ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-03-2020
ಗಾಂಧಿಗಂಜ
ಪೊಲೀಸ್
ಠಾಣೆ,
ಬೀದರ
ಅಪರಾಧ
ಸಂ.
49/2020, ಕಲಂ.
273, 328 ಐಪಿಸಿ
:-
ದಿನಾಂಕ 20-03-2020 ರಂದು ಒಬ್ಬ ವ್ಯಕ್ತಿಯು ಹಳೆ ಮೈಲೂರ ಬಸ್ ನಿಲ್ದಾಣದ ಹತ್ತಿರ ಮಾನವನ ದೇಹಕ್ಕೆ ಹಾನಿ ಉಂಟು ಮಾಡುವ ಗುಳಿಗೆಗಳು ಮಾರಾಟ ಮಾಡುತ್ತಿದ್ದಾನೆ ಅಂತ ಮಂಜನಗೌಡ ಪಾಟೀಲ ಪಿ.ಎಸ್.ಐ (ಕಾ.ಸು) ಗಾಂದಿಗಂಜ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಮೈಲೂರ ಕ್ರಾಸ್ ಹತ್ತಿರ ಹೋಗಿ ನಿಂತು ನೋಡಲಾಗಿ ಅಲ್ಲಿ ಆರೋಪಿ ಮಹೇಶ ತಂದೆ ಮಹಾದೇವ ಮೈಲಾರೆ ಜಾತಿ: ಲಿಂಗಾಯತ, ವಯ: 26 ವರ್ಷ, ಸಾ: ಲೆಕ್ಚರ್ ಕಾಲೋನಿ ಮೌನೇಶ್ವರ ಮಂದಿರ ಹತ್ತಿರ ಭಾಲ್ಕಿ ಇತನು ತನ್ನ ಕೈಯಲ್ಲಿ ಗುಳಿಗೆಗಳ ಸ್ಟ್ರಿಪ್ಪಗಳನ್ನು ಹಿಡಿದುಕೊಂಡು ಹೋಗಿ ಬರುವ ಜನರಿಗೆ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಿಎಸ್ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನಿಗೆ ನಿನ್ನ ಕೈಯಲ್ಲಿದ್ದ ಗುಳಿಗೆಗಳ ಮಾರಾಟದ ಕುರಿತು ನಿನ್ನ ಹತ್ತಿರ ಯಾವುದಾದರೂ ದಾಖಲಾತಿಗಳು ಇವೆಯೇ ಹಾಗು ಈ ಗುಳಿಗೆಗಳು ಸೇವನೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ಅಂತ ನಿನಗೆ ಗೊತ್ತಿದೆಯೇ ಅಂತ ಕೇಳಲಾಗಿ ಮಹೇಶ ಈತನು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಹಾಗು ಇವುಗಳ ಸೇವನೆಯಿಂದ ಮಾನವ ದೇಹಕ್ಕೆ ಹಾಜಿಕಾರಕ ಅಂತ ತಿಳಿದಿರುತ್ತದೆ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಅವನ ಹತ್ತಿರವಿದ್ದ ಗುಳಿಗೆಗಳ ಸ್ಟ್ರಿಪ್ ಪರಿಶೀಲಿಸಿ ನೋಡಲಾಗಿ ಗುಳಿಗೆಗಳ ಸ್ಟ್ರಿಪ್ ಮೇಲೆ ಇಂಗ್ಲೀಷದಲ್ಲಿ ನೈಟ್ರೋವೆಟ್-10 ಅಂತ ಬರೆದದ್ದು ಇರುತ್ತದೆ, ಒಟ್ಟು 6 ಸ್ಟ್ರಿಪ್ಗಳಿದ್ದು ಒಂದೊಂದು ಸ್ಟ್ರಿಪಗಳಲ್ಲಿ 15 ಗುಳಿಗೆಗಳು ಇದ್ದು ಒಟ್ಟು 90 ಗುಳಿಗೆಗಳು ಇರುತ್ತವೆ, ಒಂದು ಸ್ಟ್ರಿಪ
ಬೆಲೆಯು
84.92/- ರೂ. ಇದ್ದು ಒಟ್ಟು ಗುಳಿಗೆಗಳ ಬೆಲೆ 509.52/- ರೂ, ಇರುತ್ತವೆ ಹಾಗು ಆತನ ಹತ್ತಿರದಿಂದ ಗುಳಿಗೆಗಳು ಮಾರಿದ 520/- ರೂ. ಗಳು ಇರುತ್ತವೆ, ನಂತರ ಪಂಚರ ಸಮಕ್ಷಮ ಸದರಿ ಗುಳಿಗೆಗಳು ಹಾಗೂ ನಗದು ಹಣ 520/- ರೂ. ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 15/2020, ಕಲಂ. 457, 380, 379 ಐಪಿಸಿ :-
ಯಾರೋ ಕಳ್ಳರು ದಿನಾಂಕ 20-03-2020 ರಂದು 0130
ಗಂಟೆಯ ಸುಮಾರಿಗೆ ಫಿರ್ಯಾದಿ ಮುನೇಮ್ಮಾ ಗಂಡ ಮಂಜುರೆಡ್ಡಿ ಲಖನೋರ ವಯ: 40 ವರ್ಷ, ಜಾತಿ: ರೆಡ್ಡಿ, ಸಾ: ರಾಜೋಳಾ ರವರ ಮನೆಯಲ್ಲಿ ಪ್ರವೇಶ ಮಾಡಿ ದೇವರ ಮನೆಯ ಕೊಣೆಯಲ್ಲಿಟ್ಟಿದ ನಗದು ಹಣ 90,000/- ರೂ. ಹಾಗೂ ಬಂಗಾರದ ಒಡವೆ 1.5 ಗ್ರಾಂ ಅ.ಕಿ 57,000/- ರೂಪಾಯಿ ನೇದ್ದು ಹಾಗೂ ತಮ್ಮ ಓಣಿಯ ಮನೆಯವರಾದ ಕ್ರೀಷ್ಣಾರೆಡ್ಡಿ ವಾಡಿ ಇವರ ಹೊಂಡಾ ಡಿ.ಐ.ಓ ಮೋಟಾರ ಸೈಕಲ ನಂ. ಕೆಎ-56/ಎಚ್-3873 ಅ.ಕಿ 30,000/- ರೂ.
ಹೀಗೆ ಒಟ್ಟು 1,77,000/- ರೂಪಾಯಿ ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ
ಅಪರಾಧ ಸಂ. 49/2020, ಕಲಂ. ಮಹಿಳೆ ಕಾಣೆ :-
ದಿನಾಂಕ 06-11-2019 ರಂದು ಫಿರ್ಯಾದಿ ವೆಂಕಟರಾವ ತಂದೆ ಪ್ರಭು ರಾಠೋಡ, ವಯ: 30 ವರ್ಷ, ಜಾತಿ: ಲಂಬಾಣಿ, ಸಾ: ಗುಡಿ ತಾಂಡಾ, ತಾ: ಚಿಟಗುಪ್ಪಾ ರವರ ಹೆಂಡತಿಯಾದ ಪ್ರೀಯಂಕಾ ಇವಳು ಸೇವಾನಗರ ತಾಂಡದಲ್ಲಿರುವ ಫಿರ್ಯಾದಿಯ ಅತ್ತೆ ಮನೆಯಿಂದ ಅವರ ಮನೆಯಲ್ಲಿ ಯಾರಿಗೂ ಹಾಗೂ ಫಿರ್ಯಾದಿಗೂ ಹೇಳದೆ ಮನೆಯಿಂದ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾಳೆ, ಫಿರ್ಯಾದಿಯು ತನ್ನ ಹೆಂಡಿತಯನ್ನು ಎಲ್ಲಾ ಕಡೆ ಹಾಗೂ ತಮ್ಮ ಸಂಬಂಧಿಕರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಕಾಣೆಯಾದ ತನ್ನ ಹೆಂಡತಿಯ ಚಹರೆ ಪಟ್ಟಿ 1) ಹೆಸರು : ಪ್ರೀಯಂಕಾ, 2) ವಯ: 27 ವರ್ಷ, 3) ಎತ್ತರ : 5’ 1’’, 3) ಚಹರೆ ಪಟ್ಟಿ: ಸಾಧರಣ ಮೈಕಟ್ಟು & ಗೊಧಿ ಬಣ್ಣ, 4) ಧರಿಸಿದ ಬಟ್ಟೆಗಳು: ಚಾಕಲೇಟ ಬಣ್ಣದ ನೂರಿ &
ಶೆಲವರ
ಧರಿಸಿರುತ್ತಾಳೆ, 5) ಭಾಷೆ: ಕನ್ನಡ ಮತ್ತು ಹಿಂದಿ ಹಾಗೂ ಮರಾಠಿ
ಮಾತನಾಡುತ್ತಾಳೆಂದು ಕೊಟ್ಟ ಪಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ ದಿನಾಂಕ 20-03-2020
ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment