Police Bhavan Kalaburagi

Police Bhavan Kalaburagi

Monday, March 16, 2020

BIDAR DISTRICT DAILY CRIME UPDATE 16-03-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-03-2020

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-03-2020 ರಂದು ಫಿರ್ಯಾದಿ ಫಯಿಮುದಾ ಬೇಗಂ ಗಂಡ ಸೈಯ್ಯದ ಶಾಕೀರ, ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಬಾರೂದ ಗಲ್ಲಿ ಬೀದರ ರವರು ತನ್ನ ಮಗನಾದ ಸೈಯ್ಯದ ಪರ್ವೆಜ್ ತಂದೆ ಸೈಯ್ಯದ ಶಾಕೀರ, ವಯ: 18 ವರ್ಷ, ಸಾ: ಬಾರೂದ ಗಲ್ಲಿ ಬೀದರ ಇಬ್ಬರು ಕೂಡಿಕೊಂಡು ಖಾಸಗಿ ಕೆಲಸ ಕುರಿತು ಬಾರುದ ಗಲ್ಲಿಯ ಮನೆಯಿಂದ ದುಲ್ಹನ ದರ್ವಾಜ-ಆಲ್ ಅಮೀನ ಕಾಲೇಜ ರೋಡ ಮುಖಾಂತರ ಹೋಗಲು ಬಾರುದ ಗಲ್ಲಿಯ ಕ್ರಾಸ ಹತ್ತಿರ ಬಂದಾಗ ದುಲ್ಹನ ದರ್ವಾಜ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-38/ಕೆ-0818 ನೇದ್ದರ ಚಾಲಕನಾದ ಆರೋಪಿಯು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಮಾಡಿ ಮೊಟಾರ ಸೈಕಲನ್ನು ನಿಲ್ಲಿಸಿದಂತೆ ಮಾಡಿ ಆಲ್ ಅಮೀನ ಕಾಲೇಜ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಾಲ ಮೊಳಕಾಲ ಹತ್ತಿರ ಭಾರಿ ಗುಪ್ತಗಾಯ ಮತ್ತು ಎರಡು ಭುಜದ ಹತ್ತಿರ ಗುಪ್ತಗಾಯವಾಗಿರುತ್ತದೆ, ಆಗ ಮಗನಾದ ಸೈಯ್ಯದ ಪರ್ವೇಜ್ ಈತನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 20/2020, ಕಲಂ. 304(ಎ) ಐಪಿಸಿ :-
ದಿನಾಂಕ 14-03-2020 ರಂದು ಫಿರ್ಯಾದಿ ಪ್ರಶಾಂತಂದೆ ನಾಗಶೇಟ್ಟಿ ಮುಚಳಂಬೆ ಸಾ: ಚಟನಾಳ ರವರ ಅಣ್ಣನಾದ ರಾಜಕುಮಾರ ತಂದೆ ನಾಗಶೆಟ್ಟಿ ಮುಚಳಂಬೆ ಸಾ: ಚಟನಾಳ ಇತನು ಟ್ರ್ಯಾಕ್ಟರ ನಂ. .ಪಿ-02/.-4927 ನೇದನ್ನು ತೆಗೆದುಕೊಂಡು ಮ್ಮ ಜಮಿನಿನಲ್ಲಿ ಗೊಬ್ಬರ ಹೋಡೆಯುತ್ತೆನೆಂದು ಹೋಗಿ ಟ್ರ್ಯಾಕ್ಡರ ಟ್ರ್ಯಾಲಿಯ ಜಾಕ ಎತ್ತಿ ಗೊಬ್ಬರು ಕೇಳಗೆ ಚೆಲ್ಲುವಾಗ ಜಾಕ ಕೆಳಗೆ ಇಳೆಯದಿದ್ದಾಗ ಟ್ರ್ಯಾಕ್ಟರ ಜಾಕ ಇಳಿಸುವ ಕಾರ್ಯಚರಗೆ ಚಾಲು ಇಟ್ಟು ಟ್ರಾಲಿಯ ಕೆಳಗೆ ಹೋಗಿ ಜಾಕಿಗೆ ಎನಾಗಿದೆ ಅಂತ ಬಗ್ಗಿ ನೋಡಿದಾಗ ಟ್ರ್ಯಾಲಿ ಜಾಕ ಒಮ್ಮಲ್ಲೆ ಕೆಳಗೆ ಬಂದು ಣ್ಣನ ಎಡಪಾಳ ಕುತ್ತಿಗೆಗೆ ಭಾರಿಗಾಯಗೊಂಡು ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 32/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 15-03-2020 ರಂದು ತಳವಾಡ (ಕೆ) ಗ್ರಾಮದ ಶರಣಪ್ಪಾ ಮೇತ್ರೆ ರವರ ಹೊಲದ ಹತ್ತಿರ  ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಠ ಆಡುತ್ತಿದ್ದಾರೆ ಅಂತ ಹುಲಗೇಶ ಪಿ.ಎಸ್.. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ತಮ್ಮ ಸಿಬ್ಬಂದಿಯವರೊಡನೆ ತಳವಾಡ (ಕೆ) ಗ್ರಾಮದ ಶರಣಪ್ಪಾ ಮೇತ್ರೆ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಹೇಬೂಬ ತಂದೆ ಮೌಲಾನಾ ಕೌಠೆ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಕಣಜಿ, 2) ಆಕಾಶ ತಂದೆ ಶಾಮರಾವ ತಾಮಗ್ಯಾಳೆ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚೌಡಿಗಲ್ಲಿ ಭಾಲ್ಕಿ, 3) ಸಚೀನ ತಂದೆ ಪ್ರಕಾಶ ಬಿರಾದಾರ ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ಲಾಧಾ ಹಾಗೂ 4) ಅಮರ ತಂದೆ ಧನರಾಜ ಗೌಂಡಗಾವೆ ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಮದಕಟ್ಟಿ ಇವರೆಲ್ಲರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಪೀಟ ಎಲೆಗಳು ಹಾಗೂ 10,600/- ರೂ. ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: