Police Bhavan Kalaburagi

Police Bhavan Kalaburagi

Thursday, March 5, 2020

BIDAR DISTRICT DAILY CRIME UPDATE 05-03-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-03-2020

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 29-02-2020 ರಂದು ಣಮಂತ ತಂದೆ ಸಂಗ್ರಾಮ ಶರ್ಮಾ ಸಾ: ಮರಖಲ ಗ್ರಾಮ, ತಾ: ಜಿ: ಬೀದರ ರವರು ತನ್ನ ಹೆಂಡತಿ ನಂದುಕುಮಾರಿ ಹಾಗೂ ಮಾವ ಶಂಕರ ತಂದೆ ಘಾಳೆಪ್ಪಾ ಶರ್ಮಾ ರವರು ಮರಖಲ ಗ್ರಾಮ ಶಿವಾರದಲ್ಲಿರುವ ಮ್ಮ ಹೊಲ ಸರ್ವೆ ನಂ. 254 ನೇದರ ಜಮೀನಿನ ಕಟ್ಟೆಯ ಮೇಲಿನ ಹುಲ್ಲಿನ ಕಡ್ಡಾ ಸುಡಲು ಹುಲ್ಲಿಗೆ ಬೆಂಕಿ ಹಚ್ಚಿದ್ದು, ಮಾವ ಶಂಕರ ರವರು ಹೊಲದ ಕಟ್ಟೆಯ ಮೇಲೆ ನಿಂತು ಅವರು ಸಹ ಹುಲ್ಲು ಸುಡುತ್ತಿದ್ದು, ಹೀಗೆ ಹುಲ್ಲು ಸುಡುತ್ತಾ ಅದರ ಬೆಂಕಿಯು ಕಸ್ಮಿಕವಾಗಿ ಮಾವ ಶಂಕರ ಶರ್ಮಾ ರವರ ಧೋತುರಕ್ಕೆ ಹತ್ತಿದ್ದಾಗ ಶಂಕರ ರವರು ಜೋರಾಗಿ ಚೀರಿದ್ದು, ಅಲ್ಲಿಯೇ ಇದ್ದ ಫಿರ್ಯಾದಿ ಹಾಗೂ ಹೆಂಡತಿ ನಂದುಕುಮಾರಿ ಹಾಗೂ ಪಕ್ಕದ ಹೊಲದಲ್ಲಿದ್ದ ಮ್ಮೂರ ಸಂಬಂಧಿ ರವೀಂದ್ರ ತಂದೆ ನರೇಂದ್ರ ಶರ್ಮಾ ರವರು ಸದರಿ ಘಟನೆ ಕಣ್ಣಾರೆ ನೋಡಿ ಮಾವನವರ ಮೈಗೆ ಹತ್ತಿದ್ದ ಬೆಂಕಿಯನ್ನು ಆರಿಸುವಷ್ಟರಲ್ಲಿ ಶಂಕರ ರವರ ಎರಡು ಕೈಗಳು, ಎರಡು ಕಾಲುಗಳ ತೊಡೆ, ಬೆನ್ನು ಸೊಂಟದ ಭಾಗ ಬೆಂಕಿಯಿಂದ ಸುಟ್ಟಿರುತ್ತದೆ, ನಂತರ ಫಿರ್ಯಾದಿಯು ಕೂಡಲೇ 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿ ಕರೆಯಿಸಿ ಅದರಲ್ಲಿ ಗಾಯಗೊಂಡ ಮಾವ ಶಂಕರ ರವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ಬೀದರ ಸರ್ಕಾರಿ ಆಸ್ಪತ್ರೆಯ ವೈಧ್ಯರ ಸಲಹೆ ಮೇರೆಗೆ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಒಂದು ಖಾಸಗಿ ಅಂಬುಲೇನನಲ್ಲಿ ಹೈದರಾಬಾದ ಉಸ್ಮಾನಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಿನಾಂಕ 02-03-2020 ರಂದು ದಾಖಲು ಮಾಡಿದಾಗ ಮಾವ ಶಂಕರ ಶರ್ಮಾ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 04-03-2020 ರಂದು ಹೈದರಾಬಾದ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 36/2020, ಕಲಂ. 457, 380 ಐಪಿಸಿ :-
ದಿನಾಂಕ  29-02-2020 ರಂದು ಫಿರ್ಯಾದಿ ಗುರಾಲಾ ರಾಮಲು ತಂದೆ ಶಂಕರ ವಯ: 32 ವರ್ಷ, ಜಾತಿ: ಮುದೆರಾಜ, ಸಾ: ಮನೆ ನಂ. 1/10/1 ಮಾಸೆಪೆಟ ಗ್ರಾಮ, ಮಂಡಲ: ವೇಲದೂರ್ತಿ, ಜಿ: ಮೇದಕ (ಟಿ.ಎಸ್), ಸದ್ಯ: ಮನೆ ನಂ. 18-3-272/1ಸಿ ಹಕ್ ಕಾಲೋನಿ, ಬೀದರ ರವರು ತನ್ನ ಗಂಡನ ಜೊತೆಯಲ್ಲಿ ಆಸ್ಪತ್ರೆಗೆ ಎಂದು ಮನೆಗೆ ಬಿಗ ಹಾಕಿ ರಾಮಾಯಣ ಪೇಟ ಗ್ರಾಮಕ್ಕೆ ಹೋದಾಗ ಯಾರೋ ಅಪರಿಚಿತ ಕಳ್ಲರು ಫಿರ್ಯಾದಿಯವರ ಮನೆಯ ಮಲಗುವ ಕೋಣೆಯಲ್ಲಿದ್ದ ಅಲಮಾರಿಯ ಬೀಗ ಮುರಿದು ನಂತರ ಲಾಕರ ಬೀಗ ಮುರಿದು ಲಾಕರದಲ್ಲಿದ 1) ಬಂಗಾರದ ಆಭರಣಗಳು 32 ಗ್ರಾಮ ಅ.ಕಿ 1,20,000/- ರೂ., 2) ಬೆಳ್ಳಿಯ ಆಭರಣಗಳು 800 ಗ್ರಾಂ ಅ.ಕಿ 30,000/- ರೂ., 3) ನಗದು ಹಣ 15,300/- ರೂ., 4) ಒಂದು ಟೈಟಾನ ವಾಚ ಅ.ಕಿ 4000/- ರೂ. ಹೀಗೆ ಒಟ್ಟು 1,69,300/- ರೂಪಾಯಿ ಬೇಲೆ ಬಾಳುವ ನಗದು ಬಂಗಾರ ಆಭರಣಗಳು, ಬೆಳ್ಳಿ, ನಗದು, ಕೈಗಡಿಯಾರ ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 12/2020, ಕಲಂ. 363 ಐಪಿಸಿ :-
ದಿನಾಂಕ 29-02-2020 ರಂದು ಪಿüರ್ಯಾದಿತ್ಯಾವತಿ ಗಂಡ ಪ್ರಶಾಂತ ರ್ಮಾ : 38 ರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಅಂಬೇಡ್ಕರ್ ಕಾಲೋನಿ ಬೀದರ ರವರ ಮಗಳಾದ ಪಲ್ಲವಿ : 18 ರ್ಷ ಇವಳು ತಮ್ಮ ಕಾಲೋನಿಯಲ್ಲಿದ್ದ ಅಂಗಡಿಗೆ ಸಾನು ತರುತ್ತೇನೆಂದು ಹೋದವಳು ತಿರುಗಿ ಬಂದಿರುವದಿಲ್ಲ, ಅವಳಿಗೆ ಫಿರ್ಯಾದಿ ಹಾಗು ಗಂಡ ಪ್ರ್ರಶಾಂತ, ಮಗಳಾದ ರಮೇಶ್ವರಿ ತ್ತು ತಮ್ಮನಾದ ಪ್ರದೀಪ ರವರೆಲ್ಲರೂ ಬೀದರದ ಹಾರೂರಗೇರಿ, ಬಸ ನಿಲ್ದಾಣ, ರೈಲ್ವೆ ನಿಲ್ದಾಣ ಎಲ್ಲಾ ಕಡೆಗೆ ಹುಡುಕಾಡಿದರೂ ತ್ತೆ ಆಗಿರುವದಿಲ್ಲ, ನಂತರ ತಮ್ಮ ಓಣಿಯ ಸವೀತಾ ತಂದೆ ನಾಮದೇವ ಇವಳು ಪಲ್ಲವಿ ಇಕೆಯ ಗೆಳತಿಯಾಗಿದ್ದು ಅವಳಿಗೆ ಪಲ್ಲವಿ ಬಗ್ಗೆ ವಿಚಾರಿಸಲಾಗಿ ಅವಳು ಲ್ಲವಿ ಪೂನಾದಲ್ಲಿದ್ದ ಬಗ್ಗೆ ತಿಳಿಸಿರುತ್ತಾಳೆ, ಅವಳು ಮೋದಲು ಪೂನಾದಲ್ಲಿದ್ದಾಗ ಹೊಟೆಲದಲ್ಲಿ ಕೆಲಸ ಮಾಡುವ ಬಿಹಾರದ ಅಕ್ಷಯ ಇತನ ಜೊತೆಯಲ್ಲಿ ಮಾತನಾಡುತಿದ್ದರಿಂದ ಆತನೆ ಅಪಹರಣ ಮಾಡಿರಬಹುದೆಂದು ಆತನ ಮೇಲೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 32/2020, ಕಲಂ. 498(), 323, 504, 506 ಜೊತೆ 34 ಐಪಿಸಿ :-
ಪಿüರ್ಯಾದಿ ರೋಹಿನಾ ಬೇಗಂ ಗಂಡ ಬಸೀರ ಟೇಲ ಸಾ: ಬೋತಗಿ, ಸದ್ಯ: ಹಂದಿಕೇರಾ ರವರಿಗೆ ಮದುವೆಯಾಗಿ ಒಂದು ರ್ಷದವರೆಗೆ ಗಂಡ ತ್ತು ಗಂಡನ ಮನೆಯವರು ರಿಯಾಗಿ ನಡೆಸಿಕೊಂಡಿರುತ್ತಾರೆ, ನಂತರದ ದಿನಗಳಲ್ಲಿ ಗಂಡ ಫಿರ್ಯಾದಿಗೆ ದಿನಾಲು ವಿನಾಃ ಕಾರಣ ಬೈಯುವುದು, ಫಿರ್ಯಾದಿಯು ತವರು ಮನೆಗೆ ಮೋಬೈಲನಲ್ಲಿ ಮಾತನಾಡಿದರೆ ನೀನು ಬೇರೆ ಗಂಡಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಿ ಅಂತ ಫಿರ್ಯಾದಿಯ ಮೇಲೆ ಸುಳ್ಳು ಅಪವಾದ ಹೊರಿಸಿ ಹೊಡೆ-ಬಡೆ ಮಾಡುತ್ತಿದ್ದರು, ಗಂಡನ ಮಾತು ಕೇಳಿ ಅತ್ತೆ ಹೀರಾ ಬೀ, ನಾದಿನಿ ಸಮೀನಾ, ನೆಗಣಿ ಆಸ್ಮಾ ರವರು ಫಿರ್ಯಾದಿಗೆ ಮಾನಸೀಕ ಹಾಗೂ ದೈಹಿಕ ಕಿರಕುಳ ನೀಡುತ್ತಿದ್ದರು, ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ಗಂಡ, ಅತ್ತೆ, ನಾದನಿ, ನೆಗಣಿ ರವರಿಗೆ ಚೆನ್ನಾಗಿ ಇಟ್ಟುಕೊಳ್ಳಿ ಅಂತಾ Äದ್ದಿವಾದ ಹೇಳಿದರೂ ಸಹ ಅವರು ಹಾಗೆ ಮಾಡುತ್ತಿರುವುದರಿಂದ ಫಿರ್ಯಾದಿಯು ತನ್ನ 2 ಮಕ್ಕಳೊಂದಿಗೆ ಮನೆಯಿಂದ ದಿನಾಂಕ 30-12-2019 ರಂದು ತನ್ನ ತವರು ಮನೆಗೆ ಬಂದು ವಾಸವಾಗಿದ್ದು ಇರುತ್ತದೆ, ನಂತರ ಈಗ ಒಂದು ತಿಂಗಳ ಹಿಂದೆ ಆರೋಪಿತರಾದ ಗಂಡ ಬಸೀರ್ ಟೇಲ್, ಅತ್ತೆ ಹೀರಾ ಬೀ, ನಾದಿನಿ ಸಮೀನಾ ತ್ತು ನೆಗೆಣಿ ಆಸ್ಮಾ ರವರೆಲ್ಲರೂ ಫಿರ್ಯಾದಿಯ ತವರು ಮನೆ ಹಂದಿಕೇರಾ ಗ್ರಾಮಕ್ಕೆ ಬಂದು ಫಿರ್ಯಾದಿಯ ಜೊತೆ ಜಗಳ ತೆಗೆದು ನೀನು ಇನ್ನೂ ಎಷ್ಟು ದಿವಸ ಇಲ್ಲೇ ಇರುತ್ತಿ ಅಂತಾ ಬೈಯುತ್ತಿರುವಾಗ ಫಿರ್ಯಾದಿಯು ಅವರಿಗೆ ಯಾಕೆ ಬೈಯುತ್ತಿರಿ ಅಲ್ಲಿ ನೆಯಲ್ಲಿ ಸಹ ಇದೇ ರೀತಿ ಕಿರುಕುಳ ಕೊಡುತ್ತಿರುವದರಿಂದ ನಾನು ಬಂದಿರುತ್ತೇನೆ ನನಗೆ ಚೆನ್ನಾಗಿ ನೋಡಿಕೊಂಡರೆ ನಾನು ಯಾಕೆ ಬರುತ್ತೇನೆ ಅಂತಾ ಅಂದಾಗ ಗಂಡ ಎದುರು ಮಾತಾಡುತ್ತಿ ಅಂತಾ ಕೈಯಿಂದ  ಕಪಾಳದಲ್ಲಿ ಹೊಡೆದಿರುತ್ತಾನೆ ತ್ತು ಅತ್ತೆ ಕೈಯಿಂದ ಬೆನ್ನಲ್ಲಿ ಹೊಡೆದಿರುತ್ತಾಳೆ, ನಾದಿನಿ ಸಮೀನಾ ತ್ತು ನೆಗೆಣಿ ಆಸ್ಮಾ ರವರು ಹೊಡೆಯಿರಿ ಇಕೆಗೆ ಖತಂ ಮಾಡಿರಿ ಅಂತಾ ಅಂದು ಜಗಳ ಮಾಡುವಾಗ ಅಲ್ಲೇ ಇದ್ದ ತಮ್ಮೂರ ಭೀಮಶಾ ರಾಸೂರೆ, ವಿಠಲರಾವ ತಂದೆ ಮಾರುತಿ ರವರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ ದಿನಾಂಕ 04-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 20/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 04-03-2020 ರಂದು ಕಲಖೊರಾ ಗ್ರಾಮದಲ್ಲಿನ ಬಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಅರುಣಕುಮಾರ ಪಿ.ಎಸ್.ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ  ಬಂದ ಮೇರೆಗೆ  ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಲಖೊರಾ ಗ್ರಾಮಕ್ಕೆ ಹೋಗಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಅಂಬಾರಾವ ತಂದೆ ಹುಸೆನಿ ಬಿರಾದಾರ ವಯ: 73 ವರ್ಷ, ಜಾತಿ: ಬೇಡರು, ಸಾ: ಕಲಖೊರಾ ಇತನು ಬಸ ನಿಲ್ದಾಣದ ಮುಂದೆ ರೋಡಿನ ಮೇಲೆ ಸಾರ್ವಜನೀಕ ಸ್ಥಳದಲ್ಲಿ ನಿಂತುಕೊಂಡು ಮಟಕಾ ಆಡಿರಿ ಒಂದು ರೂಪಾಯಿಗೆ 90/- ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿರುವುದನ್ನು ನೊಡಿ ಸದರಿ ಆರೋಪಿತನ ಮೇಲೆ ಪೊಲೀಸ್ ಸಿಬ್ಬಂದಿ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ಸದರಿಯವನ ಹತ್ತಿರ ಇದ್ದ ಎರಡು ಮಟಕಾ ಚೀಟಿಗಳು ಮತ್ತು ನಗದು ಹಣ 5250/- ರೂಪಾಯಿಗಳು ಮತ್ತು ಒಂದು ಬಾಲ ಪೆನ್ನ ಇವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: