Police Bhavan Kalaburagi

Police Bhavan Kalaburagi

Monday, March 9, 2020

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಮಲ್ಲಪ್ಪಾ ಈರಾಕೋರ  ಸಾಃ  ಭೀಮ ನಗರ ಹೂಡಾ(ಬಿ) ತಾ// ಸೇಡಂ ಜಿ// ಕಲಬುರಗಿ ರವರು ಲಾರಿ(ಟ್ಯಾಂಕರ) ನಂ ಕೆಎ-32 ಡಿ-3862 ಇದ್ದು,  ಅದು ನನ್ನ ಅಣ್ಣ ಹಣಮಂತ ತಂದೆ ಮಲ್ಲಪ್ಪಾ ಈರಾಕೋರ ಇತನ ಹೆಸರಿನಲ್ಲಿ ಇರುತ್ತದೆ. ಈ ಲಾರಿ (ಟ್ಯಾಂಕರ)  ಸದರಿ ನನ್ನ ಅಣ್ಣ ಹಣಮಂತ ಇತನು ಚಲಾಯಿಸುತ್ತಿದ್ದು ನಾನು ಈ ನಮ್ಮ ಲಾರಿ(ಟ್ಯಾಂಕರ) ನಂ ಕೆಎ-32 ಡಿ-3862 ನೇದ್ದರ  ಮೇಲೆ ಕ್ಲೀನರ ಕೆಲಸ ಮಾಡಿಕೊಂಡಿರುತ್ತೇನೆ.  ನಾನು ಮತ್ತು ನನ್ನ ಅಣ್ಣ ಹಣಮಂತ ಇಬ್ಬರು ಈ ಮೇಲೆ ನಮೂದಿಸಿದ ನಮ್ಮ ಲಾರಿಯಲ್ಲಿ ವಿಜಯಪೂರ ಜಿಲ್ಲೆ ಬಾಗೇವಾಡಿ ತಾಲೂಕಿನ  ಕೂಡಗಿ ಪವರ ಪ್ಲಾಂಟದಿಂದ ಸೇಡಂ ತಾಲೂಕಿನ ಮಳಖೇಡ ರಾಜೇಶ್ವರಿ ಸಿಮೇಂಟ ಕಂಪನಿಗೆ  ಸಿಮೇಂಟ ಕಚ್ಚಾ ಸಾಮಗ್ರಿ (ಬೂದಿ ) ಸಾಗಣೆ ಮಾಡುವ ಬಾಡಿಗೆ ಕೆಲಸಕ್ಕಾಗಿ ನಿನ್ನೆ ದಿನಾಂಕ 07.03.2020 ರಂದು ರಾತ್ರಿ 1-30 ಗಂಟೆಯವರೆಗೆ ಕೂಡಗಿ ನಮ್ಮ ಟ್ಯಾಂಕರದಲ್ಲಿ ಸಿಮೇಂಟ ಕಚ್ಚಾ ಸಾಮಗ್ರಿ (ಬೂದಿ )  ತುಂಬಿಕೊಂಡು   ಇಂದು ದಿನಾಂಕ 08.03.2020 ರಂದು ರಾತ್ರಿ 12-30 ಗಂಟೆಗೆ ಕೂಡಗಿಯಿಂದ ಹೋರಟು ಬಸವನ ಬಾಗೆವಾಡಿಯಲ್ಲಿ  ಲಾರಿ ನಿಲ್ಲಿಸಿ ಮಲಗಿಕೊಂಡು  ಬೆಳಿಗಿನ ಜಾವ 2-30  ಗಂಟೆಯ ಸುಮಾರಿಗೆ ಮತ್ತೆ  ಲಾರಿ (ಟ್ಯಾಂಕರ) ಚಲಾಯಿಸಿಕೊಂಡು ರಾಜೇಶ್ವರಿ ಸಿಮೇಂಟ ಕಂಪನಿ ಮಳಖೇಡಕ್ಕೆ  ಹೊರಟಿದ್ದು ಲಾರಿ (ಟ್ಯಾಂಕರ) ನನ್ನ ಅಣ್ಣ ಹಣಮಂತ ಇತನು ಚಲಾಯಿಸುತ್ತಿದ್ದನು. ಬೆಳಿಗ್ಗೆ ವಿಜಯಪೂರ ಕಲಬುರಗಿ  ರೋಡಿನ ಮೇಲೆ ಜೇವರಗಿ ಸಮೀಪ ರೇವನೂರ ಕ್ರಾಸ್ ಹತ್ತೀರ  ನನ್ನ ಅಣ್ಣ ಹಣಮಂತ ಇತನು ತನ್ನ ವಶದಲ್ಲಿರುವ ನಮ್ಮ  ಲಾರಿ(ಟ್ಯಾಂಕರ) ನಂ ಕೆಎ-32 ಡಿ-3862 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ಕೆನಾಲ ಬ್ರಿಡ್ಜಗೆ ಡಿಕ್ಕಿ ಪಡಿಸಿರುತ್ತಾನೆ , ಈ ಘಟನೆಯಿಂದ ಲಾರಿಯ ಒಳಗಡೆಯಿದ್ದ ನನಗೆ ಮತ್ತು ಚಾಲಕ ನನ್ನ ಅಣ್ಣ ಹಣಮಂತನಿಗೆ  ಯಾವುದೆ ರೀತಿಯ ಗಾಯಗಳು ಆಗಿರುವದಿಲ್ಲಾ, ಲಾರಿ (ಟ್ಯಾಂಕರ) ಜಖಂ ಗೊಂಡಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಮಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ಶ್ರೀ ಹಣಮಂತ ತಂದೆ ಭೀಮರಾಯ ಅಂಬರಖೇಡ ಸಾ// ಬುದ್ದ ನಗರ ಜೇವರಗಿ ತಾ// ಜೇವರಗಿ ರವರು ಜೇವರಗಿ ಪಟ್ಟಣದ ಮಹಿಬೂಬ ಫಂಕ್ಷನ ಹಾಲ ಹತ್ತೀರ ಇರುವ ಭೀಮರಾಯಗೌಡ ಗೌನಳ್ಳಿ ಇವರ ಕಟ್ಟಿಗೆ ಕೊರೆಯುವ ಮಶೀನದಲ್ಲಿ (ಕಟ್ಟಿಗೆ ಅಡ್ಡಾದಲ್ಲಿ) ಕಟ್ಟಿಗೆ ಕೊರೆಯುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆನೆ. ದಿನಾಂಕ 19.02.2020 ರಂದು ಮದ್ಯಾನ್ಹ ನಾನು ಕಟ್ಟಿಗೆ ಕೊರೆಯುವ ಕೂಲಿಕೆಲಸ ಮಾಡುತ್ತಿದ್ದಾಗ ಕಟ್ಟಿಗೆ ಸಮೇತ ನನ್ನ ಎಡಗೈಯ ಎರಡು ಬೆರಳು ಸಮೆತವಾಗಿ ಅಂಗೈ ಕತ್ತರಿಸಿ ತುಂಡಾಗಿ ಹೋಗಿರುತ್ತದೆ. ನಂತರ ನನಗೆ ಅಲ್ಲಿಯೇ ನನ್ನಂತೆ ಕೂಲಿ ಕೆಲಸ ಭೀಮಪ್ಪಾ ಗುಳ್ಯಾಳ ಮತ್ತು ಅಲ್ಲಾವುದ್ದಿನ ಸಾ// ಬುಟ್ನಾಳ ರೋಡ ಜೇವರಗಿ ಇವರು ಕೂಡಲೆ ನನಗೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ ತಂದು ಸೇರಿಕೆ ಮಾಡಿ ಈ ವಿಷಯ ನಮ್ಮ ಮನೆಯವರಿಗೆ ತಿಳಿಸಿರುತ್ತಾರೆ.ನಂತರ ನನ್ನ ಹೆಂಡತಿ ಯಮನಾಬಾಯಿ, ಹಾಗೂ ನನ್ನ ಹೇಂಡತಿಯ ಅಕ್ಕನ ಗಂಡ ರಾಜು ತಂದೆ ಸುರೇಶ ಯಂಟಮನ ಇವರು ಬಂದು ನನಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ.
ನಾನು ಕೂಲಿ ಕೆಲಸ ಮಾಡುವ ಕಟ್ಟಿಗೆ ಮಶೀನ (ಕಟ್ಟಿಗೆ ಅಡ್ಡ) ಮಾಲಿಕರಾದ ಭೀಮರಾಯಗೌಡ ಗೌನಳ್ಳಿ ಇವರು ಯಾವುದೇ ಮುಂಜಾಗೃತ ಕ್ರಮ ಕೈಗೋಳ್ಳದೆ ನಿರ್ಲಕ್ಷತನದಿಂದ ಕಟ್ಟಿಗೆ ಕೊರೆಯುವ ಮಶೀನದಲ್ಲಿ ಅಪಾಯಕಾರಿಯಾದ ಕಟ್ಟಿಗೆ ಕೊರೆಯುವ ಕೆಲಸಕ್ಕೆ ನನಗೆ ಹಚ್ಚಿದ್ದರಿಂದ ಈ ಘಟನೆ ಜರುಗಿರುತ್ತದೆ. ಈಘಟನೆಗೆ ಕಾರಣನಾದ ಕಟ್ಟಿಗೆ ಮಶೀನ(ಕಟ್ಟಿಗೆ) ಮಾಲಿಕರಾದ ಭೀಮರಾಯಗೌಡ ಗೌನಳ್ಳಿ ಸಾ// ಶಾಂತ ನಗರ ಜೇವರಗಿ ಇವರ ವಿರುದ್ದಸೂಕ್ತ ಕಾನೂನು ರೀತಿಯ ಜರುಗಿಸಬೇಕಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರವೆಸಗಿದ ಪ್ರಕರಣ :
ವಾಡಿ ಠಾಣೆ : ಶ್ರೀ ರವರ ಮನೆಯ ಹಿಂದುಗಡೆ ಸ್ವಲ್ಪ ದೂರದಲ್ಲಿ ಧರ್ಮಾನಾಯಕ ತಾಂಡಾದ ಸುನೀಲ ತಂದೆ ಪುರು ರಾಠೋಡ ಇತನ ಹೊಲವಿದ್ದು ನನ್ನ ಮಗಳು ಆಗಾಗ ಅವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗುತ್ತಿದ್ದಳು.ನಂತರ ದಿನಾಂಕ 17/02/2020 ರಂದು ರಾತ್ರಿ 10-00 ಗಂಟೆ ಸುಮಾರು ನಾವೆಲ್ಲರೂ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆವು. ನಂತರ ಬೆಳಗಿನ 02-00 ಗಂಟೆ ಸುಮಾರು ನಾನು ಮೂತ್ರ ವಿಸರ್ಜನೆ ಮಾಡಲು ಎದ್ದಾಗ ಮನೆಯಲ್ಲಿ  ಮಲಗಿಕೊಂಡಿದ್ದ ಮಗಳು ಇರಲಿಲ್ಲ. ನಂತರ ಅವಳು ಎಲ್ಲಿ ಹೋಗಿದ್ದಾಳೆ ಅಂತಾ ಹೊರಗಡೆ ಹುಡುಕಾಡಿದ್ದು ಅವಳ ಪತ್ತೆಯಾಗಲಿಲ್ಲ. ನಂತರ ನನ್ನ ಮಗಳ ಬಗ್ಗೆ ನಾವು ನಮ್ಮ ಸಂಬಂಧಿಕರ ಊರುಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರು ಸಹ ಅವಳು ಪತ್ತೆಯಾಗಲಿಲ್ಲ. ಈಗ ಸುಮಾರು 08 ದಿವಸಗಳ ಹಿಂದೆ ಮಗಳು ಧರ್ಮಾನಾಯಕ ತಾಂಡಾದ ಸುನೀಲನ ಸಂಬಂಧಿಕರು ಕರೆದುಕೊಂಡು ಬಂದು ನಮ್ಮ ಮನೆಯ ಸಮೀಪ ಬಿಟ್ಟು ಹೋದರು.ನಾನು ಮತ್ತು ನಮ್ಮ ತಾಯಿ ಕೂಡಿ ಮಗಳಿಗೆ ವಿಚಾರಿಸಲಾಗಿ ತಿಳಿಸಿದ್ದೆನೆಂದರೆ, ‘’ಈಗ ಸುಮಾರು 5-6 ತಿಂಗಳ ಹಿಂದೆ ನಾನು ಸುನೀಲ ಇತನ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ ಆತನು ನನ್ನೊಂದಿಗೆ ಸಲಿಗೆಯಿಂದ ಮಾತನಾಡುವದು ಮಾಡುತ್ತಿದ್ದು ಅಲ್ಲದೇ ನಾನು ನಿನಗೆ ಪ್ರೀತಿ ಮಾಡುತ್ತೆನೆ ಮತ್ತು ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳಿದ್ದಕ್ಕೆ ನಾನು ನಿನಗೆ ಮದುವೆ ಆಗಿರುತ್ತದೆ ನಾನು ಮದುವೆ ಮಾಡಿಕೊಳ್ಳುವದಿಲ್ಲ ಅಂತಾ ನಿರಾಕರಿಸಿದೆನು. ಆದರು ಸಹ ಸುನೀಲನು ಮನೆಯ ಹತ್ತಿರ ಬರುವದು ನನ್ನ ಜೊತೆ ಮಾತನಾಡುವದು ಪ್ರಯತ್ನಿಸುವದು ಮಾಡುತ್ತಿದ್ದನು. ದಿನಾಂಕ 17/02/2020 ರಂದು ರಾತ್ರಿ 11-30 ಗಂಟೆ ಸುಮಾರು ನಾನು ಮೂತ್ರ ವಿಸರ್ಜನೆಗಾಗಿ ಮನೆಯ ಹೊರಗಡೆ ಬಂದಾಗ ಸುನೀಲ ಇತನು  ನಮ್ಮ ಮನೆಯ ಮುಂದಿನ ರೊಡಿಗೆ ನಿಂತುಕೊಂಡಿದ್ದು ಆತನು ನನಗೆ ಕೈ ಮಾಡಿ ಕರೆದಾಗ ಅವನ ಹತ್ತಿರ ಹೋಗಿ ಇಷ್ಟು ಹೊತ್ತಿಗೆ ಯಾಕೇ ಬಂದಿರುವೆ ಅಂತಾ ವಿಚಾರಿಸಿದ್ದಕ್ಕೆ ನಡೆ ನನ್ನ ಸಂಗಡ ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳಿ ನನಗೆ ಪುಸಲಾಯಿಸಿ ತನ್ನ ಮೊಟರ ಸೈಕಲ ಮೇಲೆ ಕೂಡಿಸಿಕೊಂಡು ವಾಡಿ ರೇಲ್ವೇ ಸ್ಟೇಷನಗೆ ಬಂದು ಅಲ್ಲಿಂದ ರೇಲ್ವೇಯಲ್ಲಿ ಸೋಲಾಪುರಕ್ಕೆ ಕರೆದುಕೊಂಡು ಹೋದನು. ಅಲ್ಲಿಂದ ತುಳಜಾಪುರಕ್ಕೆ ಹೋಗಿ ಅಲ್ಲಿ ದರ್ಶನ ಮಾಡಿ ನಂತರ ಪುನಾಕ್ಕೆ ಅವರ ಅಕ್ಕ ರೇಣುಕಾ ಇವರ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಸುಮಾರು 4-5 ದಿವಸಗಳವರೆಗೆ ಉಳಿದುಕೊಂಡಿದ್ದು ಆಗ ಅವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ 2-3 ಸಲ ಸುನೀಲ ಇತನು ನನಗೆ ಪುಸಲಾಯಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ತಾನೆ. ನಂತರ ಅವರ ಅಕ್ಕ ಈ ಹುಡುಗಿಗೆ ಯಾಕೇ ಕರೆದುಕೊಂಡು ಬಂದಿರುವೆ ಅಂತಾ ಕೇಳಿ ಸುನೀಲನಿಗೆ ಮತ್ತು ನನಗೆ ಅವರ ಸಂಬಂಧಿಕರು ಅಲ್ಲಿಂದ ಕರೆದುಕೊಂಡು ಬಂದು ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿರುತ್ತಾರೆ’’ ಅಂತಾ ತಿಳಿಸಿದಳು. ನಂತರ ಈ ಬಗ್ಗೆ ನಮ್ಮ ಸಮಾಜದ ವಸಂತ ತಂದೆ ಶಂಕರ ಚವ್ಹಾಣ ಇವರಿಗೆ ಕರೆಯಿಸಿ ವಿಷಯ ತಿಳಿಸಿದಾಗ ಅವರು ನಮ್ಮ ಸಮಾಜದಲ್ಲಿ ಕುಳಿತು ಪಂಚಾಯತಿ ಮಾಡಿ ಬಗೆಹರಿಸಿಕೊಳ್ಳೊಣ ಅಂತಾ ಹೇಳಿದರು. ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಸುನೀಲ ಇತನು ಮದುವೆ ಮಾಡಿಕೊಳ್ಳುವದಾಗಿ ಹೇಳಿ ಪುಸಲಾಯಿಸಿ ಅವಳಿಗೆ ಅಪಹರಿಸಿಕೊಂಡು ಪುನಾಕ್ಕೆ ಹೋಗಿ ಅಲ್ಲಿ ಅವಳೊಂದಿಗೆ ದೈಹಿಕ ಸಂಪರ್ಕ ಮಾಡಿದ್ದು ಈ ಬಗ್ಗೆ ಸುನೀಲ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ ಸುಭಾಷ್ ತಂದೆ ಮಲ್ಲೇಶಪ್ಪಾ ಮರತ್ತ ಸಾ|| ಯನಗುಂಟ ತಾ|| ಜೇವರಗಿ ಮಗಳಾದ ಶರಣಮ್ಮಾ ಇವಳಿಗೆ ಈಗ ಐದು ವರ್ಷಗಳ ಹಿಂದೆ ನರಿಬೋಳ ಗ್ರಾಮದ ವಿಜಯಕುಮಾರ ಕಿರಣಗಿ ಎಂಬ ಕುರುಡ ವ್ಯಕ್ತಿಯೊಂದಿಗೆ ಮದುವೆ ಮಾಡಿ ಕೊಟ್ಟಿರುತ್ತೆನೆ. ಮದುವೆಯಾದ ನಂತರ ನನ್ನ ಮಗಳು ಶರಣಮ್ಮ ಇವಳು ಸುಮಾರು 2 ವರ್ಷಗಳವರೆಗೆ ಗಂಡನ ಮನೆಯಲ್ಲಿ ಜೀವನ ಮಾಡಿ ನಂತರ ಈಗ ಮೂರು ವರ್ಷಗಳಿಂದ ನಮ್ಮ ಹತ್ತಿರ ನಮ್ಮ ಮನೆಯಲ್ಲಿಯೆ ವಾಸವಾಗಿರುತ್ತಾಳೆ. ದಿನಾಂಕ 06.03.2020 ರಂದು ಮಧ್ಯಾಹ್ನ ನನ್ನ ಮಗಳು ಶರಣಮ್ಮ ಇವಳು ಹೊಲಕ್ಕೆ ಹೋಗಿ ಕಟ್ಟಿಗೆ ತರುತ್ತೆನೆ ಎಂದು ನಮಗೆ ಮನೆಯಲ್ಲಿ ಹೇಳಿ ಹೋಗಿರುತ್ತಾಳೆ. ನಂತರ ಅಂದು ರಾತ್ರಿ ಆದರ ಕೂಡ ನನ್ನ ಮಗಳು ಶರಣಮ್ಮ ಇವಳು ಮರಳಿ ಮನೆಗೆ ಬಾರದೆ ಇರುವದರಿಂದ ನಾನು ಮತ್ತು ನನ್ನ ಮಗ ದೇವಿಂದ್ರ ಹಾಗು ನನ್ನ ಹೆಂಡತಿ ಮಲ್ಲಮ್ಮ ಮೂವರು ಕೂಡಿ ನನ್ನ ಮಗಳ ಊರಾದ ನರಿಬೊಳ ಗ್ರಾಮಕ್ಕೆ ಹಾಗು ನಮ್ಮಸಂಭಂದಿಕರ ಊರುಗಳಿಗೆಲ್ಲಾ ನಿನ್ನೆ ರಾತ್ರಿ ಪೋನ್ ಮಾಡಿ ನನ್ನ ಮಗಳು ಶರಣಮ್ಮ ಇವಳ ಬಂದಿರುವದರ ಬಗ್ಗೆ ವಿಚಾರಿಸಲಾಗಿ ನನ್ನ ಮಗಳು ಪತ್ತೆಯಾಗಿರುವದಿಲ್ಲ. ದಿನಾಂಕ 07.03.2020 ರಂದು ನಾವು ನಮ್ಮ ಮಗಳಿಗೆ ಕಟ್ಟಿ ಸಂಗಾವಿ, ಜೇವರಗಿ, ಮದರಿ ಗ್ರಾಮಗಳಲ್ಲಿ ಹುಡುಕಾಡಿ ನಾನು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಇದ್ದಾಗ ನಮ್ಮೂರಿನ ಸಿಮಾಂತರದಲ್ಲಿರುವ ಹಯ್ಯಾಳಪ್ಪ ಕರಗಾರ ಇವರ ಹೋಲದಲ್ಲಿ ಒಬ್ಬ ಹೆಣ್ಣು ಮಗಳ ಶವ ಬಿದ್ದಿದೆ ಎಂದು ಜನರು ಅಂದಾಡುವದನ್ನು ಕೇಳಿ ಕೂಡಲೆ ನಾನು, ನನ್ನ ಮಗ ದೇವಿಂದ್ರ, ನನ್ನ ಹೆಂಡತಿ ಮಲ್ಲಮ್ಮಾ ಹಾಗು ನಮ್ಮ ಅಣ್ಣ ತಮ್ಮಕಿಯ ಸಂಭಂದಿಕರಾದ ಉದಯಕುಮಾರ ಮರತ್ತ, ರಾಜಶೇಖರ ಮರತ್ತ, ಭೀಮರಾಯ ಮರತ್ತ, ಹಾಗು ನಮ್ಮೂರಿನ ನಾಗಪ್ಪ ವಾಲಿಕಾರ್, ಗುರಣ್ಣ ಮಂದೆವಾಲ, ಹಾಗು ನಿಂಗಣ್ಣ ಕರಗಾರ ಎಲ್ಲರೂ ಕೂಡಿ ಹಯ್ಯಾಳ್ಪ ಕರಗಾರ ಇವರ ಹೊಲಕ್ಕೆ ಹೋಗಿ ನೊಡಲಾಗಿ ನನ್ನ ಮಗಳು ಶರಣಮ್ಮ ಇವಳ ಶವ ಇದ್ದು ಅವಳ ಕುತ್ತಿಗೆಗೆ ಹಗ್ಗದಿಂದ ಬಿಗಿದ ಸ್ಥಿತಿಯಲ್ಲಿ ಶವ ಇತ್ತು. ನಾವು ನನ್ನ ಮಗಳು ಶರಣಮ್ಮಾ ಇವಳ ಶವ ನೋಡಿ ಗುರುತಿಸಿರುತ್ತೆವೆ. ದಿನಾಂಕ 06.03.2020 ರಂದು ಮದ್ಯಾಹ್ನ 03:30 ಗಂಟೆಯ ಸುಮಾರಿಗೆ ನನ್ನ ಮಗಳು ಶರಣಮ್ಮ ಇವಳು ಉರುವಲು ಕಟ್ಟಿಗೆ ತರಲು ಹೋಲಕ್ಕೆ ಹೋದ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ನನ್ನ ಮಗಳಿಗೆ ಯಾವುದೋ ಉದ್ದೇಶದಿಂದ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಶವ ಹಯ್ಯಾಳಪ್ಪ ಕರಗಾರ ಇವರ ಹೊಲದಲ್ಲಿ ತೊಗರಿ ಕಟ್ಟಿಗೆ ಹತ್ತಿರ ಬಿಸಾಡಿ ಹೋಗಿರುತ್ತಾರೆ. ಈ ಘಟನೆ ನಿನ್ನೆ ದಿನಾಂಕ 06.03.2020 ರಂದು ಸಾಯಂಕಾಲ 06 ಗಂಟೆಯಿಂದ 08 ಗಂಟೆಯ ಒಳಗಡೆ ನಡೆದಿರಭಹುದು. ಕಾರಣ ಮಾನ್ಯರು ಅವರು ನನ್ನ ಮಗಳ ಕೊಲೆ ಮಾಡಿದ ದುಷ್ಕರ್ಮಿಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮಹಾದೇವಿ ಗಂಡ ಹುಣಚಪ್ಪಾ ಖಣದಾಳ ಸಾ// ಮದರಿ ತಾ// ಜೇವರಗಿ ರವರು ತನ್ನ ಐದು ಜನ ಹೆಣ್ಣುಮಕ್ಕಳ ಮದುವೆ ಮಾಡಿದ್ದು ಇದರಿಂದ ನಮಗೆ ಸಾಲ ಆಗಿದ್ದರಿಂದ ನಮಗೆ ಹಣದ ಅಡಚಣೆ ಇದ್ದರಿಂದ ಈಗ ಎರಡುವರೆ ವರ್ಷದ ಹಿಂದೆ ನಮ್ಮ ಹೊಲ ಮಾರಾಟ ಅದ ನಂತರ ಹಣ ಮರಳಿ ಕೋಡುವದಾಗಿ ಹೇಳಿ ನಮ್ಮೂರ ಬಸವಂತಪ್ಪಾ ಕೌಲಗಿ ಇವರ ಹತ್ತಿರ 13,00,000/- ರೂಪಾಯಿ ಹಣ ಪಡೆದುಕೊಂಡು, ನನ್ನ ಮಗನ ಹೆಸರಿನಲ್ಲಿದ್ದ ಸರ್ವೆ ನಂ 394 ರಲ್ಲಿನ 8 ಎಕರೆ ಹೋಲ ಸಬ್ ರಜಿಸ್ಟರ ಕಛೇರಿಯಲ್ಲಿ ಬಸವಂತಪ್ಪನ ಹೆಸರಿಗೆ ಮಾರ್ಟಗೇಜ ಮಾಡಿಸಿದ್ದು ಇರುತ್ತದೆ. ಈಗ ಸುಮಾರು ಎರಡು ತಿಂಗಳ ಹಿಂದೆ ನಮ್ಮೂರ ಬಸವಂತಪ್ಪ ಕೌಲಗಿ, ಈತನು ಮತ್ತು ಶರಣಪ್ಪ ತಂದೆ ಜಟ್ಟೆಪ್ಪ ಬಾಗೊಡಿ ಇವರಿಬ್ಬರೂ ನನ್ನ ಮಗನಾದ ಶರಣಪ್ಪ ಈತನಿಗೆ ಜಬರದಸ್ತಿಯಿಂದ ಮದರಿ ಗ್ರಾಮದಿಂದ ಅಪಹರಿಸಿಕೊಂಡು ಹೋಗಿ ಜೇವರಗಿ ತಹಸೀಲ್ದಾರ ಕಚೇರಿಯಲ್ಲಿ ಬೇದರಿಕೆ ಹಾಕಿ ಅಂಜಿಸಿ ನನ್ನ ಮಗನ ಸಹಿ ಮಾಡಿಸಿಕೊಂಡು ನನ್ನ ಮಗನ ಹೆಸರಿನಲ್ಲಿದ್ದ ಸರ್ವೆ ನಂ 394 ರಲ್ಲಿನ 8 ಎಕರೆ ಹೊಲವು ತನ್ನ ಮಗ ಮಿತ್ರೇಶ ಈತನ ಹೆಸರಿಗೆ 2 ಎಕರೆ , ಮಗಳಾದ ಸಂಗಮ್ಮ ಇವಳ ಹೆಸರಿಗೆ 3 ಎಕರೆ ಹಾಗೂ ಅಳಿಯನಾದ ಮಹೇಶ ಇತನ ಹೆಸರಿಗೆ 3 ಎಕರೆ ಜಮೀನು ರೀಜಿಷ್ಟರ್ ಮಾಡಿಸಿಕೊಂಡಿರುತ್ತಾನೆ ಇದು ನಮಗೆ ನಂತರ ಗೊತ್ತಾಗಿರುತ್ತದೆ. ಈ ವಿಷಯದಲ್ಲಿ ಬಸವಂತಪ್ಪ ಈತನಿಗೆ ಕೇಳಲು ಹೋದಾಗ ಅವನು ನಮ್ಮೊಂದಿಗೆ ಕರಾರು ಮಾಡುತ್ತಾ ಬಂದಿರುತ್ತಾನೆ. ಅದರಿಂದ ಅವನಿಗೂ ನಮಗೂ ವೈಮನಸ್ಸು ಇರುತ್ತದೆ. ದಿನಾಂಕ 6/03/2020 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ ನಾನು ಮನೆಯಿಂದ ನಮ್ಮ ಮಗಳ ಮನೆಯ ಕಡೆಗೆ ನಮ್ಮೂರ ಪ್ರಭು ಕೌಲಗಿ ಇವರ ಹೊಟೇಲ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಅಲ್ಲಿಯೇ ಹೋಟೆಲ ಎದುರುಗಡೆ ಬಸವಂತಪ್ಪ ಕೌಲಗಿ ಈತನು ಕುಳಿತಿದ್ದನು. ನಾನು ಅವನಿಗೆ ನಮ್ಮ ಹೊಲದ ಮೇಲೆ ಹಣ ಕೊಟ್ಟು ನಮ್ಮ ಮಗನಿಗೆ ಜಬರದಸ್ತಯಿಂದ ಕರೆದುಕೊಂಡು ಹೋಗಿ ಅವನಿಗೆ ಅಂಜಿಸಿ ಅವನ ಸಹಿ ಪಡೆದುಕೊಂಡು ಹೊಲ ನೀಮ್ಮ ಹೆಸರಿಗೆ ಮಾಡಿಕೊಂಡಿದ್ದಿ ನಮ್ಮ ಹೊಲದ ಕಾಗದ ಪತ್ರಗಳು ನಮಗೆ ಕೊಡು ಎಂದು ಕೇಳಿದಾಗ, ಹೊಲದ ಕಾಗದ ಪತ್ರಗಳು ಜೇವರಗಿ ತಹಸೀಲ್ದಾರ ಕಚೇರಿಯಲ್ಲಿ ಇರುತ್ತವೆ ನೀನು ಏನು ಬೇಕಾದರು ಮಾಡಿಕೊ ಬೇಕಾದರೆ ನೀಮ್ಮ ಎಲ್ಲಾ ಹೊಲ ನನ್ನ ಹೆಸರಿಗೆ ಮಾಡಿಕೊಳ್ಳುತ್ತೆನೆ ಬೊಸಡಿ ಎಂದು ಅವನು ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವನಿಗೆ ನಮ್ಮ ಹೊಲ ಮಾರಾಟ ಮಾಡಿ ನೀನ್ನ ಹಣ ಕೊಡುತ್ತೆವೆ ಎಂದು ಹೇಳಿದಾಗ ಅವನು ಬಂದು ನನಗೆ ತಡೆದು ನಿಲ್ಲಿಸಿ ಕೈಯಿಂದ ನನ್ನ ಮೈ ಮೇಲಿನ ಸೀರೆ ಹಿಡಿದು ಜಗ್ಗಿ ಎಳೆದಾಡಿ ಮಾನ ಅಪಮಾನ ಮಾಡಿರುತ್ತಾನೆ. ಮತ್ತು ಕೈಯಿಂದ ನನ್ನ ಎದೆಯ ಮೇಲೆ ಹೊಡೆದು ನೂಕಿಸಿಕೊಟ್ಟಿರುತ್ತಾನೆ. ಮತ್ತು ಹೊಲದ ವಿಷಯದಲ್ಲಿ ಇನ್ನೊಮ್ಮೆ ಎನಾದರೂ ಕೇಳಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾನೆ. ಅಷ್ಟರಲ್ಲಿಯೇ ನಮ್ಮೂರ ಭೀಮಾಶಂಕರ ತಂದೆ ಸಂಗಣ್ಣಗೌಡ ಬಡಿಗೇರ, ಸಿದ್ದಪ್ಪ ತಂದೆ ಹುಣಚಪ್ಪ ಕುಂಠೋಜಿ ಇವರು ಬಂದು ಬಿಡಿಸಿಕೊಂಡಿರುತ್ತಾರೆ. ನಂತರ ನನ್ನ ಮಗ ಶರಣಪ್ಪ ಇತನು ಚಿಕಿತ್ಸೆ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ.ನಮ್ಮ ಹೊಲವನ್ನು ಕಬಳಿಸುವ ಉದ್ದೇಶದಿಂದ 1) ಬಸವಂತಪ್ಪ ಕೌಲಗಿ, 2) ಶರಣಪ್ಪ ತಂದೆ ಜೆಟ್ಟೆಪ್ಪ ಬಾಗೊಡಿ, 3) ಮಿತ್ರೇಶ ತಂದೆ ಬಸವಂತಪ್ಪ ಕೌಲಗಿ, 4) ಸಂಗಮ್ಮ ಗಂಡ ಸಿದ್ರಾಮ 5) ಮಹೇಶ ತಂದೆ ಬಸವರಾಜ ಕಠಬಣ 6) ಬಸವರಾಜ ಕಠಬಣ, 7) ಸಿದ್ರಾಮ ಇವರೆಲ್ಲರೂ ಕೂಡಿಕೊಂಡು ಎರಡು ತಿಂಗಳ ಹಿಂದೆ ನನ್ನ ಮಗ ಶರಣಪ್ಪ ಈತನಿಗೆ ಜಬರದಸ್ತಿಯಿಂದ ಮದರಿ ಗ್ರಾಮದಿಂದ ಅಪಹರಿಸಿಕೊಂಡು ಹೋಗಿ ಅವನಿಗೆ ಅಂಜಿಸಿ ಅವನ ಸಹಿ ಪಡೆದುಕೊಂಡು ನಮ್ಮ ಹೊಲವು ತಮ್ಮ ಹೆಸರಿಗೆ ಮಾಡಿಕೊಂಡು ನಮಗೆ ಮೊಸ ವಂಚನೆ ಮಾಡಿದ್ದು, ಅಲ್ಲದೆ ಕೇಳಲು ಹೋದ ನನಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆ ಬಡೆ ಮಾಡಿ ನೂಕಿಸಿಕೊಟ್ಟು ನನ್ನ ಮೈ ಮೇಲಿನ ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿ ತಡೆದು ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಅಮರೇಶ ತಂದೆ ಮಡಿವಾಳಪ್ಪ ನಾಯ್ಕೋಡಿ ಸಾ: ಕಾಚಾಪುರ ತಾ: ಯಡ್ರಾಮಿ  ಜಿ: ಕಲಬುರಗಿ ರವರದು ಮಳ್ಳಿ ಸರ್ವೆ ನಂ 325/1 ರಲ್ಲಿ 08 ಎಕರೆ 07 ಗುಂಟೆ ಜಮೀನಿನ ಕಬ್ಜೆದಾರನು ಹಾಗು ಮಾಲೀಕನು ಆಗಿರುತ್ತೆನೆ, ಕಳೆದ ವರ್ಷ ನಮ್ಮ ಹೊಲದಲ್ಲಿ ಹೊಸದಾಗಿ ನೀರಿನ ಪಂಪಸೆಟ್ಟನ್ನು ಕೂಡಿಸಿದ್ದು, ಅದರ ಕಂಪನಿಯ ಹೆಸರು TMH 10H 7.5 HP TEXMO A CLASS  MONOBLOCK PUMPSET NO 63101082946 ನೇದ್ದು ಇದ್ದು ಅದರ ಅ;ಕಿ; 23,600/- ರೂ ಬೆಲೆಬಾಳುವ ನೀರಿನ ಪಂಪಸೆಟ್ಟ ಇರುತ್ತದೆ, ನಮ್ಮ ಹೊಲವನ್ನು ನಮ್ಮ ಅಳಿಯ ರಾಯಗೊಂಡ ತಂದೆ ಪರಮಣ್ಣ ಕಡಕಲ್ ರವರಿಗೆ ಪಾಲಿಗೆ ಕೊಟ್ಟಿದ್ದು ದಿನಾಂಕ: 22/11/2019 ರಂದು ಬೆಳಿಗ್ಗೆ ನಮ್ಮ ಅಳಿಯ ರಾಯಗೊಂಡ ಇವನು ನನಗೆ ಫೋನ ಮಾಡಿ ಹೊಲದಲ್ಲಿನ ನಮ್ಮ ನೀರಿನ ಮೋಟರ ಕಳುವಾಗಿರುತ್ತದೆ ಅಂತಾ ಹೇಳಿದ ಕೂಡಲೆ ನಾನು ಹೊಲಕ್ಕೆ ಹೋಗಿ ನೋಡಲಾಗಿ ನಾವು ಅಳವಡಿಸಿದ ಮೇಲ್ಕಂಡ ನೀರಿನ ಮೋಟರ ಪಂಪಸೆಟ್ಟ ಇರಲಿಲ್ಲಾ, ನಂತರ  ನಾನು ಮತ್ತು ನಮ್ಮ ಅಳಿಯಂದಿರಾದ ರಾಯಗೋಂಡ, ದೇವಿಂದ್ರ ತಂದೆ ಪರಮಣ್ಣ ರವರು ಕೂಡಿಕೊಂಡು ನಮ್ಮ ಹೊಲಗಳ ಸುತ್ತ ಮುತ್ತ ಎಲ್ಲಾ ಕಡೆ ಹುಡಕಾಡಿದೇವು, ನಂತರ ಸುತ್ತ ಮುತ್ತಲಿನ ಊರುಗಳಲ್ಲಿ ಎಲ್ಲಾಕಡೆ ಹುಡಿಕಿದರು ಸಿಕ್ಕಿರುವುದಿಲ್ಲಾ, ಕಾರಣ ಮೇಲ್ಕಂಡ TMH 10H 7.5 HP TEXMO A CLASS  MONOBLOCK PUMPSET ನೀರಿನ ಮೋಟಾರ ಪಂಪಸೆಟ್ಟನ್ನು ದಿನಾಂಕ 21/11/2019 ರಂದು ರಾತ್ರಿ 8;00 ಗಂಟೆಯಿಂದ ದಿನಾಂಕ 22/11/2019 ರಂದು ಬೆಳಿಗ್ಗೆ 06;00 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಆದ್ದರಿಂದ ದಯಾಳುಗಳಾದ ತಾವುಗಳು ಪತ್ತೆ ಹಚ್ಚಿ ಕೊಡಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂಜಯಕುಮಾರ ತಂದೆ ಚಂದ್ರಕಾಂತ ಜಮಾದಾರ ಸಾ|| ಚೌಡಾಪೂರ ತಾ|| ಅಫಜಲಪೂರ ರವರ ಅಕ್ಕಳಾದ ಶ್ರೀಧೇವಿ ಇವಳಿಗೆ ಒಂದು ಗಂಡ ಮತ್ತು ಒಂದು ಹೆಣ್ಣು ಮಗು ಇದ್ದು, ತನ್ನ ಗಂಡನೊಂದಿಗೆ ಬೇರೆಯಾಗಿ ನಮ್ಮ ಜೋತೆಯಲ್ಲಿ ಇದ್ದುಕೊಂಡು ಚೌಡಾಪೂರದ ಖಾಸಗಿ ಶಾಲೆಯಲ್ಲಿ ಶೀಕ್ಷಕಿ ಕೆಲಸ ಮಾಡಿಕೊಂಡಿರುತ್ತಾಳೆ. ಸದರಿ ನನ್ನ ಅಕ್ಕನ ಮಗಳಾದ ಸಾಕ್ಷೀ 15 ವರ್ಷ ಇವಳು ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆಯ ಅಧೀನದಲ್ಲಿರುವ ರೇಣುಕಾ ಶುಗರ್ಸ ಪೌಂಡೇಶನ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಾಳೆ. ಸಾಕ್ಷೀ ಇವಳು ಪ್ರತಿ ದಿವಸ ಶಾಲಾ ಬಸ್ಸಿನಲ್ಲಿ ಚೌಡಾಪೂರದಿಂದ ಹೋಗಿ ಬರುವುದು ಮಾಡುತ್ತಾಳೆ. ಈಗ 10 ನೇ ತರಗತಿಯ ವಾರ್ಷಿಕ ಪರೀಕ್ಷೆ ನಡೆದಿರುತ್ತವೆ. ನಿನ್ನೆ ದಿನಾಂಕ 07-03-2020 ರಂದು ಬೆಳಿಗ್ಗೆ 08:00 ಗಂಟೆಗೆ ನನ್ನ ಅಕ್ಕನ ಮಗಳು ಸಾಕ್ಷೀ ಇವಳು ಪರೀಕ್ಷೆ ಸಂಭಂದ ಕೆಲವೊಂದು ಪ್ರಶ್ನೆಗಳ ಬಗ್ಗೆ ನಮ್ಮ ಶೀಕ್ಷಕರಿಗೆ ಕೇಳಬೇಕಿದೆ ಶಾಲೆಗೆ ಹೋಗಿ ಮರಳಿ ಬೇಗ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾಳೆ. ಮದ್ಯಾಹ್ನ 12:15 ಗಂಟೆ ಸುಮಾರಿಗೆ ಸಾಕ್ಷೀ ಓದುವ ಶಾಲೆಯಿಂದ ನನಗೆ ಪೋನ ಮಾಡಿ ನಮ್ಮ ಶಾಲೆಯಲ್ಲಿ ಓದುವ ಘತ್ತರಗಾ ಗ್ರಾಮದ ಸಿರಾಜ ಪಟೇಲ ತಂದೆ ಬಂದಗಿಸಾಬ ಪಟೇಲ ಈತನು ಸಾಕ್ಷೀಯನ್ನು ಬಲವಂತವಾಗಿ ಮೋಟರ ಸೈಕಲ ಮೇಲೆ ಕರೆದುಕೊಂಡು ಹೋಗಿದ್ದಾನೆ, ನಾವು ಹಿಡಿಯಬೆಕೆಂದು ಹೋಗುವಷ್ಟರಲ್ಲಿ ನಮ್ಮಿಂದ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ಅಕ್ಕ ಹಾಗೂ ನನ್ನ ಅಣ್ಣನಾದ ರಾಜಶೇಖರ ಮೂರು ಜನರು ಕೂಡಿ ನನ್ನ ಅಕ್ಕನ ಮಗಳು ಓದು ಶಾಲೆಗೆ ಹೋಗಿ ಮುಖ್ಯ ಗುರುಗಳಾದ ಕಿರಣ ರವರಿಗೆ ವಿಚಾರಿಸಲು, ಮದ್ಯಾಹ್ನ 12:00 ಗಂಟೆ ಸುಮಾರಿಗೆ ಸಾಕ್ಷೀ ಇವಳು ಶಾಲೆಯ ಮುಂದೆ ನಿಂತಿದ್ದಾಗ, ಸೀರಾಜ ಪಟೇಲ ಈತನು ಮೋಟರ ಸೈಕಲ ಮೇಲೆ ಬಂದು ಅವಳನ್ನು ಬಲವಂತದಿಂದ ಕೂಡಿಸಿಕೊಂಡು ಹೋಗುತ್ತಿದ್ದನು, ಆಗ ನಾವು ನೋಡಿ ತಡೆಯಬೆಕೆಂದು ಹೋಗುವಷ್ಟರಲ್ಲಿ ಸಾಕ್ಷೀಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಂತರ ನಾವು ಇನ್ನೊಂದು ಮೋಟರ ಸೈಕಲ ಮೇಲೆ ಹೋಗುವಷ್ಟರಲ್ಲಿ ಯಾವ ಕಡೆಗೆ ಹೋಗಿರುತ್ತಾನೆ ಎಂದು ಗೊತ್ತಾಗಿರುವುದಿಲ್ಲ ಎಂದು ತಿಳಿಸಿದರು. ನಂತರ ನನ್ನ ಅಕ್ಕನ ಮಗಳನ್ನು ಅಪಹರಣ ಮಾಡಿಕೊಂಡು ಹೋದ ಸಿರಾಜ ಈತನ ಮನಗೆ ಹೋಗಿ ಅವನ ತಂದೆಯವರಿಗೆ ವಿಚಾರಿಸಲು ನಾವು ಹುಡುಕಾಡುತ್ತೇವೆ ಎಂದು ತಿಳಿಸಿರುತ್ತಾರೆ. ಸಿರಾಜಪಟೇಲ ತಂದೆ ಬಂದಗಿಸಾಬ ಪಟೇಲ ಸಾ|| ಘತ್ತರಗಾ ಈತನು ಅಪ್ರಾಪ್ತ ವಯಸ್ಸಿನ ನನ್ನ ಅಕ್ಕನ ಮಗಳಾದ ಸಾಕ್ಷೀ ತಂದೆ ಪರಮೇಶ್ವರ ಮಹಾಗಾಂವ ವಯ|| 15 ವರ್ಷ ಇವಳನ್ನು ಯಾವುದೊ ದುರುದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಕಾರಣ ನನ್ನ ಅಕ್ಕನ ಮಗಳನ್ನು ಪತ್ತೆ ಮಾಡಬೇಕು ಮತ್ತು ಸಿರಾಜ ಪಟೇಲ ಈತನ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಕಿ ಪ್ರಕರಣ ದಾಖಲಾಗಿದೆ.

No comments: