Police Bhavan Kalaburagi

Police Bhavan Kalaburagi

Monday, February 3, 2020

BIDAR DISTRICT DAILY CRIME UPDATE 03-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-02-2020

ಜನವಾಡಾ ಪೊಲೀಸ ಠಾಣೆ ಅಪರಾಧ ಸಂ. 07/2020, ಕಲಂ. 279, 338, 304() ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ 02-02-2020 ಫಿರ್ಯಾದಿ ಕರುಣಾಬಾಯಿ ಗಂಡ ರಾಜಕುಮಾರ ಗೊಂದಳಿ ಲಾಲಬಾಗ ಗ್ರಾಮ ರವರು ತನ್ನ ಗಂಡ ರಾಜಕುಮಾರ ಗೊಂದಳಿ ರವರ ಜೊತೆಯಲ್ಲಿ ಹೊನ್ನಿಕೇರಿ ಶಿವಾರದಲ್ಲಿನ ತಮ್ಮ ಹೊಲಕ್ಕೆ ತೋಗರಿ ಬೇಳೆ ರಾಶಿ ಮಾಡಲು ಹೊಗಿ ಹೊಲದಲ್ಲಿನ ತೋಗರೆಯನ್ನು ಪೂರ್ತಿಯಾಗಿ ಕೊಯ್ದು ಮಷಿನ್ ಸಿಗದ ಕಾರಣ ನಾಳೆ ರಾಶಿ ಮಾಡೋಣ ಅಂತಾ ಇಬ್ಬರು ಹೊಲದಿಂದ ಬಿಟ್ಟು ನಡೆದುಕೊಂಡು ಭಾಲ್ಕಿ ಬೀದರ ರೋಡಿನ ಮುಖಾಂತರ ಲಾಲಬಾಗ ಗ್ರಾಮಕ್ಕೆ ಬರುತ್ತಿರುವಾಗ ತಮ್ಮೂರ ಹತ್ತಿರ ಇರುವ ಬೀದರನ ಚನ್ನಬಸಪ್ಪ ರವರ ಜಮೀನಿನ ಹತ್ತಿರ ಬಂದಾಗ ಹಿಂದುಗಡೆಯಿಂದ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂ. ಕೆಎ-05/ಜೆಎ-6762 ನೇದರ ಚಾಲಕ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿಯವರಿಗೆ ಸೈಡ್ ಹೊಡೆದು ಮುಂದೆ ಹೊದ ತಕ್ಷಣ ಹಿಂದುಗಡೆಯಿಂದ ಕಾರ ನಂ. ಕೆಎ-37/ಎಮ್-2300 ನೇದ್ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಗಂಡ ರಾಜಕುಮಾರ ರವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದಾಗ ಅವರು ಕೆಳಗಡೆ ಬಿದ್ದಿದ್ದು ಅವರ ತಲೆಯ ಮೇಲಿಂದ ಕಾರು ಹಾದು ಮುಂದೆ ಹೊಗಿ ಮುಂದುಗಡೆ ಹೊಗುತ್ತಿದ್ದ ಮೋಟಾರ್ ಸೈಕಲ್ ಚಾಲಕನಿಗೂ ಸಹ ಡಿಕ್ಕಿ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ಗಂಡನ ಎಡಗಾಲಿಗೆ ಭಾರಿ ರಕ್ತಗಾಯ, ತಲೆಯ ಮೇಲಿನ ಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೌಂಸ ಖಂಡ ಹೊರಗಡೆ ಬಂದಿದ್ದು, ಮುಖದ ಮೇಲೆ ರಕ್ತಗಾಯ ಮತ್ತು ಎಡಗೈಗೆ ತರಚಿದ ರಕ್ತಗಾಯವಾಗಿದ್ದು ಮಾತನಾಡಲಾರದ ಸ್ಥಿತಿಯಲ್ಲಿ ಬಿದ್ದಿದ್ದರು, ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಮೋಟಾರ್ ಸೈಕಲ್ ಚಾಲಕನಾದ ವೈಜಿನಾಥ ತಂದೆ ಮಲ್ಲಿಕಾರ್ಜುನ ಕುಂಬಾರ ಡಾವರಗಾಂವ ಗ್ರಾಮ ಇದ್ದು, ತಕ್ಷಣ ಗಾಯಗೊಂಡ ಗಂಡ ರಾಜಕುಮಾರ ರವರಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ವೈದ್ಯಾಧಿಕಾರಿಗೆ ತೋರಿಸಲು ಗಂಡನಿಗೆ ನೋಡಿದ ವೈದ್ಯರು ಅವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 15/2020, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಜಾನ ತಂದೆ ಶೀರೋಮಣಿ ಸಾ: ಮನೆ ನಂ. 12-1-170 ಗ್ರೇಸ್ ಕಾಲೋನಿ ಗೌಳಿವಾಡಾ ಹಾರೂರಗೇರಿ ರೋಡ ಬೀದರ ರವರ ಮಗಳಾದ ಸುಹಾಸನಿ ರೂತ್ ಇವಳು  ದಿನಾಂಕ 31-01-2020 ರಂದು 0530 ಗಂಟೆಗೆ ಎಂದಿನಂತೆ ವಾಕಿಂಗೆ ಹೋಗಿ ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ, ನಂತರ ಬೀದರ ನಗರದಲ್ಲಿ ಹುಡುಕಾಡಿ ಮತ್ತು ಸಂಬಂಧಿಕರಲ್ಲಿ ವಿಚಾರಣೆ ಮಾಡಲಾಗಿ ಮಗಳ ಬಗ್ಗೆ ಪತ್ತೆಯಾಗಿರುವುದಿಲ್ಲ, ಮಗಳ ಚಹರೆ ಪಟ್ಟಿ 1) ಹೆಸರು ಮತ್ತು ವಿಳಾಸ: - ಸುಹಾಸನಿ ರೂತ್ ತಂದೆ ಜಾನ್ ಶಿರೋಮಣಿ ವಯ: 49 ವರ್ಷ, ಸಾ: ಅಮೃತ ನಿವಾಸ ಗ್ರೇಸ ಕಾಲೋನಿ ಗೌಳಿವಾಡಾ ಹಾರೂರಗೇರಿ ರೋಡ ಬೀದರ, 2) ಮೈಬಣ್ಣ:- ಗೋಧಿ ಬಣ್ಣ, 3) ಮೈಕಟ್ಟು:- ಪ್ಪನೇಯ ಮೈಕಟ್ಟು, 4) ಬಟ್ಟೆ:- ಹಸಿರು ಬಣ್ಣದ ನೈಟಿ ಧರಿಸಿರುತ್ತಾಳೆ, 5) ಭಾಷೆ:- ಕನ್ನಡ, ಹಿಂದಿ ಹಾಗೂ ಇಂಗ್ಲೀಷ ಮತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. 279, 338 ಐಪಿಸಿ ಜೊತೆ 185 ಐಎಂವಿ ಕಾಯ್ದೆ :-
ದಿನಾಂಕ 02-02-2020 ರಂದು ಫಿರ್ಯಾದಿ ಸುನೀತಾ ಗಂಡ ಶೆರಣಪ್ಪಾ ಮೂರಮಟ್ಟಿ, ವಯ: 50 ವರ್ಷ, ಜಾತಿ: ಕೋಳಿ, ಸಾ: ರಾಜೋಳ ರವರ ಗಂಡ ಶರಣಪ್ಪಾ ತಂದೆ ಬಿಚ್ಚಪ್ಪಾ ಮೂರಮಟ್ಟಿ, ವಯ: 55 ವರ್ಷ, ಜಾತಿ: ಕೋಳಿ, ಸಾ: ರಾಜೋಳ ಮಂಡಲ ನ್ಯಾಲಕಲ್ (ಟಿಎಸ್) ರವರು ಬಸವೇಶ್ವರ ವೃತ್ತದ ಹತ್ತಿರ ಇರುವ ಚಿಕನ್ ಅಂಗಡಿಯಿಂದ ಚಿಕನ್ ತೆಗೆದುಕೊಂಡು ಬಸವೇಶ್ವರ ವೃತ್ತದ ಕಡೆಗೆ ನಡೆದುಕೊಂಡು ಸನಾ ಬಿರಯಾನಿ ಹೊಟೇಲ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಕರ್ನಾಟಕ ಕಾಲೇಜ ಕಡೆಯಿಂದ ಕಾರ ನಂ. ಕೆಎ-38/ಎಮ್-6798 ನೇದರ ಚಾಲಕನಾದ ಆರೋಪಿ ಮಾದವರಾವ ತಂದೆ ಹಣಮಂತರಾವ ವಯ: 42 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ತೆಲಗಾಂವ, ಸದ್ಯ: ಜೆರಸ್ಲೇಮ್ ಕಾಲೋನಿ ಬೀದರ ಇತನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ಗಮಡನಿಗೆ ತಲೆಗೆ ಭಾರಿ ರಕ್ತ ಗುಪ್ತಗಾಯವಾಗಿ, ಎಡ ಕಿವಿಯಿಂದ ರಕ್ತ ಬಂದಿರುತ್ತದೆ, ನಂತರ ಅವರಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 454, 457, 380 ಐಪಿಸಿ :-
ದಿನಾಂಕ 01-02-2020 ರಂದು 1200 ಗಂಟೆಯಿಂದ 2200 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸಂಜೀವಕುಮಾರ ತಂದೆ ಮಾರುತಿ ಬಂದಗೆ ವಯ: 38 ವರ್ಷ, ಸಾ: ಮುಡುಬಿ, ಸದ್ಯ: ಪೊಲೀಸ್ ವಸತಿ ಗೃಹ ಮಂಠಾಳ ರವರ ಮನೆಗೆ ಹಾಕಿದ ಕೀಲಿ ತೆಗೆದು ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ 35 ಗ್ರಾಂ ಬಂಗಾರದ ಗಂಟನ್ (ಆಭರಣ) ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 15/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 27-01-2020 ರಂದು ಫಿರ್ಯಾದಿ ರಾಮಚಂದ್ರ ತಂದೆ ಗೋವಿಂದ ಖರಟಮಲ್ ಸಾ: ದುಬಲಗುಂಡಿ ರವರ ತಂದೆಯವರು ದುಬಲಗುಂಡಿ ಗ್ರಾಮದ ಮ್ಮ ಮನೆಯಿಂದ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿ ಮರಳಿ Äನೆಗೆ ಬರದೆ ಕಾಣೆಯಾಗಿರುತ್ತಾರೆ, ಫಿರ್ಯಾದಿಯವರು ತಮ್ಮ ತಂದೆಯವರನ್ನು ಎಲ್ಲಾ ಕಡೆಗೆ ಹುಡುಕಾಡಿ ವಿಚಾರಿಸಿ ತಿಳಿದುಕೊಳ್ಳಲು ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 02-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 02-02-2020 ರಂದು ಜೋಜನಾ ಗ್ರಾಮದ ಸಂತೋಷ ಸ್ವಾಮಿ ಇವರು ತಮ್ಮ ಕಿರಾಣಾ ಅಂಗಡಿಯಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆಂದು ಪ್ರಭಾಕರ್ ಪಾಟೀಲ್ ಪಿ.ಎಸ್. ಸಂತಪುರ ಪೋಲಿಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನ ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೋಜನಾ ಗ್ರಾಮದ ಹತ್ತಿರ ಹೋಗಿ ಗ್ರಾಮ ಪಂಚಾಯ ಕಟ್ಟಡದ ಹಿಂದೆ ನಿಂತು ಮರೆಯಾಗಿ ನೋಡಲಾಗಿ ಅಲ್ಲಿ ಆರೋಪಿ ಸಂತೋಷ ತಂದೆ ಲ್ಲಯ್ಯಾ ಸ್ವಾಮಿ ಯ: 40 ವರ್ಷ, ಜಾತಿ: ಸ್ವಾಮಿ, ಸಾ: ಜೋಜನಾ ಇತನು ಅನಧಿಕೃತವಾಗಿ ತನ್ನ ಕಿರಾಣಿಯ ಅಂಗಡಿಯ ಮುಂದೆ ಸರಾಯಿ ಕಾಟನಗಳು ಇಟ್ಟುಕೊಂಡು ನಿಂತಾಗ ಸದರಿ ಆರೋಪಿಗೆ ಸಿಬ್ಬಂದಿಯವ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇಟ್ಟುಕೊಂಕಾಟನದಲ್ಲಿ ನಿದೆ? ಅಂತ ವಿಚಾರಿಸಿದಾಗ ನಾನು ಸಂತಪೂರ ವೈನ್ಸದಿಂದ ಸರಾಯಿ ಕಾಟನಗಳು ತಂದಿದ್ದು ಅಂತ ತಿಳಿಸಿದಾಗ ಪಂಚರ ಸಮಕ್ಷಮ ಸದರಿ ಕಾಟನಗಳನ್ನು ಪರಿಶಿಲಿಸಿ ನೋಡಲಾಗಿ 1) 3 ಕಾಟನನಲ್ಲಿ 650 ಎಮ್.ಎಲ್ ನಾಕೌಟ್ ಹೈ ಪಂಚ ಬಿಯರ್ 30 ಗಾಜಿನ ಬಾಟಲಗಳು ಅ.ಕಿ 4050/- ರೂ., 2) 2 ಕಾಟನದಲ್ಲಿ 330 ಎಮ್.ಎಲ್ ನಾಕೌಟ್ ಹೈ ಪಂಚ ಬಿಯರ್ 47 ಗಾಜಿನ ಬಾಟಲಗಳು ಅ.ಕಿ 3290/- ರೂ., 3) 180 ಎಮ್.ಎಲ್ ಮ್ಯಾಕಡೋಲ್ ವಿಸ್ಕಿ 9 ಗಾಜಿನ ಬಾಟಲಗಳು 1460/- ರೂ., 4) 180 ಎಮ್.ಎಲ್ ಲ್ಡ್ ಟಾವರ್ನ ವಿಸ್ಕಿ 15 ಪ್ಯಾಕೆಟಗಳು ಅ.ಕಿ 1112/- ರೂ., 5) 180 ಎಮ್.ಎಲ್ ಬ್ಯಾಗ ಪೈಪರ್ 9 ಪ್ಯಾಕೆಟಗಳು ಅ.ಕಿ 811/- ರೂ. ಹಾಗೂ 6) 90 ಎಮ್.ಎಲ್ ಓರಜನಲ್ ಚೌಯಿಸ ವಿಸ್ಕಿ 63 ಪ್ಯಾಕೆಟಗಳು ಅ.ಕಿ 1970/- ರೂ. ಮತ್ತು ಆರೋಪಿಯ ಹತ್ತಿರ ನಗದು ಹಣ 1500/- ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು, ಆರೋಪಿಗೆ ನಿನ್ನ ಹತ್ತಿರ ಸರಕಾರದಿಂದ ಅನುಮತಿ ಪತ್ರ ಇದೆಯೇ ಹೇಗೆ ಅಂತ ವಿಚಾರಿಸಿದಾಗ ನನ್ನ ಹತ್ತಿರ ಯಾವುದೆ ಸರಕಾರ ಅನುಮತಿ ಪತ್ರ ಇರುವದಿಲ್ಲಾ ನಾನು ಸಂತಪೂರ ವೈನ್ಸ ಚಂದ್ರಕಾಂತ ತಂದೆ ನಾಗೇಂದ್ರ ಕಲಾಲ ಸಾ: ಸಂತಪೂರ ಇವರ ಹತ್ತಿರದಿಂದ ಮಾರಾಟ ಮಾಡಲು ತಂದಿರುತ್ತೆನೆ ಅಂತ ತಿಳಿಸಿದನು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: