ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-03-2020
ಚಿಟಗುಪ್ಪಾ
ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಪ್ರಭಾವತಿ
ಗಂಡ ಧರ್ಮಣ್ಣಾ ರಂಜೆರಿಕರ,
ವಯ:
25 ವರ್ಷ, ಜಾತಿ: ಕಬ್ಬಲಿಗ,
ಸಾ: ಚೀನಕೇರಾ ರವರ ಗಂಡನಾದ ಧರ್ಮಣ್ಣಾ ತಂದೆ ಮಾರುತಿ ರಂಜೆರಿಕರ ವಯ: 28
ವರ್ಷ ರವರು ಸರಾಯಿ ಕುಡಿಯುವ ಚಟ್ಟವುಳ್ಳವರಾಗಿದ್ದು, ಹೀಗಿರುವಾಗ ದಿನಾಂಕ 14-03-2020 ರಂದು ಗಂಡ ಸರಾಯಿ ಕುಡಿದ ಅಮಲಿನಲ್ಲಿ ಯಾವುದೋ ಕ್ರೀಮಿನಾಶಕ ಔಷಧಿ
ಕುಡಿದು ತಮ್ಮೂರ ಹನುಮಾನ ಮಂದಿರ ಹತ್ತಿರ ಬಿದ್ದಿರುವ ವಿಷಯ ಗುರುತಾಗಿ
ಫಿರ್ಯಾದಿ ಹಾಗೂ ಅತ್ತಿಗೆ ಲಕ್ಷ್ಮೀಬಾಯಿ ಹಾಗೂ ತಮ್ಮ ಹಣಮಂತ ರವರೆಲ್ಲರೂ ನೋಡಿ ಗಂಡನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ
ತೊರಿಸಿ ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಗೆ
ತಂದು ದಾಖಲು
ಮಾಡಿದಾಗ ವೈದ್ಯರು ಗಂಡನಿಗೆ ಪರಿಶೀಲಿಸಿ ಇವರು ದಾರಿಮಧ್ಯದಲ್ಲಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೇ ತರಹದ ಸಂಶಯವಿರುವುದಿಲ್ಲಾ ಅಂತ ಕೊಟ್ಟ
ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 15-03-2020
ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment