Police Bhavan Kalaburagi

Police Bhavan Kalaburagi

Monday, March 9, 2020

BIDAR DISTRICT DAILY CRIME UPDATE 09-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-03-2020

ಬೇಮಳಖೇಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-03-2020 ರಂದು ಫಿರ್ಯಾದಿ ಸಿದ್ದಮ್ಮ ಗಂಡ ಶಂಕರ ಪುಲ್ಲಾ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಾರಪಾಕಪಳ್ಳಿ, ತಾ: ಹುಮನಾಬಾದ ರವರ ಗಂಡನಾದ ಶಂಕರ ತಂದೆ ಹಣಮಂತಪ್ಪಾ ಪುಲ್ಲಾ ವಯ: 50 ವರ್ಷ ರವರು ಬೆಳೆ ಸಾಲ ಅಂತಾ ಒಟ್ಟು 1,20,000/- ರೂ. ಸಾಲ ಮಾಡಿಕೊಂಡು ತೀರಿಸಲಾರದ ಕಾರಣ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿನ ಮಾವಿನ ಮರದ ಟೊಂಗೆಗೆ ಒಂದು ಕರಿ ಬಣ್ಣದ ಸೊಲಿನ ಹಗ್ಗಕ್ಕೆ ಒಂದು ಹಳದಿ ಬಣ್ಣದ ಪ್ಲಾಸ್ಟಿಕ ಹಗ್ಗ ಕಟ್ಟಿ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ್ತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-03-2020 ರಂದು ಫಿರ್ಯಾದಿ ಸಂಗಪ್ಪಾ ತಂದೆ ವೀರಭದ್ರಪ್ಪಾ ಹುಲಸೂರೆ ಸಾ: ಲೇಕ್ಚರ ಕಾಲೋನಿ, ಭಾಲ್ಕಿ ರವರ ಮಗಲಾದ ಪುಜಾ ಇವಳು ಈಗ ಮೂರು ವರ್ಷಗಳಿಂದ ಭಾಲ್ಕಿಯ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಸಿ.ಬಿ ಕಾಲೇಜಿನಲ್ಲಿ ಉಪನ್ಯಾಸಕಿ ಅಂತಾ ಸೇವೆ ಮಾಡುತ್ತಿದ್ದು, ಈಗ 2 ವರ್ಷದಿಂದ ಅವಳ ಮದುವೆ ಮಾಡುವ ಕುರಿತು ಸಂಬಂಧ ನೋಡುತ್ತಿದ್ದು, 2-3 ಸಂಬಂಧಗಳು ಬಂದರು ಸಂಬಂದ ಕೂಡಿ ಬಂದಿಲ್ಲ, ಹೀಗಿರುವಾಗ ದಿನಾಂಕ 07-03-2020 ರಂದು 2300 ಗಂಟೆಗೆ ಫಿರ್ಯಾದಿಯು ತನ್ನ ಹೆಂಡತಿ ಮಕ್ಕಳಾದ ಪುಜಾ, ಗೀತಾ, ಅಶ್ವೀನಿ ಎಲ್ಲರು ಊಟ ಮಾಡಿ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದು, ಬೆಳಿಗ್ಗೆ 0630 ಗಂಟೆಗೆ ಎದ್ದು ನೋಡಲು ಮಗಳು ಪುಜಾ ಮನೆಯಲ್ಲಿ ಇರಲಿಲ್ಲ, ಅಲೃಧೆ ನನ್ನ ಸಾವಿಗೆ ನಾನೇ ಕಾರಣ ನಾನು ಭಾಲ್ಕೇಶ್ವರ ಬಾವಿಗೆ ಬಿದ್ದು ಸಾಯುತ್ತಿದ್ದೆನೆ ಅಂತ ಬರೆದಿಟ್ಟ ಚೀಟಿ ಸಿಕ್ಕಿದರಿಂದ ಎಲ್ಲಾ ಕಡೆ ಹುಡುಕಾಡಿ ಝರಭಾವಿ ಹತ್ತಿರ ಕೂಡಾ ಹೋಗಿ ನೋಡಲು ಅವಳ ಯಾವುದೇ ಕುರುಹು ಸಿಗಲಾರದ ಕಾರಣ ಪುನಃ ಹುಡುಕಾಡುವಾಗ ಝರಬಾವಿಯಲ್ಲಿ ಒಂದು ಮಹೀಳೆಯ ಶವ ತೆಲುತ್ತಿದೆ ಅಂತಾ ಗೊತ್ತಾಗಿ ಅಲ್ಲಿಗೆ ಹೋಗಿ ನೋಡಲು ಸದರಿ ಶವ ಗಳಾದ ಪುಜಾ ಇವಳದ್ದೆ ಇತ್ತು, ಈಗ 2-3 ಸಂಂಧಗಳು ಬಂದು ಹೋಗಿದ್ದು ಸಂಬಂಧ ಕೂಡಿ ಬರಲಾರದ ಕಾರಣ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಿಂದ ಎದ್ದು ಹೋಗಿ ಝರಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ತನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 39/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 07-03-2020 ರಂದು 2130 ಗಂಟೆಗೆ ಫಿರ್ಯಾದಿ ರಮೇಶ ತಂದೆ ಅಶೋಕ ತೆಲಂಗ ಸಾ: ಹಲಬರ್ಗಾ‍ ರವರು ತನ್ನ ಇಂಡಿಯನ್ ಧಾಬಾದಲ್ಲಿರುವಾಗ ಅಪರಿಚತ ವ್ಯಕ್ತಿಯು ಧಾಬಾದ ಎದುರಿನಲ್ಲಿ ಬೀದರ ಉದಗೀರ ರೋಡ ಮೇಲೆ ರಸ್ತೆ ದಾಟುವಾಗ ಬೀದರ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಅಪಚಿರಿತ ವ್ಯಕ್ತಿಗೆ ಡಿಕ್ಕಿ ಮಾಡಿ ಟಿಪ್ಪರ ನಿಲ್ಲಿಸದೇ ಟಿಪ್ಪರ ಸಮೇತ ಓಡಿ ಹೋಗಿರುತ್ತಾನೆ, ಸದರಿ ಘಟನೆ ನೋಡಿ ಹೋಗಿ ನೋಡಲು ಸದರಿ ಅಪರಿಚಿತ ವ್ಯಕ್ತಿಗೆ ಬಲಗೈ, ಎಡಗಾಲು ಪಾದದ ಮೇಲೆ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಸಾದಾ ರಕ್ತಗಾಯ, ಗುಪ್ತ ಗಾಯವಾಗಿದ್ದು ಮಾತಾಡುತ್ತಿರಲಿಲ್ಲಾ, ನಂತರ ಧಾಬಾದಲ್ಲಿ ಕೆಲಸ ಮಾಡುತ್ತಿದ್ದ 1) ಮಾಣಿಕ ಇಡಗಾರ, 2) ಇಸ್ಮಾಯಿಲ ಕೋನ ಮೇಳಕುಂದಾ ರವರು 108 ಅಂಬುಲೆನ್ಸ್‌ ನಲ್ಲಿ ಹಾಕಿ ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ದಿನಾಂಕ 08-03-2020 ರಂದು ರಾತ್ರಿ 0055 ಗಂಟೆ ಸುಮಾರಿಗೆ ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 36/2020, ಕಲಂ. ಮಹಿಳೆ ಕಾಣೆ :-
ದಿನಾಂಕ 07-03-2020 ರಂದು ಅನೀಲರಾವ ತಂದೆ ಶ್ರೀಪತರಾವ ಪಾಟೀಲ, ವಯ: 54 ವರ್ಷ, ಜಾತಿ: ಮರಾಠಾ, ಸಾ: ನಾಗೂರ (ಎಮ್), ತಾ: ಔರಾದ(ಬಿ), ಸದ್ಯ: ಶಿವನಗರ ದಕ್ಷಿಣ, ಬೀದರ ರವರ ಮಗಳಾದ ಸಾಕ್ಷಿ ವಯ: 22 ವರ್ಷ ಇವಳು ಮನೆಯಿಂದ 08:30 ಗಂಟೆಯ ಸುಮಾರಿಗೆ ಕಾಲೇಜಿಗೆ ಹೋಗಿ ಬರುತ್ತೆನೆಂದು ಹೇಳಿ ತನ್ನ ಮೊಬೈಲ ನಂ. 9663096747 ನೊಂದಿಗೆ ಬ್ಯಾಗ ತೆಗೆದುಕೊಂಡು ಹೋದವಳು 1730 ಗಂಟೆಯಾದರು ಮನೆಗೆ ಬರಲಾರದ ಕಾರಣ ಫಿರ್ಯಾದಿಯು ಸತತವಾಗಿ ಅವಳ ಮೋಬೈಲಗೆ ಕರೆ ಮಾಡಲು ಸ್ವಿಚ್ಡ್ಆಫ್ ಇರುತ್ತದೆ, ನಂತರ ಫಿರ್ಯಾದಿಯು ತಮ್ಮ ಸಂಬಂಧಿಕರಿಗೆ ಕರೆ ಮೂಲಕ ಹಾಗೂ ಇತರೆ ಕಡೆ  ಕೇಳಲಾಗಿ ಮಗಳು ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ, ಸಾಕ್ಷಿ ವಯ 22 ವರ್ಷ ಇವಳು ದಿನಾಂಕ 07-03-2020 ರಂದು 08:30 ಗಂಟೆಗೆ ಬೀದರ ನಗರದ ಶಿವನಗರ ದಕ್ಷಿಣದ ಬಾಡಿಗೆ ಮನೆಯಿಂದ ಕಾಣೆಯಾಗಿರುತ್ತಾಳೆ, ಅವರ ವಿವರ 1) ಹೆಸರು: ಸಾಕ್ಷಿ, 2) ತಂದೆ ಹೆಸರು: ಅನೀಲರಾವ ಪಾಟೀಲ, 3) ವಯ: 22 ವರ್ಷ, 4) ಎತ್ತರ: 5 ಫೀಟ 01 ಇಂಚ್, 5) ಚಹರೆ ಪಟ್ಟಿ: ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಇರುತ್ತದೆ, 6) ಧರಿಸಿದ ಬಟ್ಟೆಗಳು: ಒಂದು ನೀಲಿ ಬಣ್ಣದ ಪೈಜಾಮ್ ಬಿಳಿ ಬಣ್ಣದ ಟಾಪ್ ಇದ್ದು, ಕೊರಳಲ್ಲಿ ಒಂದು ಬಂಗಾರದ ಲಾಕೆಟ್ ಇರುತ್ತದೆ ಹಾಗೂ 7) ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ಮರಾಠಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 41/2020, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ತಿಪ್ಪಣ್ಣಾ ತಂದೆ ಮಾಣಿಕಪ್ಪಾ ಹುಜಬಾಳೆ ವಯ: 52 ವರ್ಷ, ಸಾ: ಹಳ್ಳದಕೇರಿ, ಬೀದರ ರವರ ಮಗಳಾದ ಸೋನಿಕಾ ಇವಳು ಪಿಯುಸಿ ನಪಾಸ ಆದ ಪ್ರಯುಕ್ತ ಮನೆಯಲ್ಲಿ ಉಳಿದು ಮನೆಯ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿಯು ದಿನಾಂಕ 7-3-2020 ರಂದು ಣನ್ನ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಹೊದಾಗ ಹೆಂಡತಿಯಾದ ಲಕ್ಷ್ಮಿ ಇವಳು ತಿಳಿಸಿದ್ದೆನೆಂದರೆ ನಾನು ದನಗಳಿಗೆ ಹುಲ್ಲು ತರಲು ಹೊಲಕ್ಕೆ ಹೊಗಿ ಹುಲ್ಲು ತೆಗೆದುಕೊಂಡು ಮರಳಿ ಮನೆಗೆ ಬಂದು ನೊಡಲು ಮಗಳಾದ ಸೋನಿಕಾ ಇವಳು ಮನೆಯಲ್ಲಿ ಇರಲಿಲ್ಲಾ, ಅವಳನ್ನು ಹಳ್ಳದಕೇರಿಯಲ್ಲಿ ಹುಡುಕಾಡಲು ಮತ್ತು ನೆಂಟರಲ್ಲಿ ವಿಚಾರಿಸಲು ಅವಳ ಬಗ್ಗೆ ಯಾವುದೆ ಸುಳಿವು ದೊರೆತಿರುವುದಿಲ್ಲಾ, ಮಗಳು ದಿನಾಂಕ 7-3-2020 ರಂದು 1400 ಗಂಟೆಯಿಂದ ಇಲ್ಲಿಯವರಗೆ ಅವಳ ಸುಳಿವು ದೊರೆತಿರುವುದಿಲ್ಲಾ, ಕಾಣೆಯಾದ ಮಗಳ ಚಹರೆ ಪಟ್ಟಿ 1) ಹೆಸರು: ಸೋನಿಕಾ ತಂದೆ ತಿಪ್ಪಣ್ಣಾ ಹುಜಬಾಳೆ ವಯ: 20 ವರ್ಷ, 2) ಸ್ವಂತ ಊರು: ಹಳ್ಳದಕೇರಿ, 3) ಧರಿಸಿದ ಬಟ್ಟೆ: ಕಪ್ಪು ಬಣ್ಣದ ಟಾಪ ನೀಲಿ ಜಿನ್ಸ ಪ್ಯಾಂಟ, 4) ಬಣ್ಣ: ಗೋಧಿ ಮೈಬಣ್ಣ, 5) ಮೈಕಟ್ಟು: ಸಾಧಾರಣ ಹಾಗೂ 7) ಭಾಷೆ: ಕನ್ನಡ, ಹಿಂದಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 14/2020, ಕಲಂ. 498 (), 504, 506, 323, 354 ಜೊತೆ 34 ಐಪಿಸಿ :-
ಫಿರ್ಯಾದಿ ಶೀಲಾ ಗಂಡ ಸಂತೋಷ ಘಂಟೆ ಸಾ: ದೇವನಾಳ, ರವರ ಮದುವೆಯು ಸಂತೋಷ ತಂದೆ ತುಕಾರಾಮ ಘಂಟೆ ವಯ: 33 ವರ್ಷ, ಸಾ: ಹಲಗರಾ, ತಾ: ನಿಲಂಗಾ, ಜಿ: ಲಾತೂರ, ಸದ್ಯ ಮುಂಬೈ ಇತನೊಂದಿಗೆ ಸಂಪ್ರದಾಯದ ಪ್ರಕಾರ ದಿನಾಂಕ 29-05-2013 ರಂದು ಆಗಿದ್ದು, ಮದುವೆಯ ಸಮಯದಲ್ಲಿ ಸಂತೋಷ ಮತ್ತು ಆತನ ತಾಯಿ ಮಂಗಲಾ ಗಂಡ ತುಕಾರಾಮ ಘಂಟೆ ವಯ: 55 ವರ್ಷ, ತಮದೆ ತುಕಾರಾಮ ತಂದೆ ದತ್ತು ಘಂಟೆ ವಯ: 60 ವರ್ಷ, ರವರಿಗೆ 2,50,000/- ರೂ.ಗಳು, 5 ತೊಲೆ ಬಂಗಾರ, ವರನ ಬಟ್ಟೆಗಾಗಿ 25,000/- ರೂ.ಗಳು ವರದಕ್ಷಿಣೆಯಾಗಿ ಪಡೆದುಕೊಂಡಿರುತ್ತಾರೆ, ಗಂಡನಾದ ಸಂತೋಷ ಈತನು ವೈವಾಹಿಕ ಜೀವನದ ಒಂದು ವರೆ ವರ್ಷದಲ್ಲಿ ಫಿರ್ಯಾದಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿರುವುದಿಲ್ಲ ಮತ್ತು ಫಿರ್ಯಾದಿಗೆ ನಿಷ್ಕಾಳಜಿತನದಿಂದ ನೋಡಿರುತ್ತಾನೆ, ಆರೋಪಿತರಾದ ಗಂಡ ಸಂತೋಷ, ಅತ್ತೆ ಮಂಗಲಾ ಹಾಗೂ ಮಾವ ತುಕಾರಾಮ ಇವರೆಲ್ಲರೂ ಫಿರ್ಯಾದಿಗೆ ಹಿಯಾಳಿಸಿ ಮಾತನಾಡಿ ನಿನಗೆ ಅಡುಗೆ ಮಾಡಲು ಬರುವುದಿಲ್ಲ ಇತ್ಯಾದಿ ನೇಪ ಹೇಳಿ ಹೆಚ್ಚುವರಿಯಾಗಿ ವರದಕ್ಷಿಣೆ ಮತ್ತು ಮುಂಬೈಯಲ್ಲಿ ಪ್ಲಾಟ್ ಖರಿದಿಸಲು 5 ಲಕ್ಷ  ರೂಪಾಯಿ ತೆಗೆದುಕೊಂಡು ಬಾ ಅಂತ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ, ದಿನಾಂಕ 30-11-2018 ರಂದು ಸದರಿ ಆರೋಪಿತರು ಫಿರ್ಯಾದಿಗೆ ನೀನು ವರದಕ್ಷಿಣೆ ಹಣ ತರದೆ ಹೋದರೆ ನಮ್ಮ ಮನೆಯಲ್ಲಿ ವಾಸಿಸಲು ಅವಕಾಶ ಕೊಡುವುದಿಲ್ಲವೆಂದು ಹೇಳಿರುತ್ತಾರೆ, ಬಗ್ಗೆ ದಿನಾಂಕ 30-11-2018 ರಂದು ಮಹಿಳಾ ಕೇಂದ್ರ ಮುಂಬೈಯಲ್ಲಿ ದೂರು ನೀಡಿದರೂ ಆರೋಪಿತರ ವಿರುದ್ದ ಯಾವುದೇ ರೀತಿಯ ಕ್ರಮ ಕೈಕೊಂಡಿರುವುದಿಲ್ಲ, ನಂತರ ಬಸವಕಲ್ಯಾಣ ನ್ಯಾಯಾಲಯದಲ್ಲಿ ಕ್ರಿ.ಮಿ ನಂ. 327/2019 ನೇದರ ಪ್ರಕಾರ ಸದರಿ ಆರೋಪಿತರ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ದೂರು ದಾಖಲಿಸಿದ್ದರಿಂದ ಸದರಿ 3 ಜನರಿಗೆ ಸಮನ್ಸ ಜಾರಿಯಾಗಿ 3 ಜನರು ದಿನಾಂಕ 21-01-2020 ರಂದು ಬಸವಕಲ್ಯಾಣ ನ್ಯಾಯಾಲಯಕ್ಕೆ ಬಂದು ಹಾಜರಾಗಿ ಕೆಲಸ ಮುಗಿದ ನಂತರ ಸದರಿ ಆರೋಪಿತರು ನೇರವಾಗಿ ದೇವನಾಳ ಗ್ರಾಮದ ಫಿರ್ಯಾದಿಯ ತಂದೆ-ತಾಯಿಯ ಮನೆಗೆ ಬಂದು ಜಗಳ ಮಾಡಿರುತ್ತಾರೆ, ಸಂತೋಷ ಈತನು ಕೂದಲು ಹಿಡಿದು ಎಳೆದುಕೊಂಡು ಹೊರಗೆ ತಂದು ನೀನು ಎಕೆ ನಮ್ಮ ಮೇಲೆ ಕೆಸ್ ಮಾಡಿದಿ ಅಂತ ಹೇಳಿ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು, ನಿ ಹಣ ತೆಗೆದುಕೊಂಡು ಬಾ ಅಂತ ಹೇಳಿದರೆ ನಮ್ಮ ವಿರುದ್ದ ಕೇಸ್ ಹಾಕತಿ ಅಂತ ಅವಾಚ್ಯವಾಗಿ ಬೈದು ಜೀವ ಸಹಿತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾನೆ, ತುಕಾರಾಮ ಈತನು ಕೈಯಿಂದ, ಹೊಡೆದು ಕಾಲಿನಿಂದ ಒದ್ದಿರುತ್ತಾನೆ, ಮಂಗಲಾ ಇವಳು ಬೈದು ಕೇಸ್ ವಾಪಸ ಪಡೆದುಕೊ ಇಲ್ಲಾ ಅಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲವೆಂದು ಹೇಳಿರುತ್ತಾಳೆ, ಸದರಿ ಜಗಳವನ್ನು ದೇವನಾಳ ಗ್ರಾಮದ ಅನೀಲ ತಂದೆ ನರಸಿಂಗರಾವ ಜಮಾದಾರ, ವಿಲಾಸ ತಂದೆ ವೆಂಕಟರಾವ ಬಿರಾದಾರ ರವರು ನೋಡಿ ಬಿಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ ದಿನಾಂಕ 08-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: