ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-02-2020
ಮಾರ್ಕೆಟ ಪೊಲೀಸ ಠಾಣೆ ಬೀದರ ಯು.ಡಿ.ಆರ್ ಸಂ. 02/2020, ಕಲಂ. 174
ಸಿ.ಆರ್.ಪಿ.ಸಿ :-
ದಿನಾಂಕ 12-02-2019 ರಂದು 2100 ಗಂಟೆಯ ಸುಮಾರಿಗೆ ಫಿರ್ಯಾದಿ
ಗೋರಿಬಿ ಗಂಡ ಬಾಬುಮಿಯ್ಯಾ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ಮಗಲಿ, ತಾ: ಜಹಿರಾಬಾದ ರವರ ಮಗನಾದ ಗೌಸೊದ್ದಿನ ತಂದೆ ಬಾಬುಮಿಯ್ಯಾ ವಯ: 35 ವರ್ಷ
ಇತನಿಗೆ ಎದೆಯಲ್ಲಿ ನೋವು ಆಗುತ್ತಿದೆ ಎಂದು ತಿಳಿಸಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಿನಾಂಕ 13-02-2020 ರಂದು 0110 ಗಂಟೆಗೆ
ತಂದಾಗ ಗೌಸೊದ್ದಿನ ಇತನು ಮ್ರತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ, ಆತನ
ಸಾವಿನಲ್ಲಿ ಯಾವುದೇ ರೀತಿಯ ಸಂಶಯ ವಗೈರೆ ಇರುವದಿಲ್ಲ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ
ಅಪರಾಧ ಸಂ. 21/2020, ಕಲಂ. 363 ಐಪಿಸಿ :-
ಫಿರ್ಯಾದಿ
ಮಲ್ಲಿಕಾರ್ಜುನ ತಂದೆ ಬಂಡೆಪ್ಪ ಬಿರಾದರ ವಯ: 56
ವರ್ಷ, ಜಾತಿ: ಲಿಂಗಾಯತ, ಉ: ಮುಖ್ಯೋಪಾಧ್ಯಾಯರು ಜ್ಞಾನದೀಪ ಹಿರಿಯ ಪ್ರಾಥಮಿಕ ಶಾಲೆ ಕಾಲಾ ಹನುಮಾನ ಹತ್ತಿರ ಬೀದರ ರವರ ಶಾಲೆಯಲ್ಲಿ ಬಾಲಾಜಿ ತಂದೆ ರಾಮಣ್ಣಾ ವಯ: 16
ವರ್ಷ ಇತನು 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ, ಹೀಗಿರುವಾಗ ದಿನಾಂಕ 10-02-2020 ರಂದು 0930 ಗಂಟೆಗೆ ಶಾಲೆಯು ಪ್ರಾರಂಭವಾಗಿದ್ದು ಬಾಲಾಜಿ ತಂದೆ ರಾಮಣ್ಣಾ ತನ್ನ ತರಗತಿಯಲ್ಲಿ ಹಾಜರಿದ್ದನು, 1330 ಪಿಎಂ ಗಂಟೆಗೆ ಊಟ ಮಾಡಿಕೊಂಡು 1500 ಗಂಟೆಗೆ ಮರಳಿ ತರಗತಿಗೆ ಹಾಜರಾಗಿದ್ದು ಇರುತ್ತದೆ, ನಂತರ ಫಿರ್ಯಾದಿಯು 1530 ಗಂಟೆಗೆ ತರಗತಿಗೆ ಹೋಗಿ ನೋಡಲು ಅವನು ತರಗತಿಯಲ್ಲಿ ಇರಲಿಲ್ಲ, ಈ ಬಗ್ಗೆ ಫಿರ್ಯಾದಿಯು ಎಲ್ಲಾ ಕಡೆ ಹುಡುಕಾಡಲು ಸಿಕ್ಕಿರುವುದಿಲ್ಲ ಹಾಗೂ ಅವನ ತಾಯಿ ಸಂಪತಬಾಯಿ ಇವರಿಗೆ ತಿಳಿಸಿದಾಗ ಮನೆಗೆ ಸಹ ಬಂದಿರುವುದಿಲ್ಲ ಅಂತ ತಿಳಿಸಿರುತ್ತಾರೆ, ಬಾಲಾಜಿ ತಂದೆ ರಾಮಾಣ್ಣಾ ಇತನ ಎತ್ತರ ಅಂದಾಜು 5 ಅಡಿ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾನೆ, ಸಾಧಾರಣ ಮೈಕಟ್ಟು, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಬಾಲಾಜಿ ಈತನು ಕಾಣೆಯಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ದಿನಾಂಕ 13-02-2020 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. 457, 380 ಐಪಿಸಿ
:-
ಪಿüರ್ಯಾದಿ ಅಮೂಲ ತಂದೆ ವಿನೋದರಾವ ಮಾನPÁರ ಸಾ: ವರದಾ ಮಹಾರಾಷ್ಟ್ರ, ಸದ್ಯ ಭವಾನಿ ಕಾಲೋನಿ ಹುಮನಾಬಾದ ರವರು ಹಮನಾಬಾದ ಪಟ್ಟನದ ಭವಾನಿ ಕಾಲೋನಿಯ ವಿಜಯಕುಮಾರ ಬಿರಾದಾರ ರವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುವ ತಮ್ಮ ಮನೆಗೆ ಕೀಲಿ ಹಾಕಿಕೊಂಡು ದಿನಾಂಕ 09-02-2020 ರಂದು ಬೆಂಗಳೂರಿಗೆ ಹೋದಾಗ ಯಾರೋ ಅರಿಪಚಿತ ಕಳ್ಳರು ಫಿರ್ಯಾದಿಯವರ ಮನೆಗೆ
ನುಗ್ಗಿ ಮನೆಯಲ್ಲಿರುವ 1) ಬಂಗಾರದ ಮಂಗಳಸೂತ್ರ 25 ಗ್ರಾಂ. ಅ.ಕಿ 75,000/- ರೂ., 2) ಬಂಗಾರದ ಚಪ್ಪಾಲಕಂಠಿ 25 ಗ್ರಾಂ. ಅ.ಕಿ 75,000/- ರೂ., 3) ಬಂಗಾರದ ಚೈನ 10 ಗ್ರಾಂ. ಅಕಿ 30,000/- ರೂ., 4) ಬಂಗಾರದ ಕಿವಿಯಲ್ಲಿ ರಿಂಗ 5 ಗ್ರಾಂ. ಅ.ಕಿ 15,000/- ರೂ. ಹಾಗು 5) ಒಂದು ಕಪ್ಪು ಬಣ್ಣದ ಎಚ್.ಪಿ ಲ್ಯಾಪಟಾಪ ಅ.ಕಿ 18,000/- ರೂ. ಹೀಗೆ ಒಟ್ಟು 2,13,000/- ರೂ. ಬೆಲೆ ಬಾಳುವ
ಆಭರಣ ಮತ್ತು ಲ್ಯಾಪಟಾಪನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 13-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂ. 18/2020, ಕಲಂ. 323, 498(ಎ), 504, 506 ಜೊತೆ 34 ಐಪಿಸಿ & 3, 4 ಡಿಪಿ
ಕಾಯ್ದೆ :-
ಫಿರ್ಯಾದಿ
ಅಮ್ರೀನ ಗಂಡ ರಿಯಾಜೊದ್ದೀನ ಶೇಕ ಸಾ: ಉದಗೀರ, ಸದ್ಯ: ಶಿವಣಿ, ತಾ:
ಭಾಲ್ಕಿ ರವರಿಗೆ 6 ವರ್ಷಗಳ
ಹಿಂದೆ ಉದಗೀರ ಕಂದಹಾರ ಶಾದಿ ಮಂಟಪದಲ್ಲಿ ಲಗ್ನವಾಗಿದ್ದು,
ಮದುವೆಯ ಕಾಲಕ್ಕೆ ಫಿರ್ಯಾದಿಯ
ತಂದೆ-ತಾಯಿಯವರು
2 ಳಿ ಲಕ್ಷ
ರೂಪಾಯಿ, 6 ತೊಲೆ
ಬಂಗಾರ ಒಂದು ಮೋಟಾರ ಸೈಕಲ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ 1 ವರ್ಷದವರೆಗೆ ಗಂಡ ಫಿರ್ಯಾದಿಗೆ ಗಂಡನ
ಮನೆಯಲ್ಲಿ ಚೆನ್ನಾಗಿ ಇಟ್ಟುಕೊಂಡಿರುತ್ತಾರೆ, ನಂತರ ಆರೋಪಿತರಾದ ಗಂಡ
ರಿಯಾಜೊದ್ದೀನ ತಂದೆ ಮೈನೊದ್ದೀನ, ಮಾವ ಮೈನೊದ್ದೀನ, ಅತ್ತೆ
ಇಂತಿಹಾಜ, ಮೈದುನ ಮೋದ್ದೀನ
ತಂದೆ ಮೈನೊದ್ದೀನ, ಎಲ್ಲರು ಸಾ: ಉದಗೀರ
ರವರು ಕೂಡಿ ಫಿರ್ಯಾದಿಗೆ ನಿನ್ನ ತವರು ಮನೆಯಿಂದ ಹಣ, ಬಂಗಾರ, ಮೋಟಾರ ಸೈಕಲ
ತೆಗೆದುಕೊಂಡು ಬಾ ಅಂತ ಮಾನಸೀಕ ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ ಹಾಗೂ ಸದರಿ ಆರೋಪಿತರೆಲ್ಲರೂ ಕೂಡಿ
ಫಿರ್ಯಾದಿಗೆ ನೀನು
ನಮ್ಮ ಮನೆಗೆ ತಕ್ಕ ಸೊಸೆ ಇಲ್ಲಾ, ನೀನು ನಿನ್ನ
ತವರು ಮನೆಗೆ ಹೋಗು ನಮ್ಮ ಮನೆಯಲ್ಲಿ ಇರಬೇಡ
ಕಿರುಕುಳ ನೀಡಲು ಆರಂಭಿಸಿ ಹೊಡೆ ಬಡೆ ಮಾಡಿರುತ್ತಾರೆ
ಮತ್ತು ಫಿರ್ಯಾದಿಗೆ
ಭಾಲ್ಕಿಗೆ ಕರೆದುಕೊಂಡು ಬಂದು ಬಸ್ಸ ನಿಲ್ದಾಣದಲ್ಲಿ ಬಿಟ್ಟು ಹೋಗಿರುತ್ತಾರೆ, ನಂತರ ಭಾಲ್ಕಿ
ಬಸ ನಿಲ್ದಾಣಕ್ಕೆ ಫಿರ್ಯಾದಿಯವರ ತಂದೆ
ಬಂದು ಫಿರ್ಯಾದಿಗೆ ತವರು
ಮನೆ ಶಿವಣಿ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ, ಸುಮಾರು ಎರಡು
ವರೆ ವರ್ಷದಿಂದ ಫಿರ್ಯಾದಿಯು ತನ್ನ ಮಗಳ
ಜೋತೆ ಶಿವಣಿ ಗ್ರಾಮದಲ್ಲಿಯೇ
ವಾಸವಾಗಿದ್ದು, ಹೀಗಿರುವಾಗ ದಿನಾಂಕ 12-02-2020 ರಂದು
ಫಿರ್ಯಾದಿಯು ಶಿವಣಿ
ಗ್ರಾಮದಲ್ಲಿರುವಾಗ
ಸದರಿ ಆರೋಪಿತರು ಮನೆಯಲ್ಲಿ ಪ್ರವೇಶ
ಮಾಡಿ ನೀನು ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಹೇಳಿದರೆ ಇಲ್ಲಿಯೇ ಇರುತ್ತಿ ಅಂತ ಬೈದು ಕೈಯಿಂದ ಮುಖದ ಮೇಲೆ ಹೋಡೆದಿರುತ್ತಾನೆ ಮತ್ತು ನಿನಗೆ ಎರಡು ದಿವಸಗಳಲ್ಲಿ ಖತಂ ಮಾಡುತ್ತೇನೆ ಅಂತ ಜೀವದ ಬೇದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು
ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 13-02-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 13-02-2020 ರಂದು ಫಿರ್ಯಾದಿ ವಿನೋದ
ತಂದೆ ಮನೋಹರ ಪಾಂಚಾಳ, ವಯ: 30 ವರ್ಷ, ಸಾ: ಅಮಲಾಪೂರ, ತಾ: ಬೀದರ ರವರ ತಮ್ಮನಾದ ಬಲರಾಮ ಈತನು
ಮೊಟಾರ ಸೈಕಲ ನಂ. ಕೆಎ-38/ಎಲ್-0909 ನೇದ್ದನ್ನು ಚಲಾಯಿಸಿಕೊಂಡು ಅಮಲಾಪೂರದಿಂದ ಬೀದರ ಕಡೆಗೆ
ಬರುತ್ತಿರುವಾಗ ಸಿಂದೋಲ ಕಲ್ಯಾಣ ಮಂಟಪ ಹತ್ತಿರ ಬಂದಾಗ ಎದುರಿನಿಂದ ಅಂದರೆ ಬೀದರ ಕಡೆಯಿಂದ ಆಟೋ
ನಂ. ಕೆಎ-38/ಎ-0086 ನೇದರ ಚಾಲಕನಾಧ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಮಾಡಿ ವಾಹನ ಬಿಟ್ಟು ಓಡಿ
ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಬಲರಾಮ ಈತನಿಗೆ ತಲೆಗೆ ಭಾರಿ ಗುಪ್ತಗಾಯ ಮತ್ತು ಕೆಳತುಟಿಯ
ಮೇಲೆ ರಕ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು
ಬೀದರ ವಾಸು ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ
ಅಪರಾಧ ಸಂ. 47/2020, ಕಲಂ. 279, 338 ಐಪಿಸಿ :-
ದಿನಾಂಕ 13-02-2020
ರಂದು ಪಿüರ್ಯಾದಿ ರವಿ ತಂದೆ ಕಾಶೀನಾಥ ತೋಗಲೂರೆ ಸಾ: ಶಮಶಾಪುರವಾಡಿ ರವರು ದಿನ ನಿತ್ಯದಂತೆ ತನ್ನ ಮೇಸ್ತ್ರಿ
ಕೆಲಸಕ್ಕಾಗಿ ಕರಡ್ಯಾಳ ಗ್ರಾಮಕ್ಕೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ಭಾಲ್ಕಿಗೆ ಬಂದು ತಮ್ಮೂರ ಓಂಕಾರ ತಂದೆ ಕಂಟೆಪ್ಪಾ ಬರದಾಪುರೆ ರವರ ಮೋಟಾರ ಸೈಕಲ ನಂ. ಕೆಎ-39/ಎಲ್-4980 ನೇದರ ಹಿಂದೆ
ಕುಳಿತು ಹೋಗುವಾಗ ಭಾಲ್ಕಿಯ ಬಸ್ ಡಿಪೊ ಎದುರಿಗೆ ಹೋದಾಗ ಎದುರಿನಿಂದ ಕಾರ ನಂ. ಎಂ.ಹೆಚ್-02/ಜೆ.ಪಿ-5376 ನೇದರ ಚಾಲಕನಾದ
ಆರೋಪಿ ಶೇಕ ನೂರ ತಂದೆ ಶೇಕ ಫಜಲುಲ್ಲಾ ಸಾ: ನೂರಖಾ ತಾಲಿಮ, ಬೀದರ ಇತನು ತನ್ನ ಕಾರನ್ನು ಅತೀವೆಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರು
ಕುಳಿತ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಓಂಕಾರ ರವರಿಗೆ ಬಲಗಾಲ ಮೋಳಕಾಲ ಕೆಳಗೆ ಮತ್ತು ಬಲಗಾಲ ಹೆಬ್ಬೆರಳಿಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಗೆ ಯಾವುದೆ ಗಾಯಗಳು ಅಗಿರುವುದಿಲ್ಲ,
ನಂತರ ಗಾಯಗೊಂಡ ಓಂಕಾರ ರವರಿಗೆ ಆರೋಪಿಯು ತನ್ನ ಕಾರಿನಲ್ಲಿ ಕುಡಿಸಿಕೊಂಡು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ
ತಂದು ದಾಖಲು ಮಾಡಿದಾಗ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಕಳಿಸಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment