Police Bhavan Kalaburagi

Police Bhavan Kalaburagi

Monday, June 8, 2020

BIDAR DISTRICT DAILY CRIME UPDATE 08-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-06-2020

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 66/2020, ಕಲಂ. 379 ಐಪಿಸಿ :-
ಫಿರ್ಯಾದಿ ಸೈಯದ ತಾಹಾಮಿ ಯಾಫರ ತಂದೆ ಸೈಯದ ಲಿಯಾಖತ ಅಲಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಚಿಸ್ತಿಯಾಪೂರಾ ನೂರಖಾ ತಾಲೀಮ ಬೀದರ ರವರು ತನ್ನ ಪ್ಯಾಷನ್ ಪ್ರೋ ಮೋಟಾರ ಸೈಕಲ ನಂ. ಕೆಎ-38/ಎಲ್-7579 ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 22-04-2020 ರಂದು 2330 ಗಂಟೆಯಿಂದ ದಿನಾಂಕ 23-04-2020 ರಂದು 0630 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 07-06-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 92/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 07-06-2020 ರಂದು ಬೀದರ ಗಾಂಧಿಗಂಜದಲ್ಲಿರುವ ಎಪಿಎಮ್ಸಿ ಯಾರ್ಡನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಮಂಜನಗೌಡ ಪಾಟೀಲ ಗಾಂಧಿಗಂಜ ಪೊಲೀಸ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗಾಂಧಿಗಂಲ್ಲಿರುವ ಎಪಿಎಮ್ಸಿ ಯಾರ್ಡಗೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಆರೋಪಿತರಾದ 1) ಶಶಿಕಾಂತ ತಂದೆ ಉಮಾಕಾಂತ ಪಾಟೀಲ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಶಿವನಗರ ಕಾಲೋನಿ ಬೀದರ, 2) ಅವಿನಾಶ ತಂದೆ ಶ್ರೀಕಾಂತ ಸ್ವಾಮಿ ವಯ: 31 ವರ್ಷ, ಜಾತಿ: ಸ್ವಾಮಿ, ಸಾ: ಮಹೇಶ ನಗರ ಗುಂಪಾ ಬೀದರ, 3) ತುಕಾರಾಮ ತಂದೆ ಸಿದ್ರಾಮಪ್ಪಾ ಔದತಪುರೆ ವಯ: 31 ವರ್ಷ, ಜಾತಿ: ಗೊಂಡ, ಸಾಃ ಸಿಎಮ್ಸಿ ಕಾಲೋನಿ ಬೀದರ, 4) ಧನರಾಜ ತಂದೆ ಮಡೆಪ್ಪಾ ಗಾರಂಪಳ್ಳಿ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಗುಮ್ಮೆ ಕಾಲೋನಿ ಬೀದರ, 5) ಮಧುಸೂದನರೆಡ್ಡಿ ತಂದೆ ಸುದರ್ಶನರೆಡ್ಡಿ ವಯ: 32 ವರ್ಷ, ಜಾತಿ: ರೆಡ್ಡಿ, ಸಾ: ದೇವಿ ಕಾಲೋನಿ ಬೀದರ, 6) ಅವಿನಾಶ ತಂದೆ ಜಗನ್ನಾಥ ಜನಶೆಟ್ಟಿ ವಯ: 31 ವರ್ಷ, ಜಾತಿ: ಲಿಂಗಾಯತ, ಸಾಃ ಸಂಗೋಳಗಿ ಗ್ರಾಮ, 7) ಸಂತೋಷಕುಮಾರ ತಂದೆ ಮಾದಪ್ಪಾ ಚಾಮಾ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಅಗ್ರಿಕಲ್ಚರ್ ಕಾಲೋನಿ ಬೀದರ, 8) ರುದ್ರೇಶ ತಂದೆ ಕುಮಾರಸ್ವಾಮಿ ಹಿರೇಮಠ ವಯ: 31 ವರ್ಷ, ಜಾತಿ: ಸ್ವಾಮಿ, ಸಾ: ಮಹೇಶ ನಗರ ಗುಂಪಾ ಬೀದರ, 9) ಸಚಿನ ತಂದೆ ಶಿವಾಜಿ ಶಿಂದೆ ವಯ: 32 ವರ್ಷ, ಜಾತಿ: ಮರಾಠಾ, ಸಾ: ಶಿವನಗರ ಭಾಲ್ಕಿ ಹಾಗೂ 10) ಶಿವಕಾಂತ ತಂದೆ ಅಮೃತ ಅಮದಲ್ ಪಡೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ವಿದ್ಯಾನಗರ ಬೀದರ ಇವರೆಲ್ಲರೂ ಜೂಜಾಟ ಆಡುತ್ತಿರುವಾಗ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 13,000/- ರೂ. ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 51/2020, ಕಲಂ. 279, 337, 338 ಐಪಿಸಿ :-
ದಿನಾಂಕ 07-06-2020 ರಂದು ಫಿರ್ಯಾದಿ ರಂಜನಾ ಗಂಡ ರಮೇಶ ಚೌಹಾಣ ಸಾ: ಚಿಕ್ಲಿ(ಯು) ಸುಸೈಟಿ ತಾಂಡಾ, ಸದ್ಯ: ಔರಾದ(ಬಿ) ರವರ ತಾಂಡಾದಲ್ಲಿ ಸಂಭಂಧಿಕರು ಮೃತಪಟ್ಟಿದ್ದರಿಂದ ಫಿರ್ಯಾದಿಯು ತನ್ನ ಮಗಳು ಅಶ್ವೀನಿ ಮತ್ತು ಮಗ ಅಸೀಸ್ ಮೂವರು ಮೊಟಾರ ಸೈಕಲ್ ನಂ. ಕೆಎ-38/ಡಬ್ಲೂ-1903 ನೇದರ ಮೇಲೆ ಔರಾದನಿಂದ ಚಿಕ್ಲಿ(ಯು) ಸುಸೈಟಿ ತಾಂಡಾಕ್ಕೆ ಹೋಗುವಾಗ ಎಕಂಬಾ ದಾಟಿದ ನಂತರ ಎಂಕಂಬಾ ಹುಲ್ಯಾಳ ಮದ್ಯ ದರ್ಗಾದ ಹತ್ತಿರ ರೋಡಿನ ಮೇಲೆ ಇದ್ದಾಗ ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಮಗ ಅಸೀಸ್ ಇತನು ಮೊಟಾರ ಸೈಕಲ್ನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಅದೇ ವೇಳೆಗೆ ಎದುರಿನಿಂದ ಬರುತ್ತಿದ್ದ ಮೊಟಾರ ಸೈಕಲ್ ನಂ. ಎಂಎಚ್-26/ಬಿಎಲ್-9122 ನೇದರ ಚಾಲಕನಾದ ನಾಮದೇವ ತಂದೆ ವಿಠಲರಾವ ಹುಗ್ಗೆ ಸಾ: ಕೂಡ್ಲಿ ಇತನು ಸಹ ತನ್ನ ಮೊಟಾರ ಸೈಕಲನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎರಡು ವಾಹನಗಳು ಮುಖಾ-ಮುಖಿಯಾಗಿ ಡಿಕ್ಕಿಯಾಗಿದ್ದರಿಂದ ಫಿರ್ಯಾದಿ ಎಡಗಾಲಿಗೆ ಮೊಣಕಾಲ ಹತ್ತಿರ ಗುಪ್ತಗಾಯ, ಮಗಳು ಅಶ್ವೀನಿ ಇವಳಿಗೆ ಎಡಗಾಲ ಮೊಣಕಾಲ ಮೇಲ್ಭಾಗದಲ್ಲಿ ಮೊಟಾರ ಸೈಕಲನ ಸೈಲೇನ್ಸರ ನಿಂದ ಸುಟ್ಟ ಗಾಯ, ಮಗ ಅಸೀಸ್ ಇತನ ಮುಖಕ್ಕೆ ಪೆಟ್ಟಾಗಿ ಬಾಯಿಯಲ್ಲಿನ ಬಲಗಡೆ ನಾಲ್ಕು ಹಲ್ಲುಗಳು ಮುರಿದು ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿರುತ್ತದೆ, ಅಪಘಾತ ಮಾಡಿದ ಮೊಟಾರ ಸೈಕಲ್ ಚಾಲಕನಿಗೆ ನೋಡಲು ಆತನಿಗೆ ಬಲಗಡೆ ಮುಖದ ಮೇಲೆಗೆ ಗುಪ್ತಗಾಯ, ಬಲಗಣ್ಣಿನ ಹುಬ್ಬಿನ ಮೇಲೆ, ಬಲಗಡೆ ತಲೆಗೆ ರಕ್ತಗಾಯವಾಗಿರುತ್ತದೆ, ನಂತರ ಎಲ್ಲರೂ 108 ಅಂಬುಲೇನ್ಸ ಕರೆಯಿಸಿ ಔರಾದ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: