Police Bhavan Kalaburagi

Police Bhavan Kalaburagi

Tuesday, March 17, 2020

BIDAR DISTRICT DAILY CRIME UPDATE 17-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-03-2020

ಬಗದಲ ಪೊಲೀಸ ಠಾಣೆ ಅಪರಾಧ ಸಂ. 22/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 16-03-2020 ರಂದು ಖೇಣಿ ರಂಜೊಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಮೆಹಬೂಬ ಪಿ.ಎಸ್. [.ವಿ] ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಖೇಣಿ ರಂಜೋಳ ಗ್ರಾಮಕ್ಕೆ ಹೋಗಿ ಲಕ್ಷ್ಮೀ ಮಂದಿರ ಹತ್ತಿರದಿಂದ ಮರೆಯಾಗಿ ನೋಡಲು ಅಲ್ಲಿ ಖೇಣಿ ರಂಜೋಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಆರೋಪಿತರಾದ 1) ಮಲ್ಲಿಕಾರ್ಜುನ ತಂದೆ ಅಡೇಪ್ಪಾ ಕಂದಗೊಳ ವಯ: 58 ವರ್ಷ, ಜಾತಿ: ಲಿಂಗಾಯತ, 2) ನಾಗೇಂದ್ರ ತಂದೆ ರೇವಣಯ್ಯಾ ನಿಗೋರೆ ವಯ: 35 ವರ್ಷ, ಜಾತಿ: ಸ್ವಾಮಿ, 3) ನಾಗೇಶ ತಂದೆ ರಘುನಾಥ ಮೇತ್ರೆ ವಯ: 30 ವರ್ಷ, ಜಾತಿ: ಎಸ್.ಟಿ ಗೊಂಡ, 4) ಅನೀಲಕುಮಾರ ತಂದೆ ಬಸವಣಪ್ಪಾ ವಯ: 40 ವರ್ಷ, ಜಾತಿ: ಲಿಂಗಾಯತ, 5) ಮಸ್ತಾನ ತಂದೆ ನಜೀರಸಾಬ ಚಿದ್ರಿ ವಯ: 40 ವರ್ಷ, ಜಾತಿ: ಮುಸ್ಲಿಂ, 6) ವಿಶ್ವನಾಥ ತಂದೆ ಬಸವರಾಜ ಹೊಳಕುಂದಿ ವಯ: 30 ವರ್ಷ, ಜಾತಿ: ಲಿಂಗಾಯತ, 7) ಶಿವಶರಣಯ್ಯಾ ತಂದೆ ವೀರಯ್ಯಾ ಸ್ವಾಮಿ ವಯ: 50 ವರ್ಷ, ಜಾತಿ: ಸ್ವಾಮಿ, 8) ನಾಗರಡ್ಡಿ ತಂದೆ ಲಿಂಗಪ್ಪಾ ಚಿಟ್ಟಾ ವಯ: 50 ವರ್ಷ, ಜಾತಿ: ಲಿಂಗಾಯತ ರಡ್ಡಿ, 9) ಈಶ್ವರಯ್ಯಾ ತಂದೆ ಶಂಕರಯ್ಯಾ ಮಠಮತಿ ವಯ: 45 ವರ್ಷ, ಜಾತಿ: ಸ್ವಾಮಿ, 10) ಸದಾನಂದ ತಂದೆ ಶರಣಪ್ಪಾ ಮಡಿವಾಳ ವಯ: 35 ವರ್ಷ, ಜಾತಿ: ಅಗಸ, 11) ವೈಜಿನಾಥ ತಂದೆ ಸಿದ್ರಾಮಪ್ಪಾ ನಾಟಿಕರ ವಯ: 45 ವರ್ಷ, ಜಾತಿ: ಎಸ್.ಟಿ ಟೊಕರಿ ಕೊಳಿ, 12) ವಿರಶೆಟ್ಟಿ ತಂದೆ ಸಿದ್ರಾಮಪ್ಪಾ ಹಳ್ಳಿಖೇಡ ವಯ: 40 ವರ್ಷ, ಜಾತಿ: ಲಿಂಗಾಯತ ಹಾಗೂ 13) ಅನೀಲಕುಮಾರ ತಂದೆ ಮಡೇಪ್ಪಾ ಮಜೀಗೆ ವಯ: 39 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಖೇಣಿ ರಂಜೊಳ  ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿರುವಾಗ ಏಕ ಕಾಲಕ್ಕೆ ದಾಳಿ ಮಾಡಿ ಅವರಿಂದ ಒಟ್ಟು ನಗದು ಹಣ 15,650/- ರೂ. ಮತ್ತು 52 ಇಸ್ಪೀಟ ಎಲೆಗಳನ್ನು ತಾಬೇಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 37/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 16-03-2020 ರಂದು ಬಸವಕಲ್ಯಾಣ ನಗರದ ಖಡಿಝಂಡಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಸುನಿಲಕುಮಾರ ಪಿ.ಎಸ್. (ಕಾ & ಸೂ) ಬಸವಕಲ್ಯಾಣ ನಗರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಖಡಿಝಂಡಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಖಡಿಝಂಡಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸಲಿಮ ತಂದೆ ಮಹೆಬೂಬಸಾಬ ಜಮಾದಾರ ವಯ: 39 ವರ್ಷ, ಜಾತಿ: ಮುಸ್ಲಿಂ, ಸಾ: ಶಾಹ ಹುಸೇನ ಗಲ್ಲಿ ಬಸವಕಲ್ಯಾಣ, 2) ಮಹ್ಮದ ತಾಹೇರ ತಂದೆ ಮಹೆಬೂಬಸಾಬ ಸಿಕಂದರ್ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ, 3) ಅಮ್ಜದ್ ತಂದೆ ಮೈನೋದ್ದಿನ್ ನಾಯಿಕವಾಡಿ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಹಾಗೂ 4) ಫಿರಾಸತ ಅಲಿ ತಂದೆ ಅಬ್ದುಲ್ ರಹೆಮಾನ ನೀಲಂಗೆವಾಲೆ ವಯ: 19 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಇವರೆಲ್ಲರೂ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 1800/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: