ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-01-2020
ಬಗದಲ್
ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 379 ಐಪಿಸಿ :-
ಫಿರ್ಯಾದಿ
ಸಿದ್ದನಗೌಡ ತಂದೆ ಭೀಮನಗೌಡ ಮಂಕಣಿ ವಯ: 47 ವರ್ಷ, ಜಾತಿ: ಲಿಂಗಾಯತ, ಉ: ಎಸ್.ಎಮ್
ಬೀರಾದರ ಗುತ್ತಿಗೆದಾರರ ಹತ್ತಿರ ಮ್ಯಾನೆಂಜರ ಕೆಲಸ, ಸಾ: ಬಿದರಕುಂದಿ, ತಾ: ಮುದ್ದೆಬಿಹಾಳ, ಜಿಲ್ಲಾ:
ವಿಜಯಪುರ ರವರು ಎಸ್.ಎಮ್ ಬೀರಾದರ ಗುತ್ತಿಗೆದಾರರ ಹತ್ತಿರ ಸುಮಾರು 10 ವರ್ಷದಿಂದ
ಮ್ಯಾನೆಂಜರ ಅಂತ ಕೆಲಸ ಮಾಡಿಕೊಂಡಿದ್ದು, ಈಗ ಕಾಲುವೆ/ಕೇನಲ್ ಬ್ರಿಜ್ದ ಕಾಮಗಾರಿ ನಡೆದಿರುತ್ತದೆ, ಬಾವುಗಿ, ನೇಲವಾಡ, ಸಂಗೋಳಗಿ
ಸಿವಾರದಲ್ಲಿ ಕಾಲುವೆ ಕಾಮಗಾರಿ ಬ್ರೀಜ್ದ ಸ್ಲ್ಯಾಬ ಹಾಕಲು ಕಬ್ಬಿಣದ ಪ್ಲೇಟಗಳು ಮತ್ತು ಜಾಕಗಳು
ಕಾಮಗಾರಿ ನಡೆಯುವ ಸ್ದಳದಲ್ಲಿ ಹಾಕಿದ್ದು, ಬಾವುಗಿ ಸಿವಾರದಲ್ಲಿ ಸ್ಲ್ಯಾಬ ಹಾಕಲು ತಂದು
ಇಟ್ಟಿರುವ ಕಬ್ಬಿಣದ ಒಟ್ಟು 60 ಪ್ಲೇಟಗಳು ಹಾಗು 20 ಜಾಕಗಳು
ಫಿರ್ಯಾದಿಯು ದಿನಾಂಕ 07-01-2020
ರಂದು ತಮ್ಮ
ವಾಹನದಲ್ಲಿ ಕಾಮಗಾರಿ ಕೆಲಸ ನೋಡುತ್ತಾ ಬಂದಾಗ ಅವುಗಳ ಪೈಕಿ 48 ಪ್ಲೇಟಗಳು
ಹಾಗು 10 ಜಾಕಗಳು ತಂದು ಇಟ್ಟ ಕಾಮಗಾರಿ ಕಬ್ಬಿಣದ
ಪ್ಲೇಟ ಹಾಗು ಕಬ್ಬಿಣದ ಜಾಕಗಳು ದಿನಾಂಕ 06-07/01/2020
ರಂದು
ಮಧ್ಯ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಯಾವದೋ ವಾಹನಗಳಲ್ಲಿ ಹಾಕಿಕೊಂಡು ಕಳವು
ಮಾಡಿಕೊಂಡು ಹೊಗಿರುತ್ತಾರೆ, ಈ ವಿಷಯವನ್ನು ಎಸ್.ಎಮ್ ಬೀರಾದರ ಮಾಲಿಕರಿಗೆ ತಿಳಿಸಿದ್ದು, ನೇಲವಾಡ,
ಸಂಗೊಳಗಿ ಸಿವಾರದಲ್ಲಿ ಸ್ಲ್ಯಾಬ ಹಾಕಲು ಅಲ್ಲಲ್ಲಿ ತಂದು ಇಟ್ಟಿರುವ ಕಬ್ಬಿಣದ 200 ಪ್ಲೇಟಗಳು ಹಾಗು 40 ಜಾಕಗಳು ದಿನಾಂಕ 09-01-2020 ರಂದು 2200
ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಶಿವಣ್ಣಾ ಸುಪರವೇಜರ ರವರು ವಾಹನ ಚಲಾಯಿಸುತ್ತಾ ಬಾವುಗಿ – ಸಂಗೊಳಗಿ ಕಾಲುವೆ ಮಾರ್ಗಾವಾಗಿ ಕಾಮಗಾರಿಯ
ವಸ್ತುಗಳು ಕಳವು ಆಗುತ್ತಿವೆ ಅಂತ ನೋಡುತ್ತಾ ಹೋದಾಗ ನೇಲವಾಡ ಹಾಗು ಸಂಗೋಳಗಿ ಸಿವಾರದಲ್ಲಿ
ಇಟ್ಟಿರುವ ಕಬ್ಬಿಣದ ಪ್ಲೇಟಗಳು ಹಾಗು ಜಾಕಗಳ ಪೈಕಿ 105 ಪ್ಲೇಟಗಳು 30 ಜಾಕಗಳು
ದಿನಾಂಕ 09-01-2020
ರಂದು 1900
ಗಂಟೆಯಿಂದ 2030 ಗಂಟೆಯ ಸುಮಾರಿಗೆ ಯಾರೋ ಅಪರಿಚಿತ ಕಳ್ಳರು ಯಾವದೋ ವಾಹನಗಳು ತಂದು ಹಾಕಿಕೊಂಡು
ಕಳವು ಮಾಡಿಕೊಂಡು ಹೊಗಿರುತ್ತಾರೆ, ಈ ವಿಷಯದ ಬಗ್ಗೆ ಮಾಲಿಕರ ಜೊತೆ ವಿಚಾರಿಸಲು ಮುದ್ದೆಬಿಹಾಳಕ್ಕೆ
ಹೋಗಿ ವಿಚಾರ ತಿಳಿಸಿರುತ್ತೇನೆ ಕಾರಣ ಕಾಲುವೆ ಕಾಮಗಾರಿ ಮಾಡಲು ತಂದು ಇಟ್ಟು
ಒಟ್ಟು 153 ಕಬ್ಬಿಣದ ಪ್ಲೇಟಗಳು ಒಟ್ಟು
ಅ.ಕಿ 1,36,700/- ಬೆಲೆ ಬಾಳುವ ವಸ್ತುಗಳು ಯಾರೋ ಅಪರಿಚಿತ ಕಳ್ಳರು
ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ
ದಿನಾಂಕ 20-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 08/2020, ಕಲಂ. 379 ಐಪಿಸಿ :-
ದಿನಾಂಕ 19-01-2020 ರಂದು 2130 ಗಂಟೆಗೆ ಫಿರ್ಯಾದಿ ಜಗನಾಥ ಪಾಟೀಲ ತಂದೆ ಗಂಗಶೇಟ್ಟಿ ಪಾಟೀಲ ವಯ: 50 ವರ್ಷ, ಸಾ: ಹಳೆ ಮೈಲೂರ ಬೀದರ ರವರು ತನ್ನ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ತನ್ನ ಮೋಟಾರ ಸೈಕಲ ಸಂ
ಕೆ.ಎ-38/ಕ್ಯೂ್ವ-1458 ನೇದನ್ನು ಹಳೆ ಮೈಲೂರದಲ್ಲಿರುವ ತನ್ನ ಮನೆಯ
ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗಿ ಊಟ ಮಾಡಿಕೊಂಡು ಪುನಃ 2230 ಗಂಟೆಗೆ ಮನೆಯ ಹೊರಗಡೆ ನೊಡಲಾಗಿ ತಾನು
ನಿಲ್ಲಿಸಿದ ಮೊಟಾರ ಸೈಕಲ ಇರಲಿಲ್ಲ, ಎಲ್ಲಾ ಕಡೆ ಹುಡುಕಾಡಿದರೂ ಸಹ ಸದರಿ ವಾಹನ
ಸಿಕ್ಕಿರುವುದಿಲ್ಲ, ಕಾರಣ ಫಿರ್ಯಾದಿಯವರ ಸದರಿ ಹಿರೊ ಹೊಂಡಾ ಸ್ಪ್ಲೇಂಡರ ಮೋಟಾರ ಸೈಕಲ ಅ.ಕಿ 18,500/- ರೂಪಾಯಿ ಬೇಲೆ ಬಾಳುವದು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ
ಪೊಲೀಸ್
ಠಾಣೆ, ಬೀದರ ಅಪರಾಧ ಸಂ. 09/2020, ಕಲಂ. 379 ಐಪಿಸಿ :-
ದಿನಾಂಕ 19-01-2020 ರಂದು 2200 ಗಂಟೆಗೆ ಫಿರ್ಯಾದಿ ಜಗನಾಥ ತಂದೆ ಮಡೆಪ್ಪಾ ಕಾಳಗೆ ವಯ: 25 ವರ್ಷ, ಸಾ: ಸಿ.ಎಮ.ಸಿ ಕಾಲೊನಿ ಮೈಲೂರ, ಬೀದರ ರವರು ತನ್ನ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಆಟೊ ಸಂ. ಕೆ.ಎ-38/9136 ನೇದನ್ನು ಸಿ.ಎಮ.ಸಿ ಕಾಲೋನಿ ಮೈಲೂರದಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗಿ ಊಟ ಮಾಡಿ ಪುನಃ ರಾತ್ರಿ 0230 ಗಂಟೆಗೆ ಮನೆಯ ಹೊರಗಡೆ ನೊಡಲಾಗಿ ಫಿರ್ಯಾದಿಯು ನಿಲ್ಲಿಸಿದ ಸದರಿ ಆಟೋ ಇರಲಿಲ್ಲ, ನಂತರ ಫಿರ್ಯಾದಿಯು ಸದರಿ ಆಟೋವನ್ನು ಹುಡುಕಾಡಲಾಗಿ ಪತ್ತೆ ಆಗಿರುವದಿಲ್ಲಾ, ಕಾರಣ ಫಿರ್ಯಾದಿಯವರ ಸದರಿ ಆಟೋ ಅ.ಕಿ 1,50,000/- ರೂ. ಬೇಲೆ ಬಾಳುವದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 07/2020, ಕಲಂ. 457, 380 ಐಪಿಸಿ :-
ದಿನಾಂಕ 19-01-2020 ರಂದು 1900 ಗಂಟೆಯಿಂದ ದಿನಾಂಕ 20-01-2020 ರಂದು 0700 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿರ ಕಳ್ಳರು ಸರಕಾರಿ ಕನ್ಯಾ ಪ್ರೌಡ ಶಾಲೆ ಮೈಲೂರ ಬೀದರ ಶಾಲೆಯ ಕಂಪ್ಯೂಟರ
ಕೊಣೆಯ ಚನಲ್ ಗೇಟ ಮತ್ತು ಬಾಗಿಲಿಗೆ ಹಾಕಿದ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಸದರಿ ಕೊಣೆಯಲ್ಲಿ ಇದ್ದ 16 ಎಸರ್ ಕಂಪನಿಯ
ಡೆಸ್ಕ ಟಾಪ್ /ಮಾನಿಟರ್ ಅ.ಕಿ 4,50,000/- ರೂಪಾಯಿ
ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು
ಫಿರ್ಯಾದಿ ರಾಘವೇಂದ್ರ ಕುಲಕರ್ಣಿ ಮುಖ್ಯ ಗುರುಗಳು ಸರಕಾರಿ ಕನ್ಯಾ ಪ್ರೌಡ ಶಾಲೆ ಮೈಲೂರ ಬೀದರ ರವರು ಕೊಟ್ಟ ದೂರಿನ
ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ
ಪೊಲೀಸ್ ಠಾಣೆ ಅಪರಾಧ ಸಂ. 06/2020, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ರಮೇಶ ತಂದೆ ರಾಮರಾವ
ಬಿರಾದಾರ ವಯ: 49
ವರ್ಷ,
ಜಾತಿ:
ಮರಾಠಾ,
ಸಾ:
ಜಾಮಖಾಂಡಿ
ರವರ ಮಗಳಾದ ವೈಷ್ಣವಿ ತಂದೆ ರಮೇಶ ಬಿರಾದಾರ ವಯ: 19 ವರ್ಷ, ಜಾತಿ: ಮರಾಠಾ, ಸಾ: ಜಾಮಖಾಂಡಿ
ಇವಳು ಬಿ.ಸಿ.ಎ ಪ್ರಥಮ ವರ್ಷವನ್ನು
ಶಹಾಜಾನಿ ಔರಾದನ ಎಮ್.ಡಿ.ಎ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದು, ಅವಳು
ದಿನಾಂಕ 09-01-2020 ರಂದು 0830 ಗಂಟೆಯ ಸುಮಾರಿಗೆ
ಮನೆಯಿಂದ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ, ಎಷ್ಟು ಹುಡುಕಿದರೂ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ
ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 20-01-2020 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ.
16/2020, ಕಲಂ. 504,
506, 323, 498 (ಎ) ಜೊತೆ 149 ಐಪಿಸಿ ಮತ್ತು 3 & 4 ಡಿ.ಪಿ
ಕಾಯ್ದೆ :-
ಫಿರ್ಯಾದಿ ಸಯಿದಾ ಬೇಗಂ ಗಂಡ ದಾದಾಪೀರ ಧಬ್ಬು ವಯ: 33 ವರ್ಷ, ಸಾ: ಪೀರ ಗೇಬ ಮೋಹಲ್ಲಾ ಚಿಟಗುಪ್ಪಾ ರವರ ಮದುವೆ ದಾದಾಪೀರ ರವರ ಜೊತೆ 07-10-2011 ರಂದು ಜರುಗಿದ್ದು, ಮದುವೆ ಕಾಲಕ್ಕೆ 3 ಲಕ್ಷ ವರದಕ್ಷೀಣೆ, 50 ತೊಲೆ ಬಂಗಾರದ ಆಭರಣ, ಮನೆ ಸಾಮಾನುಗಳನ್ನು ನೀಡಿದ್ದು, ಅವರಿಗೆ ಒಂದು ಹೆಣ್ಣು ಹಾಗು ಒಂದು ಗಂಡು ಮಗು ಜನಿಸಿರುತ್ತದೆ, ಹೀಗಿರುವಾಗ ದಿನಾಂಕ 10-12-2019
ರಂದು ಆರೋಪಿತರಾದ ಗಂಡ ದಾದಾಪೀರ ತಂದೆ ಮುನೀರ ಅಹೆಮದ ಧಬ್ಬು ವಯ: 33 ವರ್ಷ, ಸಾ: ಚಿಟಗುಪ್ಪಾ, ಸದ್ಯ: ಯಾಕುಂಡಿ ಗ್ರಾಮ, ತಾ: ಸವದತ್ತಿ, ಗಂಡನ ಅಣ್ಣ ಅಯುಬ ತಂದೆ ಮುನೀರ ಅಹೆಮದ ಧಬ್ಬು ವಯ: 55 ವರ್ಷ, ಸಾ: ದೇಷ್ಣೂರ, ತಾ: ಬೈನು ಹೊಂಗಲ, ನೇಗೇಣಿ ಶಬ್ಬು ಗಂಡ ಅಯುಬ ಧಬ್ಬು ವಯ: 45 ವರ್ಷ, ಸಾ: ದೇಷ್ಣೂರ, ಗಂಡನ ಅಣ್ಣ ಇಮ್ತಿಯಾಜ ತಂದೆ ಮುನೀರ ಅಹೆಮದ ಧಬ್ಬು ವಯ: 40 ವರ್ಷ, ಸಾ: ದೇಷ್ಣೂರ ರವರುಗಳು ಬಂದು ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೇದರಿಕೆ ಹಾಕಿ ಹೊಡೆಬಡೆ ಮಾಡಿದ್ದಲ್ಲದೇ ನೀನು ಸಾಕಾಗುವಷ್ಟು ವರದಕ್ಷಿಣೆ ತಂದಿಲ್ಲ, ಇನ್ನೂ ನಮಗೆ 5 ಲಕ್ಷ ವರದಕ್ಷಿಗೆ ತೆಗೆದುಕೊಂಡು ಬಾ ಇಲ್ಲದಿದ್ದರೆ ತಲಾಕ ತೆಗೆದುಕೋ ಅಂತಾ ಹೇದರಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ದಿನಾಂಕ 20-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ
ಸಂಚಾರ ಠಾಣೆ ಅಪರಾಧ ಸಂ. 10/2020, ಕಲಂ. 279, 337, 338
ಐಪಿಸಿ :-
ದಿನಾಂಕ 20-01-2020 ರಂದು ಫಿರ್ಯಾದಿ ನಿಖೀಲ ತಂದೆ ಸಂಜುಕುಮಾರ ಚವ್ಹಾಣ ವಯ: 18 ವರ್ಷ, ಜಾತಿ: ಗೊಂದಳಿ, ಸಾ: ರಾಜೇಶ್ವರ, ತಾ: ಬಸವಜಕಲ್ಯಾಣ, ಜಿಲ್ಲೆ: ಬೀದರ ರವರು ಕೆಲಸ ಮಾಡುವ ಕಂಪ್ಯೂಟರ ಅಂಗಡಿಯ ಮಾಲಿಕ ಪ್ರಮೋದ ತಂದೆ ವಿನಾಯಕ ಘಂಟೆ ಸಾ: ಜೆ.ಪಿ ನಗರ ರಾಜೇಶ್ವರ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ. ಕೆಎ-32/ಇ.ಜೆ-4286 ನೇದರ ಮೇಲೆ ಕುಳಿತು ಇಬ್ಬರು
ಕೂಡಿಕೊಂಡು
ಖಾಸಗಿ ಕೆಲಸ ಕುರಿತು ರಾಜೇಶ್ವರ ಗ್ರಾಮದಿಂದ ಹುಮನಾಬಾದಕ್ಕೆ ಬಂದು ಖಾಸಗಿ ಕೆಲಸ ಮುಗಿಸಿಕೊಂಡು ರಾಜೇಶ್ವರ ಗ್ರಾಮಕ್ಕೆ ಮರಳಿ ಹೋಗುತ್ತಿರುವಾಗ
ಪ್ರಮೋದ
ಇವನು ತನ್ನ ಮೋಟಾರ್ ಸೈಕಲನ್ನು ರಾಷ್ಟ್ರೀಯ ಹೆದ್ದಾರಿ ನಂ. 65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹಳೆ ಆರ್.ಟಿ.ಓ ಕಚೇರಿ ಹತ್ತಿರ ಬಂದು ಮಹೆಬೂಬ ತಂದೆ ಮಹೆತಾಬಸಾಬ ಪಟೇಲ ಸಾ: ಸೋನಕೇರಾ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಸಂ.
ಕೆಎ-32/ಇ.ಜೆ-2002 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಫಿರ್ಯಾದಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲಾ, ಪ್ರಮೋದ ಇವನಿಗೆ ನೋಡಲಾಗಿ ಹಣೆಯ ಬಲಗಡೆಗೆ, ಮೂಗಿಗೆ ರಕ್ತಗಾಯವಾಗಿರುತ್ತದೆ, ಮಹೆಬೂಬ ಇವನಿಗೆ ನೋಡಲಾಗಿ ತಲೆಯ ಹಿಂಭಾಗ ತೀವ್ರ ರಕ್ತಗಾಯ, ಕಿವಿಯಿಂದ ಹಾಗೂ ಮೂಗಿನಿಂದ ರಕ್ತಸ್ರಾವ, ಎಡಗೈಗೆ ರಕ್ತಗಾಯ, ಎರಡು ಮೊಳಕಾಲುಗಳಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಮಹೆಬೂಬ ಇವರಿಗೆ ಜನರು ಚಿಕಿತ್ಸೆ ಕುರಿತು 108 ಅಂಬುಲೇನ್ಸ್ ನಲ್ಲಿ ಹಾಕಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment