ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-07-2020
ಬಗದಲ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174
ಸಿ.ಆರ್.ಪಿ.ಸಿ :-
ದಿನಾಂಕ 09-07-2020 ರಂದು 0830 ಗಂಟೆಯ ಸುಮಾರಿಗೆ ಫಿರ್ಯಾದಿ ಚಿನ್ನಮ್ಮಾ ಗಂಡ ರಾಜಣ್ಣಾ ಮೂಲಗೆ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ, ತಾ: ಹುಮನಾಬಾದ, ಜಿಲ್ಲಾ: ಬೀದರ ರವರ ಮಗಳಾದ ಭುವನೇಶ್ವರಿ ಗಂಡ ಶಿವಕುಮಾರ ಸುಲೆಗಾಂವ ವಯ: 32 ವರ್ಷ, ಸಾ: ಸಿರ್ಸಿ (ಎ) ಗ್ರಾಮ ಇವಳು ಚಹಾ ಮಾಡುವ ಸಲುವಾಗಿ ಸೀಮೆಎಣ್ಣೆಯ ಸ್ಟೊ ಹಚ್ಚಲು ಹೊದಾಗ ಒಮ್ಮೆಲೆ ಭಗ್ಗ ಅಂತ ಬೆಂಕಿ ಹತ್ತಿಗೊಂಡು ಆ ಬೆಂಕಿಯು ಮಗಳ ಸೀರೆಗೆ ಹತ್ತಿ ಮಗಳ ಮುಖ, ತಲೆ ಬಿಟ್ಟು ಉಳಿದ ಶರಿರದ ಭಾಗಗಳಾದ ಎರಡು ಕೈಗಳು, ಕುತ್ತಿಗೆ, ಎದೆ, ಹೊಟ್ಟೆ, ಹಿಂಭಾಗ ಮತ್ತು ತೊಡೆ ಹಾಗು ಕಾಲುಗಳು ಸುಟ್ಟು ಹೊಗಿದ್ದರಿಂದ ಆಕೆಗೆ 108
ಅಂಬುಲೇನ್ಸ ಮುಖಾಂತರ ಬ್ರೀಮ್ಸ್ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಅವಳು ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 14-07-2020 ರಂದು ಬ್ರೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ, ಸದರಿಯವಳ ಸಾವಿನ ಬಗ್ಗೆ ಯಾರ ಮೇಲೆಯು ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 48/2020, ಕಲಂ.
279, 304(ಎ) ಐಪಿಸಿ :-
ದಿನಾಂಕ 24-07-2020 ರಂದು ಫಿರ್ಯಾದಿ ರವೀಂದ್ರ ತಂದೆ ಮಾರುತಿ ಸಲಗರೆ, ವಯ: 43 ವರ್ಷ, ಜಾತಿ: ಕುರುಬ, ಸಾ: ಸಸ್ತಾಪೂರ, ತಾ: ಬಸವಕಲ್ಯಾಣ ರವರ ಸೋದರಳಿಯನಾದ
ಪ್ರಭು ತಂದೆ ಹಣಮಂತ ಮೇತ್ರೆ ವಯ: 24 ವರ್ಷ, ಸಾ: ಖಟಕಚಿಂಚೋಳಿ ಈತನು ತನ್ನ ತಾಯಿ ಸವಿತಾ ಗಂಡ ಹಣಮಂತ ಮೇತ್ರೆ, ವಯ: 40 ವರ್ಷ ಇವಳಿಗೆ ತನ್ನ ಹೊಸ ಬಜಾಜ್ ಪ್ಲಾಟಿನಾ ಮೋಟರ ಸೈಕಲ ನಂ.
ಕೆಎ-2020/ಟಿ.ಆರ್-3275ಎ.ಡಿ ನೇದ್ದರ ಹಿಂಭಾಗ ಕೂಡಿಸಿಕೊಂಡು ತಮ್ಮ ಗ್ರಾಮದಿಂದ ಬಸವಕಲ್ಯಾಣ – ಬಂಗ್ಲಾ ರೋಡಿನ ಮೇಲೆ ತನ್ನ ಮೋಟರ ಸೈಕಲನ್ನು ವೇಗವಾಗಿ
ಚಲಾಯಿಸಿಕೊಂಡು ಹೋಗುತ್ತಿರುವಾಗ ಮಿನಿವಿಧಾನ ಸೌಧದ ಎದುರಿಗಿರುವ ನ್ಯೂ ಕೆ.ಹೆಚ್.ಬಿ ಕಾಲೋನಿ ಕ್ರಾಸ್ ಹತ್ತಿರದ ಸ್ಪೀಡ್ ಬ್ರೇಕರನಲ್ಲಿ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ
ಹಿಂದೆ ಕುಳಿತ ತನ್ನ ತಾಯಿಯು ಮೋಟರ ಸೈಕಲ ಮೇಲಿಂದ ಕೆಳಗೆ ಬಿದ್ದಿರುತ್ತಾಳೆ, ಪರಿಣಾಮ ಪ್ರಭು ಇತನ ತಾಯಿಯ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ
ಎಡಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬಂದಿರುತ್ತದೆ ಹಾಗೂ ಬಲಗೈ ಮೊಳಕೈಗೆ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ತನ್ನ ತಾಯಿಗೆ ಒಂದು ಆಟೋರಿಕ್ಷಾದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು
ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಅಲ್ಲಿನ ವೈದ್ಯಾಧಿಕಾರಿಯವರು ಸವಿತಾ
ಇವಳಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆ ಕುರಿತು ಬೇರೆ ಕಡೆಗೆ ತೆಗೆದುಕೊಂಡು ಹೋಗುವಂತೆ
ತಿಳಿಸಿದ್ದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಅಂಬುಲೇನ್ಸಲ್ಲಿ ಬೀದರ ಸರ್ಕಾರಿ
ಆಸ್ಪತ್ರೆಗೆ ತಂದು ದಾಖಲಿಸಿದಾಗ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ
ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್
ಠಾಣೆ ಅಪರಾಧ ಸಂ. 60/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 24-07-2020 ರಂದು ಯರಂಡಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಕೆಲವು ಜನರು ಹಣ ಕಟ್ಟಿ ಪಣ ತೊಟ್ಟಿ ಗೊಲಾಕಾರವಾಗಿ ಕುಳಿತು ನಸೀಬಿನ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ನಿಂಗಪ್ಪಾ
ಮಾಣ್ಣುರ ಪಿಎಸ್ಐ(ಅವಿ) ಬಸವಕಲ್ಯಾಣ ಗ್ರಾಮೀಣ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ
ಸಿಬ್ಬಂದಿಯವರೊಡನೆ ಯರಂಡಗಿ ಗ್ರಾಮದಲ್ಲಿಯ ಸರಕಾರಿ ಪ್ರೌಢ ಶಾಲೆ ಹತ್ತಿರ ಹೋಗಿ ಮರೆಯಾಗಿ ನೋಡಲು ಸರಕಾರಿ ಪ್ರೌಢ ಶಾಲೆಯ ಹತ್ತಿರ ಸಾರ್ವಜನಿ ಸ್ಥಳದಲ್ಲಿ ಆರೋಪಿತರಾದ 1) ಬಾಬುರಾವ ತಂದೆ ಮಾಣಿಕಪ್ಪಾ ಜಮಖಂಡೆ ವಯ: 46 ವರ್ಷ, ಜಾತಿ: ಲಿಂಗಾಯತ, 2) ಮುರಳಿಧರ ತಂದೆ ಮಚೆಂದರ ರನಮಲೆ ವಯ: 28 ವರ್ಷ, ಜಾತಿ: ಎಸ್.ಸಿ ಹೊಲಿಯಾ, 3) ಬಲಭೀಮ ತಂದೆ ವಿಶ್ವನಾಥ ಮಾನೆ ವಯ: 34 ವರ್ಷ, ಜಾತಿ: ಕೊರವಾ, 4) ಯಶವಂತ ತಂದೆ ಲಕ್ಷ್ಮಣ ಗಾಜರೆ ವಯ: 52 ವರ್ಷ, ಜಾತಿ: ಎಸ್.ಸಿ ಹೊಲಿಯಾ, 5) ತಾಜೋದ್ದಿನ ತಂದೆ ರಜಾಕಸಾಬ ಮುಲ್ಲಾ ವಯ: 30 ವರ್ಷ, ಜಾತಿ: ಮುಸ್ಲಿಂ. 6) ದೀಪಕ ತಂದೆ ಲಕ್ಷ್ಮಣ ಮಜಗೆ ವಯ: 33 ವರ್ಷ, ಜಾತಿ: ಲಿಂಗಾಯತ, 7) ಹಾಜಿಸಾಬ ತಂದೆ ಮೇಹಬೂಬಸಾಬ ಗಿರಣಿವಾಲೆ ವಯ: 34 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ಯರಂಡಗಿ ಗ್ರಾಮ ಇವರೆಲ್ಲರೂ ಹಣ ಕಟ್ಟಿ ಪಣ ತೊಟ್ಟು ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ಅಂದರ ಬಾಹೇರ ಎಂಬ ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ 3 ಜನರು ಓಡಿ ಹೋಗಿದ್ದು ಉಳಿದ ಆರೋಪಿತರಿಗೆ ಹಿಡಿದು, ಅವರಿಂದ ಒಟ್ಟು 52 ಇಸ್ಟೀಟ ಎಲೆಗಳು ಮತ್ತು 5500/- ರೂ. ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 54/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 24-07-2020 ರಂದು ಬೇಟಬಾಲಕುಂದಾ ಗ್ರಾಮದ ಸುಭಾಷ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತ್ತಿದ್ದಾರೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಬೇಟಬಾಲಕುಂದಾ ಗ್ರಾಮಕ್ಕೆ ಹೋಗಿ ಮನೆಗಳ ಮರೆಯಾಗಿ ನಿಂತು ನೋಡಲು ಬೇಟಬಾಲಕುಂದಾ ಗ್ರಾಮದ ಸುಭಾಷ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಾಣÂಕ ತಂದೆ ಎಕನಾಥ ಕಾಂಬಳೆ ವಯ: 45 ವರ್ಷ, ಜಾತಿ: ಹೊಲಿಯಾ, 2) ಮುಕ್ತಾgÀ ತಂದೆ ದಸ್ತಗಿರ ಎಣಕೂರೆ ವಯ: 30 ವರ್ಷ, ಜಾತಿ: ಮುಸ್ಲಿಂ, ಇಬ್ಬರು ಸಾ: ಬೇಟಬಾಲಕುಂದಾ ಇವರಿಬ್ಬರು ಒಂದು ರೂಪಾಯಿಗೆ 90/- ರೂಪಾಯಿ ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತ್ತಿರುವದನ್ನು ನೋಡಿ ಅವರ ಮೇಲೆ ದಾಳಿ ನಡೆಸಿ ಹಿಡಿದುಕೊಂಡು ಇಬ್ಬರಿಗೂ ಇಲ್ಲಿ ಎನು ಮಾಡುತ್ತಿದ್ದಿರಿ ಅಂತ ವಿಚಾರಿಸಲು ನಾವಿಬ್ಬರೂ ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 90/- ರೂಪಾಯಿಗಳು ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣಿ ಮಟಕಾ ನಂಬರಿನ ಚೀಟಿ ಬರೆದುಕೊಳ್ಳುತ್ತಿರುವದಾಗಿ ತಿಳಿಸಿದ್ದು, ನಂತರ ಸದರಿ ಆರೋಪಿತರರಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 2 ಮಟಕಾ ನಂಬರ ಬರೆದ ಚೀಟಿ, 2 ಬಾಲ ಪೆನ್ನ ಹಾಗು ನಗದು ಹಣ 2060/- ರೂಪಾಯಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment