ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-03-2020
ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್
ನಂ. 06/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 02-03-2020 ರಂದು 0930 ಗಂಟೆಗೆ ಫಿರ್ಯಾದಿ ಮೀರಾಬಾಯಿ ಗಂಡ ತಾನಾಜಿ ಗಾಯಕವಾಡ ವಯ: 45
ವರ್ಷ, ಜಾತಿ: ಮರಾಠಾ, ಸಾ: ದುರ್ಗಾ ಕಾಲೋನಿ, ಹುಲಸೂರ, ತಾ: ಹುಲಸೂರ ರವರ ಮಗನಾದ ರಾಮೇಶ್ವರ ತಂದೆ ತಾನಾಜಿ ವಯ 18 ವರ್ಷ, ಇತನು ಮನೆಯಲ್ಲಿನ ಕರೆಂಟ್ ಮೀಟರ ಹತ್ತಿರ ಕರೆಂಟ್ ಚೆಕ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಆತನ ಎಡಗೈ ಹೆಬ್ಬೆರಳಿಗೆ ವಿದ್ಯುತ್ ತಗುಲಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಹುಲಸೂರಗೆ ತೆಗೆದುಕೊಂಡು ಹೋದಾಗ ವೈದ್ಯಾಧಿಕಾರಿಗಳು ರಾಮೇಶ್ವರ ಈತನಿಗೆ ಪರೀಕ್ಷಿಸಿ ಮ್ರತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ
ಅಂತ ಕೊಟ್ಟ ಫಿರ್ಯಾದಿಯವರ
ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ.
12/2020, ಕಲಂ. 379 ಐಪಿಸಿ
:-
ದಿನಾಂಕ
02-03-2020 ರಂದು ಫಿರ್ಯಾದಿ ಮೊಹ್ಮದ ಮೊಯಿಜ್ ತಂದೆ ಮೊಹ್ಮದ ಬಸೀರುದ್ದೀನ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 1-3-73 ರಾವ ತಾಲೀಮ ಬೀದರ ರವರು ತನ್ನ ಮನೆಯ ಮುಂದೆ ಕಟ್ಟಿದ ತನ್ನ ಆಡು (ಹೊತಾ) ಅ.ಕಿ 10,000/- ರೂ. ಬೆಲೆ ಬಾಳುವುದನ್ನು 1500 ಗಂಟೆಯಿಂದ 1530 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ.
39/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 02-03-2020 ರಂದು
ಚಿಟಗುಪ್ಪಾ ಪಟ್ಟಣದ ಸರ್ದಾರ ವೃತ್ತದ ಕಮಾನ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ
ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80/-
ರೂ. ನೀಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿ
ಬರೆದುಕೋಡುತ್ತಿದಾನೆಂದು ಸುರೇಶ ಎಮ್ ಭಾವಿಮನಿ ಪಿ.ಎಸ್.ಐ
ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ಸರ್ದಾರ ವೃತ್ತದ ಕಮಾನ ಹತ್ತಿರ
ದೂರಿನಿಂದ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಪ್ರಭು ತಂದೆ ಗುಂಡಪ್ಪಾ ಧನ್ನೂರಕರ, ವಯ: 42 ವರ್ಷ, ಜಾತಿ: ಮರಾಠಾ, ಸಾ: ಕುನಬಿವಾಡಾ
ಚಿಟಗುಪ್ಪಾ ಇತನು ಮಟಕಾ ಚಿಟಿ ಬರೆದುಕೊಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ
ಮಾಡಿ ಹಿಡಿದು ಅವನ ಅಂಗ ಶೋಧನೆ ಮಾಡಲು ಜೇಬಿನಿಂದ ಒಂದು ಬಾಲ ಪೇನ ಹಾಗು 4 ನಂಬರ
ಬರೆದ ಮಟಕಾ ಚೀಟಗಳು ಹಾಗು ನಗದು ಹಣ 4,510/- ರೂ., ಸಿಕ್ಕಿದ್ದು
ನೇದವುಗಲನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ
ಸಂ. 14/2020, ಕಲಂ. ಮಹಿಳೆ ಕಾಣೆ :-
ದಿನಾಂಕ 27-02-2020 ರಂದು ಫಿರ್ಯಾದಿ ರಾಜಕುಮಾರ ತಂದೆ ಬಾಜಿರಾವ
ಬಿರಾದಾರ ವಯ: 47 ವರ್ಷ, ಜಾತಿ: ಮರಾಠಾ,
ಸಾ: ಹಾಳಗೊರ್ಟಾ ರವರು ಭಾಲ್ಕಿಗೆ ಒಂದು ಕಾರ್ಯಕ್ರಮಕ್ಕೆ ಹೋದಾಗ ಮನೆಯಲ್ಲಿ ಮಗಳಾದ ಪ್ರೀತಿ 20 ವರ್ಷ ಹಾಗೂ ಹೆಂಡತಿ
ಸುದಶನಾ ಇದ್ದರು, ಫಿರ್ಯಾದಿಯು ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬಂದಾಗ ಮನೆಯಲ್ಲಿ
ಹೆಂಡತಿ ಹೆಳಿದ್ದೆನೆಂರೆ 1400 ಗಂಟೆಯಿಂದ ಪ್ರೀತಿ ಮನೆಯಲ್ಲಿ ಕಾಣುತ್ತಿಲ್ಲಾ ಅಂತಾ ಹೇಳಿದ್ದು,
ಆಗ ಫಿರ್ಯದಿಯು ತನ್ನ ಹೆಂಡತಿ ಜೊತೆಯಲ್ಲಿ ಅಲ್ಲಿ-ಇಲ್ಲಿ ಹುಡುಕಾಡಿದರೂ ಅವಳು ಕಾಣಲಿಲ್ಲಾ ಹಾಗೂ ತಮ್ಮ
ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಸಹ ಆಕೆಯ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ, ಅವರ ಚಹರೆ
ಪಟ್ಟಿ ಬಿಳಿ ಮೈಬಣ್ಣ , ತೆಳ್ಳನೆ
ಮೈಕಟ್ಟು, ಎತ್ತರ 5 ಫೀಟ್ 2 ಇಂಚ, ಉದ್ದನೆಯ ಮುಖ, ಕನ್ನಡ ಮತ್ತು ಮರಾಠಿ ಮಾತನಾಡುತ್ತಾಳೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-03-2020 ರಂದು ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment