Police Bhavan Kalaburagi

Police Bhavan Kalaburagi

Thursday, September 10, 2020

BIDAR DISTRICT DAILY CRIME UPDATE 10-09-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-09-2020

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 16/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಕೋಮಲಬಾಯಿ ಗಂಡ ಭಾಸ್ಕರ ಹಕ್ಕೆ ವಯ: 55 ವರ್ಷ, ಜಾತಿ: ಬಂಡಗರ, ಸಾ: ಘೋಟಾಳ ರವರು ಹೊಲದ ಸಾಗುವಳಿ ಮಾಡುವ ಸಲುವಾಗಿ ಚಂಡಕಾಪುರದ ಸಿಂಡೆಕೇಟ ಬ್ಯಾಂಕಿನಿಂದ 50,000/- ರೂ. ಸಾಲ ಹಾಗೂ ಡಿಸಿಸಿ ಬ್ಯಾಂಕಿನಲ್ಲಿ 50,000/- ರೂ. ಸಾ ತೆಗೆದುಕೊಂಡಿದ್ದು ಇರುತ್ತದೆ, ಚಂಡಕಾಪೂರ ಸಿಂಡಿಕೇಟ ಬ್ಯಾಂಕನ 50,000/- ರೂ. ಸಾಲದ ಒಟ್ಟು ಹಣ 2 ಲಕ್ಷ ಆಗಿದ್ದು, ಅದನ್ನೇ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 09-09-2020 ರಂದು ತಾನು ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿ ಹೊಲದಲ್ಲಿರುವ ಹುಣಸೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 137/2020, ಕಲಂ. 20(ಬಿ), 2(), ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ 09-09-2020 ರಂದು ಇರಾನಿ ಕಾಲೋನಿಯ ಮಸೀದಿ ಹತ್ತಿರ ಒಬ್ಬ ವ್ಯಕ್ತಿ ಕ್ಯಾರಿಬ್ಯಾಗನಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಬಗ್ಗೆ ಮಂಜನಗೌಡ ಪಾಟೀಲ್ ಪಿ.ಎಸ್. ಗಾಂಧಿಗಂಜ ಪೊಲೀಸ ಠಾಣೆ ಬೀದರ ರವರಿಗೆ ಖಚಿ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಇರಾನಿ ಕಾಲೋನಿಯ ಮಸೀದಿ ಹಿಂದುಗಡೆ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸಂಜುಕುಮಾರ ತಂದೆ ವಿಠಲ ಪಾಟೀಲ್ ವಯ: 40 ವರ್ಷ, ಸಾ: ಏಸಗಿ, ತಾ: ನಾರಾಯಣಖೇಡ ಇತನು ಒಂದು ಕ್ಯಾರಿಬ್ಯಾಗಿನಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ದೃಢಪಡಿಸಿಕೊಂಡು ಆತನಿಗೆ ಹಿಡಿದು ವಿಚಾರಿಸಲು ಸದರಿ ಗಾಂಜಾವನ್ನು ಇಲ್ಲಿ ತಂದು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ತಹಸಿಲ್ದಾರ ಬೀದರ ರವರಿಗೆ ಕರೆಯಿಸಿ ಅವರ ಮತ್ತು ಪಂಚರ ಸಮಕಮ್ಷಮ ಸದರಿ ಆರೋಪಿತನು ಮಾರಾಟ ಮಾಡುತ್ತಿದ್ದ ಗಾಂಜಾವನ್ನು ಜಪ್ತಿ ಮಾಡಿಕೊಂಡು, ಅದನ್ನು ತೂಕ ಮಾಡಿ ನೋಡಲು 1 ಕೆ.ಜಿ 490 ಗ್ರಾಂ ಇದ್ದು ಅ.ಕಿ 6,000/- ಮತ್ತು ಆತನ ಹತ್ತಿರ ಒಂದು ಮೊಬೈಲ್ ಅ.ಕಿ 500/- ರೂ. ಸಿಕ್ಕಿದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 59/2020, ಕಲಂ. 279, 338 ಐಪಿಸಿ :-

ದಿನಾಂಕ 09-09-2020 ರಂದು ಫಿರ್ಯಾದಿ ಅಂಕುಶ ತಂದೆ ಮಾರುತಿ ನಿಂಬಾಳೆ ವಯ: 34 ವರ್ಷ, ಜಾತಿ: ಕುರುಬ, ಸಾ: ರಾಂಪೂರ ವಾಡಿ, ತಾ: ಬಸವಕಲ್ಯಾಣ ರವರು ತನ್ನ ಜೊತೆ ಕೆಲಸ ಮಾಡುವ ಮಹೇಶ ತಂದೆ ಜಗನಾಥರಾವ ಇಗ್ವೆ ವಯ: 29 ವರ್ಷ, ಸಾ: ನಾರಾಯಣಪೂರ ಇಬ್ಬರು ಕೂಡಿಕೊಂಡು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಬಂಗ್ಲಾ ರೋಡಿಗೆ ಇರುವ ಕೆ..ಬಿ ಹತ್ತಿರ ರೋಡಿನ ಪಕ್ಕದಲ್ಲಿ ನಿಂತಿರುವಾಗ ಯು-ಟರ್ನ ಸ್ಥಳದಲ್ಲಿ ಸ್ಕೂಟಿ ಮೋಟರ ಸೈಕಲ್ ಕೆಎ-56/ಜೆ- 3779 ನೇದರ ಚಾಲಕನು ತನ್ನ ವಾಹನವನ್ನು ಬಲಗಡೆ ಇಂಡಿಕೇಟರ್ ಹಾಕಿ ಸ್ಕೂಟಿ ಮೋಟರ ಸೈಕಲನ್ನು ಬಸವಕಲ್ಯಾಣ ಕಡೆಗೆ ಯು-ಟರ್ನ ತೆಗೆದುಕೊಳ್ಳುತ್ತಿರುವಾಗ, ಬಂಗ್ಲಾ ಕಡೆಯಿಂದ ಕ್ರೂಸರ್ ನಂ. ಕೆಎ-36/3862 ನೇದರ ಚಾಲಕನಾದ ಆರೋಪಿ ಅಜಯಕುಮಾರ ತಂದೆ ಮಚೇಂದ್ರ ಗಡ್ಡದ ವಯ: 21 ವರ್ಷ, ಜಾತಿ: ಎಸ್.ಸಿ (ಹೊಲಿಯಾ), ಸಾ: ಕೊಹೀನೂರ, ತಾ: ಬಸವಕಲ್ಯಾಣ ಇತನು ಸಹ ಯು-ಟರ್ನ ಸ್ಥಳದಲ್ಲಿ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಯು-ಟರ್ನ ತೆಗೆದುಕೊಳ್ಳುತ್ತಿರುವ ಸ್ಕೂಟಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಸ್ಕೂಟಿಯ ಚಾಲಕನಾದ ಬಸವರಾಜ ತಂದೆ ಚನ್ನಮಲ್ಲಯ್ಯಾ ಮಠಪತಿ ವಯ: 85 ವರ್ಷ ಸಾ: ಎನ್.ಜಿ.ಓ ಕಾಲೋನಿ ಬಸವಕಲ್ಯಾಣ ರವರ ತಲೆಯ ಹಿಂದೆ ಭಾರಿ ರಕ್ತ-ಗುಪ್ತಗಾಯ, ಬಲಗೈ ಬೆರಳುಗಳಿಗೆ ಭಾರಿ ರಕ್ತಗಾಯ, ಬಲ ಭುಜಕ್ಕೆ ಕುತ್ತಿಗೆ ಹತ್ತಿರ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಅವರಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 83/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 09-09-2020 ರಂದು ಎಕ್ಕಂಬಾ ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನ ಕಾನೂನು ಬಾಹಿರವಾಗಿ ಅಂದರ ಬಾಹರ ಎಂಬ ಇಸ್ಪಿಟ ಎಲೆಗಳ ನಸಿಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಆಟವಾಡುತ್ತಿದ್ದಾರೆಂದು ಕರೆ ಮುಖಾಂತರ ಕು: ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಕ್ಕಂಬಾ ಗ್ರಾಮಕ್ಕೆ ಹೋಗಿ ನೋಡಲು ಬಾತ್ಮಿಯಂತೆ ಎಕ್ಕಂಬಾ ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯ ಹತ್ತಿರ ಆರೋಪಿತರಾದ ಅಶೋಕ ತಂದೆ ವಿನಾಯಕ ಸಿಂಧೆ ವಯ: 28 ವರ್ಷ, ಜಾತಿ: ಮರಾಠಾ, ಸಾ: ಗದಲೇಗಾಂವ(ಕೆ), ತಾ: ಬಸವಕಲ್ಯಾಣ ಇತನು ಹಾಗೂ ಇನ್ನೂ 5 ಜನ ಇವರೆಲ್ಲರೂ ಕೂಡಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಗೋಲಾಕಾರವಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸಿಬಿನ ಜೂಜಾಟವನ್ನು ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ನೋಡಿ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರಿಂದ ಒಟ್ಟು 3320/- ರೂ. ನಗದು ಹಣ ಮತ್ತು ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: