ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
27-05-2020
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 20/2020 ಕಲಂ
324, 307 ಜೊತೆ 34 ಐಪಿಸಿ
:-
ದಿನಾಂಕ 26/05/2020
ರಂದು 1800 ಗಂಟೆಗೆ ನಾಸೀರಖಾನ ತಂದೆ ಮೋದಿನಖಾನ ವಯ-32 ಉ|| ವ್ಯಾಪಾರ
ಸಾ|| ಮಕದೂಮ
ಕಾಲೋನಿ ಚಿದ್ರಿ ರೋಡ ಬೀದರ ರವರು ಠಾಣೆಗೆ ಹಾಜರಾಗಿ ತನ್ನ ದೂರು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯು
ಇಮಾಮಾಬಾದ ಹಳ್ಳಿ ಶಿವಾರದಲ್ಲಿ ಕಂಕರ ಮಶೀನ ಇದ್ದು ಕಂಕರ ವ್ಯಾಪಾರ ಮಾಡಿಕೊಂಡಿದ್ದು ಕಂಕರ ಮಶೀನದಲ್ಲಿ ಮೆಹೆಬೂಬ ತಂದೆ ಬಂದಗಿಸಾಬ ಅಸಕಿ ಸಾ|| ಹುಣಸಗಿ
ತಾ|| ಸುರಪೂರ
ಇತನು ಹಿಟಾಚಿ ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತಾನೆ. ಅಲ್ಲದೆ ಜೈಪಾಲ ತಂದೆ ನರಸಪ್ಪಾ ಮೇತ್ರೆ
ವಯ-40 ಸಾ|| ಇಮಾಮಬಾದ
ಹಳ್ಲೀ ಇತನು ಟಿಪ್ಪರ ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತಾನೆ , ಸುಭಾಶ
ತಂದೆ ರಾಮಭಜನ ಮುಖಿಯಾ ಸಾ|| ಡುಮರಾ (ಬಿಹಾರ ) ಇತನು ಕ್ರಶರ ಆಪರೇಟರ ಅಂತ
ಕೆಲಸ ಮಾಢಿಕೊಂಡಿರುತ್ತಾನೆ ಮತ್ತು ಈಗ ಮೂರು ದಿವಸಗಳಿಂದ ಜೋಯಲ @ ರಾಕೇಶ
ತಂದೆ ರಾಬರ್ಟ ಮೇತ್ರೆ ಸಾ|| ಇಮಾಮಬಾದ ಹಳ್ಳಿ ಇತನು ಹೆಲ್ಪರ ಅಂತ ಕೆಲಸ
ಮಾಡಿಕೊಂಡಿದ್ದು ಇರುತ್ತದೆ. ಜೈಪಾಲ ಮತ್ತು ಸುಭಾಶ ರವರು ಇಬ್ಬರು ಆವಾಗ ಆವಾಗ ವಿನಾಕಾರಣ
ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಲುತಿದ್ದರು. ಒಬ್ಬರ ಕೆಲಸ ಇನ್ನೊಬರಿಗೆ ಸರಿ ಕಾಣದೆ ಜಗಳ
ಮಾಡಿಕೊಂಡು ವೈಮನಸ್ಸು ಹೊಂದಿದ್ದರು ಫಿರ್ಯಾದಿಯು ಅವರಿಗೆ ಜಗಳ ಮಾಡಿಕೊಳ್ಳದೆ ಸರಿಯಾಗಿ
ಇರುವಂತೆ ಬುದ್ದಿವಾದ ಹೇಳುತಾ ಬಂದಿರುತ್ತಾರೆ. ರಂಜಾನ ಹಬ್ಬ ಇರುವುದರಿಂದ ಕಂಕರ ಮಶೀನ ಬಂದ್ ಮಾಡಿದ್ದು
ಎಲ್ಲರು ಕಂಕರ ಮಶೀನದಲ್ಲಿ ಉಟ ಮಾಡಿಕೊಂಡಿದ್ದರು. ದಿನಾಂಕ
25/05/2020 ರಂದು ರಾತ್ರಿ 9 ಗಂಟೆಗೆ ಕಂಕರ ಮಶೀನದಲ್ಲಿ ಜೈಪಾಲ, ಸುಭಾಶ
ಮತ್ತು ಜೋಯಲ್ ಎಲ್ಲರು ಊಟ ಮಾಡುತಾ ಒಬ್ಬರಿಗೊಬ್ಬರು ಮಾತು ಮಾತಿಗೆ ಜಗಳ ಮಾಡಿಕೊಂಡಿದ್ದು
ಜಗಳದ ಕಾಲಕ್ಕೆ ಟಿಪ್ಪರ ಚಾಲಕ ಜೈಪಾಲ ಇತನಿಗೆ ಸುಭಾಶ ಮತ್ತು ಜೋಯಲ್ ಇಬ್ಬರು
ಅಲ್ಲೆ ಇದ್ದ ಕಬ್ಬೀಣದ ರಾಡಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಗಾಯ ಪಡಿಸಿ ಕೋಲೆ
ಮಾಡಲು ಪ್ರಯತ್ನ ಮಾಡಿರುತ್ತಾರೆ ಮತ್ತು ಗಾಯಗೊಂಡ ಜೈಪಾಲ ಇತನಿಗೆ ಸುಭಾಶ ಮತ್ತು ಜೋಯಲ್ ಇಬ್ಬರು
ಮೋಟಾರ ಸೈಕಲ ಮೇಲೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರಗೆ ಕರೆದುಕೊಂಡು
ಹೋಗಿರುತ್ತಾರೆ ಜೈಪಾಲ ಮತ್ತು ಸುಭಾಶ ರವರ ಮದ್ಯ
ವೈಮನಸ್ಸು ಇದ್ದು ಸುಭಾಶ ಇತನು ಜೋಯಲ್ @ ರಾಖೇಶ
ಇತನೊಂದಿಗೆ ಕೂಡಿಕೊಂಡು ಕಬ್ಬೀಣದ ರಾಡಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ
ಪಡಿಸಿ ಕೋಲೆ ಮಾಡಲು ಪ್ರತ್ನಿಸಿದ್ದು ಇರುತ್ತದೆ. ಘಟನೆ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿ
ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಅಂತ ವಗೈರೆ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣದ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ)
ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 7/2020 ಕಲಂ 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 26-05-2020 ರಂದು ಫಿರ್ಯಾದಿ ಶ್ರೀ ತೇಜೆರಾವ ತಂದೆ
ಬಾಬುರಾವ ಜಾಧವ ಸಾ: ನಾರಾಯಣಪೂರ ರವರು ಲಿಖಿತ ಫಿರ್ಯಾದು ನಿಡಿದ್ದು
ಸಾರಾಂಶವೇನೆಂದರೆ ಫಿರ್ಯಾದಿಗೆ ರಾಹುಲ , ಸಚೀನ ಮತ್ತು ಪ್ರೀಯಂಕಾ ಎಂದು ಮೂರು ಜನ
ಮಕ್ಕಳಿದ್ದು ಇವರ ಮಗ ಸಚೀನ ವಯ 20ವರ್ಷ ಇತನು ಔರಾದ ಪಟ್ಟಣದ ಒಂದು ಹುಡುಗಿಗೆ ಪ್ರೀತಿಸಿ
ದಿನಾಂಕ 30-01-2020 ರಂದು ಸಚೀನ ಹಾಗೂ
ಹುಡುಗಿ ಕೂಡಿ ಮಹಾರಾಷ್ಟ್ರಕ್ಕೆ ಹೋಗಿ ಮದುವೆ
ಮಾಡಿಕೊಂಡು ಇಲ್ಲಿಯ ವರೆಗೆ ಮುಂಬೈನಲ್ಲಿ ಉಳಿದು ದಿನಾಂಕ 19-05-2020 ರಂದು ಮರಳಿ
ಇಬ್ಬರೂ ಬಂದಿರುತ್ತಾರೆ ಅವರಿಗೆ
ವನಮಾರಪಳ್ಳಿಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯಲ್ಲಿ ಕ್ವಾರಂಟೈನ ನಲ್ಲಿ ಇದ್ದಿರುತ್ತಾರೆ. ಹೀಗಿರುವಾಗ ದಿನಾಂಕ 26-05-2020 ರಂದು ಬೆಳಗ್ಗೆ 7:30 ಗಂಟೆಗೆ ಸಚೀನ ಇತನು
ವನಮಾರಪಳ್ಳಿ ಶಾಲೆಯಲ್ಲಿ ತಾನು ಇದ್ದ ಕೋಣೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಎಂದು ಗೊತ್ತಾಗಿ ಸ್ಥಳಕ್ಕೆ
ಹೋಗಿ ನೋಡಲು ಸಚೀನ ಇತನು ನೇಣಿನಿಂದ ಜೋತು ಬಿದ್ದ ಮೃತದೇಹ ಇರುತ್ತದೆ. ಘಟನೆ
ಬಗ್ಗೆ ವಿಚಾರಿಸಲು ಮೃತಳ ಪತ್ನಿ
ಇವಳು ತಿಳಿಸಿದ್ದೇನೆಂದರೆ ದಿನಾಂಕ 26-05-2020 ರಂದು ಬೆಳಗ್ಗೆ 7:15 ಗಂಟೆಗೆ ನನ್ನ ಸಚೀನ ಇತನು ಅವಳಿಗೆ ಎಚ್ಚರಿಸಿ ಬಾತರೂಮಗೆ ಕಳುಹಿಸಿದರು
ಪತ್ನಿ ಹೋಗಿ 15 ನಿಮಿಷದಲ್ಲಿ ಮರಳಿ ಬಂದಾಗ
ಕೊಣೆ ಬಾಗಿಲು ತೆರೆಯಲು ಬಂದಿಲ್ಲಾ ಗಂಡನಿಗೆ
ಕೂಗಿದರು ಯಾವುದೇ ಶಬ್ದ ಬಂದಿಲ್ಲಾ ಆಗ ಅಲ್ಲೆ ಇದ್ದ ದೀಪಕ ತಂದೆ ತಾನಾಜಿ ಬೀಚೆ ರವರಿಗೆ ಕರೆದು ಗಂಡ ಒಳಗಡೆ ಇದ್ದಾರೆ ಬಾಗಿಲು ತೆರೆಯುತ್ತಿಲ್ಲಾ ಎಂದು
ಹೇಳಿದಾಗ ಅವರು ಕಾಲಿನಿಂದ ಒದ್ದು ಬಾಗಿಲು
ತೆರೆದಾಗ ಸಚೀನ ಒಳಗಡೆ ಇದ್ದ ಫ್ಯಾನಿಗೆ
ವೈರನಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾಳೆ. ಆದ್ದರಿಂದ ಸಚೀನ
ಇತನು ಯಾವ ಕಾರಣದಿಂದ ಮೃತ ಪಟಿರುತ್ತಾನೆ ಎಂದು ಗೊತ್ತಾಗಿಲ್ಲಾ
ಇವನ ಸಾವಿನ ಬಗ್ಗೆ ಸಂಶಯ ಕಂಡು ಬರುತ್ತಿದ್ದು
ಆದ್ದರಿಂದ ಮಾನ್ಯರು ಸೂಕ್ತ ಕಾನೂನು
ಕ್ರಮ ಜರೂಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 58/2020 ಕಲಂ 379 ಐಪಿಸಿ :-
ದಿನಾಂಕ 26/05/2020 ರಂದು 2015 ಗಂಟೆಗೆ ಫಿರ್ಯಾದಿ
ಶ್ರೀ. ಮಧುಸೂದನ ತಂದೆ ಹಣಮಂತರಾವ ಮೋರೆ ವಯ:30 ಸಾ/ಕೆ.ಐ.ಎ.ಡಿ.ಬಿ.
ಕಾಲೋನಿ ನೌಬಾದ ಬೀದರ ರವರು ಠಾಣೆಗೆ ಹಾಜರಾಗಿ
ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೆ, ಫಿರ್ಯಾದಿಯವರು 2019 ನೇ ಸಾಲಿನಲ್ಲಿ ಒಂದು ಟಿ.ವಿ.ಎಸ್. ಅಪಾಚೆ ಆರ.ಟಿ.ಆರ.200 ಸಿಸಿ ಮೋಟರ ಸೈಕಲ ನಂ ಕೆಎ38ಡಬ್ಲ್ಯೂ4920 ನೇದ್ದನ್ನು ಖರಿಸಿದ್ದು
ಇರುತ್ತದೆ. ಹೀಗಿರುವಾಗ ದಿನಾಂಕ 13/05/2020 ರಂದು
ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ
ಮೊಟರ ಸೈಕಲನ್ನು 1:00 . ಗಂಟೆಯ ಸುಮಾರಿಗೆ ನೌಬಾದನಲ್ಲಿ ಇರುವ ನಮ್ಮ ಮನೆಯ ಮುಂದೆ ನಿಲ್ಲಿಸಿ, ಮನೆಯಲ್ಲಿ
ಮಲಗಿಕೊಂಡಿದ್ದು, 05:00 ಎ.ಎಮ್. ಗಂಟೆಯ ಸುಮಾರಿಗೆ ಎದ್ದು
ನೋಡಿದಾಗ ಮೊಟರ ಸೈಕಲ ಇದ್ದಿರುವದಿಲ್ಲ. ಅತ್ತ ಇತ್ತ ಹುಡುಕಾಡಿದ್ದು ಅಲ್ಲಿ ಎಲ್ಲಿಯೂ ನನ್ನ ಮೊಟರ ಸೈಕಲ
ಇದ್ದಿರುವದಿಲ್ಲ. ದಿನಾಂಕ 13/05/2020 ರಂದು ರಾತ್ರಿ 0100 ರಿಂದ 5:00 ಎ.ಎಮ್. ಗಂಟೆಯ
ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment