Police Bhavan Kalaburagi

Police Bhavan Kalaburagi

Sunday, December 29, 2019

BIDAR DISTRICT DAILY CRIME UPDATE 29-12-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-12-2019


ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 52/2019, ಕಲಂ. 498(), 306 ಜೊತೆ 34 ಐಪಿಸಿ :-
ಫಿರ್ಯಾದಿ ಸತ್ಯಂ ತಂದೆ ಯಾದಯ್ಯಾ ವಂಟೆದ್ದು ವಯ: 48 ವರ್ಷ, ಜಾತಿ: ಮಂದುಲಾ (ಬಿಸಿ-), ಸಾ: ಇಂದಿರಾ ನಗರ ಕಲ್ವಾ ಕುರ್ತಿ, ಜಿ: ಕರ್ನೂಲ್ ರವರ ಹಿರಿಯ ಮಗಳಾದ ಶ್ವೇತಾ ಇವಳಿಗೆ ಬೊಲ್ಲೆಪಲ್ಲಿ ಗ್ರಾಮದ ವೆಂಕಣ್ಣಾ ರವರ ಮಗನಾದ ಸಂತೋಷ ಇತನ ಜೊತೆಯಲ್ಲಿ ದಿನಾಂಕ 15-02-2017 ರಂದು ತಮ್ಮ ಧರ್ಮದ ಪ್ರಕಾರ ಮದುವೆ ಆಗಿರುತ್ತದೆ, ಸಂತೋಷ ಇತನು ಮೊಟರ ಸೈಕಲ್ ಸೀಟ್ ಕವರ್ ಮತ್ತು ಕನ್ನಡಕದ ವ್ಯಾಪಾರ ಮಾಡುತ್ತಾನೆ, ಮದುವೆಯಾದ ನಂತರ ಸಂತೋಷ ಇತನು ಒಂದು ತಿಂಗಳು ಮಾತ್ರ ತನ್ನ ಊರಿನಲ್ಲಿ ವಾಸವಾಗಿದ್ದು, ನಂತರ ಸಂತೋಷ ತನ್ನ ಹೆಂಡತಿ ಶ್ವೇತಾ ಮತ್ತು ತಂದೆಯಾದ ವೆಂಕಣ್ಣಾ, ತಾಯಿಯಾದ ಸಮ್ಮಕ್ಕಾ @ ಬುಜಮ್ಮಾ, ತಮ್ಮನಾದ ಶೇಖರ್ ರವರೆಲ್ಲರೂ ಹೊಟ್ಟೆಪಾಡಿಗಾಗಿ 3 ವರ್ಷಗಳ ಹಿಂದೆ ಯಲ್ಲಾಲಿಂಗ್ ಕಾಲೋನಿ ನೌಬಾದದಲ್ಲಿ ಬಂದು ವಾಸವಾಗಿರುತ್ತಾರೆ, ಶ್ವೇತಾ ಇವಳಿಗೆ ಇಲ್ಲಿಯವರೆಗೆ ಮಕ್ಕಳು ಆಗಿರುವದಿಲ್ಲ, ಆರೋಪಿತರಾದ ಅಳಿಯ ಸಂತೋಷ, ಮಾವ ವೆಂಕಣ್ಣಾ, ಅತ್ತೆ ಸಮ್ಮಕ್ಕಾ @ ಬುಜಮ್ಮಾ, ಮೈದುನ ಶೇಖರ್ ರವರೆಲ್ಲರೂ ಕೂಡಿ ಶ್ವೇತಾ ಇವಳಿಗೆ ನಿನ್ನ ಗುಣನಡತೆ ಸರಿಯಾಗಿಲ್ಲ ಅಂತ ಅವಳ ಮೇಲೆ ಸಂಶಯ ಪಟ್ಟು ಅವಳಿಗೆ ಹಿಯ್ಯಾಳಿಸಿ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಸಂತೋಷ ಇತನು ನಾನು ಮತ್ತೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿರುತ್ತಾನೆ, ವಿಷಯವನ್ನು ಶ್ವೇತಾ ಇಕೆಯು ಫಿರ್ಯಾದಿಗೆ ಹೇಳಿರುತ್ತಾಳೆ, ನಂತರ ಫಿರ್ಯಾದಿಯವರು ಅಳಿಯ ಹಾಗು ಅವನ ಮನೆಯವರಿಗೆ ಊರಿಗೆ ಕರೆಯಿಸಿ ಬುದ್ದಿವಾದ ಹೇಳಿದ್ದು, ಸಮಯದಲ್ಲಿ ಅವರು ಇನ್ನು ಮುಂದೆ ಅವಳಿಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಹೇಳಿ ಅವಳಿಗೆ ಪುನಃ ಬೀದರಗೆ ಕರೆದುಕೊಂಡು ಬಂದಿರುತ್ತಾರೆ, ಬೀದರಗೆ ಬಂದ ನಂತರ ಸಂತೋಷ ಇತನು ಶ್ವೇತಾ ಇವಳಿಗೆ ಸುವರ್ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೂದಲು ಹಿಡಿದು ಹೊಡೆ ಬಡೆ ಮಾಡುವದು ಮಾಡಿರುತ್ತಾನೆ, ಅವಳಿಗೆ ಕರೆ ಮಾಡಿದಾಗ ಸದರಿ ಆರೋಪಿತರು ನನಗೆ ದಿನಾಲು ತೊಂದರೆ ಕೊಡುತ್ತಿದ್ದಾರೆ ನಾನು ಇರುವದಿಲ್ಲ ಸತ್ತು ಹೋಗುತ್ತೆನೆ ಅಂತ ಹೇಳುತ್ತಿದ್ದಳು, ಹೀಗಿರುವಾಗ ದಿನಾಂಕ 28-12-2019 ರಂದು ಅಳಿಯ ಸಂತೋಷ ಇತನು ಕರೆ ಮಾಡಿ ಶ್ವೇತಾ ಇವಳು ನೇಣು ಹಾಕಿಕೊಂಡು ಮರಣ ಹೊಂದಿರುತ್ತಾಳೆ ಅವಳ ಶವವನ್ನು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಿರುತ್ತೇವೆ ಅಂತ ತಿಳಿಸಿದ ತಕ್ಷಣ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ಸಂಬಂದಿಯವರೊಂದಿಗೆ ದಿನಾಂಕ 29-12-2019 ರಂದು ರಾತ್ರಿ 1230 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಗೆ ಬಂದು ಶವಗಾರ ಕೊಣೆಯಲ್ಲಿ ಇಟ್ಟ  ಶ್ವೇತಾ ಇವಳಿಗೆ ನೋಡಲಾಗಿ, ಅವಳ ಕುತ್ತಿಗೆಯ ಸುತ್ತಲು ನೇಣಿನಿಂದ ಕಂದು ಗಟ್ಟಿದ ಗಾಯ ಇರುತ್ತದೆ, ಶ್ವೇತಾ ಇವಳಿಗೆ ಸದರಿ ಆರೋಪಿತರೆಲ್ಲರೂ ಕೂಡಿ ಸಾಯುವಂತೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದರಿಂದ ಅವರು ಕೊಡುವ ಕಿರುಕುಳವನ್ನು ತಾಳಲಾರದೆ ಮನೆಯಲ್ಲಿ ದಿನಾಂಕ 28-12-2019 ರಂದು ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 132/2019, ಕಲಂ. 279, 337, 338 ಐಪಿಸಿ ಜೊತೆ 177 ಐಎಂವಿ ಕಾಯ್ದೆ :-
ದಿನಾಂಕ 28-12-2019 ರಂದು ಫಿರ್ಯಾದಿ ಅಭೀಲಾಷ ತಂದೆ ಸೂರ್ಯಕಾಂತ ಝರನಾಯಕ, ವಯ: 19 ವರ್ಷ, ಜಾತಿ: ಎಸ್.ಸಿ(ಮಾದಿಗ), ಸಾ: ದುಬಲಗುಂಡಿ, ತಾ: ಹುಮನಾಬಾದ ರವರ ಗ್ರಾಮದ ಆನಂದಕುಮಾರ ತಂದೆ ತುಕಾರಾಮ ಭೋಜಗೊಂಡ ವಯ: 18 ವರ್ಷ ಈತನು ಚಲಾಯಿಸುತ್ತಿದ್ದ ಹೊಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಟಿ.ಎಸ್-09/ಇ.ಯು-4413 ನೇದ್ದರ ಹಿಂಭಾಗ ಫಿರ್ಯಾದಿ ಹಾಗೂ ಪವನ ತಂದೆ ಗೋಪಿನಾಯಕ ರಾಠೋಡ, ವಯ: 18 ವರ್ಷ, ಸಾ: ರಾಜನಾಳ ಚೋಕಲಾ ನಾಯಕ ತಾಂಡಾ ಮೂವರು ಕೂಡಿ ಬಿಕೆಟಿ ಇಂಜಿನಿಯರಿಂಗ್ ಕಾಲೇಜಿನಿಂದ ರಾ.ಹೇ ನಂ. 65 ರೋಡಿನ ಮೂಲಕ ಹುಮನಾಬಾದ ಕಡೆಗೆ ಹೋಗುತ್ತಿರುವಾಗ ಎದುರುನಿಂದ ಅಂದರೆ ರಾಜೇಶ್ವರ ಕಡೆಯಿಂದ ರಾಂಗ ಸೈಡಾಗಿ ಒಂದು ಲಾರಿ ನಂ. ಕೆಎ-56/3882 ನೇದ್ದರ ಚಾಲಕನಾದ ಆರೋಪಿ ಅಲ್ತಾಫ್ ಶಾ ತಂದೆ ಶಾರ್ದುಲ್ ಶಾ, ಸಾ: ರಾಜೇಶ್ವರ ಇತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಗಾಯ, ಗಟಾಯಿಗೆ, ಮೇಲ್ತುಟಿಗೆ, ಎಡಮೊಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಪವನ ಈತನಿಗೆ ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಮೋಟಾರ ಸೈಕಲ ಚಲಾಯಿಸುತ್ತಿದ್ದ ಆನಂದಕುಮಾರ ಈತನಿಗೆ ಬಾಯಿಗೆ ಭಾರಿ ರಕ್ತಗಾಯವಾಗಿ ಹಲ್ಲುಗಳು ಬಿದ್ದಿರುತ್ತವೆ, ಬಲಗಣ್ಣಿನ ಹತ್ತಿರ, ಬಲತೋಡೆಗೆ ತರಚಿದ ರಕ್ತಗಾಯವಾಗಿರುತ್ತದೆ ಅಂತಾ ಗೊತ್ತಾಯಿತು, ಆಗ ಗಾಯಗೊಂಡ ಎಲ್ಲರಿಗೂ ಅಲ್ಲಿಂದಲೇ ಹೋಗುತ್ತಿದ್ದ ಗೆಳೆಯ ರಾಹುಲರಡ್ಡಿ ತಂದೆ ರಾಜರಡ್ಡಿ ಸಾ: ಧುಮ್ಮನಸೂರ ಈತನು ಜನರ ಸಹಾಯದಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ರಾಜೇಶ್ವರ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ  ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 138/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 28-12-2019 ರಂದು ಕವಡಿಯಾಳ (ಎಸ್) ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆದು ಕರೆ ಮುಖಾಂತರ ಸುನೀಲ್ ಕುಮಾರ ಪಿ.ಎಸ. (ಕಾ&ಸು) ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕವಡಿಯಾಳ [ಎಸ್] ಗ್ರಾಮದ ಹನುಮಾನ ಮಂದಿರದಿಂದ ಮರೆಯಾಗಿ ನಿಂತು ನೋಡಲು ಕವಡಿಯಾಳ [ಎಸ್] ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಲಕ್ಷ್ಮಿಣ ತಂದೆ ಮಾಣಿಕ್ ಗೋಣೆ ವಯ: 34 ವರ್ಷ, ಜಾತಿ: ಕಬ್ಬಲಿಗ, ಸಾ: ಬಂದೆ ನವಾಜ ವಾಡಿ, ಸದ್ಯ: ಕವಡಿಯಾಳ [ಎಸ್], ತಾ:ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಒಮ್ಮಲೆ ದಾಳಿ ಮಾಡಿದಾಗ ಆರೋಪಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 3,140/- ರೂ., 02 ಮಟಕಾ ಚೀಟಿಗಳು ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: