ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 15-08-2020
ಸಿ.ಇ.ಎನ್
ಕ್ರೈಂ ಪೊಲೀಸ ಠಾಣೆ ಅಪರಾಧ ಸಂಖ್ಯೆ 10/2020 ಕಲಂ 419, 420 ಐಪಿಸಿ ಮತ್ತು ಕಲಂ 66(ಡಿ) ಐ.ಟಿ ಆಕ್ಟ್ :-
ದಿನಾಂಕ
: 14/08/2020 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ಲಾಲಪ್ಪಾ ತಂದೆ ಬಕ್ಕಪ್ಪಾ ಭವಾನಿ ವಯ: 42 ವರ್ಷ ಜಾ: ಎಸ್.ಸಿ ಹೊಲಿಯ ಉ: ಯರನಳ್ಳಿ ಪಂಚಾಯತ
ಬಿಲ್ ಕಲೆಕ್ಟರ್ ಮು: ಓಡವಾಡ (ವಾಲದೊಡ್ಡಿ) ತಾ: ಜಿ: ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು
ನೀಡಿದರ ಸಾರಾಂಶವೇನೆಂದರೆ,
ಈಗ ಸುಮಾರು 9 ತಿಂಗಳ ಹಿಂದೆ ನಾಪತೋಲನಲ್ಲಿ ಚಹಾ ಕುಡಿಯುವ ಕಪ್ ಗಳು ಆರ್ಡರ ಮಾಡಿ ಅವುಗಳು ಬಂದ ನಂತರ ಇಷ್ಟವಾಗಲಿಲ್ಲದರಿಂದ
ಅವುಗಳನ್ನು ಮರಳಿ ಕಳುಹಿಸಿದ್ದು
ನಂತರ ದಿನಾಂಕ : 23/07/2020 ರಂದು ನಾಪತೋಲ ಕಂಪನಿಯಿಂದ ಫೀರ್ಯಾದಿಗೆ ಒಂದು
ಸ್ಪೀಡ ಪೋಸ್ಟ ಮೂಲಕ ಒಂದು ಪತ್ರ ಬಂದಿದ್ದು, ಅದರಲ್ಲಿ
ನಾಪತೋಲ ಕಂಪನಿಯ ಹುಟ್ಟು ಹಬ್ಬದ ಪ್ರಯುಕ್ತ ನಡೆಸಲಾದ ಡ್ರಾ ನಲ್ಲಿ ನಿಮಗೆ 12 ಲಕ್ಷ ಬಹುಮಾನ ಬಂದಿದೆ, ಸದರಿ
ಹಣ ಪಡೆಯಲು ಮೊಬೈಲ ಸಂ: 8929915137 ನೇದ್ದಕ್ಕೆ ಕರೆ ಅಥವಾ ವಾಟ್ಸಾಪ್ ಮೆಸೆಜ
ಮಾಡುವಂತೆ ಹಾಗು ಬಹುಮಾನದ ನಿಯಮಾವಳಿಗಳು ಇದ್ದು, ಅದರೊಂದಿಗೆ ಬಹುಮಾನದ ಸ್ಕ್ರ್ಯಾಚ್ ಕುಪನ್ ಕಳುಹಿಸಿದ್ದು, ಕುಪನ್ ಸ್ಕ್ರ್ಯಾಚ್ ಮಾಡಿ ನೋಡಲು 12 ಲಕ್ಷ ಬಹುಮಾನ ಗೆದ್ದ ಬಗ್ಗೆ ಇದ್ದಿತ್ತು ಮತ್ತು ಅದರಲ್ಲಿ ಬ್ಯಾಂಕ ಖಾತೆಯ ವಿವರ, ಆಧಾರ ಕಾರ್ಡ,
ಪ್ಯಾನ ಕಾರ್ಡ ಸಂಖ್ಯೆಗಳು ಭರ್ತಿ ಮಾಡಿ ವಾಟ್ಸಾಪ್ ಗೆ ಕಳುಹಿಸುವಂತೆ ತಿಳಿಸಿದ್ದು
ಇತ್ತು. ಮರುದಿವಸ ದಿನಾಂಕ : 24/07/2020 ರಂದು ಸದರಿ ಪತ್ರದಲ್ಲಿನ ಮೊಬೈಲ ಸಂ: 8929915137 ನೇದ್ದಕ್ಕೆ ಫೀರ್ಯಾದಿಯು ಕರೆ ಮಾಡಿದಾಗ ನಾಪತೋಲ
ಕಂಪನಿಯವರೆಂದು ಒಬ್ಬ ವ್ಯಕ್ತಿ ಹಿಂದಿಯಲ್ಲಿ ಮಾತಾಡಿ ನೀವು ಗೆದ್ದ ಬಹುಮಾನದ ಹಣ 7-8 ದಿವಸಗಳ ಒಳಗಾಗಿ ಪಡೆಯಬೇಕು ಇಲ್ಲದಿದ್ದರೆ ಹಣ
ವಾಪಸ ಹೋಗುತ್ತವೆ ಅಂತ ಹೇಳಿದರು. ಆಗ ನಾನು ಅವರಿಗೆ ನಮಗೆ ಹಿಂದಿ ಸರಿಯಾಗಿ ಮಾತನಾಡಲು
ಬರುವುದಿಲ್ಲ ಎಂದು ಹೇಳಿದಾಗ ಅವನು ನಮ್ಮ ಕಂಪನಿಯ ಕನ್ನಡದಲ್ಲಿ ಮಾತಾಡುವವರು 2-3 ದಿವಸಗಳಲ್ಲಿ ನಿಮಗೆ ಕರೆ ಮಾಡಿ ಎಲ್ಲಾ ವಿಷಯ
ವಿವರವಾಗಿ ತಿಳಿಸುತ್ತಾರೆ ಅಂತ ಹೇಳಿದರು. ನಂತರ ದಿನಾಂಕ : 28/07/2020 ರಂದು ಮೊಬೈಲ ಸಂ: 9073407894 ರಿಂದ ಕರೆ ಮಾಡಿ ನಾಪ್ತೊಲ್ ಕಂಪನಿಯವರೆಂದು
ಕನ್ನಡದಲ್ಲಿ ಮಾತಾಡಿ ನೀವು ಡ್ರಾನಲ್ಲಿ ಗೆದ್ದ 12 ಲಕ್ಷ ಹಣ ಪಡೆಯಬೇಕಾದರೆ, ನೀವು
ರಾಜ್ಯ ಸಕರ್ಾರದ 24,000/-
ರೂಪಾಯಿ ಮತ್ತು ಕೇಂದ್ರ ಸಕರ್ಾರದ
51,200/- ರೂಪಾಯಿ ಟ್ಯಾಕ್ಸ ಕಟ್ಟಬೇಕಾಗುತ್ತದೆ, ಹಣ ಪಾವತಿಸಿದ ನಂತರ 12 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ
ಎಂದು ತಿಳಿಸಿ ವಾಟ್ಸಾಪ್ ಗೆ ಗೂಗಲ ಪೇ ಮತ್ತು
ಫೋನ ಪೇ ಸಂ: 7838185448 ಮತ್ತು ಎಸ್.ಬಿ.ಐ ಬ್ಯಾಂಕ ಖಾತೆ ಸಂ: 32035464488(ಐ.ಎಫ್.ಎಸ್.ಸಿ ಕೋಡ : ಎಸ್.ಬಿ.ಐ.ಎನ್ 0018985, ಶುಭಜೀತ ಅಧಿಕಾರಿ) ನೇದ್ದು ಕಳುಹಿಸಿದರು. ಆಗ
ಫಿರ್ಯಾದಿಯು ಅದೆ ದಿವಸ ಎಸ್.ಬಿ.ಐ ಬ್ಯಾಂಕಿಗೆ ಹೋಗಿ ಮೇಲೆ ತಿಳಿಸಿದ ಬ್ಯಾಂಕ ಖಾತೆ ಸಂ: 32035464488 ನೇದ್ದಕ್ಕೆ 24,000/- ರೂ ಜಮಾ ಮಾಡಿದ್ದು, ನಂತರ ಮರುದಿವಸ ಸದರಿ ವ್ಯಕ್ತಿ ಪುನಃ ಕರೆ ಮಾಡಿ ಇನ್ನು 51,200/- ರೂ ಪಾವತಿಸಲು ಹೇಳಿ ನನ್ನ ಮೊಬೈಲಿಗೆ ಸದರಿ ಹಣ ಪಾವತಿಸದರಿಂದ 12 ಲಕ್ಷ ರೂಪಾಯಿ ನನ್ನ ಖಾತೆಗೆ ಜಮಾ ಆಗುವುದು
ನಿಂತಿದೆ ಎಂದು ಮೆಸೇಜ ಕಳುಹಿಸಿದರು. ಆಗ ಫಿರ್ಯಾದಿಯು ದಿನಾಂಕ : 29/07/2020 ರಂದು ಖಾತೆಗೆ 51,200/- ರೂ ಜಮಾ ಮಾಡಿರುತ್ತಾರೆ ದಿನಾಂಕ : 30/07/2020 ರಂದು ಫಿರ್ಯಾದಿ ಮೊಬೈಲಿಗೆ ಎನ್.ಓ.ಸಿ ಮತ್ತು
ಎಲ್.ಪಿ.ಸಿ ಯ 1,02,400/-
ರೂ ಪಾವತಿಸದರಿಂದ ನಿಮ್ಮ ಖಾತೆಯಲ್ಲಿ
12 ಲಕ್ಷ ರೂಪಾಯಿ ಹೋಲ್ಡ ಆಗಿರುತ್ತವೆ ಅಂತ ಸಂದೇಶ
ಬಂದಿದ್ದರಿಂದ ಫಿರ್ಯಾದಿಯು ಸದರಿ ವ್ಯಕ್ತಿಗೆ ಕರೆ ಮಾಡಿದಾಗ ಸದರಿ 1,02,400/- ರೂ ಹಣ ಕೂಡಲೆ ಜಮಾ ಮಾಡಿದರೆ, ನೀವು ಗೆದ್ದ 12 ಲಕ್ಷ ರೂಪಾಯಿ ನಿಮ್ಮ ಖಾತೆಯಲ್ಲಿ ಜಮಾ ಆಗುತ್ತವೆ ಅಂತ ಹೇಳಿದನು. ಆಗ
ಫಿರ್ಯಾದಿರವರು ಶ್ರೀ ಕಾಶಿನಾಥ ಭಾವಿಕಟ್ಟಿ ರವರಲ್ಲಿ ಹೋಗಿ ಸದರಿ ಬಹುಮಾನ ಗೆದ್ದ ಬಗ್ಗೆ
ವಿವರವಾಗಿ ಹೇಳಿ ವಿಚಾರಿಸಲು ಅವರು ನನಗೆ ಇವೆಲ್ಲಾ ಮೋಸ ಇರುತ್ತದೆ, ಎಂದು ಹೇಳಿದಾಗ ಫೀರ್ಯಾದಿಯು ಸದರಿ ವ್ಯಕ್ತಿಗೆ ಕರೆ ಮಾಡಿ ನಮಗೆ ಯಾವುದೆ
ಬಹುಮಾನದ ಹಣ ಬೇಕಾಗಿಲ್ಲ,
ನಮ್ಮ ಹಣ ನಮಗೆ ವಾಪಸ್ಸ ಕೊಡಿ
ಎಂದು ಕೇಳಿದಾಗ ಅವನು ತೆರಿಗೆ ಇಲಾಖೆಗೆ ಪತ್ರ ಬರೆದು ನಿಮ್ಮ ಹಣ ಮರಳಿ ನಿಮಗೆ ಹಾಕುತ್ತೇವೆ
ಅದಕ್ಕೆ ಒಂದೆರಡು ದಿವಸ ಸಮಯ ಬೇಕಾಗುತ್ತದೆ ಎಂದು ತಿಳಿಸಿದನು. ನಂತರ ಮರು ದಿವಸ ಫಿರ್ಯಾದಿಯು
ಸದರಿ ಮೊಬೈಲ ಸಂಖ್ಯೆಗಳಾದ : 9073407894 ಮತ್ತು 8929915137 ನೇದ್ದವುಗಳಿಗೆ ಕರೆ ಮಾಡಿದರೆ ಅವು ಸ್ವಿಚ್ ಆಫ್
ಆಗಿದ್ದವು. ಆ ನಂತರ ಸುಮಾರು ದಿವಸಗಳ ವರೆಗೆ ಸದರಿ ಮೊಬೈಲ ಸಂಖ್ಯೆಗಳಿಗೆ ಕರೆ ಮಾಡಿ ಮಾತಾಡಲು
ಪ್ರಯತ್ನಿಸಿದ್ದು, ಆದರೆ ಅವುಗಳು ಬಂದ ಆಗಿರುತ್ತವೆ. ಯಾರೊ ಅಪರಿಚಿತ
ವಂಚಕ ವ್ಯಕ್ತಿಗಳು ನ್ಯಾಪತೋಲ ಕಂಪನಿಯವರೆಂದು ಹೇಳಿ ನನಗೆ ನಾಪತೋಲನಲ್ಲಿ 12 ಲಕ್ಷ ಬಹುಮಾನ ಗೆದ್ದಿದ್ದೇನೆ ಅಂತ ಸುಳ್ಳು
ಪತ್ರ ಕಳುಹಿಸಿ ಅದರ ಮುಖಾಂತರ ನನ್ನ ಮಾಹಿತಿಗಳು ಪಡೆದುಕೊಂಡು ನಾನು ಗೆದ್ದ ಬಹುಮಾನದ ಹಣ
ಪಡೆಯಬೇಕೆಂದರೆ, ಟ್ಯಾಕ್ಸಗಳು ಕಟ್ಟಬೇಕಾಗುತ್ತದೆ ಎಂದು ಹೇಳಿ
ನಂಬಿಸಿ ನನ್ನಿಂದ 75,200/-
ರೂ ಹಾಕಿಸಿಕೊಂಡು ಮೋಸ
ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ
379 ಐಪಿಸಿ :-
ದಿನಾಂಕ 14/08/2020 ರಂದು 1900 ಗಂಟೆಗೆ ಫಿರ್ಯಾದಿ
ಅನೀಲಕುಮಾರ ತಂದೆ ಬಸವರಾಜ ರಾಠೋಡ ವಯ-31 ಉ|| ಸಹಾಯಕ ಅಭಿಯಂತರರು
ಕೆ.ಐ.ಎ.ಡಿ.ಬಿ ಬೀದರ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸಾರಾಂಶವೆನೆಂದರೆ ಬೀದರ ಕೋಳಾರ ಕೈಗಾರಿಕಾ ಪ್ರದೇಶದ 2 ನೇ
ಹಂತದಲ್ಲಿರುವ ರಸ್ತೆ ಸಂ 2/2,1/1,2/8
ರಲ್ಲಿ ಹೊಂದಿಕೊಂಡಿರುವ ಬೆಳ್ಳುರಾ ಗ್ರಾಮದ ಸರ್ವೇ ನಂ. 8,20/11,20/17,20/12
ರಲ್ಲಿ ಒಟ್ಟು 34
ವಿದ್ಯುತ ಕಂಬಗಳಿಗೆ 2017-18 ನೇ
ಸಾಲಿನಲ್ಲಿ ಎಚ್.ಟಿ ಮತ್ತು ಎಲ್.ಟಿ ಅಲುಮಿನಿಯಂ ವಿದ್ಯುತ ತಂತಿಯನ್ನು ಅಳವಡಿಸಿದ್ದು
ಇರುತ್ತದೆ. ದಿನಾಂಕ 08,09/08/2020 ರ ರಾತ್ರಿ ವೇಳೆಯಲ್ಲಿ ಕೆ.ಐ.ಎ.ಡಿ.ಬಿ ಕೈಗಾರಿಕೆ
ಪ್ರದೇಶದಲ್ಲಿನ 34
ಕಂಬಳಗಳ ವಿದ್ಯುತ ತಂತಿ ಯಾರೋ ಅಪರಿಚಿತ ಕಳ್ಳರು ಕಳುವು
ಮಾಡಿಕೊಂಡು ಹೊಗಿರುತ್ತಾರೆ ಅಂತಾ
ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment