Police Bhavan Kalaburagi

Police Bhavan Kalaburagi

Tuesday, June 9, 2020

BIDAR DISTRICT DAILY CRIME UPDATE 09-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-06-2020

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-06-2020 ರಂದು ಫಿರ್ಯಾದಿ ಮಣೇಮ್ಮ ಗಂಡ ಪಾಂಡುರಂಗ ಬೋಯಿನ್ ವಯ: 45 ವರ್ಷ, ಜಾತಿ: ಎಸ್.ಟಿ ಟೋಕರಿ ಕೋಳಿ, ಸಾ: ಚಿಂತಾಲಗೆರಾ ರವರ ತನ್ನ ಗಂಡನಾದ ಪಾಂಡುರಂಗ ತಂದೆ ಮಾರುತಿ ಬೋಯಿನ್ ವಯ: 48 ವರ್ಷ, ಜಾತಿ: ಎಸ್.ಟಿ ಟೋಕರಿ ಕೋಳಿ, ಸಾ: ಚಿಂತಾಲಗೆರಾ ರವರ ಜೊತೆಯಲ್ಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚಿಂತಾಲಗೇರಾ ಗ್ರಾಮದ ಬಿಚ್ಚಪ್ಪಾ ರವರ ಹೋದ ಹತ್ತಿರ ಕೆಲಸ ನಿರ್ವಾಹಿಸುತ್ತಿರುವ ಸ್ಥಳದಲ್ಲಿ ಗಂಡನಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಪಾಂಡುರಂಗ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ಘಟನೆಯು ಆಕಸ್ಮಿಕವಾಗಿದ್ದು ಮತ್ತು ಅವರ ಸಾವಿನಲ್ಲಿ ಯಾವುದೇ ರೀತಿ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಾದಪ್ಪಾ ತಂದೆ ರಾಚಪ್ಪಾ ಬೋರಗೆ ವಯ: 56 ವರ್ಷ, ಜಾತಿ: ಲಿಂಗಾಯತ, ಸಾ: ಅಲಿಯಂಬರ, ತಾ: & ಜಿಲ್ಲೆ: ಬೀದರ ರವರ ಮಗಳಾದ ಜಗದೇವಿ ಗಂಡ ಲೋಕೆಶ ಚಿಟಗುಪ್ಪೆ ವಯ: 28 ವರ್ಷ, ಸಾ: ಕುಂಬಾರ ಪಾಳಿ ಬಸವಕಲ್ಯಾಣ ಇವಳು ಮದುವೆಯಾಗಿ 3 ವರ್ಷವಾದರು ಮಕ್ಕಳು ಆಗಿರುವುದಿಲ್ಲಾ ಅಂತ ಚಿಂತಿಸಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07-06-2020 ರಂದು 2230 ಗಂಟೆಯಿಂದ 2310 ಗಂಟೆಯ ಮದ್ಯಾವಧಿಯಲ್ಲಿ ತಾನು ಮಲಗುವ ಕೋಣೆಯಲ್ಲಿ ಸಿರೇಯಿಂದ ತಗಡದ ಕೆಳಗೆ ಇರುವ ಲೋಹದ ಪೈಪಿಗೆ ನೇಣುಹಾಕಿಕೊಂಡಿದ್ದರಿಂದ ಆಕೆಯನ್ನು ನೇಣಿನಿಂದ ತೆಗೆದು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿರುತ್ತಾಳೆ, ತನ್ನ ಮಗಳ ಸಾವಿನ ಬಗ್ಗೆ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 42/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 07-06-2020 ಫಿರ್ಯಾದಿ ರಾಮ ತಂದೆ ಪ್ರಭತರಾವ ಬೋಕ್ರೆ ಯ: 48 ವರ್ಷ, ಜಾತಿ: ಕಬ್ಬಲಿಗ, ಸಾ: ವನಮಾರಪಳ್ಳಿ, ಸದ್ಯ: ಸಂತಪೂರ ರವರ ಮಗನಾದ ದಯಾನಂದ ತಂದೆ ರಾಮ ಭೂಕ್ರೆ ಸಾ: ಸಂತಪೂ ಇತನು ಮೋಟಾರ ಸೈಕಲ್ ನಂ. ಕೆಎ-38/-4155 ನೇದರ ಎಸ್.ಬಿ. ಬ್ಯಾಂಕ ಕಡೆಗೆ ಹೋಗುವಾಗ ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲನ್ನು ಕುಡಿದ ಅಮಲಿನಲ್ಲಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಹಿಡಿತ ತಪ್ಪಿ ಸಂತಪುರ ಕುಶೂನೂರ ರೋಡಿನ ಹತ್ತಿರ ಇರುವ ರೈತ ಸಂಪರ್ಕ ಕೆಂದ್ರ ಎದುರುಗಡೆ ರೋಡಿನ ಬದಿಗೆ ಬಿದ್ದಿದ್ದರಿಂದ ತಲೆಗೆ ಭಾರಿ ಗುಪ್ತಗಾಯವಾಗಿ ಎರಡು ಕೀವಿಗಳಿಂದ ರಕ್ತ ಬಂದಿದ್ದು, ಬೆನ್ನಿಗೆ, ಎರಡು ಮೋಳಕಾಲಿಗೆ, ಎಡಗೈ ಭೂಜಕ್ಕೆ, ಬಲಗೈಗೆ ತರಚಿದ ಗಾಯವಾಗಿದ್ದರಿಂದ ಆತನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಸಂತಪೂರ ಆಸ್ಪತ್ರೆಯಲ್ಲಿ ದಾಖಲಿಸಿದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಆತನಿಗೆ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದಾಗ ಮಗ ದಯಾನಂದ ಇತನು ಚಿಕಿತ್ಸೆ ಕಾಲಕ್ಕೆ ದಿನಾಂಕ 08-06-2020 ರಂದು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 81/2020, ಕಲಂ. 279, 337, 338 ಐಪಿಸಿ :-
ದಿನಾಂಕ 08-06-2020 ರಂದು ಫಿರ್ಯಾದಿ ಶೇಕ ಇಮ್ರಾನ ತಂದೆ ಶೇಕ ಇಬ್ರಾಹಿಂ ಕಮಲಾಪೂರವಾಲೆ, ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ದಸ್ತಗೀರ ಮೋಹಲ್ಲಾ ಚಿಟಗುಪ್ಪಾ ರವರ ತಂದೆಯಾದ ಶೇಕ ಇಬ್ರಾಹಿಂ ತಂದೆ ಶೇಕ ಮಹಿಮೊದಮಿಯ್ಯಾ ವಯ: 57 ವರ್ಷ ರವರು ತಾಯಿ ಶಾಹಿನಾಬೇಗಂ ರವರನ್ನು ಕರೆದುಕೊಂಡು ಮೋಟರ್ ಸೈಕಲ್ ನಂ. ಕೆಎ-39/ಎಲ್-6761 ನೇದರ ಮೇಲೆ ಸಿಂಧನಕೇರಾ ಗ್ರಾಮಕ್ಕೆ ಹೋಗುವಾಗ ಚಿಟಗುಪ್ಪಾ-ಹುಡಗಿ ರೋಡ ಚಿಟಗುಪ್ಪಾದ ಮಹಮದ ಮಸ್ತಾನ ರವರ ಹೋಲದ ಹತ್ತಿರ ತಂದೆಯು ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ರೋಡಿನ ಮೇಲೆ ಸ್ಕಿಡಾಗಿ ಬಿದ್ದು ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ತಾಯಿ ಶಾಹಿನಬೇಗಂ ರವರ ಗಟಾಯಿಗೆ, ಮೇಲಗಡೆ ತುಟಿಗೆ, ಎಡಹಣೆಗೆ ರಕ್ತಗಾಯ ಮತ್ತು ಹಣೆಗೆ ಭಾರಿ ಗುಪ್ತಗಾಯವಾಗಿ ಎಡಗಡೆ ಕಿವಿಯಿಂದ ರಕ್ತಸ್ರಾವವಾಗಿ ಬೇಹೋಷಾಗಿರುತ್ತಾರೆ ಮತ್ತು  ತಂದೆಗೆ ಎಡಗಾಲ ಪಾದಕ್ಕೆ, ಎಡಗಡೆ ತಲೆಗೆ ತರಚಿದ ರಕ್ತಗಾಯ ಮತ್ತು ಎಡಭುಜಕ್ಕೆ ತರಚಿದ ಗಾಯವಾಗಿದ್ದರಿಂದ ಇಬ್ಬರಿಗೂ ಚಿಕಿತ್ಸೆ ಕುರಿತು 108 ಅಂಬುಲೇನ್ಸನಲ್ಲಿ ಚಿಟಗುಪ್ಪಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 92/2020, ಕಲಂ. 279, 337, 338  ಐಪಿಸಿ :-
ದಿನಾಂಕ 08-06-2020 ರಂದು ಫಿರ್ಯಾದಿ ಮಲ್ಲಯ್ಯಾ ತಂದೆ ನಾಗಯ್ಯಾ ಕಮಠಾಣ ವಯ: 50 ವರ್ಷ, ಜಾತಿ: ಜಂಗಮ, ಸಾ: ಚಾಂಗಲೇರಾ, ಸದ್ಯ: ಕೆ.ಎಸ.ಆರ.ಟಿ.ಸಿ ಕಾಲೋನಿ ನೌಬಾದ ಬೀದರ ರವರು ನೌಬಾದದಿಂದ ಭಾಲ್ಕಿಗೆ ಮೊಟಾರ ಸೈಕಲ ನಂ. ಕೆಎ-38/ಕೆ-6386 ನೇದರ ಮೇಲೆ ಖಾನಾಪೂರ ಮಾರ್ಗವಾಗಿ ಖಾನಾಪೂರ ಧನ್ನೂರಾ ಕ್ರಾಸ ದಾಟಿ ಭಾಲ್ಕಿ ಕಡೆಗೆ ತನ್ನ ಸೈಡಿಗೆ ತಾನು ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಹೋಗುವಾಗ ಭಾಲ್ಕಿ ಕಡೆಯಿಂದ ಕಾರ ನಂ. ಕೆಎ-04/ಎಸಿ-1636 ನೇದರ ಚಾಲಕನಾದ ಆರೋಪಿ ಶಿವಶಂಕರಾ ಎನ್. ಸಾ: ದಾಸರಹಳ್ಳಿ ಬೆಂಗಳೂರು ಇತನು ತನ್ನ ಕಾರನ್ನು ರೋಡಿನ ಮೇಲೆ ಅಡ್ಡ ತಿಡ್ಡವಾಗಿ ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿಮಾಡಿದ್ದರಿಂದ ಫಿರ್ಯಾದಿಯ ಬಲಗಾಲು ಪಾದದ ಮೇಲೆ, ಮೊಳಕಾಲು ಕೆಳಗೆ ಭಾರಿ ರಕ್ತಗಾಯ, ಬಲಗೈ ಮೊಳಕೈ ಕೆಳಭಾಗದಿಂದ ಮುಂಗೈವರಗೆ, ಬೆರಳುಗಳಿಗೆ ಸಾದಾ, ಭಾರಿ ರಕ್ತಗಾಯ ಮತ್ತು ಎಡಗೈ ಮುಂಗೈ, ಮೊಳಕೈ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಆರೋಪಿಯು ತನ್ನ ಕಾರನ್ನು ರೋಡಿನ ಬದಿಯಲ್ಲಿ ನಿಲ್ಲಿಸಿ ಕೆಳಗೆ ಬಿದ್ದ ಫಿರ್ಯಾದಿಗೆ ಎಬ್ಬಿಸಿ ನೀರು ಕುಡಿಸಿ 108 ಅಂಬ್ಯುಲೆನ್ಸಗೆ ಕರೆ ಮಾಡಿ 108 ಅಂಬ್ಯುಲೆನ್ಸ ಬಂದ ಮೇಲೆ ಫಿರ್ಯಾದಿಗೆ ಅದರಲ್ಲಿ ಹಾಕಿ ಬೀದರ ಜಿಲ್ಲಾ ಆಸ್ಪತ್ರೆಗೆ ಕಳಿಸಿರುತ್ತಾನೆ, ನಂತರ ಫಿರ್ಯಾದಿಯ ಮಗ ಶಿವಲಿಂಗ ಇತನು ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 45/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 08-06-2020 ರಂದು ಗಡಿರಾಯಪಳ್ಳಿ ಗ್ರಾಮದ ಸರಕಾರಿ ಶಾಲೆಯ ಪಕ್ಕದಲ್ಲಿ ಕೆಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟು ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಅಂತಾ ವಸೀಮ್ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ಗಡಿರಾಯಪಳ್ಳಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನೋಡಲು ಶಾಲೆಯ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಗಣೇಶ ತಂದೆ ತುಕಾರಾಮ ಪವಾರ ವಯ: 32 ವರ್ಷ, ಜಾತಿ: ಮರಾಠಾ, 2) ಧನಾಜಿ ತಂದೆ ತುಳಸಿರಾಮ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, 3) ಪ್ರತಾಪ ತಂದೆ ವೈಜಿನಾಥ ಬಿರಾದಾರ ವಯ: 52 ವರ್ಷ, ಜಾತಿ: ಮರಾಠಾ, 4) ಖಂಡೋಬಾ ತಂದೆ ಮಾಣಿಕರಾವ ಬಿರಾದಾರ ವಯ: 30 ವರ್ಷ, ಜಾತಿ: ಮರಾಠಾ, 5) ಶಿವಾಜಿ ತಂದೆ ನಾಮದೇವರಾವ ಜಾಧವ ವಯ: 32 ವರ್ಷ, ಜಾತಿ: ಮರಾಠಾ, 6) ಪ್ರಕಾಶ ತಂದೆ ವೆಂಕಟ ಬಿರಾದಾರ ವಯ: 32 ವರ್ಷ, ಜಾತಿ: ಮರಾಠಾ ಹಾಗೂ 7) ಮಕ್ಬೂಲ ತಂದೆ ನಬಿಸಾಬ ಶೇಖ ವಯ: 42 ವರ್ಷ, ಜಾತಿ: ಮುಸ್ಲಿಂ, 7 ಜನ ಎಲ್ಲರೂ ಸಾ: ಗಡಿರಾಯಪಳ್ಳಿ ಇವರೆಲ್ಲರೂ ಹಣ ಕಟ್ಟಿ ಪಣ ತೊಟ್ಟು ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ನಂ. 6 & 7 ಇವರಿಬ್ಬರು ಓಡಿ ಹೋಗಿರುತ್ತಾರೆ, ನಂತರ ಉಳಿದ 5 ಜನ  ಆರೋಪಿತರಿಂದ 52 ಇಸ್ಪಿಟ್ ಎಲೆಗಳು ಹಾಗು ಒಟ್ಟು ನಗದು ಹಣ 8550/- ರೂ. ಹಾಗೂ ಹಿರೊ ಪ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ-56/ಜೆ-3210 ಅ.ಕಿ 30,000/- ರೂ. ಮತ್ತು ಹಿರೊ ಪ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ-56/ಎಚ್-9084 ಅ.ಕಿ 30,000/- ರೂ. ಎಲ್ಲವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 28/2020, ಕಲಂ. 409, 420 ಐಪಿಸಿ :-
ಫಿರ್ಯಾದಿ ಅಶೋಕರೆಡ್ಡಿ ತಂದೆ ಮಾಣಿಕರೆಡ್ಡಿ ವಯ: 57 ವರ್ಷ, ಜಾತಿ: ರೆಡ್ಡಿ, ಸಾ: ಚೌದ್ರಿ ಬೆಳಕುಣಿ, ಸದ್ಯ: ಪಿ.ಕೆ.ಪಿ.ಎಸ್ ಸಂಘ ಹೊಕ್ರಣಾ ರವರು ದಿನಾಂಕ 28-02-2019 ರಂದು ಹೊಕ್ರಾಣಾ ಪಿ.ಕೆ.ಪಿ.ಎಸ್.ದಲ್ಲಿ ಕಾರ್ಯದರ್ಶಿ ಅಂತ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಚಾರ್ಜ ತೆಗೆದುಕೊಂಡಿದ್ದು, ನಂತರ ಹೊಕ್ರಾಣಾ ಪಿ.ಕೆ.ಪಿ.ಎಸ್. ಸಂಘದಲ್ಲಿ ಅನುಪಾಲನಾ ವರದಿ ದಾಖಲಾತಿಗಳು ಪರಿಶೀಲಿಸಿದಾಗ ಈ ಹಿಂದೆ ಹೊಕ್ರಾಣಾ ಗ್ರಾಮದ ಪಿ.ಕೆ.ಪಿ.ಎಸ್ ದಲ್ಲಿ ಕಾರ್ಯನಿರ್ವಹಿಸಿದ ಆರೋಪಿ ವಿಲಾಸರಾವ ತಂದೆ ಅಣ್ಣಾರಾವ ಜಾಧವ ಸಾ: ಹೊಳ ಸಮುದ್ರ ಇವರು ದಿನಾಂಕ 14-08-2015 ರಿಂದ ದಿನಾಂಕ 28-02-2018 ರ ಅವಧಿಯಲ್ಲಿ ದಿನಾಂಕ 24-02-2018 ರಂದು 56,26,833/- ರೂಪಾಯಿ ಮತ್ತು ದಿನಾಂಕ 28-02-2018 ರಂದು 14,53,954/- ರೂಪಾಯಿ ಹೀಗೆ ಒಟ್ಟು 70,80,787/- ರೂಪಾಯಿ ಸಂಘದ ಹಣ ಅಮಾನತು ಮೊತ್ತ ದುರುಪಯೋಗ ಮಾಡಿಕೊಂಡು ತನ್ನ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಮತ್ತು ಮೊಸ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 08-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: