ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-08-2020
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 62/2020, ಕಲಂ. 302 ಜೊತೆ 34 ಐಪಿಸಿ :-
ಫಿರ್ಯಾದಿ ವೈಜಿನಾಥ ತಂದೆ ರಾಮರಾವ ಮಚಕುರಿ ವಯ: 52 ವರ್ಷ, ಜಾತಿ: ಕೋಳಿ, ಸಾ: ಮುಂಗನಾಳ ಮಚಕುರಿ ರವರ ತಮ್ಮನಾದ ದೇವರಾವ ತಂದೆ ರಾಮರಾವ ಮಚಕುರಿ ಇತನು ಹೊಲದ ಬಗ್ಗೆ ಜಗಳ ಮಾಡಿದ್ದು ಅಲ್ಲದೇ ಆತನ ಹೆಂಡತಿ ಲಕ್ಷ್ಮೀಬಾಯಿ ಗಂಡ ದೇವರಾವ, ಮಕ್ಕಳಾದ ಪ್ರದೀಪ ತಂದೆ ದೇವರಾವ, ಗೋರಖ ತಂದೆ ರಾಮರಾವ ಭಾಂಜೆ, ಸಂದೀಪ ತಂದೆ ದೇವರಾವ ರವರು ಕೂಡಿ ಕೊಲೆ ಮಾಡುವುದಾಗಿ ಬೇದರಿಕೆ ಹಾಕುತ್ತಿದ್ದರು, ಈ ಸಂಬಂಧ ಫಿರ್ಯಾದಿಯು ಹೊಲ ಅಳತೆ ಮಾಡಲು ಅರ್ಜಿ ಸಲ್ಲಿಸಿದ್ದು ಈಗ 8-10 ದಿವಸಗಳ ಹಿಂದೆ ತಹಸಿಲ್ ಕಛೇರಿಯಿಂದ ಭೂಮಾಪಕರು ಬಂದಿದ್ದು ತಮ್ಮ ರಘುನಾಥ ತಂದೆ ರಾಮರಾವ ಇತನು ಮೃತಪಟ್ಟಿದ್ದರಿಂದ ಹೊಲ ಅಳತೆ ಮಾಡದೇ ಮರಳಿ ಹೋಗಿರುತ್ತಾರೆ. ನಂತರ ಇಗ 5-6 ದಿವಸಗಳ ಹಿಂದೆ ತಮ್ಮ ದೇವರಾವ ಹಾಗು ಆತನ ಹೆಂಡತಿ ಮಕ್ಕಳು ಫಿರ್ಯಾದಿಯೊಂದಿಗೆ ಹೊಲ ಸರ್ವೇ ನಂ. 90 ರಲ್ಲಿ 8 ಎಕರೆ 2 ಗುಂಟೆ ಜಮೀನು ಇದ್ದು ಅದರಲ್ಲಿ ದೇವರಾವ ಇತನಿಗೂ ಕೂಡ ಜಮೀನು ಬಂದಿದ್ದು ತನ್ನ ಹೆಸರಿಗೆ ಮಾಡಿಕೊಡುವಂತೆ ಜಗಳ ತಕರಾರು ಮಾಡಿ ಕೊಲೆ ಬೇದರಿಕೆ ಹಾಕಿರುತ್ತಾರೆ, ನಂತರ ದಿನಾಂಕ 14-08-2020 ರಂದು ತಮ್ಮನ ಹೆಂಡತಿ ಲಕ್ಷ್ಮೀಬಾಯಿ ಗಂಡ ದೇವರಾವ ಇವಳು ಔರಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿದ್ದು ಇರುತ್ತದೆ ಈ ಬಗ್ಗೆ ಫಿರ್ಯಾದಿಗೆ ಠಾಣೆಗೆ ಕರೆಯಿಸಿ ಜಗಳ ಮಾಡದಂತೆ ತಿಳಿಸಿದ್ದರಿಂದ ಫಿರ್ಯಾದಿಯು ಒಪ್ಪಿಕೊಂಡು ಬಂದಿರುತ್ತಾರೆ, ಫಿರ್ಯಾದಿಯ ಮಗನಾದ ಸಂತೊಷ ಇತನು ಹೈದ್ರಾಬಾದಿನಿಂದ 4 ದಿವಸಗಳ ಹಿಂದೆ ಮನೆಗೆ ಬಂದಿರುತ್ತಾನೆ, ನಂತರ ತಮ್ಮೂರ ದತ್ತು ತಂದೆ ಭೂಜಂಗರಾವ ಇಂದ್ರಾಕಾರ್ ಇವರು ಕರೆ ಮಾಡಿ ಸಂತೊಷ ಇತನಿಗೆ ಕರೋನಾ ಬಂದಿದ್ದರಿಂದ ಗಾಬರಿಗೊಂಡು ಬಂದಿರುತ್ತಾನೆ ಅಂತ ಹೇಳಿದ್ದರಿಂದ ಮಗನಾದ ಸಂತೊಷ ಇತನಿಗೆ ಹೊಲ ಸರ್ವೇ ನಂ. 90 ರಲ್ಲಿರುವ ತಗಡದ ಶೇಡ್ಡಿನಲ್ಲಿ ಇಟ್ಟಿದ್ದು, ಅಂದು ದಿನಾಂಕ 14-08-2020 ರಂದು 1800 ಗಂಟೆ ಸುಮಾರಿಗೆ ಫಿರ್ಯಾದಿಯವರ ಹೆಂಡತಿ ಸಕ್ಕುಬಾಯಿ ಇವಳು ಮಗನಿಗೆ ಊಟ ಕೊಟ್ಟು ಮನೆಗೆ ಬಂದಾಗ ಆರೋಪಿತರಾದ ದೇವರಾವ, ಆತನ ಹೆಂಡತಿ ಲಕ್ಷ್ಮೀಬಾಯಿ, ಮಕ್ಕಳಾದ ಸಂದೀಪ, ಪ್ರದೀಪ ರವರು ನಿನಗೆ ನಿನ್ನ ಮಗ ಸಂತೊಷನಿಗೆ ಕೊಲೆ ಮಾಡುತ್ತೇವೆ ಅಂತಾ ಹೇಳಿದ್ದು, ಅಲ್ಲದೆ ಸಂದೀಪ ತಂದೆ ದೇವರಾವ, ಪ್ರದೀಪ ತಂದೆ ದೇವರಾವ ಇವರ ಗೆಳೆಯರಾದ ತಮ್ಮೂರ ಗೋರಖ ತಂದೆ ರಾಮರಾವ ಭಾಂಜೆ, ಮುರುಳಿ ತಂದೆ ರಾಮರಾವ ಬಾಂಜೆ, ನಾಗು ತಂದೆ ರಾಮರಾವ ಭಾಂಜೆ, ರಾಮರಾವ ತಂದೆ ಪುಂಡಾಜಿ ಭಾಂಜೆ, ಖಂಡು ತಂದೆ ಕೇರಬಾ ಕಾರಬಾರಿ, ತಾನಾಜಿ ತಂದೆ ಖಂಡು ಕಾರಬಾರಿ ರವರು ಸೇರಿ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಗನಿಗೆ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿರುತ್ತಾರೆ, ಹೀಗಿರುವಾಗ ದಿನಾಂಕ 15-08-2020 ರಂದು 0600 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿರುವ ಎಮ್ಮೆ ಹೊಡೆದುಕೊಂಡು ಹೊಲಕ್ಕೆ ಬಂದು ಮಗನಿಗೆ ಬಿಸ್ಕೀಟ ಕೊಡಲು ಅಂತ ಕೊಟ್ಟಿಗೆಗೆ ಹೋದಾಗ ಮಗ ಪಲಂಗದ ಹತ್ತಿರ ತಲೆ ಉತ್ತರಕ್ಕೆ ಕಾಲು ದಕ್ಷಿಣಕ್ಕೆ ಇದ್ದು ಮೈಯಲ್ಲ ರಕ್ತವಾಗಿದ್ದನ್ನು ನೋಡಿ ಗಾಬರಿಗೊಂಡು ಭಾಗಾದಿ ದಿಗಂಬರ ತಂದೆ ವಿಠಲರಾವ ಮಚಕೂರಿ ಇತನಿಗೆ ಕರೆದು ಇಬ್ಬರು ಸಮೀಪ ಹೋಗಿ ನೋಡಲು ಮಗನ ಕುತ್ತಿಗೆ ಕೊಯ್ದ ಭಾರಿ ಗಾಯವಾಗಿದ್ದು ಅಂಗಿಗೆ ರಕ್ತವಾಗಿದ್ದು ಮೃತಪಟ್ಟಿದ್ದು ಇರುತ್ತದೆ, ಫಿರ್ಯಾದಿಯವರ ಮಗ ಸಂತೊಷ ಇತನಿಗೆ ಆರೋಪಿತರಾದ ದೇವರಾವ, ಆತನ ಹೆಂಡತಿ ಮಕ್ಕಳು ಮತ್ತು ತಮ್ಮೂರ ಗೋರಖ ಭಾಂಜೆ, ಮುರಳಿ ಭಾಂಜೆ, ನಾಗೂ ಭಾಂಜೆ, ರಾಮರಾವ ಭಾಂಜೆ, ಖಂಡು ಕಾರಬಾರಿ, ತಾನಾಜಿ ಕಾರಬಾರಿ ರವರು ಕೂಡಿ ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 306, 504 ಜೊತೆ 34 ಐಪಿಸಿ :-
ದಿನಾಂಕ 14-08-2020 ರಂದು 2100 ಗಂಟೆಗೆ ಫಿರ್ಯಾದಿ ಶಂಕರ ತಂದೆ ಲಾಲಪ್ಪಾ ಸಾ: ಚಿಕ್ಲಿ(ಜೆ), ತಾ: ಔರಾದ(ಬಿ) ರವರ ಮಗನಾದ ಭೀಮರಾವ ತಂದೆ ಶಂಕರ ಇತನು ನೇಣು ಹಾಕಿಕೊಂಡಿದ್ದು ಇದಕ್ಕೆ ಕಾರಣ ಮಗನ ಹೆಂಡತಿಯ ಸಹೋದರರಾದ ಚಂದ್ರಕಾಂತ ತಂದೆ ವೈಜಿನಾಥ ಮತ್ತು ನೀಲಕಂಠ ತಂದೆ ವೈಜಿನಾಥ ಇವರಿಬ್ಬರು ಭೀಮರಾವ ಇತನಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಭೀಮರಾವ ಇತನು ಬೆಂಗಳೂರಿನಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದನು, ಅವನಿಗೆ 25 ದಿನಗಳ ಹಿಂದೆ ಊರಿಗೆ ಬಾ ಎಂದು ಹೆದರಿಸಿರುತ್ತಾರೆ, ಭೀಮರಾವ ಇತನ ಹೆಂಡತಿ ತನ್ನ ತವರ ಮನೆಯಲ್ಲಿ ವಾಸವಿದ್ದು, ಆದರೆ ಭೀಮರಾವ ಇತನು ಆತ್ಮಹತ್ಯೆ ಮಾಡಿಕೊಂಡಿರುವ ದಿವಸ ಹೆಂಡತಿ ಚಿಕ್ಲಿ ಗ್ರಾಮದಲ್ಲಿ ಅಂಗನವಾಡಿಗೆ ಬಂದ್ದಿದ್ದು, ಭೀಮರಾವ ಇತನು ತನ್ನ ಹೆಂಡತಿ ಮತ್ತು ಮಗಳನ್ನು ನೋಡಲು ಅಂಗನವಾಡಿಗೆ ಹೋದಾಗ ಹೆಂಡತಿ ಮಗಳನ್ನು ಭೇಟಿಯಾಗಲು ಬೀಡಲಿಲ್ಲಾ ಮತ್ತು ನನ್ನ ನಿನ್ನ ನಡುವೆ ಯಾವುದೆ ಸಂಬಂಧವಿಲ್ಲಾ, ಇನ್ನೊಂದು ಸಾರಿ ಭೇಟಿಯಾಗಲು ಯತನ್ನಿಸಿದರೆ ನನ್ನ ಅಣ್ಣಂದಿರು ಸುಮ್ಮನೆ ಬೀಡುವುದಿಲ್ಲ ಎಂದು ಹೆಂದರಿಸಿದಳು, ಈ ವಿಚಾರಗಳಿಂದ ಮಾನಸಿಕವಾಗಿ ತೊಂದರೆಗೊಂಡು ಭೀಮರಾವ ಇತನು ಆತ್ಮಹತ್ಯೆಗೆ ಶರಣಾಗಿದ್ದಾನೆ, ತನ್ನ ಮಗನ ಸಾವಿಗೆ ಅವನ ಹೆಂಡತಿ ಮತ್ತು ಅವಳ ಅಣ್ಣಂದಿರು ಕಾರಣ ಎಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 105/2020, ಕಲಂ. 3 & 7 ಇ.ಸಿ ಕಾಯ್ದೆ :-
ದಿನಾಂಕ 15-08-2020 ರಂದು ಬಸವಕಲ್ಯಾಣ ನಗರದ ಅಡತ ಬಜಾರದಲ್ಲಿ ಚೀರಡೆ ವೈನ್ ಶಾಪ ಹಿಂದುಗಡೆ ಲಾರಿ ನಂ. ಕೆ.ಎ-28/ಸಿ-7679 ಮತ್ತು ಲಾರಿ ನಂ. ಎಂ.ಹೆಚ್-04/ಇ.ಎಲ್-7785 ನೇದರಲ್ಲಿ ಅನಧೀಕೃತವಾಗಿ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ ಅಕ್ಕಿ ಲೋಡ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದಾರೆಂದು ಫಿರ್ಯಾದಿ ರಾಮರತನ ತಂದೆ ಆರ್ಯಭಾನ ದೇಗಲೆ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿಯವರು ಮತ್ತು ಆಹಾರ ನಿರೀಕ್ಷಕರಾದ ರಾಜೇಂದ್ರ ಕುಮಾರ ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ಪೊಲೀಸರ ಸಹಾಯ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಎಲ್ಲರೂ ಬಸವಕಲ್ಯಾಣ ನಗರದ ಗಾಂಧಿ ಚೌಕದಿಂದ ಹೊರಟು ಬಸವಕಲ್ಯಾಣ ನಗರದ ಚಿರಡೆ ವೈನ್ ಶಾಪ ಹಿಂದುಗಡೆ ಹೋಗಿ ನೋಡಲು ಬಾತ್ಮಿಯಂತೆ 2 ಲಾರಿಗಳು ನಿಂತಿರುವುದನ್ನು ನೋಡಿ ಸದರಿ 2 ಲಾರಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿ ನೋಡಲು ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.ಎ-28/ಸಿ-7679 ನೇದು ಇದ್ದು ಲಾರಿ ಹತ್ತಿರ ಇದ್ದ ಒಬ್ಬ ವ್ಯಕ್ತಿ ಓಡಿ ಹೋಗಿದ್ದು ಸದರಿ ಲಾರಿಯ ಕ್ಯಾಬಿನದಲ್ಲಿದ್ದ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಎಂ.ಡಿ ಅದನಾನ ತಂದೆ ಆಸೀಫ್ ಹಾಜಿ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಖಿಲ್ಲಾಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದ್ದು, ನಂತರ ಆತನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿಲು ಲಾರಿಯಲ್ಲಿ ಅಕ್ಕಿ ಲೋಡ ಇದೆ ಎಂದು ತಿಳಿಸಿರುತ್ತಾನೆ, ತದನಂತರ ಅವನಿಗೆ ಸದರಿ ಅಕ್ಕಿ ಲೋಡಿಗೆ ಸಂಬಂಧಿಸಿದ ಕಾಗದ ಪತ್ರಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ನನ್ನ ಹತ್ತಿರ ಯಾವುದೇ ರೀತಿಯ ಕಾಗದ ಪತ್ರಗಳು ಇರುವುದಿಲ್ಲಾ ಎಂದು ತಿಳಿಸಿರುತ್ತಾನೆ, ಓಡಿ ಹೊದ ವ್ಯಕ್ತಿ ಬಗ್ಗೆ ವಿಚಾರಿಸಿದಾಗ ಬಸವರಾಜ ತಂದೆ ವೀರಪ್ಪಾ ಹಳಕೆ ವಯ: 42 ವರ್ಷ, ಜಾತಿ: ಲಿಂಗಾಯತ ರೆಡ್ಡಿ, ಸಾ: ಬೆಂಕಿಪಳ್ಳಿ, ತಾ: ಚಿಂಚೋಳಿ ಎಂದು ಹಾಗೂ ಸದರಿ ಅಕ್ಕಿ ಲೋಡ್ ನಮಗೆ ಸಂಬಂಧಿಸಿದ್ದು ಇರುತ್ತದೆ ಎಂದು ತಿಳಿಸಿದಾಗ ಪಂಚರೊಂದಿಗೆ ಲಾರಿಯಲ್ಲಿ ನೋಡಲು ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ 50 ಕೆ.ಜಿ ತೂಕದ 340 ಅಕ್ಕಿ ತುಂಬಿದ ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಗೆ 27/- ರೂ ಯಂತೆ ಒಟ್ಟು 4,59,000/- ರೂ ಬೆಲೆಯ ಅಕ್ಕಿ ಮತ್ತು ಲಾರಿ ನಂ. ಕೆ.ಎ-28/ಸಿ-7679 ನೇದ್ದರ ಅ.ಕಿ 10,00,000/- ರೂ ಹೀಗೆ ಒಟ್ಟು 14,59,000/- ರೂ ಬೆಲೆಯ ಸ್ವತ್ತನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಮತ್ತು ಸದರಿ ಲಾರಿ ಹಿಂದುಗಡೆ ನಿಲ್ಲಿಸಿದ ಲಾರಿಯನ್ನು ಪರಿಶೀಲಿಸಿ ನೋಡಲು ಅಶೋಕ ಲೇಲ್ಯಾಂಡ್ ಲಾರಿ ನಂ. ಎಂ.ಹೆಚ್-04/ಇ.ಎಲ್-7785 ನೇದ್ದು ಇದ್ದು, ಸದರಿ ಲಾರಿಯ ಕ್ಯಾಬಿನದಲ್ಲಿದ್ದ ಲಾರಿ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರತ್ನದೀಪ ತಂದೆ ಸೂರ್ಯಕಾಂತ ಮೋರೆ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಗೋರಚಿಂಚೊಳಿ, ತಾ: ಭಾಲ್ಕಿ ಎಂದು ತಿಳಿಸಿದಾಗ ಆತನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿಸಲು ಲಾರಿಯಲ್ಲಿ ಅಕ್ಕಿ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಸದರಿ ಅಕ್ಕಿ ಲೋಡಿಗೆ ಸಂಬಂಧಿಸಿದ ಕಾಗದ ಪತ್ರಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ನನ್ನ ಹತ್ತಿರ ಯಾವುದೇ ರೀತಿಯ ಕಾಗದ ಪತ್ರಗಳು ಇರುವುದಿಲ್ಲಾ, ಸದರಿ ಅಕ್ಕಿ ಲೋಡ ಅಂಬಾದಾಸ ತಂದೆ ಚಂದ್ರಕಾಂತ ಮಕಾಜಿ ಸಾ: ನಾರಾಯಣಪೂರ ರೋಡ ಬಸವಕಲ್ಯಾಣ ಇತನಿಗೆ ಸಂಬಂಧಪಟ್ಟಿದ್ದು ಬಸವಕಲ್ಯಾಣದಿಂದ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದಾಗ ಪಂಚರೊಂದಿಗೆ ಲಾರಿಯಲ್ಲಿ ನೋಡಲು ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ 50 ಕೆ.ಜಿ ತೂಕದ 460 ಅಕ್ಕಿ ತುಂಬಿದ ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಗೆ 27/- ರೂ ಯಂತೆ ಒಟ್ಟು 6,21,000/- ರೂ. ಬೆಲೆಯ ಅಕ್ಕಿ ಮತ್ತು ಲಾರಿ ನಂ. ಎಂ.ಹೆಚ್-04/ಇ.ಎಲ್-7785 ನೇದ್ದರ ಅ.ಕಿ 10,00,000/- ರೂ. ಹೀಗೆ ಒಟ್ಟು 16,21,000/- ರೂ. ಬೆಲೆಯ ಸ್ವತ್ತನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ದೂರಿನ ಮೇರೆಗೆ ಆರೋಪಿತರಾದ ಎಂ.ಡಿ ಅದನಾನ, ರತ್ನದೀಪ, ಬಸವರಾಜ ತಂದೆ ವೀರಪ್ಪಾ ಮತ್ತು ಅಂಬಾದಾಸ ತಂದೆ ಚಂದ್ರಕಾಂತ ಇವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment