Police Bhavan Kalaburagi

Police Bhavan Kalaburagi

Thursday, March 5, 2020

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 04/03/2020 ರಂದು ಬೆಳಗ್ಗೆ ಶ್ರೀ ಸಕ್ರೆಣ್ಣ ತಂದೆ ತಿಮ್ಮಯ್ಯ ದೇಸಾಯಿ ಸಾ: ಹರನೂರ ಮಗನಾದ ಬಸವರಾಜ ಮತ್ತು ಸಂಬಂದಿಕನ ಮಗನಾದ ನಾಗಣ್ಣ  ದೇಸಾಯಿ ಇವರಿಬ್ಬರು ನೀರು ತರಲೆಂದು ಹಾಲಗಡ್ಲಾ ಕೆರೆಗೆ ಹೋದಾಗ ನಾಗಣ್ಣ ದೇಸಾಯಿ ಈತನು ಆಯತಪ್ಪಿ ಕೆರೆಯಲ್ಲಿ ಬಿದ್ದು ಮುಳುಗುತ್ತಿದ್ದಾಗ ಫಿರ್ಯಾದಿಯ ಮಗ ಬಸವರಾಜ ಈತನು ನಾಗಣ್ಣನಿಗೆ ರಕ್ಷಿಸಲು ಹೋಗಿ ಇಬ್ಬರು ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ವಾಡಿ ಠಾಣೆ : ಶ್ರೀ ಡಾ:ಸಯ್ಯದ ರಜವುಲ್ಲಾ ತಂದೆ ಸಯ್ಯದ ಜಪುರುಲ್ಲಾ ಖಾದ್ರಿ :ಸಮುದಾಯ ಆರೋಗ್ಯ ಕೇಂದ್ರ ವಾಡಿಯಲ್ಲಿ ಆಡಳಿತ ಅಧಿಕಾರಿಗಳು ಮು:1 ನೇ ಕ್ರಾಸ ಬಸವೇಶ್ವರ ಕಾಲೋನಿ ಕಲಬುರಗಿ ರವರು ದಂಡೋತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಅಂತಾ ಕೆಲಸ ಮಾಡಿಕೊಂಡಿದ್ದು ಈಗ ಸುಮಾರು 03 ತಿಂಗಳಿನಿಂದ ನನಗೆ ವಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ಪ್ರಭಾರ ಅಧಿಕಾರಿ ಅಂತಾ ವಾರಕ್ಕೆ 2-3 ಸಲ ಆಸ್ಪತ್ರೆಗೆ ಬಂದು ಆಸ್ಪತ್ರೆಯ  ಆಗು ಹೋಗುಗಳನ್ನು ನೋಡಿಕೊಂಡು ಹೋಗುತ್ತೆನೆ. ಆಸ್ಪತ್ರೆಯಲ್ಲಿ ಸುಮಾರು ವೈದ್ಯರು ಹಾಗೂ ಸಿಬ್ಬಂದಿ ಜನರು ಕೂಡಿ ಒಟ್ಟು 38 ಜನರು ನೌಕರಿ ಮಾಡುತ್ತಿದ್ದು ಅದರಲ್ಲಿ ಸಂತೋಷಕುಮಾರ ತಂದೆ ಬಸವರಾಜ ಕಟ್ಟೆ ಮು:ಯದ್ಲಾಪೂರ ಜಿ:ಬೀದರ ಇತನು ದ್ವಿತಿಯ ದರ್ಜೆ ಸಹಾಯಕ ಅಂತಾ ದಿನಾಂಕ 21/12/2011 ರಿಂದ ನೌಕರಿ ಮಾಡಿಕೊಂಡಿದ್ದು ಆತನು ಆಸ್ಪತ್ರೆಯ ಸಿಬ್ಬಂದಿ ಜನರ ಸಂಬಳದ ಬಿಲ್ಲು ಮಾಡುವದು, SR ಬುಕ್ ಬರೆಯುವದು ಹಾಗೂ ಇತ್ಯಾದಿ ಕೆಲಸವನ್ನು ಮಾಡುತ್ತಾನೆ. ಸಂತೋಷಕುಮಾರ ಇತನು ಪ್ರತಿ ತಿಂಗಳು ಸಿಬ್ಬಂದಿ ಜನರ ವೇತನದ ಬಿಲ್ಲನ್ನು HRMS ದಲ್ಲಿ ತಯ್ಯಾರಿಸಿಕೊಂಡು ಟೋಕನ ಪುಸ್ತಕದೊಂದಿಗೆ ಚಿತ್ತಾಪೂರ  ಸಬ್ ಟ್ರೆಜರಿ ಆಫೀಸಕ್ಕೆ ಹೋಗಿ ಸಂಬಂಧಪಟ್ಟ ಅಧಿಕಾರಿಯವರಿಗೆ ಮುಟ್ಟಿಸಿ ಟೋಕನದಲ್ಲಿ ಒಂದು ಪ್ರತಿಯನ್ನು ಅವರು ಇಟ್ಟುಕೊಂಡು ಇನ್ನೊಂದು ಪ್ರತಿಗೆ ಸಹಿ ಮಾಡಿ ನಮಗೆ ಕೊಡುತ್ತಾರೆ. ಟೋಕನ ನಂಬರ ಆಧಾರದ ಮೇಲೆ ಚೆಕನ್ನು ತಯ್ಯಾರಿಸಿ ನಮಗೆ ಕೊಡುವ ಕಾಲಕ್ಕೆ  ಅವರು ನೀಡಿದ ಇನ್ನೊಂದು ಟೋಕನ ಪ್ರತಿ ಮರಳಿ ಅವರು ಪಡೆದುಕೊಂಡು  ಚೆಕ್ ಕೊಟ್ಟಾಗ ಅದನ್ನು ಪಡೆದುಕೊಂಡು ಆಸ್ಪತ್ರೆಗೆ ಬಂದು  ಮಂಜೂರಾದ ಸಿಬ್ಬಂದಿಯ ಹಣವನ್ನು ಅವರ ಅವರ ಖಾತೆಗೆ ಜಮಾ ಮಾಡುವ ಸಲುವಾಗಿ ಎಕ್ಸರ ಫಾರಂ  ನ್ನು ತಯ್ಯಾರಿಸಿಕೊಂಡು ಮತ್ತು ಚೆಕ ಗೆ ಆಡಳಿತ ಅಧಿಕಾರಿಗಳ ಸಹಿ ಮತ್ತು ಅವರ ಶೀಲನ್ನು ಹಾಕಿಕೊಂಡು ಚಿತ್ತಾಪೂರದ SBI ಬ್ಯಾಂಕಿಗೆ ದಾಖಲು ಮಾಡಿ ಬಂದು ನಂತರ ಅವರ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಹಣ ಜಮಾ ಆದ ನಂತರ ಸಿಬ್ಬಂದಿ ಜನರ NPS ಹಣ ಕಡಿತಗೊಳ್ಳುತ್ತಿದ್ದು ಉಳಿದ ಸಂಬಳದ ಹಣ ತಮ್ಮ ಖಾತೆಗೆ ಜಮಾ ಆಗದೇ ಇದ್ದುದ್ದರಿಂದ ಕೆಲವು ಜನ ಸಿಬ್ಬಂದಿಯವರು ವಿಷಯವನ್ನು ನನ್ನ ಗಮನಕ್ಕೆ ತಂದಾಗ ನಾನು ಬಗ್ಗೆ ಜನೇವರಿ ತಿಂಗಳಿನಲ್ಲಿ ಸಂತೋಷಕುಮಾರ ಇತನಿಗೆ ಕರೆದು ವಿಚಾರಿಸಲಾಗಿ ಚೆಕ್ ಕಳೆದು ಹೋಗಿದ್ದು ನಾನು ಚಿತ್ತಾಪೂರ STO ಆಫೀಸಗೆ ಹೋಗಿ ವಿಚಾರಿಸುತ್ತೆನೆ ಅಂತಾ ಹೇಳಿದಾಗ ನನಗೆ ಆತನ ಮೇಲೆ ಸಂಶಯ ಬಂದು ದಿನಾಂಕ 12/02/2020 ರಂದು ಚಿತ್ತಾಪೂರ STO ಆಫೀಸಗೆ ಹೋಗಿ ನಮ್ಮ ಆಸ್ಪತ್ರೆಯಲ್ಲಿ SDC ಅಂತಾ ನೌಕರಿ ಮಾಡುವ ಸಂತೋಷಕುಮಾರ ಎನ್ನುವರು ಸಿಬ್ಬಂದಿಯ ಜನರ ಸಂಬಳದ ಚೆಕ ಕಳೆದು ಹೋಗಿರುತ್ತದೆ ಅಂತಾ ಹೇಳುತ್ತಿದ್ದಾನೆ ಅಂತಾ ವಿಚಾರಿಸಿದ್ದಕ್ಕೆ ಅವರು 1] ಚೆಕ ನಂಬರ 23925 ಹಣ 1,64,413/-ರೂಪಾಯಿ ದಿನಾಂಕ:11/12/2019 ಲೆಕ್ಕ ಶಿರ್ಷಿಕೆ ನಂಬರ 26  2] ಚೆಕ ನಂಬರ 24006 ಹಣ 77,313/-ರೂಪಾಯಿ ದಿನಾಂಕ:12/12/2019 ಲೆಕ್ಕ ಶಿರ್ಷಿಕೆ ನಂಬರ 03 3] ಚೆಕ ನಂಬರ 24007 ಹಣ 71,070/-ರೂಪಾಯಿ ದಿನಾಂಕ:12/12/2019 ಲೆಕ್ಕ ಶಿರ್ಷಿಕೆ ನಂಬರ 04] ಚೆಕ ನಂಬರ 24018 ಹಣ 93,240/-ರೂಪಾಯಿ ದಿನಾಂಕ:13/12/2019 ಲೆಕ್ಕ ಶಿರ್ಷಿಕೆ ನಂಬರ 03 05] ಚೆಕ ನಂಬರ 24522 ಹಣ 71,170/-ರೂಪಾಯಿ ದಿನಾಂಕ:14/12/2019 ಲೆಕ್ಕ ಶಿರ್ಷಿಕೆ ನಂಬರ 03 06] ಚೆಕ ನಂಬರ 23508 ಹಣ 75,047/-ರೂಪಾಯಿ ದಿನಾಂಕ:14/08/2019 ಲೆಕ್ಕ ಶಿರ್ಷಿಕೆ ನಂಬರ 27 ರೀತಿಯಾಗಿ 06 ಚೆಕಗಳನ್ನು ಸಂತೋಷಕುಮಾರ SDC ರವರು ಪಡೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಾಗ ಹೆಚ್ಚಿನ ಮಾಹಿತಿಗಾಗಿ ದಿನಾಂಕ 20/02/2020 ರಂದು ಸಂಬಂಧಪಟ್ಟ ಚಿತ್ತಾಪೂರದ SBI ಬ್ಯಾಂಕಿಗೆ ಹೋಗಿ ಪತ್ರ ವ್ಯವಹಾರ ಮಾಡಿ ಮ್ಯಾನೇಜರ ರವರಿಗೆ ವಿಚಾರಿಸಿದಾಗ ಮೇಲೆ ನಮೂದು ಮಾಡಿದ 06 ಚೆಕಗಳು ಪಾಸಾಗಿ ಹಣ ಸಂಬಂಧಪಟ್ಟ ಅಕೌಂಟಗಳಿಗೆ ಜಮಾ ಆಗಿರುತ್ತದೆ ಅಂತಾ ತಿಳಿಸಿದಾಗ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗಿ ಸದರಿ ಹಣವನ್ನು ಸಂತೋಷಕುಮಾರ ಇತನು ಸಂಬಂಧಪಟ್ಟ ನೌಕರರ ಅಕೌಂಟಗೆ ಹಣ ಜಮಾ ಮಾಡದೇ ತನ್ನ ಅಕೌಂಟ ನಂಬರ 62235654615 ನೇದ್ದಕ್ಕೆ ಜಮಾ ಮಾಡಿಕೊಂಡಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಸಂತೋಷಕುಮಾರ ಇತನು ಒಬ್ಬ ಸರ್ಕಾರಿ ನೌಕರನಾಗಿ ಚೆಕದೊಂದಿಗೆ HRMS ಬ್ಯಾಂಕ ಸ್ಟೇಟಮೆಂಟಗಳ ಮೇಲೆ ಆಸ್ಪತ್ರೆಯ ಆಡಳಿತ ಅಧಿಕಾರಿಯ ಮೊಹರು ಹಾಗೂ ರುಜುವನ್ನು ಪಡೆದುಕೊಳ್ಳದೇ ತಾನೇ ಸಹಿ ಮಾಡಿ ಶೀಲ ಹಾಕಿಕೊಂಡು ಬ್ಯಾಂಕಗೆ ಸಲ್ಲಿಸಿ ಆಸ್ಪತ್ರೆಯ ಸಿಬ್ಬಂದಿಗಳ ಸುಮಾರು 05,52,353/-ರೂಪಾಯಿ ಅವರ ಖಾತೆಗೆ ಜಮಾ ಮಾಡದೇ ತನ್ನ ಖಾತೆಗೆ ಜಮಾ ಮಾಡಿಕೊಂಡು ಸರ್ಕಾರಕ್ಕೆ ಮತ್ತು  ಆಸ್ಪತ್ರೆಯ ಸಿಬ್ಬಂದಿ ಜನರಿಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಇರುತ್ತದೆ.   ಬಗ್ಗೆ ಸಂಬಂಧಪಟ್ಟ ಬ್ಯಾಂಕ ಮತ್ತು ಟ್ರೇಜರಿಗಳಿಗೆ ಹೋಗಿ ವಿಚಾರಿಸಿ ಪತ್ರ ವ್ಯವಹಾರ ಮಾಡಿದ್ದು ಅಲ್ಲದೇ ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿಯನ್ನು ತಿಳಿಸಿದಾಗ ಅವರು ಬಗ್ಗೆ ಪೊಲೀಸ ಠಾಣೆಯಲ್ಲಿ ಕೇಸು ಮಾಡಲು ತಿಳಿಸಿದ್ದರಿಂದ ಇಂದು ಠಾಣೆಗೆ ಬಂದು ಅರ್ಜಿಯನ್ನು ಸಲ್ಲಿಸಿದ್ದು ಸದರಿ ಸಂತೋಷಕುಮಾರ ಇತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅದೆ ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: