Police Bhavan Kalaburagi

Police Bhavan Kalaburagi

Tuesday, February 4, 2020

BIDAR DISTRICT DAILY RIME UPDATE 04-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-02-2020

ಬೀದರ ನೂತನ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಗುಂಡಪ್ಪಾ ತಂದೆ ಘಾಳೆಪ್ಪಾ ಹಡಪದ ವಯ: 33 ವರ್ಷ, ಸಾ: ಚಿಲ್ಲರ್ಗಿ ರವರ ಅಣ್ಣನಾದ ಕಲ್ಲಪ್ಪಾ ತಂದೆ ಘಾಳೆಪ್ಪಾ ಹಡಪದ ವಯ: 37 ವರ್ಷ, ಸಾ: ಚಿಲ್ಲರ್ಗಿ ಇತನು ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆದಿಲ್ಲಾ ಬ್ಯಾಂಕಿನ ಸಾಲ ಹೇಗೆ ತಿರಿಸಬೇಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 03-02-2020 ರಂದು 1100 ಗಂಟೆಯಿಂದ 1500 ಗಂಟೆಯ ಅವಧಿಯಲ್ಲಿ ಬಾತರೂಮಿನ ಕಟ್ಟಿಗೆ ದಂಟಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 302 ಜೊತೆ 34 ಐಪಿಸಿ :-
ಫಿರ್ಯಾದಿ ಸಂಜು ತಂದೆ ಮಾರುತಿ ರಾಠೋಡ ಸಾ: ನರಸಿಂಹಪುರ ತಾಂಡಾ, ಔರಾದ[ಬಿ] ರವರು ರವರ ಮಗಳು 9 ನೇ ತರಗತಿಯಲ್ಲಿ ಬೀದರ ತಾಲೂಕಿನ ಕೊಲ ಗ್ರಾಮದ ಶ್ರಮಜೀವಿ ಬಾಲಕ/ಬಾಲಕರ ವಸತಿ ನಿಲಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಳು, ಹೀಗಿರುವಾಗ ದಿನಾಂಕ 03-02-2020 ರಂದು 0650 ಗಂಟಗೆ ಮೃತ ದೇಹವನ್ನು ದವಾಖಾನೆಗೆ ತಂದಿರುತ್ತಾರೆ, ಸದರಿಯವರು ಮಗಳ ಸಾವಿನ ಹೊಣೆ ಅಲ್ಲಿನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರು ಕೊಳಾರ(ಕೆ) ಗ್ರಾಮ ತನ್ನ ಮಗಳ ಸಾವಿಗೆ ಇವರೆಲ್ಲರೂ ಹೊಣೆಯಾಗಿರುತ್ತಾರೆ, ಆಕೆಯ ಮರಣ ಯಾವ ರೀತಿ ಆಗಿದೆ ಎಂಬುದು ಖಚಿತ ಪಡಿಸಿ ನ್ಯಾಯ ಒದಗಿಸಿಕೊಡಬೆಕೆಂದು ವಿನಂತಿ ಎಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 06/2020, ಕಲಂ. 363 ಐಪಿಸಿ :-
ಫಿರ್ಯಾದಿ ಶ್ರೀಮಂತ ತಂದೆ ಲಕ್ಷ್ಮಣ ಗೋಡಬೊಲೆ ವಯ: 56 ವರ್ಷ, ಜಾತಿ: ಹೊಲಿಯಾ, ಸಾ: ತೋಗಲೂರ, ತಾ: ಹುಲಸೂರ ರವರ ಮಗಳಾದ ಪಲ್ಲವಿ ವಯ: 16 ವರ್ಷ ಇವಳಿಗೆ ದಿನಾಂಕ 28-01-2020 ರಂದು 1100 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ಮ್ಮ ಮನೆಯಿಂದ ಯಾರೋ ಅಪಹರಿಸಿಕೊಂಡು ಹೋಗಿರಬಹುದು, ತನ್ನ ಮಗಳಿಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 38/2020, ಕಲಂ. 420 ಐಪಿಸಿ ಜೊತೆ 78(3) ಕೆ.ಪಿ ಕಾಯ್ದೆ :-
ದಿನಾಂಕ 03-02-2020 ರಂದು ಹಳೆ ಭಾಲ್ಕಿಯ ಚೌಡಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಒಂದು ರೂ. ಗೆ 80/- ರೂ. ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಡಾ: ದೇವರಾಜ.ಬಿ ಡಿ.ಎಸ್.ಪಿ ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ಚೌಡಿ ಹತ್ತಿ ಹೋಗಿ ಮರೆಯಲ್ಲಿ ನಿಂತು ನೋಡಲು ಚೌಡಿ ಗಣೇಶ ಕಟ್ಟೆ ಹತ್ತಿರ ಆರೋಪಿ ಸೈಯದ ನಾಜರಅಲಿ ತಂದೆ ಸೈಯದ ಮುಜಾಫರಅಲಿ ವಯ: 43 ವರ್ಷ, ಜಾತಿ: ಮುಸ್ಲಿಂ, ಸಾ: ಬಾಗವಾನ ಗಲ್ಲಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಒಂದು ರೂ. ಗೆ 80/- ರೂ. ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಿಂದ ನಗದು ಹಣ 1800/- ರೂ. ಮತ್ತು 4 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲ ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದೆನೆಂದರೆ ತಾನು ಒಂದು ರೂ. ಗೆ 80/- ರೂ. ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿದರಿಂದ, ಸದರಿ ಆರೋಪಿಗೆ ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: