ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-07-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ.
109/2020, ಕಲಂ. 87 ಕೆ.ಪಿ ಕಾಯ್ದೆ
:-
ದಿನಾಂಕ 25-07-2020 ರಂದು ಹುಮನಾಬಾದ ಪಟ್ಟಣದ
ಎಂ.ಪಿ ಗಲ್ಲಿಯಲ್ಲಿ ಹೋಗುವ ಸಾರ್ವಜನಿಕ ರಸ್ತೆ ಮೇಲೆ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ
ಬಾಹರೆಂಬ ನಸೀಬಿನ ಇಸ್ಪಿಟ ಜೂಜಾಟವನ್ನು ಆಡುತ್ತಿದ್ದಾರೆಂದು ರವಿಕುಮಾರ ಪಿಎಸಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಜೂಜಾಟ ಆಡುತ್ತಿದ್ದ ಆರೋಪಿತರಾದ
1) ಬಸವರಾಜ ತಂದೆ ಶಿವರಾಜ ರಾಚೋಟಿ, 2) ಸಂತೋಷ ತಂದೆ ರಾಮಚಂದ್ರ ಚೌಧರಿ, 3) ಸೂರ್ಯಾಕಾಂತ ತಂದೆ ಶರಣಪ್ಪಾ, 4) ಬಸವರಾಜ ತಂದೆ ಕಾಶೆಪ್ಪಾ, 5) ಬಾಬುರಾವ ತಂದೆ ಬಂಡಯ್ಯಾ ಪತ್ರಿ, 6) ಸುನೀಲ ತಂದೆ ನೀಲಕಂಟರಾವ ಪಾಟೀಲ, 7) ಸಂತೋಷ ತಂದೆ ಮಹಾದೇವಪ್ಪಾ ಶರಣೂರ ಎಲ್ಲರೂ ಸಾ: ಜೇರಪೆಟ ಹುಮನಾಬಾದ ಇವರೆಲ್ಲರ ಮೇಲೆ ದಾಳಿ ಮಾಡಿ ಜೂಜಾಟ
ಆಡುತ್ತಿದ್ದ 07
ಜನರಿಗೆ
ಹಿಡಿದುಕೊಂಡು ಸದರಿಯವರ ವಿರುದ್ಧ ಪ್ರಕರಣ ದಾಖಾಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 86/2020, ಕಲಂ. 279,
337, 338 ಐಪಿಸಿ :-
ದಿನಾಂಕ 25-07-2020 ರಂದು
ನಾಗರ ಪಂಚಮಿ ಹಬ್ಬ ಇದ್ದುದ್ದರಿಂದ ಫಿರ್ಯಾದಿ ಸಿದ್ದರಾಜ ತಂದೆ ಮಲ್ಲಿಕಾರ್ಜುನ ಎಲಬೋ ಸಾ: ಚನ್ನವೀರ ನಗರ ಕಲಬುರಗಿ ರವರು ಹಳ್ಳಿಖೇಡ (ಬಿ) ಪಟ್ಟಣದ ಶ್ರೀ ಸೀಮಿ ನಾಗನಾಥ ದೇವಸ್ಥಾನಕ್ಕೆ ಹೋಗಿ ದರ್ಶನ ಸಲುವಾಗಿ ಕಲಬುರಗಿಯಿಂದ ಹೊಂಡಾ ಡಿಯೋ ಮೋಟಾರ ಸೈಕಲ್ ನಂ. ಕೆಎ-01/ಜೆಎಫ್-4787 ನೇದ್ದರ ಮೇಲೆ ಹಳ್ಳಿಖೇಡ (ಬಿ) ಪಟ್ಟಣದ ಶ್ರೀ ಸೀಮಿ ನಾಗನಾಥ ದೇವಸ್ಥಾನಕ್ಕೆ ಬಂದು ದೇವಸ್ಥಾನ ಬಂದ ಇದ್ದುದ್ದರಿಂದ ಕಲಬುರಗಿಗೆ ಮರಳಿ ಹೋಗುವಾಗ ಬೀದರ ಹುಮನಾಬಾದ ರೋಡ ಕಬೀರಾಬಾದವಾಡಿ ಕ್ರಾಸ ಹತ್ತಿರ ಸದರಿ ಮೋಟಾರ್ ಸೈಕಲನ್ನು ಫಿರ್ಯಾದಿಯ ಗೆಳೆಯ ಆರೋಪಿ ಗುರುಕಿರಣ ತಂದೆ ಚನ್ನಮಲ್ಲಪ್ಪಾ ಧಾಖಲಿ ಇವನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಬೇನ್ ಚಿಂಚೋಳಿ ಗ್ರಾಮದ ಕಡೆಯಿಂದ ಕಾವಸಕಿ ಬಾಕ್ಸರ್ ಮೋಟಾರ ಸೈಕಲ್ ನಂ. ಎಪಿ-10/ಕ್ಯೂ-0159 ನೇದರ ಚಾಲಕನಾದ ಆರೋಪಿ ಧೂಳಪ್ಪಾ ತಂದೆ ಶಿವರಾಮ ವಾಗಮಾರೆ ವಯ: 35 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಜಾಮ ನಗರ, ತಾ: ಹುಮನಾಬಾದ ಇತನು ಸಹ ಹಿಂದುಗಡೆ ಒಬ್ಬ ಹೆಣ್ಣು ಮಗಳನ್ನು ಕೂಡಿಸಿಕೊಂಡು ಸದರಿ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಆಕಡೆ ಈಕಡೆ ನೋಡದೆ ರೋಡ ಪಾಸ ಮಾಡುವಾಗ ಎರಡು ಮೋಟಾರ್ ಸೈಕಲ್ ಡಿಕ್ಕಿ ಆಗಿರುತ್ತವೆ, ಸದರಿ ಡಿಕ್ಕಿಯ ಪರಿಣಾಮ ಗುರುಕಿರಣ ಇವನಿಗೆ ಸಂಸಾರಕೆ್ಕ ಗುಪ್ತಗಾಯವಾಗಿರುತ್ತದೆ ಹಾಗೂ ಧೂಳಪ್ಪಾ ಇತನಿಗೆ ಬಲಗಡೆಯ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಹಿಂದೆ ಕುಳಿತ ಹೆಣ್ಣು ಮಗಳು ಧೂಳಪ್ಪಾ ರವರ ಹೆಂಡತಿ ದರ್ಶನಾ ರವರ ಬಲಗಡೆ ಹಣೆಗೆ, ಮುಖದ ಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ, ಅವರ
ಜೊತೆಯಲ್ಲಿರುವ ಇಬ್ಬರು ಚಿಕ್ಕ ಮಕ್ಕಳಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ, ನಂತರ
ಗಾಯಗೊಂಡ ಗುರುಕಿರಣ ಇವನಿಗೆ ಮೋಟಾರ ಸೈಕಲ ಮೇಲೆ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಹಾಗೂ ಗಾಯಗೊಂಡ ಧೂಳಪ್ಪಾ ಮತ್ತು ಅವರ ಹೆಂಡತಿ ದರ್ಶನಾ ರವರಿಗೆ 108 ಅಂಬುಲೇನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment