ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-02-2020
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ.
03/2020, ಕಲಂ. 174 ಸಿ.ಆರ್.ಪಿ.ಸಿ
:-
ದಿನಾಂಕ 11-02-2020 ರಂದು 2030 ಗಂಟೆಗೆ ಫಿರ್ಯಾದಿ ಶಂಕರ ತಂದೆ ಕಿಶನ ರಾಠೋಡ ಸಾ: ಹೊನ್ನಿಕೇರಿ ತಾಂಡಾ, ತಾ: ಜಿ: ಬೀದರ ರವರ ಮಗನಾದ ಬಬಲು ತಂದೆ ಶಂಕರ ರಾಠೋಡ್
ವಯ: 19
ವರ್ಷ
ಈತನು ಮನೆಗೆ ಬಂದು ಸರಾಯಿ ಕುಡಿಯಲು ಹಣ ಕೆಳಿದಾಗ ಅವನಿಗೆ ದಿನಾಲು ಸರಾಯಿ ಕುಡಿಯಲು ಹಣ ಕೆಳಿದರೆ ಎಲ್ಲಿಂದ ಕೊಡಲಿ ಅಂತಾ ಹೇಳಿ ಫಿರ್ಯಾದಿಯು ಮನೆಯಿಂದ ಭವಾನಿ ಮಂದಿರದ ಕಡೆಗೆ ಹೊಗಿ ಮನೆಗೆ ಬಂದಾಗ ಬಬಲು ಈತನು ತಮ್ಮ ಮನೆಯ ದೇವರ ರೂಮಿನಲ್ಲಿ ತಗಡದ ಕೆಳಗೆ ಇರುವ ಅಡ್ಡದಂಟೆಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದು ನೋಡಿ ಫಿರ್ಯಾದಿಯು ಗಾಬರಿಗೊಂಡ ಜೋರಾಗಿ ಚಿರಿದಾಗ ಪಕ್ಕದ ಮನೆಯ ಮೈದುನ ಶಿವಾಜಿ ರಾಠೋಡ್ ಮತ್ತು ನೆಗೆಣಿ ಗಂಗೂಬಾಯಿ ರಾಠೋಡ ರವರು ಒಡುತ್ತ ಬಂದು ಬಬಲು ಈತನಿಗೆ ನೋಡಿ ಬಬಲುಗೆ ನೇಣಿನಿಂದ ಬಿಚ್ಚಿ ಕೆಳಗೆ ಇಳಿಸಿ ನೋಡುಷ್ಟರಲ್ಲಿ ಬಬಲು ಈತನು ಮೃತಪಟ್ಟಿದ್ದು
ಇರುತ್ತದೆ, ಬಬಲು
ರಾಠೋಡ್ ಈತನು ಸಾರಾಯಿ ಕುಡಿದ ನಶೆಯಲ್ಲಿ ಇನ್ನು ಸರಾಯಿ ಕುಡಿಯಲು ಹಣ ಕೆಳಿದ್ದು ಹಣಕೊಡದೆ ಇದ್ದಾಗ ಸರಾಯಿ ಕುಡಿದ ನಶೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 12-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ.
10/2020, ಕಲಂ. 498(ಎ),
323, 504, 506 ಜೊತೆ 34 ಐಪಿಸಿ ಮತ್ತು ಕಲಂ.
3 & 4 ಡಿಪಿ ಕಾಯ್ದೆ
:-
ಫಿರ್ಯಾದಿ ರಾಧಿಕಾ ಗಂಡ ದತ್ತಾತ್ರಿ ಮೇತ್ರೆ ವಯ: 29 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಚಿಕಪೇಟ್, ಬೀದರ, ಸದ್ಯ; ಹೌಸಿಂಗ್ ಬೋರ್ಡ ಕಾಲೋನಿ, ಬೀದರ ರವರ ಮದುವೆಯು ಚಿಕಪೇಟ್ ಗ್ರಾಮದ ವಿಶ್ವನಾಥ ಮೇತ್ರೆ ರವರ ಮಗನಾದ ದತ್ತಾತ್ರಿಯ ಜೊತೆಯಲ್ಲಿ ದಿನಾಂಕ 10-12-2017 ರಂದು ತಮ್ಮ ಧರ್ಮದ ಪ್ರಕಾರ ಆಗಿರುತ್ತದೆ, ಮದುವೆಯಲ್ಲಿ ತಂದೆ, ತಾಯಿಯರು ದತ್ತಾತ್ರಿ ಮೇತ್ರೆ ರವರಿಗೆ 5 ಲಕ್ಷ ರೂಪಾಯಿ ಹಾಗೂ 10 ತೊಲೆ ಬಂಗಾರ ವರೋಪಚಾರವಾಗಿ ನೀಡಿ ಬೀದರನ ಝೀರಾ ಫಂಕ್ಷನ್ ಹಾಲನಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ ಫಿರ್ಯಾದಿಗೆ ಸುಮಾರು 2 ವರ್ಷಗಳ ಕಾಲ ಆರೋಪಿತರಾದ ಗಂಡ ದತ್ತಾತ್ರಿ, ಮಾವ ವಿಶ್ವನಾಥ, ಅತ್ತೆ ಕಮಲಾಬಾಯಿ, ಭಾವ ರವೀಂದ್ರ, ನಾದನಿ ಮಹಾನಂದಾ, ನೆಗೆಣಿ ಉಷಾ ಕಿರಣ ರವರೆಲ್ಲರೂ ಚೆನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಗಂಡ ಸರಾಯಿ ಕುಡಿಯುವ ಚಟಕ್ಕೆ ಬಿದ್ದು ದಿನಾಲು ಸರಾಯಿ ಕುಡಿದು ಬಂದು ಇಡೀ ರಾತ್ರಿ ಹೊಡೆ-ಬಡೆ ಮಾಡುವುದು, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು, ಅಲ್ಲದೇ ಅತ್ತೆ, ಮಾವ, ಭಾವ, ನಾದನಿ, ಮತ್ತು ನೆಗೆಣಿ ರವರೆಲ್ಲರೂ ಕೂಡಿ ನೀನು ಎಲ್ಲಿಂದ ದತ್ತಾತ್ರಿಗೆ ಗಂಟು ಬಿದ್ದಿದ್ದಿ ನಿನಗೆ ಅಡುಗೆ, ಮನೆ ಕೆಲಸ ಮಾಡಲು ಬರುವುದಿಲ್ಲ, ನಿನ್ನ ತಂದೆ ತಾಯಿಯವರು ನಿನಗೆ ಸಂಸ್ಕೃತಿ ಸರಿಯಾಗಿ ಕಲಿಸಿಲ್ಲ, ನಮ್ಮ ಮನೆಗೆ ತಕ್ಕ
ಹಣ ಕೊಟ್ಟಿಲ್ಲ, ನಿನ್ನ ತವರು ಮನೆಯಿಂದ ಇನ್ನು 5,00,000/- ರೂಪಾಯಿ ಹಣ ತೆಗೆದುಕೊಂಡು ಬಾ ನೀನು ಹಣ ತರದಿದ್ದರೆ ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತ ಅವರೆಲ್ಲರೂ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು, ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತಂದೆ ತಾಯಿಯವರಿಗೆ ಹೇಳಿದಾಗ ಅವರೆಲ್ಲೂ ಬಂದು ಗಂಡ ಹಾಗೂ ಗಂಡನ ಮನೆಯವರಿಗೆ ಏಕೆ ಸುಮ್ಮನೆ ರಾಧಿಕಾ ಇವಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಿರಿ ಇದು ಸರಿ ಅಲ್ಲ ನಿಮಗೆ ಬೇಕಾದರೆ ಸ್ವಲ್ಪ ದಿವಸಗಳ ನಂತರ ಹಣ ಕೊಡುತ್ತೆವೆ ಅವಳಿಗೆ ಚೆನ್ನಾಗಿ ನೋಡಿಕೊಳ್ಳಿರಿ ಅಂತ ಅವರಿಗೆ ಬುದ್ದಿವಾದ ಹೇಳಿರುತ್ತಾರೆ, ಆದರೂ ಕೂಡ ಸದರಿ ಆರೋಪಿತರೂ ಮೇಲಿಂದ ಮೇಲೆ ವರದಕ್ಷಿಣೆ ಕಿರುಕುಳ
ಕೊಡುತ್ತಲೇ ಬಂದಿರುತ್ತಾರೆ, ನಂತರ ಫಿರ್ಯಾದಿಯೊಂದಿಗೆ ಸದರಿ ಆರೋಪಿತರೆಲ್ಲರೂ ಜಗಳ ಮಾಡಿ ಡಿಸೆಂಬರ್ 2019 ನೇ ತಿಂಗಳಲ್ಲಿ ತವರು
ಮನೆಗೆ ಕಳುಹಿಸಿರುತ್ತಾರೆ, ನಂತರ ದಿನಾಂಕ 19-01-2020 ರಂದು ಸದರಿ ಆರೋಪಿತರೆಲ್ಲರು ಕೂಡಿಕೊಂಡು ಫಿರ್ಯಾದಿಯ ತವರು ಮನೆಗೆ ಬಂದು ನಿನಗೆ ಹಣ ತೆಗೆದುಕೊಂಡು ಬಾ ಅಂದರೆ ನೀನು ಇಲ್ಲಿಯೇ ಉಳಿದುಕೊಂಡಿದ್ದಿ ಅಂತ ಜಗಳ ತೆಗೆದು ಗಂಡ ಫಿರ್ಯಾದಿಯ ತಲೆಯ ಕೂದಲು ಹಿಡಿದು ಏಳೆದು ಕೈಯಿಂದ ಕಪಾಳದ ಮೇಲೆ ಹೊಡೆದನು, ಅಷ್ಟರಲ್ಲಿ ಮನೆಯಲ್ಲಿದ್ದ ಫಿರ್ಯಾದಿಯ ತಂದೆ, ತಾಯಿ ಏಕೆ ಸುಮ್ಮನೆ ಜಗಳ ಮಾಡುತ್ತಿರಿ ಅಂತ ಕೇಳಿದಾಗ ಸದರಿ ಆರೋಪಿತರು ತಂದೆಯವರಿಗೆ ನಿನ್ನ ಮಗಳಿಗೆ 5 ಲಕ್ಷ ರೂಪಾಯಿ ಕೊಟ್ಟು ಕಳುಹಿಸಿ ಕೊಡು ಇಲ್ಲವಾದರೆ ನೀನಗೂ ಹಾಗೂ ನಿನ್ನ ಮಗಳಿಗೆ ಜೀವ ಸಮೇತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ, ಅಷ್ಟರಲ್ಲಿ ಜಗಳದ ಶಬ್ದ ಕೇಳಿ ಪಕ್ಕದ ಮನೆಯವರು ಬಂದು ಸುಮ್ಮನೆ ಏಕೆ ಜಗಳ ಮಾಡುತ್ತಿರಿ ಇದು ಸರಿ ಅಲ್ಲ ಅಂತ ಅವರಿಗೆ ಸಮಜಾಯಿಷಿ ಜಗಳವನ್ನು ಕಣ್ಣಾರೆ ನೋಡಿ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 12-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 17/2020, ಕಲಂ. 323,
498(ಎ), 504, 506 ಜೊತೆ
149 ಐಪಿಸಿ ಮತ್ತು
3, 4 ಡಿ.ಪಿ ಕಾಯ್ದೆ :-
ಫಿರ್ಯಾದಿ ಮನಿಶಾ ಗಂಡ ಭಗವಾನ ಸಿಂದೆ ವಯ: 24 ವರ್ಷ, ಜಾತಿ: ಎಸ್.ಸಿ. ಮಹಾರ, ಸಾ: ಹುಣಜಿ, ತಾ: ಭಾಲ್ಕಿ ರವರ ಮದುವೆ ದಿನಾಂಕ 09-06-2019 ರಂದು ಹುಣಜಿ ಗ್ರಾಮದ ಭಗವಾನ ತಂದೆ ವೈಜಿನಾಥ ಸಿಂದೆ ಈತನ ಜೊತೆ ಆಗಿದ್ದು,
ಮದುವೆಯಲ್ಲಿ 2 ತೊಲೆ ಬಂಗಾರೆ, 1,50,000/- ರೂ. ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ,
ಮದುವೆಯಾದ 15 ದಿವಸಗಳ ನಂತರ ಗಂಡ ಭಗವಾನ ಈತನು ಫಿರ್ಯಾದಿಗೆ
ನಿನ್ನ ತಂದೆ, ತಾಯಿಯವರ ಹತ್ತಿರದಿಂದ ಹಣ ಮತ್ತು ಫ್ರಿಜ
ತೆಗೆದುಕೊಂಡು ಬಾ ಅಂತ ಮಾನಸಿಕ ಮತ್ತು ದೈಹಿಕ ಕಿರಕುಳ ನೀಡಿರುತ್ತಾನೆ ಮತ್ತು ಆರೋಪಿತರಾದ ಫಿರ್ಯಾದಿಯ
ಮಾವ ವೈಜಿನಾಥ ಸಿಂದೆ, ಅತ್ತೆ ಸರುಬಾಯಿ ವೈಜಿನಾಥ ಸಿಂದೆ, ಕಲ್ಲಪ್ಪಾ ಭುತಾಳೆ, ಕೊಂಡಾಬಾಯಿ ಕಲ್ಲಪ್ಪಾ ಭೂತಾಳೆ, ಪ್ರಥವಿ ಕಲ್ಲಪ್ಪಾ ಭುತಾಳೆ, ಪ್ರಿಯಂಕಾ ಕಲ್ಲಪ್ಪಾ ಭುತಾಳೆ, ಭೀಮರಾವ ವೈಜಿನಾಥ ಸಿಂದೆ, ಉಮಾಬಾಯಿ ಭೀಮರಾವ ಸಿಂದೆ, ಕವೀತಾ ಶ್ರೀಕೃಷ್ಣ ಕಾಂಬಳೆ, ಸುನೀತಾ ಹರಿಬಾ ಕಾಂಬಳೆ ಮತ್ತು ಹರಿಬಾ ಕಾಂಬಳೆ ರವರೆಲ್ಲರು ಕೂಡಿ ಗಂಡನ ಜೊತೆ ಸೇರಿ ಫಿರ್ಯಾದಿಗೆ ತವರು
ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತ ಮಾನಸಿಕ ಹಾಗೂ ದೈಹಿಕ ಕಿರಕುಳ
ನೀಡಿರುತ್ತಾರೆ, ಹೀಗಿರುವಾಗ ದಿನಾಂಕ 16-01-2020 ರಂದು ಹುಣಜಿ ಗ್ರಾಮಕ್ಕೆ ತನ್ನ ತಂದೆ, ತಾಯಿಯವರೊಂದಿಗೆ ಹೋದಾಗ ಸದರಿ ಆರೋಪಿತರೆಲ್ಲರು ಸೇರಿ ಫಿರ್ಯಾಧಿಗೆ ಅವಾಚ್ಯ
ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿ, ಮನೆಯಿಂದ ಹೊರಗಡೆ ಹಾಕಿ ತವರು ಮನೆಗೆ ಕಳುಹಿಸಿರುತ್ತಾರೆ ಮತ್ತು ಪುನಃ ಈ
ಮನೆಯಲ್ಲಿ ಕಾಣಿಸಿದರೆ ಕೊಂದು ಬಿಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕಲ 12-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಅಪರಾಧ ಸಂ. 27/2020, ಕಲಂ. 279, 338
ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ
12-02-2020 ರಂದು ಫಿರ್ಯಾದಿ
ಮಹೇಶ ತಂದೆ ಶಿವಶರಣಪ್ಪಾ ಅಣದೂರೆ ವಯ: 45 ವರ್ಷ,
ಜಾತಿ: ಲಿಂಗಾಯತ,
ಸಾ: ಲಖನಗಾಂವ ರವರು
ಬೀದರದಲ್ಲಿ ತಮ್ಮ ಸಂಬಂಧಿಕರ ಮಗಳ ಮದುವೆಗೆ
ಬರುವ ಕುರಿತು ಲಖನಗಾಂವದಿಂದ ಮೊಟಾರ ಸೈಕಲ ನಂ. ಕೆಎ-39/ಕೆ-0614 ನೇದರ ಮೇಲೆ
ಬೀದರಗೆ
ಹೊರಟು ಸದರಿ
ಮೊಟರ ಸೈಕಲ ಚಲಾಯಿಸಿಕೊಂಡು ಕೋನಮೆಳಕುಂದಾಗ ಗ್ರಾಮ ದಾಟಿ ಬೀದರ ರಸ್ತೆಗೆ ಇರುವ ಕೊನಮೆಳಕುಂದಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಂದೆ ರೋಡಿನ ಮೇಲೆ
ಬಂದಾಗ ಬೀದರ ಕಡೆಯಿಂದ ಕೆ.ಎಸ್.ಆರ್.ಟಿ.ಸಿ
ಬಸ್ ನಂ. ಕೆಎ-38/ಎಫ್-1001
ನೇದರ ಚಾಲಕನಾದ ಆರೋಪಿಯು ತನ್ನ ಬಸ್ಸನ್ನು ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ
ಮೊಟಾರ ಸೈಕಲಗೆ ಡಿಕ್ಕಿ ಮಾಡಿ ಬಸ್ಸು ನೀಲ್ಲಿಸದೆ ಓಡಿಸಿಕೊಂಡು ಹೊಗಿರುತ್ತಾನೆ,
ಸದರಿ ಡಿಕ್ಕಿಯಲ್ಲಿ ಫಿರ್ಯಾದಿಯ
ಬಲಗಾಲ ತೊಡೆಗೆ ಭಾರಿ ರಕ್ತಗಾಯ ಹಾಗು ಭಾರಿ ಗುಪ್ತಗಾಯವಾಗಿದ್ದು,
ಸದರಿ ಘಟನೆ ಅಲ್ಲೆ ರೋಡಿನ ಮೇಲೆ
ಹೊಗುತ್ತಿದ್ದ ಕಾರ್ತಿಕ ತಂದೆ ಗುರಲಿಂಗಪ್ಪಾ ಸಾ:
ತಳವಾಡ ಹಾಗು ಅಮರ ತಂದೆ ರಾಮಚಂದ್ರ ದಾನೆ ಸಾ:
ಉಸ್ತಾರಿ ರವರು ನೊಡಿ ಫಿರ್ಯಾದಿಗೆ
108
ಅಂಬುಲೆನ್ಸದಲ್ಲಿ ಬೀದರ ಆರೋಗ್ಯ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ದಾಖಲು
ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment