ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
19-06-2020
ಹುಮನಾಬಾದ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 45/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ
ಕಾಯ್ದೆ :-
ಕಳೆದ ಒಂದು ತಿಂಗಳುಗಳಿಂದ ಒಬ್ಬ ಅಪರಿಚಿತ ಗಂಡು ವ್ಯಕ್ತಿ ಹುಚ್ಚನಂತೆ
ಇದ್ದು ಅವನು ದಿನಾಲು ಹುಡಗಿ ಗ್ರಾಮದಿಂದ ಇಂದಿರಾ ನಗರಕ್ಕೆ ಕಾಲನಡಿಗೆಯಲ್ಲಿ ನಡೆದುಕೊಂಡು ಹೋಗಿ
ಬರುವುದು ಆಗಾಗ ಚಿಟಗುಪ್ಪಾ ಕ್ರಾಸ್ ಹತ್ತಿರ ರೋಡಿನ ಬದಿಯ ಗೀಡದ ಕೆಳೆಗೆ ಮಲಗುವುದು ಮತ್ತು
ರೋಡಿನ ಮೇಲೆ ಕುಳಿತುಕೊಳ್ಳುವುದು ಮಾಡುತ್ತಿದ್ದನು, ಹೀಗಿರುವಾಗ ದಿನಾಂಕ 17-06-2020 ರಂದು ರಾತ್ರಿ ಫಿರ್ಯಾದಿ
ಮೋಹನಕುಮಾರ ತಂದೆ ಶಂಕರ ವಾಡಿ, ಸಾ: ಇಂದಿರಾ ನಗರ ಹುಡಗಿ, ತಾ: ಹುಮನಾಬಾದ ರವರು ಮನೆಯಲ್ಲಿ ಊಟ
ಮಾಡಿಕೊಂಡು ವಾಕಿಂಗ್ ಮಾಡುತ್ತಾ ಇಂದಿರಾ ನಗರದಿಂದ ಹೈದ್ರಾಬಾದ - ಸೋಲಾಪುರ ಹೈವೇ ರೋಡ ಕಡೆಗೆ ಬರುತ್ತಿರುವಾಗ
ಚಿಟಗುಪ್ಪಾ ಕ್ರಾಸ್ ಹತ್ತಿರ ಚನ್ನಪ್ಪಾ ಗಡದೋರ್ ಸಾ: ಹುಡಗಿ ರವರ ಹೊಲದ ಹತ್ತಿರ ಬಂದಾಗ ರೋಡಿನ
ಮೇಲೆ ಒಬ್ಬ ಅಪರಿಚಿತ ಗಂಡು ವ್ಯಕ್ತಿ ಮಲಗಿದಂತೆ ಕಂಡು ಬಂದಾಗ ಫಿರ್ಯಾದಿಯು ಅವನ ಹತ್ತಿರ ಹೋಗಿ
ನೋಡಲಾಗಿ ತಿಳಿದು ಬಂದಿದ್ದೆನೆಂದರೆ ಒಬ್ಬ ಅಪರಿಚಿತ ಗಂಡು ವ್ಯಕ್ತಿ ಇವನು ಕಾಲ ನಡಿಗೆಯಲ್ಲಿ
ನಡೆದುಕೊಂಡು ಹೈವೇ ರೋಡ ಕಡೆಯಿಂದ ಇಂದಿರಾ ನಗರ ಹುಡಗಿ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಅಂದರೆ
ಹೈವೇ ರೋಡಿನ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ರೋಡಿನ ಮೇಲೆ
ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಚನ್ನಪ್ಪಾ ಗಡದೋರ್ ಸಾ: ಹುಡಗಿ ರವರ ಹೊಲದ
ಹತ್ತಿರ ಬಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ವಾಹನವನ್ನು
ನಿಲ್ಲಿಸದೇ ವಾಹನ ಸಮೇತ ಓಡಿ ಹೋಗಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಅಪರಿಚಿತ ವ್ಯಕ್ತಿಗೆ
ತಲೆಗೆ,
ಮರ್ಮಾಂಗಕ್ಕೆ
ಮತ್ತು ಬಲಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯಗಳು ಮತ್ತು ಬೆನ್ನಿನ ಹಿಂದೆ ತರಚಿದ ಗಾಯಗಳು ಆಗಿ
ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ
18-06-2020 ರಂದು ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್
ಠಾಣೆ ಅಪರಾಧ ಸಂ. 48/2020, ಕಲಂ. 363 ಐಪಿಸಿ :-
ದಿನಾಂಕ 14-06-2020 ರಂದು ರಾತ್ರಿ ವೇಳೆಯಲ್ಲಿ ಎಲ್ಲರೂ ಮನೆಯಲ್ಲಿ ಊಟ ಮಾಡಿಕೊಂಡಿದ್ದು, ಮಗಳಾದ ನಂದಿನಿ ಮತ್ತು ಮಗ ದರ್ಶನ ಇಬ್ಬರು ಒಂದೇ ಕೊಣೆಯಲ್ಲಿ ಮಲಗಿಕೊಂಡಿರುತ್ತಾರೆ, ಹಿರಿಯ ಮಗ ಸುಶೀಲ ಇತನು ಅಲ್ಲೆ ಪಕ್ಕದಲ್ಲಿರುವ ಇನ್ನೊಂದು ಕೊಣೆಯಲ್ಲಿ ಮಲಗಿಕೊಂಡಿರುತ್ತಾನೆ, ದಿನಾಂಕ 15-06-2020 ರಂದು ರಾತ್ರಿ 0200 ಗಂಟೆಗೆ ಗ್ರಾಮದಲ್ಲಿರುವ ಫಿರ್ಯಾದಿಯ ಅಜ್ಜಿಗೆ ಆರೋಗ್ಯ ಚೆನ್ನಾಗಿ ಇಲ್ಲದೇ ಇರುವುದರಿಂದ ಫಿರ್ಯಾದಿಯು ತನ್ನ ಹೆಂಡತಿ ಮುತ್ತಮ್ಮಾ ಇಬ್ಬರು ಅಜ್ಜಿಗೆ ನೋಡಲು ಹೋಗಿ ಮರಳಿ 0500 ಗಂಟೆಗೆ ಮನೆಗೆ ಬಂದು ನಂದಿನಿ ಮತ್ತು ದರ್ಶನ ಇಬ್ಬರು ಮಲಗಿದ ಕೊಣೆಯಲ್ಲಿ ನೋಡಲು ನಂದಿನಿ ಕೊಣೆಯಲ್ಲಿ ಇರಲಿಲ್ಲಾ, ನಂತರ ಫಿರ್ಯಾದಿಯು ತನ್ನ ಹೆಂಡತಿ ಜೊತೆಯಲ್ಲಿ ಮನೆಯಲ್ಲಿ ನೋಡಲು ನಂದಿನಿ ಇರಲಿಲ್ಲಾ, ಮಲಗಿದ ದರ್ಶನ ಇತನಿಗೆ ಎಬ್ಬಿಸಿ ವಿಚಾರಿಸಲು ಆತ ನನಗೆ ಗೊತ್ತಿಲ್ಲಾ ಅಂತಾ ತಿಳಿಸಿರುತ್ತಾನೆ, ಮಗಳಾದ ನಂದಿನಿ ಇವಳಿಗೆ ತಮ್ಮೂರ ವಿಕಾಸ ತಂದೆ ರವೀಂದ್ರ ಹುಬ್ಬಾರೆ ಇತನು ಫುಸಲಾಯಿಸಿ,
ಎನೊ ಆಸೆ ತೊರಿಸಿ ಮನೆಯಿಂದ
ಅಪಹರಿಸಿಕೊಂಡು ಹೋಗಿರುತ್ತಾನೆ, ಫಿರ್ಯಾದಿಯ ಮಗಳಿಗೆ ಮನೆಯಿಂದ ಅಪಹರಿಸಿಕೊಂಡು ಹೋಗಲು ಆರೋಪಿ
1) ವಿಕಾಸ ತಂದೆ ರವಿಂದ್ರ ಹುಬ್ಬಾರೆ ವಯ: 24 ವರ್ಷ,
ಇತನಿಗೆ ಆತನ ತಂದೆ
ಆರೋಪಿ 2) ರವಿಂದ್ರ ತಂದೆ ದಶರಥ ಹುಬ್ಬಾರೆ ವಯ: 50 ವರ್ಷ, ತಾಯಿ ಆರೋಪಿ 3) ಸುನೀತಾ ಗಂಡ ರವಿಂದ್ರ ಹುಬ್ಬಾರೆ ವಯ: 45 ವರ್ಷ ಜಾತಿ: ಎಸ್.ಸಿ ಹೊಲಿಯಾ ಮೂವರು ಸಾ: ಯರಂಡಗಿ ಗ್ರಾಮ ಇವರೆಲ್ಲರೂ ಸಹಾಯ ಮಾಡಿರುತ್ತಾರೆ,
ನಂತರ ಫಿರ್ಯಾದಿಯವರು ಎಲ್ಲಾ
ಕಡೆ ಹುಡುಕಾಡಿದರು ಫಿರ್ಯಾದಿಯವರ
ಮಗಳು ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ
ಸಾರಾಂಶದ
ಮೇರೆಗೆ ದಿನಾಂಕ 18-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್
ಠಾಣೆ ಅಪರಾಧ ಸಂ. 80/2020, ಕಲಂ. 32, 34, 36(ಬಿ) ಕೆ.ಇ ಕಾಯ್ದೆ :-
ದಿನಾಂಕ 18-06-2020 ರಂದು ನಾರಾಯಣಪೂರ ಗ್ರಾಮದ ಮಲ್ಲಪ್ಪಾ ಮಾಳಿ ರವರ ದನದ ಕೊಟ್ಟಿಗೆ ಹತ್ತಿರ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧೀಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ್.ಐ (ಕಾ&ಸು) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಾರಾಯಣಪೂರ ಗ್ರಾಮದಲ್ಲಿರುವ ಮಲ್ಲಪ್ಪಾ ಮಾಳಿ ರವರ ದನದ ಕೊಟ್ಟಿಗೆ ಹತ್ತಿರ ಹೋಗಿ ನೋಡಲು ಬಾತ್ಮಿಯಂತೆ ಅಲ್ಲಿ ಆರೋಪಿ ಪವನ ತಂದೆ ಮಲ್ಲಪ್ಪಾ ಮಾಳಿ ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ನಾರಾಯಣಪೂರ ಗ್ರಾಮ, ತಾ: ಬಸವಕಲ್ಯಾಣ ಇತನು ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಕುಳಿತಿರುವುದನ್ನು ನೋಡಿ ಎಲ್ಲರೂ ಹೋಗಿ ಸದರಿ ಆರೋಪಿತನ ಮೇಲೆ ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ನಿನ್ನ
ಹತ್ತಿರ ಇರುವ ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ? ಎಂದು ವಿಚಾರಿಸಿದಾಗ ಇದರಲ್ಲಿ ಸರಾಯಿವುಳ್ಳ ಪೌಚಗಳು ಇವೆ ಎಂದು ತಿಳಿಸಿದಾಗ ಇವುಗಳನ್ನು ಎಲ್ಲಿಂದ ತಂದಿರುವೆ ಎಂದು ವಿಚಾರಿಸಿದಾಗ ಅವನು ಬಸವಕಲ್ಯಾಣ ನಗರದ ಚಿರಡೆ ವೈನ್ ಶಾಪದಲ್ಲಿ ಮ್ಯಾನೆಜರ ಹತ್ತಿರ ಹಣ ಕೊಟ್ಟು ಖರಿದಿಸಿರುತ್ತೆನೆ ಎಂದು ತಿಳಿಸಿದಾಗ, ನಿನ್ನ ಹತ್ತಿರ ಇರುವ ಸರಾಯಿವುಳ್ಳ ಪೌಚಗಳು ಮಾರಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ ಮತ್ತು ದಾಖಲಾತಿ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದಾಗ, ಅವನಿಗೆ ನೀನು ಅನಧಿಕೃತವಾಗಿ ಸರಾಯಿವುಳ್ಳ ಪೌಚಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ತಿಳಿಸಿ ಅವನ ಹತ್ತಿರ ಇದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ ಓರಿಜಿನಲ್ ಚಾಯಿಸ್ ವಿಸ್ಕಿ ಡಿಲಕ್ಸ್ 90 ಎಂ.ಎಲ್ ಲಿಕರ್
84 ಪೌಚಗಳು ಅ.ಕಿ 2940/- ರೂ. ಬೆಲೆವುಳ್ಳ ಸರಾಯಿವುಳ್ಳ ಪೌಚಗಳನ್ನು ಜಪ್ತಿ
ಮಾಡಿಕೊಂಡು ಹಾಗೂ ಆರೋಪಿತನ ಅಂಗ ಶೋದನೆ ಮಾಡಲು ಅವನ ಅಧಿನದಿಂದ ನಗದು ಹಣ 2500/- ರೂ ಸಿಕ್ಕಿರುತ್ತವೆ ನೇದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ಮತ್ತು ಚಿರಡೆ ವೈನ್ ಶಾಪ ಮ್ಯಾನೆಜರ ಇವರಿಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment