Police Bhavan Kalaburagi

Police Bhavan Kalaburagi

Saturday, March 21, 2020

BIDAR DISTRICT DAILY CRIME UPDATE 20-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-03-2020

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 16/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 19-03-2020 ರಂದು ಬೀದರ ನಗರದ ರಾವ ತಾಲೀಮ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ ಒಂದು ರೂಪಾಯಿಗೆ 80/- ರೂ. ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ರಾಜಪ್ಪಾ .ಎಸ್. ಪ್ರಭಾರಿ ಪಿ.ಎಸ್. ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಉಸ್ಮಾನ ಗಂಜನಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ದಶರಥ ತಂದೆ ಬಾಬುರಾವ ಕಮಠಾಣೆ ವಯ: 27 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಷ್ಟೂರ್ ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 2930/- ರೂ ಮತ್ತು ಒಂದು ಬಾಲ ಪೆನ್ನು, ಎರಡು ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 25/2020, ಕಲಂ. 379 ಐಪಿಸಿ :-
ಫಿರ್ಯಾದಿ ಬಸವರಾಜ ತಂದೆ ವೀರಭದ್ರಪ್ಪಾ ನಾರಾ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಬಂಬಳಗಿ, ತಾ: ಜಿ: ಬೀದರ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ತನ್ನ ಪ್ಯಾಷನ್ ಪ್ಲಾಸ್ ದ್ವೀಚಕ್ರ ವಾಹನ ಸಂ. ಕೆಎ-38/ಕೆ-0087 ನೇದನ್ನು ದಿನಾಂಕ 26-02-2020 ರಂದು 2100 ಗಂಟೆಯಿಂದ ದಿನಾಂಕ 27-02-2020 ರಂದು 0600 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: