Police Bhavan Kalaburagi

Police Bhavan Kalaburagi

Sunday, December 29, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ:28/12/2019 ರಂದು ನರೋನಾ ಠಾಣಾ ವ್ಯಾಪ್ತಿಯ . ಕಡಗಂಚಿ ತಾಂಡಾದಲ್ಲಿ ದುಬೇಶ ತಂದೆ ರೇವು ಚೌವ್ಹಾಣ ಈತನು ತನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದುಬೇಶ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಉದಂಡಪ್ಪಾ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಠಾಣೆಯಿಂದ ಹೊರಟು ದುಬೇಶ ಈತನ ಕಿರಾಣಿ ಅಂಗಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಂಗಡಿಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ದುಬೇಶ ತಂದೆ ರೇವು ಚೌವ್ಹಾಣ,  ಸಾ:ಕಡಗಂಚಿ ತಾಂಡಾ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 10,050/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ:26/12/2019 ರಂದು ನರೋಣಾ ಠಾಣಾ ವ್ಯಾಪ್ತಿಯ ಅಂಬಲಗಾ ಗ್ರಾಮದಲ್ಲಿರುವ ಕಲ್ಮೇಶ್ವರ ದೇವಸ್ಥಾನದ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿ.ಪಿ.ಐ ಸಾಹೇಬರು ಆಳಂದರವರ ಮಾರ್ಗದರ್ಶನದಲ್ಲಿಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯಿಂದ ಹೊರಟು ಅಂಬಲಗಾ ಗ್ರಾಮದಲ್ಲಿರುವ ಕಲ್ಮೇಶ್ವರ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕಲ್ಮೇಶ್ವರ ದೇವಸ್ಥಾನದ ಕಟ್ಟೆಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಸಿದ್ದಾರೂಢ ತಂದೆ ಅಂಬರಪ್ಪಾ ಒಣಕೆ, ಸಾ:ಅಂಬಲಗಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 11010/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು  ನರೋಣಾ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 26/12/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ  ಬಸವನಸಂಗೋಳಗಿ ಗ್ರಾಮ ಬಸವಣ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಬಸವನಸಂಗೋಳಗಿ ಗ್ರಾಮದ ಬಸವಣ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 09 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಹಣಮಂತರಾಯ ತಂದೆ ಸಬಣ್ಣ ರಾಮಶೆಟ್ಟಿ, ಸಾ:ಬಸವನಸಂಗೋಳಗಿ ಗ್ರಾಮ, 2)ಶಿವರಾಜ ತಂದ ಮಾಣಿಕರಾವ ಪಾಟೀಲ್, ಸಾ:ಗುಂಜಬಬಲಾದ 3)ಶರಣಬಸಪ್ಪಾ ತಂದೆ ಆನಂದರಾವ ಬೋದನ, 4)ಮಲ್ಲಿನಾಥ ತಂದೆ ಗುಂಡಪ್ಪಾ ಹಂಡಗೆ, 5)ಪ್ರವೀಣ ತಂದೆ ಅಂಬಾರಾಯ ಬಿರಾದಾರ, 6)ಪೀರಶೆಟ್ಟಿ ತಂದೆ ಅಪ್ಪಾರಾಯ ರಾಮಶೆಟ್ಟಿ, 7)ಪೀರಪ್ಪ ತಂದೆ ವಿಠಲ್ ಐಪ್ಪಗೋಳ, 8)ಸೋಮಶೇಖರ ತಂದೆ ಚಂದ್ರಕಾಂತ ಬಿರಾದಾರ,  9)ಬಸವರಾಜ ತಂದೆ ವಿಠಲ್ ಹರಳಯ್ಯ ಸಾ: ಎಲ್ಲರು ಬಸವನಸಂಗೋಳಗಿ ಗ್ರಾಮ, ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ಒಟ್ಟು ನಗದು ಹಣ 4400/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ನರೋಣಾ ಠಾಣೆ : ದಿನಾಂಕ 26/12/2019 ರಂದು ನರೋಣಾ ಠಾಣಾ ವ್ಯಾಪ್ತಿಯ  ಲಾಡಚಿಂಚೋಳಿ ಗ್ರಾಮ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಲಾಡಚಿಂಚೋಳಿ ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 10 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಜಗದೀಶ ತಂದೆ ಶಾಂತಮಲ್ಲಪ್ಪಾ ಹಾವಣಿ 2)ಸಿದ್ದು ತಂದೆ ತುಳಜಪ್ಪಾ ಹೆಬಳಿ 3)ಶಾಂತಪ್ಪಾ ತಂದೆ ಸಿದ್ರಾಮಪ್ಪಾ ಕಟ್ಟಿಮನಿ 4)ಪಂಡಿತ ತಂದೆ ಬಸವರಾಜ ಕೌಲಗಿ, 5)ಬಸವರಾಜ ತಂದೆ ಮಲಕಪ್ಪಾ ಕೋರೆ, 6)ಯಲ್ಲಾಲಿಂಗ ತಂದೆ ಬೀರಣ್ಣಾ ಬಾಳಿ, 7) ಮಾಳಪ್ಪಾ ತಂದೆ ಶಿವಶರಣಪ್ಪಾ ಪೂಜಾರಿ, 8) ಮಹೇಶ ತಂದೆ ಚಂದ್ರಶ್ಯಾ ಧಾನಕ, 9) ಶಾಂತಪ್ಪಾ ತಂದೆ ಧರ್ಮಣ್ಣಾ ಪೂಜಾರಿ, 10)ಶಿವಯ್ಯ ತಂದೆ ವೀರಭದ್ರಯ್ಯ ಮಠಪತಿ, ಸಾ: ಎಲ್ಲರು ಲಾಡಚಿಂಚೋಳಿ ಗ್ರಾಮ, ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 10,070/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು  ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಸೀಮಾ ಗಂಡ ಶಿವಶರಣ ರಾಮನೂರ ಸಾ:ಅರಳಗುಂಡಗಿ ತಾ:ಯಡ್ರಾಮಿ ಹಾ|||| ಮಡಿಕೇಶ್ವರ ತಾ:ಮುದ್ದೆಬಿಹಾಳ ರವರನ್ನು ಗುರುಹಿರಿಯ ಸಮಕ್ಷಮ ಅರಳಗುಂಡಗಿ ಗ್ರಾಮದ ಶಿವಶರಣ ರಾಮನೂರ ರವರಜೋತೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ನನ್ನ ತಂದೆ-ತಾಯಿಯವರು ನನ್ನ ಯೋಗಕ್ಷೇಮದ ಸಲುವಾಗಿ ನನಗೆ 4 ತೋಲಿ ಬಂಗಾರ ಕೊಟ್ಟಿದ್ದರು ನನ್ನ ಗಂಡನು ಐಟಿಬಿಪಿ ಪೊಲೀಸ ಇದ್ದು ಸದ್ಯೆಕ್ಕೆ ಅವರು ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಮದುವೆಯಾದ 3 ತಿಂಗಳ ತನಕ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ಚನ್ನಾಗಿ ನೋಡಿಕೊಂಡಿರುತ್ತಾರೆ, ಇದಾದ ನಂತರ ನನ್ನ ಗಂಡನಾದ ಶಿವಶರಣಪ್ಪ ಮತ್ತು ನನ್ನ ಅತ್ತೆಯಾದ ಕಸ್ತೂರಿಬಾಯಿ ರಾಮನೂರ ಭಾವನಾದ ಯಮನೂರ ನಾದನಿಯರಾದ ಬಸಮ್ಮ ಗಂಡ ನಿಂಗಪ್ಪ ಶಿವಣಗಿ, ದೇವಮ್ಮ ಗಂಡ ರಮೇಶ ಜಂಬಗಿ, ಎಲ್ಲರೂ ಕೂಡಿ ನೀನು ತವರು ಮನೆಯಿಂದ ವರದಕ್ಷಿಣೆ ತಗೆದುಕೊಂಡು ಬಂದಿಲ್ಲಾ ಅಂತ, ನನ್ನ ತಂದೆ ತಾಯಿ ಮದುವೆಯ ಕಾಲಕ್ಕೆ ನನ್ನ ಯೋಗಕ್ಷಮದ ಸಲುವಾಗಿ ಕೊಟ್ಟಿದ 4 ತೋಲಿ ಬಂಗಾರ ಕಸಿದುಕೊಂಡಿರುತ್ತಾರೆ. ಇದಾದ ಮೇಲೆ ಅವರು ನನಗೆ ನೀನು ಚನ್ನಾಗಿ ಇಲ್ಲ ನನ್ನ ಮಗನಿಗೆ ತಕ್ಕ ಹೆಂಡತಿ ಅಲ್ಲಾ ನನ್ನ ಮಗನಿಗೆ ನೌಕರಿ ಇದೆ ನೀನು ತವರು ಮನೆಯಿಂದ ವರದಕ್ಷಿಣೆ ತಂದಿರುವುದಿಲ್ಲಾ ನೀನು ತವರು ಮನೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ತಗೆದುಕೊಂಡು ಬಾ ಮತ್ತು ಒಂದು ಕಾರ ಕೊಡಿಸು ಅಂತಾ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ನನ್ನ ಗಂಡನು ನನಗೆ ಹೊಡೆ-ಬಡೆ ಮಾಡುತ್ತಾ ಬಂದಿರುತ್ತಾರೆ, ಅವರು ಎಷ್ಟೇ ತೊಂದರೆ ಕೊಟ್ಟರು ನಾನು ಗಂಡನ ಮನೆಯಲ್ಲಿ ತಾಳಿಕೊಂಡು ಬಾಳಬೇಕು ಅಂತಾ ಸಮ್ಮನಿದ್ದೆನು ಇದಾದ ಕೆಲವು ದಿನಗಳ ಮೇಲೆ ನನ್ನ ನಾದಿನಿಯರ ಗಂಡಂದಿರರಾದ ನಿಂಗಪ್ಪ ಶಿವಣಗಿ, ರಮೇಶ ಜಂಬಗಿ ಹಾಗೂ ನಿಂಗಪ್ಪನ ಮಗನಾದ ಸಚೀನ ಶಿವಣಗಿ ಇವರು ಕೂಡಾ ನನ್ನ ಗಂಡನ ಮನೆಗೆ ಬಂದಾಗ ಅವರು ನನಗೆ ಇಕೆ ತವರು ಮನೆಯಿಂದ ವರದಕ್ಷಿಣೆ ತಂದಿಲ್ಲಾ ಇವಳಿಗೆ ಮನೆಯಲ್ಲಿ ಏಕೆ ಇಟ್ಟುಕೊಂಡಿರಿ ಹೊರಗೆ ಹಾಕಿಬಿಡಿರಿ ಅಂತ ಬೈಯುತ್ತಿದ್ದರು. ಇದಾದ ಕೆಲವು ದಿನಗಳ ಮೇಲೆ ಒಂದು ದಿನ ನಾನು ನನ್ನ ತವರು ಮನೆಗೆ ಹೋದಾಗ ನನ್ನ ಗಂಡ ಮತ್ತು ಗಂಡನ ಮನೆಯವರು ನನ್ನ ಸಂಗಡ ಕಿರಿಕಿರಿ ಮಾಡುತ್ತಿರುವ ವಿಷಯ ನನ್ನ ತಂದೆ-ತಾಯ ಮುಂದೆ ಹೇಳಿದಾಗ ದು ದಿನ ನನ್ನ ತಂದೆಯಾದ ಪವಡೆಪ್ಪ ಚಲವಾದಿ, ತಾಯಿ ಮರೇಮ್ಮ ಚಲವಾದಿ, ಹಾಗೂ ಮಡಿಕೇಶ್ವರ ಗ್ರಾಮದ ಲಕ್ಷ್ಮಣ ತಂದೆ ಮಾರುತೇಪ್ಪ ಚಲವಾದಿ, ಪವಡೇಪ್ಪ ತಂದೆ ಪರಪ್ಪ ಚಲವಾದಿ, ಬಸಪ್ಪ ತಂದೆ ಲಚ್ಚಪ್ಪ ಚಲವಾದಿ ಎಲ್ಲರೂ ಕೂಡಿ ಅರಳಗುಂಡಗಿ ಗ್ರಾಮಕ್ಕೆ ನನ್ನ ಗಂಡನ ಮನೆಗೆ ಬಂದು ಅವರಿಗೆ ನಾವು ಬಡವರಿದ್ದೇವೆ ನಾವು 5 ಲಕ್ಷ ರೂಪಾಯಿ ಮತ್ತು ಒಂದು ಕಾರ ಎಲ್ಲಿಂದ ಕೊಡಬೇಕು ನನ್ನ ಮಗಳ ಸಂಗಡ ಜಗಳ ಮಾಡಬೇಡರಿ ಅವಳಿಗೆ ಚನ್ನಾಗಿ ನೋಡಿಕೊಳ್ಳರಿ ಅಂತಾ ಬುದ್ದಿ ಮಾತು ಹೇಳಿ ಹೋಗಿದ್ದರು. ಇದಾದ ಮೇಲೆ ಕೆಲವು ದಿನ ಅವರು ನನಗೆ ಚನ್ನಾಗಿ ನೋಡಿಕೊಂಡು ಮತ್ತೆ ಎಲ್ಲರೂ ಕೂಡಿ ನನಗೆ ರಂಡಿ ನೀನು ತವರು ಮನೆಯಿಂದ ಹಣ ಮತ್ತು ಕಾರ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇರು ಇಲ್ಲಿದ್ದರೇ ನಮ್ಮ ಮನೆಯಲ್ಲಿ ಇರಬೇಡ ನಿನಗೆ ನಾಚಿಕೆ ಇಲ್ಲಾ ಅಂತ ಬೈಯುತ್ತಿದ್ದರು ಅಲ್ಲದೇ ಒಂದು ದಿನ ನನ್ನ ಗಂಡನು ತಾನು ನೌಕರಿ ಮೇಲೆ ಇದ್ದಾಗ ರಾತ್ರಿ ವೇಳೆಯಲ್ಲಿ ನಮ್ಮ ಅತ್ತೆಗೆ ಪೋನ ಮಾಡಿ ಆ ರಂಡಿ ಕಾರ ಮತ್ತು ಹಣ ತಗೆದುಕೊಂಡು ಬರದೇ ಇದ್ದರೆ ಅವಳಿಗೆ ಮನೆಯಲ್ಲಿ ಇಟ್ಟುಕೊಳ್ಳಬೇಡರಿ ಅಂತಾ ಹೇಳಿದಾಗ ದಿನಾಂಕ: 06-03-2018 ರಾತ್ರಿ ವೇಳೆಯಲ್ಲಿ ನಮ್ಮ ಅತ್ತೆ ಮತ್ತು ನಾದಿನಿಯಾದ ಬಸಮ್ಮ ಇಬ್ಬರೂ ಕೂಡಿ ನನಗೆ ಮನೆಯಿಂದ ಹೊರಗೆ ಹಾಕಿದ್ದು ನಾನು ಮರ್ಯಾದೆಗೆ ಅಂಜಿ ರಾತ್ರಿ ಪೂರ್ತಿ ಮನೆಯ ಮುಂದೆ ಮಲಗಿಕೊಂಡಿದ್ದೆನು ಇದಾದ ಮೇಲೆ ನನ್ನ ಗಂಡನು ಊರಿಗೆ ಬಂದಾಗ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆ-ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅದಕ್ಕಾಗಿ ಈಗ ಒಂದು ವರ್ಷದಿಂದ ನಾನು ನನ್ನ ತವರು ಮನೆಯಾದ ಮಡಕೇಶ್ವರ ಗ್ರಾಮಕ್ಕೆ ಹೋಗಿ ನನ್ನ ತವರು ಮನೆಯಲ್ಲಿಯೇ ಇರುತ್ತೆನೆ. ಅವರು ನನಗೆ ಇವತ್ತಲ್ಲಾ ನಾಳೆ ಕರೆದುಕೊಂಡು ಹೋಗಬಹುದು ಅಂತಾ ತಿಳಿದುಕೊಂಡು ನಾನು ತಾಳಿಕೊಂಡು ಇದ್ದರು ಕೂಡಾ ಅವರು ಹಣ ಮತ್ತು ಕಾರ ತರದೆ ಇದ್ದರೆ ನಮ್ಮ ಮನೆಗೆ ಬರಬೇಡ ಅಂತಾ ನನಗೆ ಮಾನಸಿಕ ಹಿಂಸೆ ಕೊಡುತ್ತಿರುವದ್ದರಿಂದ ಈಗ ನಾನು ನಮ್ಮ ಮನೆಯಲ್ಲಿ ನಮ್ಮ ತಂದೆ-ತಾಯಿಯವರ ಸಂಗಡ ವಿಚಾರ ಮಾಡಿಕೊಂಡು ತಡವಾಗಿರತ್ತದೆ. ನನ್ನ ಗಂಡನಾದ ಶಿವಶರಣ ಮತ್ತು ಅವರ ಮನೆಯವರಾದ 1] ಕಸ್ತೂರಿಬಾಯಿ ರಾಮನೂರ 2] ಯಮನೂರ ರಾಮನೂರ 3] ಬಸಮ್ಮ ಶಿವಣಗಿ 4] ದೇವಮ್ಮ ಜಂಬಗಿ 5] ನಿಂಗಪ್ಪ ಶಿವಣಗಿ 6] ರಮೇಶ ಜಂಬಗಿ 7] ಸಚೀನ ಜಂಬಗಿ ಎಲ್ಲರೂ ಕೂಡಿ ನನಗೆ ತವರು ಮನೆಯಿಂದ ವರದಕ್ಷಿಣೆಯಾಗಿ 5 ಲಕ್ಷ ರೂಪಾಯಿ ಮತ್ತು ಒಂದು ಕಾರ ತಗೆದುಕೊಂಡು ಬರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ನನಗೆ ಕೈಯಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಹಿಳೆ ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ದರಾಮ ತಂದೆ ಹಣಮಂತ ಪೂಜಾರಿ ಸಾ||ಬಂಕಲಗಾ  ರವರ ದಿನಾಂಕ 20-12-2019 ರಂದು  9-00 ಎ.ಎಮ್,ಸುಮಾರಿಗೆ ನಾನು ನಮ್ಮ ಮನೆಯಿಂದ ನನ್ನ ಹೆಂಡತಿಗೆ ಹೇಳಿ ಹೊಲಕ್ಕೆ ಹೊಗಿರುತ್ತೇನೆ ನಂತರ ನಾನು ಮಧ್ಯಾಹ್ನ 2 -00 ಗಂಟೆಗೆ ಉಟ ಮಾಡ ಬೆಕೆಂದು ಹೊಲದಿಂದ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿ ಇರಲಿಲ್ಲ. ನಂತರ ನಾನು ನಮ್ಮ ಮನೆಯ ಪಕ್ಕದಲ್ಲಿರುವ ನನ್ನ ದೊಡ್ಡಪ್ಪನ ಮಗನಾದ ನಿಂಗಪ್ಪ ತಂದೆ ತಿಪ್ಪಣ್ಣ ಪೂಜಾರಿ ಇವರಿಗೆ ವಿಚಾರಿಸಲಾಗಿ ನಾನು 12-00 ಪಿ,ಎಮ್,ಸುಮಾರಿಗೆ ನಮ್ಮ ಮನೆಯ ಮುಂದೆ ನಿಂತಿದ್ದಾಗ ಕೈಯಲ್ಲಿ ಬಕೇಟ ಮತ್ತು ಬಟ್ಟೆಗಳು ಹಿಡಿದುಕೊಂಡು ಬೋರಿ ಹಳ್ಳದ ಕಡೆ ಹೋಗಿರುತ್ತಾಳೆ ಅಂತ ತಿಳಿಸಿದನು ನನ್ನ ಹೆಂಡತಿಯು ಬಟ್ಟೆ ಒಗೆಯಲು ಹೊಗಿರಬಹುದು ಅಂತ ನಾನು  ಎರಡು-ಮೂರು ತಾಸು ಕಾಯಿದೆನು ನಂತರ ಬೋರಿ ಹಳ್ಳದ ಹತ್ತಿರ ಹೋಗಿ ನೋಡಿದರು ಅಲ್ಲಿ ನನ್ನ ಹೆಂಡತಿಯು ಇದ್ದರಲಿಲ್ಲ ಆಗ ನಾನು ಈ ವಿಷಯವನ್ನು ನನ್ನ ಹೆಂಡತಿಯ ತಂದೆಯಾದ ಸಿದ್ದಪ್ಪ ರವರಿಗೆ ಪೋನ ಮಾಡಿ ತಿಳಿಸಿ ನಾನು ಮತ್ತು ನನ್ನ ಮಾವ ಇಬ್ಬರು ಕೂಡಿ ನನ್ನ ಹೆಂಡತಿಗೆ ಎಲ್ಲಾ ಕಡೆ ಹುಡುಕಾಡಿದರು ನನ್ನ ಹೆಂಡತಿಯು ಸಿಕ್ಕಿರುವದಿಲ್ಲ ನನ್ನ ಹೆಂಡತಿ ಎಲ್ಲಿಯೂ ಪತ್ತೆ ಆಗಿರುವುದಿಲ್ಲಾ ನನ್ನ ಹೆಂಡತಿ ಲಕ್ಷಿ ಇವಳು ದಿನಾಂಕ 20-12-2019 ರಂದು ಮದ್ಯಾಹ್ನ 12 ಗಂಟೆಗೆ ನಮ್ಮ ಮನೆಯಿಂದ ಕಾಣೆಯಾಗಿರುತ್ತಾಳೆ.ನನ್ನ ಹೆಂಡತಿಯು ಸಂಪತ್ತ ತಂದೆ ಕರೆಪ್ಪ ಪೂಜಾರಿ ಸಾ||ಅಳ್ಳಗಿ ಇತನ ಸಂಗಡ ಹೋಗಿರಬಹುದು ಅಂತ ನನಗೆ ಸಂಶಯ ಇರುತ್ತದೆ ಕಾರಣ ನನ್ನ ಹೆಂಡತಿಯನ್ನು ಪತ್ತೆ ಮಾಡಬೆಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರೇವೂರ ಠಾಣೆ : ಶ್ರೀ ಶರಣಪ್ಪ ತಂದೆ ಪ್ರಭು ಜಳಕಿ ಸಾ|| ಕವಲಗಾ  ತಾ||ಆಳಂದ ರವರ ಮಗನಾದ ಶಿವಾನಂದ ಈತನಿಗೆ ಈಗ ಒಂದುವರೆ ವರ್ಷದಿಂದೆ ಅಫಜಲಪೂರ ತಾಲೂಕಿನ ಸಿದನೂರರ ಗ್ರಾಮದ ಭೀಮಶ್ಯಾ ಹಿಪ್ಪರಗಿ ರವರ ಮಗಳಾದ ಮಲ್ಲಮ್ಮಾ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ ನನ್ನ ಮಗ ಈಗ ಸುಮಾರು ಎರಡು ತಿಂಗಳಿಂದ  ಸಿನ್ನೂರ ಗ್ರಾಮದಲ್ಲಿಯೇ ತನ್ನ ಹೆಂಡತಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ . ದಿನಾಂಕ 01/12/2019 ರಂದು 6.00 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯಲಿದ್ದಾಗ ನನ್ನ ಮಗನ ಹೆಂಡತಿಯಾದ ಮಲ್ಲಮ್ಮಾ  ಇವಳು  ನಮಗೆ ಮೊಬೈಲ ಮೂಲಕ ವಿಷಯ ತಿಳಿಸಿದ್ದೆನೆಂದರೆ ನಿಮ್ಮ ಮಗ ಶಿವಾನಂದ ಈತನು ಕವಲಗಿಗೆ ಹೋಗುತ್ತೇನೆ ಅಂತ ಇಂದು ಬೆಳಿಗ್ಗೆ 11.00 ಗಂಟೆಗೆ ನಮ್ಮ ಮನೆಯಿಂದ ಹೋಗಿರುತ್ತಾನೆ ಅಲ್ಲಿಗೆ ಬಂದಿರುತ್ತಾರೆ? ಹೇಗೆ ಅಂತ ವಿಚಾರಿಸಿದಾಗ ನಾನು ಶಿವಾನಂದ ಬಂದಿರುವುದಿಲ್ಲ ಅಂತ ತಿಳಿಸಿದೆನು ನಂತರ ನಾನು ಹಾಗು ನಮ್ಮ ಸಂಬಂದಿಕರಾದ ಭಿರಣ್ಣ ಮೇತ್ರೆ, ಶ್ರೀಶೈಲ ಯಳಸಂಗಿ ಮೂರು ಜನರು ಕೂಡಿ ಕೋಗನೂರ, ಮಂಟಗಿ, ಮುದ್ದಡಗಿ, ದಂಗಾಪೂರ,ನಿಂಬರ್ಗಾ, ಬಟ್ಟರಗಾ, ಜವಳಿ ಗ್ರಾಮಗಳಿಗೆ ಹೋಗಿ ನನ್ನ ಮಗನಿಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಹಾಗು ಸಿದನೂರ ಗ್ರಾಮದ ನನ್ನ ಮಗನ ಹೆಂಡತಿ ಹಾಗೂ ಅವರ ಮನೆಯವರು ಎಲ್ಲಾ ಕಡೆ ಹುಡುಕಾಡಿರುತ್ತಾರೆ ಮತ್ತು  ನಮ್ಮ ಸಂಬಂದಿಕರಿಗೆ ಪೊನ್ ಮೂಲಕ ವಿಚಾರಿಸಿ ಕೇಳಲಾಗಿ ನನ್ನ ಮಗನ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.  ಕಾರಣ ನನ್ನ ಮಗನಾದ ಶಿವಾನಂದ ತಂದೆ ಶರಣಪ್ಪ ಜಳಕಿ ವ||26 ವರ್ಷ  ಇವನು  ದಿನಾಂಕ 01/12/2019 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ  ಅಫಜಲಪೂರ ತಾಲೂಕಿನ ಸಿದನೂರ ಗ್ರಾಮದ ತನ್ನ ಹೆಂಡತಿಯ ತವರು ಮನೆಯಿಂದ ಹೊದವನು ಮರಳಿ ಬಂದಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: