ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-03-2020
ಔರಾದ(ಬಿ)
ಪೊಲೀಸ್ ಠಾಣೆ ಅಪರಾಧ ಸಂ. 22/2020, ಕಲಂ. 379 ಐಪಿಸಿ :-
ಫಿರ್ಯಾದಿ ರಮೇಶ
ತಂದೆ ಕಾಶಿರಾಮ ವರ್ಪೆ ಸಾ: ಎಕಂಬಾ ದಿನಾಂಕ 29-01-2020 ರಂದು
2100 ಗಂಟೆಗೆ ತನ್ನ ಮೊಟಾರ ಸೈಕಲ್ ನಂ. ಕೆಎ-38/ಹೆಚ್-6948 ಅ.ಕಿ 30,000/- ರೂ. ನೇದನ್ನು ಅಂಗಡಿಯಿಂದ ಚಲಾಯಿಸಿಕೊಂಡು
ಹೋಗಿ ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ಮರುದಿವಸ ದಿನಾಂಕ 30-01-2020 ರಂದೆ 0700 ಗಂಟೆಗೆ
ಎದ್ದು ಮನೆಯ ಮುಂದೆ ನಿಲ್ಲಿಸಿದ ಮೊಟಾರ ಸೈಕಲ್ ನೋಡಲು ಇರಲಿಲ್ಲ, ನಂತರ ಸದರಿ ವಾಹನವನ್ನು ಸುತ್ತ
ಮುತ್ತ ಹುಡುಕಾಡಿ ಎಕಂಬಾ ಗ್ರಾಮದಲ್ಲಿ, ಔರಾದ
ಪಟ್ಟಣಕ್ಕೆ ಬಂದು ಔರಾದ ಪಟ್ಟಣದಲ್ಲಿ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ, ನಂತರ ಇಂದಿನವರೆಗೆ
ಉದಗೀರ, ಹುಲ್ಯಾಳ, ಹೊಕ್ರಾಣಾ, ದಾಬಕಾ, ಕಮಲನಗರ, ಕರಕ್ಯಾಳ ಎಲ್ಲಾ ಗ್ರಾಮಗಳಿಗೆ ಹೋಗಿ ಹುಡುಕಾಡಿದ್ದು
ಎಲ್ಲಿಯು ಸಿಕ್ಕಿರುವುದಿಲ್ಲಾ , ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು
ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 03-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ
ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 34/2020, ಕಲಂ. 379 ಐಪಿಸಿ :-
ಫಿರ್ಯಾದಿ ಸುರೇಶ ಬಾಬು ತಂದೆ
ಚನಬಸಪ್ಪಾ ವಯ: 61
ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 15-3-2-1 ರಾಮಪುರೆ ಕಾಲೋನಿ, ಕುಂಬಾರವಾಡಾ
ಬೀದರ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿರುವ ತನ್ನ ದ್ವಿಚಕ್ರ ವಾಹನ ಸಂ. ಕೆಎ-38/ಎಸ-8281 ನೇದನ್ನು ದಿನಾಂಕ 15-02-2020 ರಂದು 0300 ಗಂಟೆಯಿಂದ 0500
ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-03-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ್
ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 12/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 08-11-2019 ರಂದು 0800 ಗಂಟೆಯ ಸುಮಾರಿಗೆ ಫಿರ್ಯಾದಿ
ಮಾರ್ತಾ ಗಂಡ
ಜೊಸೇಫ್ ವಯ: 67 ವರ್ಷ,
ಜಾತಿ:
ಕ್ರಿಶ್ಚಿಯನ್,
ಸಾ: ಮೇಥೊಡಿಸ್್ಟ ಡಿಗ್ರಿ ಕಾಲೇಜ ಹತ್ತಿರ
ಮಂಗಲಪೇಟ, ಬೀದರ ರವರ
ಮಗನಾದ ಮಗ ಸಂತೋಷಕುಮಾರ ತಂದೆ ಜೋಸೆಫ್ ವಯ:
40 ವರ್ಷ,
ಜಾತಿ:
ಕ್ರಿಶ್ಚಿನ ಇತನು
ಮನೆಯಿಂದ
ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ, ಆತನಿಗೆ ಎಲ್ಲಾ ಕಡೆಗೆ ಹುಡುಕಾಡಲಾಗಿ ಅವನ
ಪತ್ತೆ ಆಗಲಿಲ್ಲಾ
ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ
03-03-2020 ರಂದು ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. ಮನುಷ್ಯ ಕಾಣೆ (ಹುಡುಗಿ
ಕಾಣೆ) :-
ಫಿರ್ಯಾದಿ ತಾನಾಜಿ ತಂದೆ ಮಾಣಿಕ
ಲಖನಗಾಂವೆ ವಯ: 54
ವರ್ಷ,
ಜಾತಿ: ಮರಾಠಾ, ಸಾ: ತೂಗಾಂವ (ಹೆಚ್) ರವರ ಮಗಳಾದ ರವಿನಾ
19 ವರ್ಷ ಇವಳು ಈಗ 2 ವರ್ಷದ ಹಿಂದೆ 10 ನೇ ತರಗತಿ ಪಾಸಾಗಿ
ಸದ್ಯ ಮನೆಯಲ್ಲಿಯೇ ಇದ್ದು, ಹೀಗಿರುವಾಗ ರವಿನಾ ಇವಳು ದಿನಾಂಕ 24-02-2020 ರಂದು ರಾತ್ರಿ 0130 ಗಂಟೆಗೆ ಮನೆಯಲ್ಲಿ
ಎಲ್ಲರು ಮಲಗಿರುವಾಗ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ, ಮಗಳ ಬಗ್ಗೆ
ತಮ್ಮ ಸಂಬಂಧಿಕರಲ್ಲಿ ಮತ್ತು ಗೆಳೆಯರಿಗೆ ವಿಚಾರಣೆ ಮಾಡಿದರೂ ಅವಳ ಯಾವುದೇ ಸುಳಿವು ಸಿಕ್ಕಿರುವುದಿಲ್ಲ,
ಕಾಣೆಯಾದ ಮಗಳ ಚಹರೆ ಪಟ್ಟಿ 1) ಎತ್ತರ 5 ಫಿಟ, ಬಿಳ ಬಣ್ಣ, ದುಂಡು
ಮುಖ,
2)
ಮರಾಠಿ ಭಾಷೆ ಮಾತನಾಡುತ್ತಾಳೆ, 3) ಜಿನ್ಸ ಪ್ಯಾಂಟ, ನೀಲಿ ಬಣ್ಣದ ಟಾಪ
ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-03-2020
ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 71/2020, ಕಲಂ.
ಹುಡುಗಿ ಕಾಣೆ :-
ದಿನಾಂಕ 02-03-2020 ರಂದು 1830 ಗಂಟೆಗೆ ಫಿರ್ಯಾದಿ
ಶಾರದಾ ಗಂಡ ರಮೇಶ ಡೋಣಗಾಪೂರೆ ಸಾ: ಅಮರ ಪೆಟ್ರೊಲ ಬಂಕ ಹತ್ತಿರ, ಭಾಲ್ಕಿ ರವರ ಮಗಳಾದ ಸುಧಾರಾಣಿ
ವಯ: 19 ವರ್ಷ ಇವಳು ತಮ್ಮ ಗಣೇಶ ಖಾನಾವಳಿಯಿಂದ ಕಾಣೆಯಾಗಿರುತ್ತಾಳೆ, ಅವಳ ಬಗ್ಗೆ ಸುತ್ತ ಮುತ್ತ
ಅಂಗಡಿಗಳಿಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ, ನಂತರ ತಮ್ಮ ಎಲ್ಲಾ
ಸಂಬಂಧಿಕರಿಗೆ ವಿಚಾರಿಸಲು ಎಲ್ಲಿಯೂ ಮಾಹಿತಿ ಸಿಕ್ಕಿರುವದಿಲ್ಲ, ಎಲ್ಲಿ ಹೋಗಿರುತ್ತಾಳೆ
ಗೊತ್ತಾಗಿರುವದಿಲ್ಲ, ಅವಳು ಖಾನಾವಳಿ ಹೋಟೆಲದಿಂದ ಹೋಗುವಾಗ ನೆರಳೆ ಬಣ್ಣದ ಟಾಪ ಮತ್ತು ಕಪ್ಪು
ಬಣ್ಣದ ಚುಡಿದಾರ ಬಟ್ಟೆ ಧರಿಸಿರುತ್ತಾಳೆ, ಅವಳ ಚಹರೆ ಪಟ್ಟಿ ದುಂಡು ಮುಖ, ಕೆಂಚನೆ ಮೈಬಣ್ಣ, ಸಣ್ಣ ಮೂಗು, ಸಾಧಾರಣ ಮೈಕಟ್ಟು ಎತ್ತರ 5'-2'' ಇರುತ್ತದೆ, ಅವಳು ಕನ್ನಡ, ಮರಾಠಿ ಹಾಗೂ ಹಿಂದಿ
ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-03-2020
ರಂದು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂ. 24/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 03-03-2020 ರಂದು ಭಾತಂಬ್ರಾ ಗ್ರಾಮದ ಪುಂಡಲಿಕರಾವ ಟೊಣಪೆ ರವರ ಹೊಲದ ಹತ್ತಿರ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಹುಲಗೇಶ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಶಿವಾರದಲ್ಲಿ ಹೊಗಿ ದಾಳಿ ಮಾಡಿ ಆರೋಪಿತರಾದ 1) ಕಾಲಿದಾಸ ತಂದೆ ರಮೇಶರಾವ ಕೊಂಗಳೆ ವಯ: 29 ವರ್ಷ, ಜಾತಿ: ಮರಾಠಾ, ಸಾ: ಯಕಲಾಸಪುರ, 2) ಸುನೀಲ ತಂದೆ ಸತ್ಯವಾನ ಮುರಾಳೆ ವಯ: 27 ವರ್ಷ, ಜಾತಿ: ಮರಾಠಾ, ಸಾ: ಯಕಲಾಸಪುರವಾಡಿ, 3) ಇಸ್ಮಾಯಿಲ್ ತಂದೆ ಅಬ್ದುಲ ಶುಕುರಸಾಬ ವಯ: 35 ವµರ್À, ಜಾತಿ: ಮುಸ್ಲಿಂ, 4) ಮೀರಾಲಿ ತಂದೆ ಇನಾಯತಲಿ ಕೊತವಾಲ ವಯ: 28 ವರ್ಷ, ಜಾತಿ: ಮುಸ್ಲಿಂ, 5) ಮಸಾ್ತನ ತಂದೆ ಅಬ್ದುಲ್ಲಾ ಖುರೇಸಿ ವಯ: 25 ವರ್ಷ, ಜಾತಿ: ಮುಸ್ಲಿಂ ಹಾಗೂ 6) ಅಫಜಲ್ ತಂದೆ ಗಾಲೇಬ ಖುರೇಶಿ ವಯ: 27 ವರ್ಷ, ಜಾತಿ: ಮುಸ್ಲಿಂ, 4 ಜನ ಸಾ: ಭಾತಂಬ್ರಾ ಇವರಿಗೆ ಹಿಡಿದುಕೊಂಡು ಅವರಿಂದ 1) ನಗದು ಹಣ 4100/- ರೂ., ಹಾಗೂ 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment