ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-08-2020
ಮುಡಬಿ ಠಾಣೆ ಯು.ಡಿ.ಆರ್ ಸಂ. 06/2020, ಕಲಂ. 174 ಸಿ.ಆರ್.ಪಿ.ಸಿ :-
ಬಸವರಾಜ ತಂದೆ ಮಹಾದೇವ ಗಡವಂತಿ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಯರಬಾಗ ರವರ ತಂದೆಯಾದ ಮಹಾದೇವ ತಂದೆ ಬಸಪ್ಪ ಗಡವಂತಿ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಯರಭಾಗ ರವರು ವ್ಯವಸಾಯಕ್ಕಾಗಿ ಬೆಳೆಸಾಲವಾಗಿ ಡಿಸಿಸಿ ಬ್ಯಾಂಕ ರಾಜೇಶ್ವರನಿಂದ 2 ಲಕ್ಷ ಮತ್ತು ಕೆಜಿಬಿ ಬ್ಯಾಂಕ ರಾಜೇಶ್ವರನಿಂದ 3 ಲಕ್ಷ, ಎಸ್.ಬಿ.ಐ ಬ್ಯಾಂಕ ರಾಜೇಶ್ವರದಿಂದ 2 ಲಕ್ಷ ಹೀಗೆ ಸುಮಾರು 7 ಲಕ್ಷ ಬ್ಯಾಂಕ ಸಾಲ ಜೊತೆಗೆ ಕೈಸಾಲವು ಮಾಡಿರುತ್ತಾರೆ, ಹೀಗಿರುವಾಗ ದಿನಾಂಕ 19-08-2020 ರಂದು ಫಿರ್ಯಾದಿಯ ತಂದೆಯವರು ಮಹಾದೇವ ರವರು ಸಾಲದ ಬಾಧೆ ತಾಳಲಾರದೇ ಸಾಲ ತೀರಿಸಲಾಗದೆ ಮನನೊಂದು ಹೊಲದಲ್ಲಿನ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹೊಲದಲ್ಲಿನ ಕೊಟ್ಟಿಗೆ ಒಳಗೆ ಹಗ್ಗದಿಂದ ಕುತ್ತಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 19-08-2020 ರಂದು ಫಿರ್ಯಾದಿ ಸಚೀನ ತಂದೆ ಅಶೋಕ ತಾಂಬಳೆ ವಯ: 33 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸಸ್ತಾಪುರ, ತಾ: ಬಸವಕಲ್ಯಾಣ ರವರ ದ್ವೀಚಕ್ರ ವಾಹನದ ಮೇಲೆ ಸಸ್ತಾಪುರ ಗ್ರಾಮದಿಂದ ಅತಲಾಪುರ ಗ್ರಾಮಕ್ಕೆ ಬರುವಾಗ ಅತಲಾಪುರ ಗ್ರಾಮ ಶಿವಾರದಲ್ಲಿರುವ ಮಹಾದೇವ ರೆಡ್ಡಿ ಚಾಮಾಲೆ ಸಸ್ತಾಪುರ ರವರ ಹೊಲ ಸರ್ವೆ ನಂ. 45 ನೇದರ ಹತ್ತಿರ ಇರುವ ನೀರಿನ ಹಳ್ಳದ ಬ್ರೀಡ್ಜ್ ಮೇಲೆ ಬಂದಾಗ ಅಲ್ಲಿ ಸಾರ್ವಜನಿಕರು ನೇರೆದಿದ್ದು ಫಿರ್ಯಾದಿಯು ಸಹ ಏನಾಗಿದೆ ಅಂತಾ ಅಲ್ಲಿ ಹೋಗಿ ನೋಡಲಾಗಿ ಬ್ರೀಡ್ಜ್ನ ಕೆಳಗೆ ಒಂದು ಬದಿಯಲ್ಲಿ ನೀರಿನಲ್ಲಿ ಒಬ್ಬ ಅಪರಿಚಿತ ಪುರುಷ ವ್ಯಕ್ತಿ ಅಂದಾಜು 35 ರಿಂದ 40 ವರ್ಷ ಈತನ ಮೃತ ದೇಹ ತೇಲಾಡುತ್ತಿರುವುದು ಕಂಡು ಬಂದಿದ್ದು ಆಗ ಫಿರ್ಯಾದಿಯು ಅಲ್ಲಿ ನೇರದಿದ್ದ ಜನರಿಗೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿಚಾರಿಸಲಾಗಿ ಸದರಿ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ, ಸದರಿ ಸ್ಥಳದಲ್ಲಿ ಮೃತ ದೇಹದಿಂದ ವಾಸನೆ ಬರುತ್ತಿದ್ದು ಸದರಿ ವ್ಯಕ್ತಿ ಎರಡು ದಿವಸಗಳ ಹಿಂದೆ ಮೃತಪಟ್ಟು ಕೊಚ್ಚಿಕೊಂಡು ಬಂದು ಬೀಡ್ಜ್ ಬದಿ ಬಂದಿರುತ್ತದೆ, ಸದರಿ ಮೃತ ದೇಹ ಡಿ ಕಾಂಪುಜ್ ಆಗಿ ವಾಸನೇ ಬರುತ್ತಿದ್ದು ಸದರಿಯವನ ಕುಟುಂಬದವರ ಬಗ್ಗೆ ವಿಚಾರಿಸಲು ಯಾರು ಸದ್ಯ ಕಂಡು ಬಂದಿರುವುದಿಲ್ಲ, ಸದರಿ ವ್ಯಕ್ತಿ ಹೇಗೆ ಮೃತಪಟ್ಟಿದ್ದು ಮತ್ತು ಆತನ ಮೃತದೇಹ ಹೇಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದಿರುತ್ತದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ, ಸದರಿಯವನ ಮರಣದಲ್ಲಿ ಸಂಶಯ ಕಂಡು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ಸಂ. 16/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 19-08-2020 ರಂದು ಫಿರ್ಯಾದಿ ಚೌದ್ರಿ ನಜ್ಮಾಬೀ ಗಂಡ ಚೌದ್ರಿ ಶಾಧುಲ ಸಾ: ನೈಗಾಂವ, ಜಿಲ್ಲಾ: ಲಾತೂರ ರವರ ಗಂಡನಾದ ಚೌದ್ರಿ ಶಾಧುಲ ತಂದೆ ನೂರ ಅಹ್ಮದ ಚೌದ್ರಿ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ನೈಗಾಂವ, ತಾ: ಚಾಕೂರ, ಜಿಲ್ಲಾ: ಲಾತೂರ ರವರು ಕೆಲಸದ ಮೇಲಿದ್ದಾಗ ಎದೆ ಬೆನೆಯಾಗುತ್ತಿದದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಘಾತದಿಂದ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 57/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 19-08-2020 ರಂದು ಚಳಕಾಪೂರ ಗ್ರಾಮದಲ್ಲಿನ ಅಂಬೇಡ್ಕರ ವೃತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಹುಲೇಪ್ಪಾ ಪಿ.ಎಸ್.ಐ ಖಟಕಚಿಂಚೋಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಳಕಾಪೂರ ಗ್ರಾಮಕ್ಕೆ ಹೋಗಿ ಅಲ್ಲಿ ಅಂಬೇಡ್ಕರ ಚೌಕ ಹತ್ತಿರ ಮನೆಯ ಮರೆಯಾಗಿ ನಿಂತು ನೊಡಲು ಅಂಬೇಡ್ಕರ ಚೌಕ್ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಆರೋಪಿ ಬಲಭೀಮ ತಂದೆ ಕಲ್ಲಪ್ಪಾ ಮಾಸುಲ್ದಾರ ವಯ: 55 ವರ್ಷ, ಜಾತಿ: ಕಬ್ಬಲಿಗ, ಸಾ: ಚಳಕಾಪೂರ ಇತನು ಒಂದು ರೂಪಾಯಿಗೆ 80/- ರೂ. ಕೊಡುತ್ತೆವೆ ಮಟಕಾ ಇದು ನಶಿಬಿನ ಆಟ ಇರುತ್ತದೆ ಅಂತಾ ಜೋರಾಗಿ ಚೀರಿ ಮಟಕಾ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅವನ ಅಂಗ ಜಡ್ತಿ ಮಾಡಿ ನೋಡಲು ಸದರಿಯವನ ಶರ್ಟಿನ ಜೆಬಿನಲ್ಲಿ 1 ಮಟಕಾ ನಂಬರ ವುಳ್ಳ ಚಿಟಿ ಮತ್ತು 870/- ರೂಪಾಯಿ ನಗದು ಹಣ, 1 ಬಾಲ್ ಪೇನ್ ಹಾಗೂ 1 ಒಂದು ಸ್ಯಾಮಸಂಗ್ ಕಂಪನಿಯ ಮೋಬೈಲ್ ಅ.ಕಿ 3000/- ರೂ. ನೇದ್ದವುಗಳನ್ನು ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment