ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 21-08-2020
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
49/2020 ಕಲಂ 87 ಕೆ.ಪಿ.
ಕಾಯ್ದೆ
:-
ದಿನಾಂಕ 20-08-2020 1700 ಗಂಟೆಗೆ ಖಚಿತ ಭಾತ್ಮಿ ಮೇರೆಗೆ ಕಪಲಾಪೂರ ಗ್ರಾಮದ ಮೋಹನ ವಡ್ಡರ ರವರ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ-ಬಾಹರ ಇಸ್ಪಟ್ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಕಪಲಾಪೂರ (ಎ) ಗ್ರಾಮದ ಮೋಹನ ವಡ್ಡರ ರವರ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ 1815 ಗಂಟಗೆ ದಾಳಿ ಮಾಡಿ 1) ಭರತ ತಂದೆ ಚನ್ನಪ್ಪಾ ರಾಮಲೆ 2) ರಾಜಕುಮಾರ ತಂದೆ ಕಲ್ಲಪ್ಪಾ ಕ್ರೀಶ್ಚಿಯನ್ 3) ಮೋಹನ ತಂದೆ ವೆಂಕಟ್ ವಡ್ಡರ್ ಹಾಗೂ 4) ಅರವಿಂದ ತಂದೆ ಶಿರೋಮಣಿ ನೌಬಾದಕರ ಕ್ರೀಶ್ಚಿಯನ್ ಎಲ್ಲರೂ ಸಾ|| ಕಪಲಾಪೂರ (ಎ) ಗ್ರಾಮ ರವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 5870/-ರೂ. ಹಾಗೂ 52 ಇಸ್ಪೇಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್
ಠಾಣೆ ಅಪರಾಧ ಸಂಖ್ಯೆ 67/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 20-08-2020 ರಂದು 1430 ಗಂಟೆಗೆ ಪಿಎಸ್.ಐ. ರವರು ಠಾಣೆಯಲ್ಲಿದ್ದಾಗ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಲೊಕೇಶ ಸಿಪಿಸಿ 1152 ಇವರು ಮಾಹಿತಿ ತಿಳಿಸಿದೇನೆಂದರೆ ರಾಜೇಶ್ವರ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೇಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟಿ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹನುಮಾನ ಮಂದಿರದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ 7 ಜನರು ಹಣ ಕಟ್ಟಿ ಪಣ ತೊಟ್ಟಿ ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 1] ಜೈಭೀಮ ತಂದೆ ಕಾಶಿನಾಥ ಪೊಸ್ತರ ವಯ 42 ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 570 ರೂಪಾಯಿ ಇದ್ದವು. 2] ಕಾಂತಪ್ಪಾ ತಂದೆ ಮಲಯ್ಯಾ ಕಲಾಲ ವಯ 40 ವರ್ಷ ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 610 ರೂಪಾಯಿ ಇದ್ದವು. 3] ರಾಜಣ್ಣಾ ತಂದೆ ನಾಗಣ್ಣಾ ಕನಕ ವಯ 54 ವರ್ಷ ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 310 ರೂಪಾಯಿ ಇದ್ದವು. 4] ಮಲ್ಲಿಕಾರ್ಜು ನ ತಂದೆ ಭೀಮರಾವ ಪಾಟೀಲ ವಯ 53 ವರ್ಷ ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 520 ರೂಪಾಯಿ ಇದ್ದವು 5] ವಿಜಯಕುಮಾರ ತಂದೆ ಮಾಣಿಕರಾವ ದೂದನಕರ ವಯ 53 ವರ್ಷ ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 610 ರೂಪಾಯಿ ಇದ್ದವು. 6] ಕಿರಣ ತಂದೆ ಕೇಶವರಾವ ಮಹೇಂದ್ರಕರ ವಯ 42 ವರ್ಷ ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 700 ರೂಪಾಯಿ ಇದ್ದವು. 7] ವಿಠಲ ತಂದೆ ಚಂದ್ರಕಾಂತ ಮಹೇಂದ್ರಕರ ವಯ 65 ವರ್ಷ ಇತನ ಕೈಯಲ್ಲಿ 3 ಇಸ್ಪೀಟ ಎಲೆಗಳು ಇವರ ಮುಂದೆ 710 ರೂಪಾಯಿ ಇದ್ದವು. ಹಾಗೂ ಎಲ್ಲರ ಮಧ್ಯೆ 31 ಇಸ್ಪೀಟ ಎಲೆಗಳು ಮತ್ತು 12,170 ರೂಪಾಯಿ ಇದ್ದವು, ಹೀಗೆ ಒಟ್ಟು 52 ಇಸ್ಟೀಟ ಎಲೆಗಳು ಮತ್ತು 16,200/- ರೂಪಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕ ಚಿಂಚೊಳ್ಳಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ 58/2020 ಕಲಂ
457, 380 ಐಪಿಸಿ :-
ದಿನಾಂಕ-20/08/2020
ರಂದು ಬೆಳಿಗ್ಗೆ 06:30 ಗಂಟೆಗೆ ಫೀರ್ಯಾದಿ ಶ್ರೀ
ಮಾಣಿಕಪ್ಪಾ ತಂದೆ ರಾಮಶೆಟ್ಟೆಪ್ಪಾ ಪರಶೆಣೆ ಸಾ- ದಾಡಗಿ ರವರು ಠಾಣೆಗ ಹಾಜರಾಗಿ ಒಂದು ಲಿಖಿತ
ದೂರು ಸಲ್ಲಿಸಿದರ ಸಾರಾಂಶವೆನಂದರೆ ಫಿರ್ಯಾದಿಯು KSRTC
ಯಲ್ಲಿ
ಕಂಡೆಕ್ಟರ್ ಕೆಲಸದಿಂದ ನಿವೃತ್ತಿಯನ್ನು ಹೊಂದಿದ್ದು ಸದ್ಯ ಒಕ್ಕಲುತನ ಕೆಲಸ ಮಾಡಿಕೊಂಡು
ಗ್ರಾಮದಲ್ಲಿ ವಾಸವಿದ್ದು ಇಬ್ಬರು ಗಂಡು ಮಕ್ಕಳು,
ಒಬ್ಬಳು
ಹೆಣ್ಣು ಮಗಳಿದ್ದು ಎಲ್ಲರಿಗು ಮದುವೆ ಮಾಡಿಕೊಟ್ಟಿರುತ್ತಾರೆ ಗಂಡು ಮಕ್ಕಳ ಮದುವೆಯಲ್ಲಿ
ಉಡುಗರೆಯಾಗಿ ನೀಡಿದ್ದ ಬಂಗಾರದ ಆಭರಣಗಳನ್ನು ಮನೆಯಲ್ಲಿ ಜೊಪಾನವಾಗಿ ಮನೆಯ ಅಲಮಾರಿಯಲ್ಲಿ
ಇಟ್ಟಿರುತ್ತೆನೆ ಹಾಗೂ ನನ್ನ ಹೀರಿಯ ಮಗನಾದ ಶಿವುಕುಮಾರ ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ನಮ
ಜೊತೆ ಒಂದೆ ಮನೆಯಲ್ಲಿ ವಾಸವಿದ್ದು ಮತ್ತು ನನ್ನ ಎರಡನೆ ಮಗ ಸಂತೋಷ ಇತನು ತನ್ನ ಹೆಂಡತಿ
ಮಕ್ಕಳೊಂದಿಗೆ ಬೀದರನ AMC ಕಂಪನಿಯಲ್ಲಿ
ಕೆಲಸ ಮಾಡಿಕೊಂಡು ಇರುತ್ತಾನೆ. ಹೀಗಿರುವಾಗ ದಿನಾಂಕ-19/08/2020
ರಂದು
ದಿನ ಪುರ್ತಿ ಜಿಡಿ,ಜಿಡಿ ಮಳೆ ಬರುತ್ತಿರುವ
ಕಾರಣ ನಾವು ಯಾರು ಹೊಲಕ್ಕೆ ಹೊಗದೆ ಎಲ್ಲರೂ ಮನೆಯಲ್ಲಿ ಇರುತ್ತವೆ ರಾತ್ರಿ
ಸಮಯ 9 PM ಗಂಟೆಯ ಸುಮಾರಿಗೆ ನಮ್ಮ
ಮನೆಯ ಎಲ್ಲರೂ ಕೂಡಿಕೊಂಡು ರಾತ್ರಿ ಊಟ ಮಾಡಿದ ನಂತರ ಹೆಂಡತಿ,
ಹಿರಿಯ
ಮಗ, ಸೊಸೆ ಹಾಗೂ ಮೊಮ್ಮಕ್ಕಳೆಲ್ಲರೂ
ಮನೆಯ ಮೇಲಿನ ಮಹಡಿಯಲ್ಲಿ ಮಲಗಿಕೊಳ್ಳಲು ಹೊಗಿರುತ್ತಾರೆ ಫಿರ್ಯಾದಿಗೆ ಬಿ.ಪಿ.,
ಸೂಗರ ಕಾಯಿಲೆಗಳು ಇರುವ
ಸಲುವಾಗಿ ಪದೇ - ಪದೇ ಮೂತ್ರ ವಿಸರ್ಜನೆ ಕುರಿತು ಹೊರಗೆ ಹೊಗಲು ಅನೂಕುಲ ಆಗುವ ಸಲುವಾಗಿ ನಾನು
ಕೆಳಗಿನ ಮನೆಯ ಪಡಸಾಲೆಯಲ್ಲಿ ಮಂಚದ ಮೇಲೆ ಮಲಗಿಕೊಂಡಿದ್ದು ನಂತರ ರಾತ್ರಿ ಸಮಯ 11:30
PM ಗಂಟೆಗೆ ನಾನು ಮನೆಯ ಹೊರಗೆ ಮೂತ್ರ ವಿಸರ್ಜನೆ ಮಾಡಿ ಮರಳಿ ಬಂದು ಮನೆಯ
ಮುಖ್ಯ ದ್ವಾರದ ಬಾಗಿಲಿನ ಕೊಂಡಿಯನ್ನು ಹಾಕದೇ ಮತ್ತೆ ಬಂದು ಮಂಚದ ಮೇಲೆ ಮಲಗಿಕೊಂಡಿರುತ್ತೆನೆ
ನಂತರ ದಿನಾಂಕ-20/08/2020 ರಂದು
ರಾತ್ರಿ ಸಮಯ 1:45 AM ಗಂಟೆಗೆ
ಮತ್ತೆ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ಹೊರ ಬಾಗಿಲಿನತ್ತಾ ನೋಡಿದಾಗ ಬಾಗಿಲು ಸಂಪೂರ್ಣವಾಗಿ
ತೆರೆದಿದ್ದು ಹಾಗೇ ನಮ್ಮ ದೇವರ ಕೊಣೆಯ ಕೊಂಡಿ ಹಾಕಿದ ಬಾಗಿಲು ಕೂಡಾ ತೆರೆದಿದ್ದು ನಾನು ಕೂಡಲೆ
ದೇವರ ಕೊಣೆಯ ಒಳಗೆ ಬಂದು ನೊಡಲಾಗಿ ಕೊಂಡಿ ಹಾಕಿದ ಅಲಮಾರಿ ಸಂಪೂರ್ಣವಾಗಿ ತೆರೆದಿದ್ದು
ಅಲಮಾರಿಯಲ್ಲಿ ಇಟ್ಟಿರುವ ಸೀರೆ ಹಾಗೂ ಇತರೆ ಎಲ್ಲಾ ಬಟ್ಟೆಗಳು ಚೆಲ್ಲಾ,
ಪಿಲ್ಲಿಯಾಗಿ
ಕೆಳಗಡೆ ಬಿದಿದ್ದು ಇರುತ್ತದೆ, 1) ಒಂದು
ಬಂಗಾರದ ಕೊರಳಿನ ಚೈನ್ ಸರ -45 ಗ್ರಾಮ
ಇದರ ಅಂದಾಜು ಕಿಮ್ಮತ್ತು -2,02,500/- ರೂಪಾಯಿ
2) ಒಂದು ಬಂಗಾರದ ಗಂಟನ -35
ಗ್ರಾಮ
ಇದರ ಅಂದಾಜು ಕಿಮ್ಮತ್ತು -1,57,500/- ರೂಪಾಯಿ,
3) ಒಂದು ಬಂಗಾರದ ಲಾಕೀಟ್ -15 ಗ್ರಾಮ
ಅದರ ಅಂದಾಜು ಕಿಮ್ಮತ್ತು -67,500/- ರೂಪಾಯಿ
4) ಕಿವಿಯಲ್ಲಿನ ಬಂಗಾರದ ಹೂ -05
ಗ್ರಾಮ
ಅದರ ಅಂದಾಜು ಕಿಮ್ಮತ್ತು -22,500/- ರೂಪಾಯಿ
5) ಒಂದು ಬಂಗಾರದ ನಾನ್ -25
ಗ್ರಾಮ
ಅದರ ಅಂದಾಜು ಕಿಮ್ಮತ್ತು – 1,12,500/- ರೂಪಾಯಿ
ಹೀಗೆ ಒಟ್ಟು 125 ಗ್ರಾಮ ಚಿನ್ನದ ಒಡೆವೆಗಳು
ಇವುಗಳ ಒಟ್ಟು ಬೆಲೆ – 5,62,500/- ರೂಪಾಯಿಗಳು
ನೇದ್ದವುಗಳನ್ನು ಯಾರೋ ಅಪರಿಚಿತ ಕಳ್ಳರು ಅಲಮಾರಿಯಲ್ಲಿ ಸ್ಟೀಲ್ ಬಾಕ್ಸ್ ತೆರೆದು ಈ ಮೇಲಿನ
ಎಲ್ಲಾ ಬಂಗಾರದ ಒಡೆವೆಗಳನ್ನು ಕಳ್ಳತನ ಮಾಡಿಕೊಂಡು ಸ್ಟೀಲ್ ಬಾಕ್ಸ್ ಅಲ್ಲೆ ಬಿಸಾಡಿ
ಹೊಗಿರುತ್ತಾರೆ ಈ ಕಳ್ಳತನವನ್ನು ದಿನಾಂಕ-19/08/2020 ರಂದು
ರಾತ್ರಿ 11:30 PM ಗಂಟೆಯಿಂದ
ದಿನಾಂಕ-20/08/2020 ರಂದು
ರಾತ್ರಿ 1:45 AM ಗಂಟೆಯ
ಅವಧಿಯಲ್ಲಿ ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment