ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-01-2020
ಬೀದರ
ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 21-01-2020 ರಂದು ಬೀದರ ನಗರದ ಸುಜಾತಾ
ಬಾರ್ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟ್ಕಾ ಎಂಬ ನಸೀಬಿನ ಮಟ್ಕಾ
ಚೀಟಿ ನಡೆಸುತ್ತಿದ್ದಾನೆಂದು ಗುರುಲಿಂಗಪ್ಪಾ ಗೌಡ, ಪಿ.ಎಸ್.ಐ(ಕಾಸು) ನೂತನ ನಗರ ಪೊಲೀಸ್ ಠಾಣೆ
ರವರಿಗೆ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ
ಸಿಬ್ಬಂದಿಯವರೊಡನೆ ಸುಜಾತಾ ಬಾರ್ ಹತ್ತಿರ ತಲುಪಿ ಮರೆಯಾಗಿ ನಿಂತು ನೋಡಲಾಗಿ ಸದರಿ ಬಾರ್
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಫಾರೂಕ
ತಂದೆ ಅಬ್ದುಲ ಹಮೀದ್, ವಯ:
25 ವರ್ಷ,
ಜಾತಿ: ಮುಸ್ಲಿಂ, ಸಾ: ಹಳೆ ಮೈಲೂರ ಬೀದರ ಇತನು ಸಾರ್ವಜನಿಕರಿಗೆ ಮಟ್ಕಾ ನಸೀಬಿನ ಜೂಜಾಟ ಒಂದು ರೂ.
ಗೆ 08/- ಅಂತಲೂ ಮತ್ತು 10/- ರೂ. ಗೆ 80/- ರೂ. ಅಂತಾ ಹೇಳುತ್ತಾ ಸಾರ್ವಜನಿಕರಿಂದ ದುಡ್ಡು
ಪಡೆದುಕೊಳ್ಳುತ್ತಾ ಅವರಿಗೆ ಮಟ್ಕಾ ಚೀಟಿ ಬರೆದುಕೊಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಿಎಸ್ಐ
ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಅಂಗ
ಝಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 1130/- ರೂ. ನಗದು ಹಣ, 3 ಮಟ್ಕಾ ಚೀಟಿಗಳು ಮತ್ತು ಒಂದು ಬಾಲ್ ಪೆನ್ ದೊರಕಿದ್ದು, ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ಸದರಿ
ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ.
07/2020, ಕಲಂ. 279, 337, 338 ಐಪಿಸಿ :-
ದಿನಾಂಕ 21-01-2020 ರಂದು ಫಿರ್ಯಾಧಿ ನರಸಪ್ಪ ತಂದೆ ಮಾಣಿಕಪ್ಪಾ ಬೆಲ್ಲಮೆ ವಯ: 58 ವರ್ಷ, ಜಾತಿ: ಯಾದವ ಗೊಲ್ಲ, ಸಾ: ಮಲ್ಲಿಕಾರ್ಜುನ ವಾಡಿ ರವರು ಮುಡಬಿ ಪೊಲೀಸ ಠಾಣೆಯಲ್ಲಿ ಸಹಾಯಕ ಪೊಲೀಸ ಉಪ
ನೀರಿಕ್ಷಕರು ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಹೀಗಿರುವಾಗ ದಿನಾಂಕ 21-01-2020 ರಂದು 0700 ಗಂಟೆಗೆ ಠಾಣೆಯಿಂದ ಗ್ರಾಮ ಭೇಟಿ ಮತ್ತು ಪೆಟ್ರೋಲಿಂಗ ಕರ್ತವ್ಯ ಕುರಿತು ಮಂಗಳೂರು, ಸುಂಠಾಣ ಗ್ರಾಮಗಳಿಗೆ ತನ್ನ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-7050 ನೇದರ ಮೇಲೆ ಹೋಗಿ ಮರಳಿ ಸುಂಠಾಣ ಧನಗರ ವಾಡಿ ರೋಡಿನ ಮಾರ್ಗವಾಗಿ ಮುಡಬಿ ಕಡೆಗೆ ಬರುತ್ತಿರುವಾಗ ಸುಂಠಾಣ ಶಿವಾರದ ಹಳ್ಳದಿಂದ 100 ಮೀಟರ ಇಚೆಗೆ ತಿರುವಿನಲ್ಲಿ ಎದುರಿನಿಂದ ಮೋಟಾರ್ ಸೈಕಲ್ ನಮ. ಕೆಎ-56/ಜೆ-5535 ನೇದರ ಚಾಲಕನಾದ ಆರೋಪಿ ಸಂಜುಕುಮಾರ ತಂದೆ ಮಾಣಿಕಪ್ಪ ದಾಸುರಿ ಸಾ: ಹಿರನಾಗಾಂವ ಇತನು ತನ್ನ ಮೋಟಾರ್ ಸೈಕಲನ್ನು
ನಿಯಂತ್ರಣ ಮಾಡದೇ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಬಲಗೈ ಕಿರುಬೆರಳಿಗೆ ಭಾರಿ ರಕ್ತಗಾಯ, ಬಲಗಾಲು ಹೆಬ್ಬೆರಳಿಗೆ, ಎಡಗೈ ಉಂಗುರ ಮತ್ತು ಕಿರುಬೆರಳಿಗೆ ರಕ್ತಗಾಯ, ಎಡಗಾಲು ಹಿಮ್ಮಡಿಗೆ ಮತ್ತು ಎಡಭುಜದಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಆರೋಪಿಗೆ ನೋಡಲು ಆತನ ಎಡಗೈ ಮೊಳಕೈಗೆ ರಕ್ತಗಾಯ, ತಲೆಯಲ್ಲಿ ರಕ್ತಗಾಯ, ಎಡಗಾಲು ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ
ಘಾಳೆಪ್ಪ ಎಎಸ್ ಐ
ರವರು ಸ್ಥಳಕ್ಕೆ ಬಂದಾಗ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಮುಡಬಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment