ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-01-2020
ಸಂತಪೂರ
ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ
ರಾಜೆಶ್ರೀ
ಗಂಡ ರಾಜಕುಮಾರ ದಿನಾಂಕ 08-01-2020 ರಂದು ರವರ
ಗಂಡನಾದ ರಾಜಕುಮಾರ
ತಂದೆ ಬಾಬುರಾವ ಲದ್ದೆ ವಯ: 45 ವರ್ಷ,
ಸಾ: ಕೌಡಗಾಂವ ರವರು
ತಮ್ಮ ಹೋಲ ಸರ್ವೆ ನಂ. 7 ರಲ್ಲಿ ತೋಗರಿ ಬೆಳೆ ಇದ್ದು ಅದನ್ನು ಕಟಾವು ಮಾಡಲು ಹೋಗಿ
ತೊಗರಿ ಕಟಾವು ಮಾಡುವಾಗ ರಾಜಕುಮಾರ ರವರ ಎಡಗಾಲ ಪಾದದ ಹಿಮ್ಮಡಿಗೆ ವಿಷಕಾರಿ ಹಾವು ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬೀದರಗೆ
ಒಂದು ಕಾಸಗಿ
ವಾಹನದಲ್ಲಿ
ಹಾಕಿಕೊಂಡು
ಬೀದರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಚಿಕಿತ್ಸೆ ನೀಡಿ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಯಶೋಧಾ ಆಸ್ಪತ್ರೆಯಲ್ಲಿ ದಾಖಲು
ಮಾಡಿ ನಂತರ ಮರಳಿ ಬೀದರಗೆ ಬಂದು ಗುರುನಾನಕ
ಆಸ್ಪತ್ರೆ
ಬೀದರನಲ್ಲಿ
ದಾಖಲು ಮಾಡಿದಾಗ ಅಲ್ಲಿಯು ಸಹ ಕಡಿಮೆ ಆಗಲಾರದ
ಕಾರಣ ಅವರಿಗೆ ಕರೆದುಕೊಂಡು ಮೆನೆಗೆ ಬಂದು ಖಾಸಗಿ ಔಷಧಿ ಹಾಕಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ
ಫಿರ್ಯಾದಿಯವರ ಗಂಡ ದಿನಾಂಕ 19-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020,
ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 17-01-2020 ರಂದು ಫಿರ್ಯಾದಿ ಪಿಚಯಮ್ಮಾ ಗಂಡ ಗಣೆಶನ್ ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಅಣ್ಣನಗರ 3ನೇ ಸ್ಟ್ರೀಟ್ ತ್ರಿಮಂಗಲಂ, ಜಿಲ್ಲೆ: ಮದುರೈ, ರಾಜ್ಯ: ತಮಿಳನಾಡು
ರವರ ಮಗನಾದ ಮಣಿಗಂಡನ ತಂದೆ ಗಣೇಶನ್ ಅಣ್ಣಾನಗರ ತ್ರಿಮಂಗಲಂ ಸದ್ಯ: ಅಲ್ಲಾ ನಗರ ಬಸವಕಲ್ಯಾಣ ಇತನು ಸರಾಯಿ ಕುಡಿದ ನಶೆಯಲ್ಲಿ ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಬಸವಕಲ್ಯಾಣ ನಗರದ ಅಲ್ಲಾ ನಗರ ಓಣಿಯಲ್ಲಿರುವ ಜಯ ಗಂಡ ಚಿನ್ನಸ್ವಾಮಿ ಇವರ ಮನೆಯ ತಗಡದ ಸೆಡ್ಡಿನಲ್ಲಿ ತಗಡದ ಕೆಳಗೆ ಹಾಕಿದ ಕಬ್ಬಿಣದ ರಾಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಸಂಶಯು ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ
19-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 15/2020, ಕಲಂ. 279, 338
ಐಪಿಸಿ :-
ದಿನಾಂಕ 19-01-2020 ರಂದು ಫಿರ್ಯಾದಿ ನಿಲೇಶ ತಂದೆ ಕಾಶಿನಾಥ ಮಳ್ಳಿ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಮುಸ್ತರಿ ರವರು ತನ್ನ ಅಣ್ಣನಾದ ರಾಕೇಶ ಇಬ್ಬರೂ ಕೆಲಸದ ನಿಮಿತ್ಯ ಚಿಟಗುಪ್ಪಾಕ್ಕೆ ಮೋಟಾರ್ ಸೈಕಲ್ ನಂ.
ಕೆಎ-39/ಆರ್-2015 ನೇದರ ಮೇಲೆ ಬರುವಾಗ ವಾಹನ ಅಣ್ಣ ಚಲಾಯಿಸಿಕೊಂಡು ಮುಸ್ತರಿ ಚಿಟಗುಪ್ಪಾ ರೋಡ ಚಿಟಗುಪ್ಪಾ ಶಿವಾರದ ಮಲ್ಲಪ್ಪಾ ಕುಂಬಾರ ರವರ ಹೊಲದ ಹತ್ತಿರ ಬರುವಾಗ ರಾಕೇಶ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿ ಸ್ಕಿಡಾಗಿ ಬಿದ್ದಾಗ ಫಿರ್ಯಾದಿಯ ಎಡಗಾಲ ಮೋಳಕಾಲಿಗೆ ರಕ್ತಗಾಯ, ಎಡಗಾಲ ಮೇಲಗಡೆ ಭಾರಿ ಗುಪ್ತಗಾಯ, ಕೆಳಗಡೆ ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ, ನಂತರ
ಫಿರ್ಯಾದಿಗೆ 108 ಅಂಬುಲೇನ್ಸ್ ನಲ್ಲಿ ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 15(ಎ), 32 ಕೆ.ಇ ಕಾಯ್ದೆ
:-
ದಿನಾಂಕ 19-01-2020 ರಂದು ಭಾತಂಬ್ರಾ ಹೊರವಲಯದಲ್ಲಿರುವ
ಶ್ರೀ ಧಾಬಾದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಡಾ: ಡಿ.
ದೇವರಾಜ ಡಿ.ಎಸ್.ಪಿ. ಭಾಲ್ಕಿ ರವರಿಗೆ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು,
ತಮ್ಮ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಹೊರವಲಯದಲ್ಲಿ ಧಾಬಾದ ಹತ್ತಿರ ಹೋಗಿ ಮರೆಯಾಗಿ
ನಿಂತು ನೊಡಲು ಶ್ರೀ ಧಾಭಾದಲ್ಲಿ ಆರೋಪಿ ಆಕಾಶ ತಂದೆ ಧನರಾಜ ಪಾಟೀಲ ವಯ: 23 ವರ್ಷ, ಜಾತಿ: ಲಿಂಗಾಯತ
ಸಾ: ಭಾತಂಬ್ರಾ ಇತನು ಕೌಂಟರ ಹತ್ತಿರ ಒಂದು ಕಾಟನದಲ್ಲಿ ಅನಧಿಕ್ರತವಾಗಿ ಮದ್ಯದ ಬಾಟಲಗಳನ್ನು
ಇಟ್ಟು ಜನರಿಗೆ ಮಾರಾಟ ಮಾಡುತ್ತಿರುವುದನ್ನು ನೊಡಿ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ
ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದು ನಂತರ ಕೌಂಟರ ಹತ್ತಿರ ಇರುವ
ಕಾಟನದಲ್ಲಿ ಪರಿಶೀಲಿಸಿ ನೊಡಲು ಮದ್ಯದ ಬಾಟಲಗಳು ಇದ್ದು, ಸದರಿ ಬಾಟಲಗಳ ಒಟ್ಟು ಅ.ಕಿ 3,358.68 ರೂ. ಬೆಲೆ ಇದ್ದು, ನಂತರ ಸದರಿ ಆರೋಪಿತನ ಅಂಗ ಜಡತಿ ಮಾಡಲು ಆತನ ಹತ್ತಿರ
350/- ರೂ. ಮತ್ತು ಒಂದು ಶಾಮಸಂಗ ಮೋಬೈಲ್ ಸಿಕ್ಕಿರುತ್ತದೆ ಅವುಗಳನ್ನು ವಶಪಡಿಸಿಕೊಂಡು, ಸದರಿ
ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment