ಎದುರುಗಡೆ ತನ್ನ ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ಕಾರಿನಿಂದ ಕೆಳಗೆ ಇಳಿದು ಮೂತ್ರ ವಿಸರ್ಜನೆ ಮಾಡಿ ಕಾರಿನ ಕಡೆಗೆ ಬರುವಾಗ ಒಬ್ಬ ವ್ಯಕ್ತಿಯು ಫಿರ್ಯಾದಿಯ ಹತ್ತಿರ ಬಂದು ‘ಕಿದರ ಜಾನೆಕಾ ಹೈ’ ಅಂತಾ ಕೇಳಿದಾಗ ಫಿರ್ಯಾದಿಯು ಆತನಿಗೆ ಪುನಾಕ್ಕೆ ಹೋಗುವುದಿದೆ ಅಂತ ಅಂದಾಗ ಅವನು ಟೈಮ್ ಎಷ್ಟಾಗಿದೆ ಅಂತ ಕೇಳಿ ಫಿರ್ಯಾದಿಯ ಹತ್ತಿರ ಬಂದು ಫಿರ್ಯಾದಿಯ ಅಂಗಿ ಹಿಡಿದು ಝಿಂಝಾ ಮುಷ್ಠಿ ಮಾಡಿ ಕೆಳಗೆ ಕೆಡುವಿ ಮೇಲೆ ಕುಳಿತು ಅಂಗಿಯ ಕಿಸೆಯಲ್ಲಿದ್ದ ಪಾಕೇಟ್ ಕಸಿದುಕೊಂಡನು ಹಾಗೂ ಕೈಯಲ್ಲಿದ್ದ ಬಂಗಾರದ ಉಂಗರು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಫಿರ್ಯಾದಿಯು ಚೀರಲು ಪ್ರಾರಂಭಿಸಿದಾಗ ಅಲ್ಲೆ ಅಕ್ಕ-ಪಕ್ಕದ ಕೆಲವು ಜನರು ಬಂದು ಅದರಲ್ಲಿದ್ದ ಯಾರೋ ಒಬ್ಬರು ‘ಏ ರಫೀಕ್ಯಾ ಛೋಡ್ ಉಸಕೊ ಕ್ಯೂಂ ಪಕಡೆ’ ಅಂತ ಅಂದರು, ಆಗ ಅವನು ಫಿರ್ಯಾದಿಯವರ ಪಾಕೇಟ್ದಲ್ಲಿದ್ದ ಆಧಾರ ಕಾರ್ಡ, ಡ್ರೈವಿಂಗ್ ಲೈಸೆನ್ಸ್ ಹಾಗೂ 2,200/- ರೂಪಾಯಿ ದೋಚಿಕೊಂಡು ಓಡಿ ಹೋಗಿರುತ್ತಾನೆ, ಆ ವ್ಯಕ್ತಿಯ ಬಲಗೈ ಮುಷ್ಠಿಯ ಮೇಲೆ ಸುಟ್ಟ ಗಾಯ ಮತ್ತು ಬಲಗಣ್ಣಿನ Pೆಳಗೆ ತರಚಿದ ಗಾಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂ. 98/2019, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ
27-12-2019 ರಂದು ಫಿರ್ಯಾದಿ ವಿಜಯ ತಂದೆ ಮಾಧವ ನಾಗದೆ ವಯ: 20 ವರ್ಷ, ಜಾತಿ: ಮರಾಠಾ, ಸಾ: ಘೋಟಾಳ ಗ್ರಾಮ ರವರು ತಮ್ಮ ಹಿರೋ ಸ್ಪ್ಲೇಂಡರ್ ಮೋಟಾರ ಸೈಕಲ ನಂ. ಕೆಎ-56/ಇ-3799 ನೇದರ ಮೇಲೆ ಬಸವಕಲ್ಯಾಣಕ್ಕೆ ಬಂದು ತೆಂಗಿನ ಕಾಯಿ ಖರೀದಿ ಮಾಡಿಕೊಂಡು ಮರಳಿ ಗ್ರಾಮಕ್ಕೆ ಹೋಗುವಾಗ ಬಸವಕಲ್ಯಾಣ ಪಟ್ಟಣದ ಗಾಂಧಿಚೌಕ ಹತ್ತಿರ ಮೋಟಾರ ಸೈಕಲ ಮೇಲೆ ಬರುವಾಗ ತಮ್ಮೂರ ಜ್ಞಾನೇಶ್ವರ ತಂದೆ ಅಶೋಕ ಗೌವಳಿ ಇತನು ನಿಂತಿದ್ದು ಫಿರ್ಯಾದಿಗೆ ನೋಡಿ ಕೈ ಮಾಡಿದಾಗ ಫಿರ್ಯಾದಿಯು ಮೋಟಾರ ಸೈಕಲ ನಿಲ್ಲಿಸಿ ಅತನಿಗೆ ಮೋಟಾರ ಸೈಕಲ ಮೇಲೆ ಕುಡಿಸಿಕೊಂಡು ಬಸವಕಲ್ಯಾಣ ಪಟ್ಟಣದಿಂದ ಹೊರಟು ಚೌಕಿವಾಡಿ ಕ್ರಾಸ ದಾಟಿದಾಗ ಮೊರಖಂಡಿ-ರಾಮತೀರ್ಥ(ಕೆ) ರಸ್ತೆಯ ಮೇಲೆ ಫಿರ್ಯಾದಿಯು ಮೂತ್ರ ವಿಸರ್ಜನೆಗೆಂದು ರೋಡಿನ ಪಕ್ಕದಲ್ಲಿ ತನ್ನ ಮೋಟಾರ ಸೈಕಲ ನಿಲ್ಲಿಸಿದಾಗ ಹಿಂದೆ ಕುಳಿತ ಜ್ಞಾನೇಶ್ವರ ಇತನು ಕೂಡ ಮೋಟಾರ ಸೈಕಲ ಮೇಲಿಂದ ಕೆಳಗೆ ಇಳಿದು ನಿಂತಾಗ ಮೋರಖಂಡಿ ಗ್ರಾಮದ ಕಡೆಯಿಂದ ಮಹಿಂದ್ರಾ ಮ್ಯಾಕ್ಸಿಮೊ ವಾಹನ ಸಂ. ಕೆಎ-33/ಎಮ್-3052 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಮೇಲೆ ನಿಂತ ಜ್ಞಾನೇಶ್ವರನಿಗೆ ಡಿಕ್ಕಿ ಮಾಡಿ ಆತನಿಗೆ ವಾಹನದಲ್ಲಿ ಸಿಲುಕಿಕೊಂಡು ಹೋಗುವಾಗ ಫಿರ್ಯಾದಿಯು ನೋಡಿ ಚೀರಾಡಿ ವಾಹನ ನಿಲ್ಲಿಸಲು ಕೂಗಾಡಿದರು ವಾಹನ ನಿಲ್ಲಿಸದೇ ಇದ್ದಾಗ ಫಿರ್ಯಾದಿಯು ವಾಹನದ ಬೆನ್ನು ಹತ್ತಿದಾಗ ಆರೋಪಿಯು ತನ್ನ ವಾಹನವನ್ನು ಡಿಕ್ಕಿ ಮಾಡಿದ ಸ್ಥಳದಿಂದ ಅಂದರೆ ಸುಮಾರು ದೂರದವರೆಗೆ ಹೋಗಿ ನಿಲ್ಲಿಸಿ ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಜ್ಞಾನೇಶ್ವರ ಇತನಿಗೆ ಎರಡು ಕಾಲುಗಳಿಗೆ ಭಾರಿ ರಕ್ತಗಾಯ ಮತು್ತ ಭಾರಿ ಗುಪ್ತಗಾಯ, ಬಲಗಾಲ ತೊಡಗೆ ಹರಿದ ಭಾರಿ ರಕ್ತಗಾಯ, ಬಲ ಮುಖಕ್ಕೆ ತರಚಿದ ರಕ್ತಗಾಯ, ಬಲಗಡೆ ಎದೆಗೆ ತರಚಿದ ರಕ್ತಗಾಯ, ಬೆನ್ನಿನ ಹಿಂದೆ ತರಚಿದ ರಕ್ತಗಾಯ ಹಾಗೂ ಮೈತುಂಬಾ ಗಾಯಗಳಾಗಿದ್ದರಿಂದ ಆತನಿಗೆ 108 ಅಂಬುಲೇನ್ಸನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರ ಸಲಹೆ ಮಏರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಉಮರ್ಗಾದ ವಿಶ್ವೇಕರ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯಾಧಿಕಾರಿಗಳು ಚೆಕ್ ಮಾಡಿ ಜ್ಞಾನೇಶ್ವರ ಇತನು ಮೃತ ಪಟ್ಟಿರುತ್ತಾನ ಅಂತಾ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ.
65/2019, ಕಲಂ. 447, 323, 504, 506 ಜೊತೆ 34 ಐಪಿಸಿ ಮತ್ತು 3(1)(0ಆರ್), 3(1)(ಎಸ್), 3(2)(ವಿಎ) ಎಸ್.ಸಿ/ಎಸ್.ಟಿ ಕಾಯ್ದೆ 1989 :-
ದಿನಾಂಕ 27-12-2019 ರಂದು
ಫಿರ್ಯಾದಿ ನಾರಾಯಣ ತಂದೆ ಎಂ.ಜಿ. ರಾಠೋಡ ಸಾ: ಮಹಾಡೊಣಗಾಂವ ತಾಂಡಾ, ಸದ್ಯ: ಬೆಳಕುಣಿ(ಸಿ) ಗ್ರಾಮ ರವರು ಬೆಳಕುಣಿ(ಚೌ) ಗ್ರಾಮದ ಸರ್ವೆ ನಂ. 73 ನೇದನ್ನು ದಿನಾಂಕ 29-08-2017 ರಂದು
ಅಜಿಮ್ ಮಲಿಕ್ ತಂದೆ ದಾವೂದ್ ಮಲಿಕ್ ದೇಶಮುಖ ಇವರ ಹತ್ತಿರ ಖರೀದಿ ಮಾಡಿದ್ದು, ಫಿರ್ಯಾದಿಯು ಖರೀದಿ ಮಾಡಿದ ಜಮೀನಿನ ಮಾಲಿಕರಿಗೆ ಈ ಜಾಗವನ್ನು ನನ್ನ ಹೆಸರಿಗೆ ನೊಂದಣಿ
ಮಾಡಿಕೊಡಿ ಎಂದು ಪದೆ-ಪದೆ ಕೇಳಿದ್ದು, ಅಷ್ಟರಲ್ಲಿ ಸದರಿ ಅಜಿಮ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು ನಂತರ ಅವರ ಆರೋಗ್ಯದಲ್ಲಿ ಏರು-ಪೇರು ಆಗಿ ಅವರು
ಸುಮಾರು 1 ವರ್ಷಗಳ ಹಿಂದೆ ಮರಣ ಹೊಂದಿರುತ್ತಾರೆ, ಇವರ
ಹೆಸರಿಗೆ ಇದ್ದ ಭೂಮಿಯನ್ನು ಅವರ
ಹೆಂಡತಿಯ ಹೆಸರಿಗೆ ಜಮಿನು ವರ್ಗಾವಣೆ ಮಾಡಿಕೊಡಲು ತಡವಾಗಿರುತ್ತದೆ, ಅದರಲ್ಲಿ ಫಿರ್ಯಾದಿಯು ಖರೀದಿ ಮಾಡಿದ ಜಮಿನು ಒಟ್ಟು 9 ಎಕರೆ ಜಮೀನು ಫಿರ್ಯಾದಿಯವರ ಹೆಸರಿಗೆ ಮಾಡಬೇಕಾಗಿದ್ದು ಬೆಳಕುಣಿ(ಚೌ) ಗ್ರಾಮದವರಾದ ಆರೋಪಿ ನಯೂಮ್ ಪಾಶಾ
ತಂದೆ ಮೌಲಿ ಇವರು ಫಿರ್ಯಾದಿಗೆ ಗೋತ್ತಿಲ್ಲದೆ ಅವರ
ಹೆಸರಿಗೆ ರಜಿಸ್ಟ್ರಿ ಇಲ್ಲದೆ ನಯೂಮ್ ಪಾಶಾ ಇವರ ಹೆಸರಿಗೆ ವರ್ಗಾವಣೆಯಾಗಿರುತ್ತದೆ, ಫಿರ್ಯಾದಿಯು ಇದಕ್ಕೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದು ಇರುತ್ತದೆ, ಆದರೆ ದಿನಾಂಕ 16-12-2019 ರಂದು
ಫಿರ್ಯಾದಿಯ ಜಾಗದಲ್ಲಿ ಪಾನಡಬ್ಬಾ ಹಾಕುತ್ತಿದ್ದು ಅದನ್ನು ನಮೂಮ ಪಾಶಾ ಮತ್ತು ಅಖಿಲ ಮಲಿಕ್ ತಂದೆ ಮೋಯಿನ್ ದೇಶಮುಖ ಹಾಗು ಮಗದೂಮ್ ತಂದೆ ತಯಾಬ್ ಅಲಿ ಸಾ: ಬೆಳಕುಣಿ(ಚೌ) ಇವರನ್ನು ಕೇಳಲು ಹೋದಾಗ ಸದರಿರವರು ಫಿರ್ಯಾದಿಗೆ ಈ ಜಮೀನು ನಮ್ಮ ಹೆಸರಿಗೆ ಇರುತ್ತದೆ, ನೀನು
ಕಟ್ಟಿದ ಕಟ್ಟಡವನ್ನು ಕೆಡವಿ ಬಿಡುತ್ತೇವೆ ನಿನಗೆ ಜೀವಂತವಾಗಿ ಬಿಡುವುದಿಲ್ಲಾ ಹಾಗೂ ಫಿರ್ಯಾದಿಯವರ ಮಕ್ಕಳ ಮೇಲೆ ಹಲ್ಲೆ ಮಾಡಿ ನೀನು
ಲಂಬಾಣಿ ಜಾತಿಗೆ ಸೇರಿದವನು ನೀನು ತಾಂಡದಲ್ಲೆ ಇರಬೇಕು ಊರಿನಲ್ಲಿ ಬರಬಾರದು ಅಂತ ಅವಾಚ್ಚ ಶಬ್ದಗಳಿಂದ ಬೈದು ನಿನ್ನನು ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment