Police Bhavan Kalaburagi

Police Bhavan Kalaburagi

Friday, June 19, 2020

KALABURAGI DISTRICT PRESS NOTE

                                                                   ಪೊಲೀಸ್‌ ಅಧೀಕ್ಷಕರವರ ಕಛೇರಿ
                                                                         ದಿನಾಂಕ:19/06/2020
ಪತ್ರಿಕಾ ಪ್ರಕಟಣೆ
         ಮೂಲಕ ಕಲಬುರಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ತಿಳಿಯಪಡಿಸುವದೆನೆಂದರೆಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಕುರಿತು ಆರೋಗ್ಯ ಇಲಾಖೆಯಿಂದ ಶಂಕಿತ ವ್ಯಕ್ತಿಗಳಿಂದ ಮಾದರಿ (ಸ್ಯಾಂಪಲ್)‌ ನ್ನು ಸಂಗ್ರಹಿಸಿ ಕಳುಹಿಸಲಾಗುತ್ತದೆಅದರ ವರದಿಯು ಪಾಸಿಟಿವ್‌ ಅಂತಾ ಬಂದ ತಕ್ಷಣ ಅಂತಹ ವ್ಯಕ್ತಿಗಳನ್ನು ನಿಗದಿತ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕಳಹಿಸಿಕೊಡಲಾಗುತ್ತಿದೆಆದರೇ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಕೊರೊನಾ ಪಾಸಿಟಿವ್‌ ಇರುವಂತಹ ವ್ಯಕ್ತಿಗಳನ್ನು ಅವರ ವಾಸಸ್ಥಾನ ದಿಂದ  ಆಸ್ಪತ್ರೆಗೆ ಕಳುಹಿಸುವ ಸಮಯದಲ್ಲಿ ಕೆಲವು ಪಾಸಿಟಿವ್‌ ಇರುವಂತಹ ವ್ಯಕ್ತಿಗಳು ಚಿಕಿತ್ಸೆ ಕುರಿತು ಹೋಗಲು ಒಪ್ಪದೆ ಮೊಂಡುತನ ಪ್ರದರ್ಶೀಸುವದು ಮತ್ತು ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರರ್ತವ್ಯಕ್ಕೆ ಅಡಚಣೆ ಮಾಡಿದ್ದು ಇರುತ್ತದೆ.

        ಸದರಿ ಪಾಸಿಟಿವ್‌ ಬಂದಂತಹ ವ್ಯಕ್ತಿಗಳನ್ನು ಆಸ್ಪತ್ರೆಗೆ ಕಳುಹಿಸುವದರ ಉದ್ದೇಶ ಅವರ ಆರೋಗ್ಯ ಕಾಪಾಡಲು ಮತ್ತು ಕೊರೊನಾ ವೈರಸನ್ನು ಇನ್ನೋಬ್ಬರಿಗೆ ಹರಡುವದನ್ನು ತಡೆಯುವದಾಗಿರುತ್ತದೆಇದನ್ನು ಅರಿಯದೇ ಅದಕ್ಕಾಗಿ ಕೆಲಸ ಮಾಡುವಂತಹ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ರ್ತವ್ಯಕ್ಕೆ ಅಡ್ಡಿಪಡಿಸುವದನ್ನು ಇಲಾಖೆಯು ಗಂಭಿರವಾಗಿ ಪರಿಗಣಿಸಿರುತ್ತದೆಇನ್ನೂ ಮುಂದೆ ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಕೊರೊನಾ ಪಾಸಿಟಿವ್‌ ಬಂದಂತಹ ವ್ಯಕ್ತಿಗಳು ಆರೋಗ್ಯ ಇಲಾಖೆಯಿಂದ ನೀಡುವ ಸೂಚನೆಗಳನ್ನು ಪಾಲಿಸಿ ಸಹಕರಿಸಲು ವಿನಂತಿಕೊಳ್ಳಲಾಗಿದೆಒಂದು ವೇಳೆ  ಇದಕ್ಕೆ ವಿರೋಧ ವ್ಯಕ್ತಪಡಿಸಿದಲ್ಲಿ ಪೊಲೀಸ್‌ ಇಲಾಖೆಯಿಂದ ಅಂತಹ ವ್ಯಕ್ತಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು.
                                                                                 ಸಹಿ/-
                                                                         ಪೊಲೀಸ್‌ ಅಧೀಕ್ಷಕರು
                                                                            ಕಲಬುರಗಿ ಜಿಲ್ಲೆ

No comments: