Police Bhavan Kalaburagi

Police Bhavan Kalaburagi

Tuesday, May 26, 2020

BIDAR DISTRICT DAILY CRIME UPDATE 26-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-05-2020

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 71/2020 ಕಲಂ 188, 269, 270 ಐಪಿಸಿ :-

ದಿನಾಂಕ 25/05/2020 ರಂದು ಪಿಎಸ್ಐ ರವರು ಹುಮನಾಬಾದ ಈದ್ಗಾ ಹತ್ತಿರ ರಂಜಾನ ಹಬ್ಬದ ಬಂದೋಬಸ್ತ ಕರ್ತವ್ಯದಲ್ಲಿ ಇದ್ದಾಗ 1000 ಗಂಟೆಗೆ  ಫೋನ್ ಮುಖಾಂತರ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಹಂದಿಕೇರಾ ಗ್ರಾಮದಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಮುಂದೆ ಸಾರ್ವಜನಿಕರಿಗೆ ಗುಂಪು ಗುಂಪಾಗಿ ಸೇರಿಸಿ ಕುಳಿತುಕೊಂಡಿರುತ್ತಾನೆ ಅಂತಾ  ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ಹಂದಿಕೇರಾ ಗ್ರಾಮಕ್ಕೆ 1100 ಗಂಟೆಗೆ ಹೋಗಿ ನೋಡಲು ಹಂದಿಕೇರಾ ಗ್ರಾಮದ ಕುಮಾರ ಚಿಂಚೋಳಿ ರೋಡಿಗೆ ಇರುವ ಒಂದು ಮನೆಯ ಮುಂದೆ ಜನರು ಸೇರಿದ್ದು ಪೊಲೀಸರನ್ನು ನೋಡಿ ಓಡಿ ಹೋಗಿರುತ್ತಾರೆ ಅಲ್ಲಿ ನಿಂತ ಮನೆಯ ಮಾಲಿಕನಿಗೆ ಹಿಡಿದು ವಿಚಾರಿಸಲು ವಿನಾಯಕ ತಂದೆ ವಿಜಯಕುಮಾರ ಮಣಕೋಜ, ವಯ 27 ವರ್ಷ, ಜಾ. ಕುರುಬ,  ಅಂತಾ ತಿಳಿಸಿದನು. ಮುಂದುವರೆದು ಅವನಿಗೆ ಮಾನವ ಜೀವಕ್ಕೆ ಅಪಾಯಕಾರಿಯಾದ ಕೋರೊನಾ ವೈರಸ್ ಹರಡದಂತೆ ಸರಕಾರ ವಿಧಿಸಿದ ನಿಷೇಧಾಜ್ಞೆ ಇದ್ದರು ಆರೋಪಿ ವಿನಾಯಕ ಇವನು ತನ್ನ ಮನೆಯ ಮುಂದೆ ಸಾರ್ವಜನಿಕರು ಗುಂಪಾಗಿ ಬಂದು ಸೇರಿದಾಗ ಅದರಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ಮಾರಕ ಸಾಂಕ್ರಾಮಿಕ (ಕೋವಿಡ್-19) ಕೋರೋನಾ ವೈರಸ್ ಸೋಂಕು ಹರಡುವ ಸಂಭವ ಇರುತ್ತದೆ ಅಂತ ಗೊತ್ತಿದ್ದರೂ ದುರುದ್ದೇಶ ಪೂರ್ವಕವಾಗಿ  ಸರಕಾರದ ಆದೇಶ ಉಲ್ಲಂಘನೆ ಮಾಡಿ ತನ್ನ ಮನೆಯ ಮುಂದೆ ಜನರನ್ನು ಸೇರಿಸಿರುವದನ್ನು ಕಂಡು ಬಂದಿದ್ದರಿಂದ ಮುಂಜಾಗೃತ ಕ್ರಮದಡಿಯಲ್ಲಿ ಅವನಿಗೆ ದಸ್ತಗಿರಿ ಮಾಡಿದ್ದು ಅವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂಖ್ಯೆ 67/2020 ಕಲಂ 143, 147, 323, 324, 504, 506 ಜೊತೆ 149 ಐ.ಪಿ.ಸಿ ;-

ದಿನಾಂಕ 25/05/2020 ರಂದು ರಾತ್ರಿ 2145 ಗಂಟೆಗೆ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ   ಸಿ.ಹೆಚ್.ಸಿ-516 ಬಕ್ಕಯ್ಯಾ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ಸ್ವೀಕರಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಅಮರ ತಂದೆ ಗುರುನಾಥ ಜಾಂತೆಕರ ಸಾ: ದುಬಲಗುಂಡಿ ರವರ ಬಾಯಿ ಮಾತಿನ ಫಿರ್ಯಾದು ಹೇಳಿಕೆ ಸಾರಾಂಶವೆನಂದರೆ ಇವರ ತಂದೆ ಈಗ 2 ತಿಂಗಳ ಹಿಂದೆ ತಿರಿಕೊಂಡಿರುತ್ತಾರೆ.  ತಾಯಿಯಾದ ಶೋಭಾವತಿ ರವರು ಕೂಲಿ ಕೆಲಸ ಮಾಡಿಕೊಂಡು ಇರುತ್ತಾರೆ. ತಂದೆ ತಾಯಿಗೆ ನಾವು 5 ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇರುತ್ತಾರೆ ಗ್ರಾಮದ ಸುಧಾಕರ ತಂದೆ ಕಾಶಿನಾಥ ಖಜೂರೆ ಅವನು ಉಪ್ಪಾರ ಕೆಲಸ ಮಾಡಿಕೊಂಡು ಇರುತ್ತಾನೆ. ಸುಧಾಕರ ಅವನು ಈ ಮೊದಲು ಫಿರ್ಯಾದಿಗೆ ವಿನಾಕಾರಣ ಬೈದು ನೀನು ನನಗೆ ಏಕೆ ಬೈಯುತ್ತಿದ್ದಿ ಅಂತ ತಕರಾರು ಮಾಡಿರುತ್ತಾನೆ. ಹೀಗಿರುವಾಗ ದಿನಾಂಕ: 25/05/2020 ರಂದು ರಾತ್ರಿ 08:30 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ತಮ್ಮನಾದ ಕರಣ ಮತ್ತು ತಾಯಿಯಾದ ಶೋಭಾವತಿ ಹಾಗೂ ಅಣ್ಣನಾದ ವಿಜಯಕುಮಾರ ಎಲ್ಲರು   ಮನೆಯ ಮುಂದೆ ಕುಳಿತಾಗ   ಸುಧಾಕರ ತಂದೆ ಕಾಶಿನಾಥ ಖಜೂರೆ ಮತ್ತು ಅವನ ಗೆಳೆಯನಾದ ದರ್ಶನ ತಂದೆ ಸುಮಂತ ಭಾಗ್ಯಕರ ಇಬ್ಬರು ನಮ್ಮ ಮನೆಯ ಮುಂದೆ ಬಂದು   ಕರಣ ಅವನಿಗೆ ಅವಾಚ್ಯವಾಗಿ ಬೈದು ನಿನ್ನ ಅಣ್ಣ ಅಮರ ಎಲ್ಲಿದ್ದಾನೆ ಕರೆ ಅವನು ನನಗೆ ವಿನಾಕಾರಣ ಬೈಯುತ್ತಿದ್ದಾನೆ ಅಂತ ಬೈಯುವಾಗ ಅಲ್ಲೆ ಇದ್ದ   ಅಣ್ಣ ವಿಜಯಕುಮಾರ ಅವನು ಅವನಿಗೆ ಸಮಜಾಯಿಸಿ ಕಳುಹಿಸಿರುತ್ತಾನೆ. ನಂತರ 09:00 ಗಂಟೆ ಸುಮಾರಿಗೆ ಮನೆಯ ಮುಂದೆ ಇದ್ದಾಗ ಸುಧಾಕರ ತಂದೆ ಕಾಶಿನಾಥ ಖಜೂರೆ, ದರ್ಶನ ತಂದೆ ಸುಮಂತ ಭಾಗ್ಯಕರ, ಯೋಹಾನ ತಂದೆ ತುಕರಾಮ ಬೆಳಕೇರಾ, ಭಗವಾನ ತಂದೆ ಶರಣಪ್ಪಾ, ಜಾನ್ ದುಬಲಗುಂಡಿ,  ದೀಪಕ ತಂದೆ ರಮೇಶ ಸಿಂದನಕೇರಾ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಕೈಮುಷ್ಟಿ ಮಾಡಿ ಬಾಯಿ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಯೋಹಾನ ಅವನು ಅಲ್ಲೆ ಬಿದ್ದ ಒಂದು ಬಡಿಗೆ ತೆಗೆದುಕೊಂಡು ನನ್ನ ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ನಂತರ ದರ್ಶನ ಅವನು ಯೋಹಾನ ಅವನ ಕೈಯಲ್ಲಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈ ಮೊಳಕೈ ಮೇಲೆ ಹಾಗೂ ಎಡಗಡೆ ಚಪ್ಪೆ ಹಾಗೂ ಬೆನ್ನ ಮೇಲೆ ಹೊಡೆದು ಕಂದು ಗಟ್ಟಿದ ಗಾಯ ಪಡಿಸಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: